ಅಡುಗೆ ಮಾಡಿ ಹೊಟ್ಟೆ ತುಂಬಿಕೊಳ್ತಿದ್ದ ಭಾಗ್ಯಾಗೆ ಮತ್ತೆ ಸಮಸ್ಯೆ ಶುರುವಾಗಿದೆ. ತಾಂಡವ್, ಶ್ರೇಷ್ಠಾ ಜೊತೆ ಸೇರಿರುವ ಕನ್ನಿಕಾ, ಭಾಗ್ಯಾಗೆ ದೊಡ್ಡ ಶಾಕ್ ನೀಡಿದ್ದಾಳೆ.
ಕಲರ್ಸ್ ಕನ್ನಡ (Colors Kannada )ದಲ್ಲಿ ಪ್ರಸಾರವಾಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ನಲ್ಲಿ ಭಾಗ್ಯಾಗೆ ಕಷ್ಟ ತಪ್ಪಿದ್ದಲ್ಲ. ಒಂದಾದ್ಮೇಲೆ ಒಂದು ಕಷ್ಟವನ್ನು ಭಾಗ್ಯ ಎದುರಿಸ್ತಾನೆ ಇದ್ದಾಳೆ. ಒಂದ್ಕಡೆ ತಾಳಿ ತೆಗೆದು, ತಾಂಡವ್ ನಿಂದ ದೂರವಾಗಿದ್ದಾಳೆ ಎನ್ನುವ ಕಾರಣಕ್ಕೆ ಆಕೆಗೆ ಜನರು ಅವಮಾನ ಮಾಡ್ತಿದ್ದಾರೆ. ಇನ್ನೊಂದು ಕಡೆ ಆಕೆಯನ್ನೇ ನಂಬಿ ದೊಡ್ಡ ಸಂಸಾರವಿದ್ದು, ಅವರಿಗೆ ಮೂರು ಹೊತ್ತು ಊಟ, ಬ್ಯಾಂಕ್ ಸಾಲ ತೀರಿಸೋಕೆ ಭಾಗ್ಯ ಹೆಣಗಾಡ್ತಿದ್ದಾಳೆ. ಅವಳು ಏನೇ ಕೆಲಸ ಮಾಡಿದ್ರೂ ತಾಂಡವ್ ಹಾಗೂ ಶ್ರೇಷ್ಠಾ ಅಡ್ಡಗಾಲು ಹಾಕ್ತಿದ್ದಾರೆ. ಈಗ ಭಾಗ್ಯಾಗೆ ಇನ್ನೊಂದು ಸಮಸ್ಯೆ ಶುರುವಾಗಿದೆ.
ಹಾಗೋ ಹೀಗೋ ಎಲ್ಲ ಸಮಸ್ಯೆ ಮುಗಿಸಿ ಭಾಗ್ಯಾ ಮತ್ತೆ ಟ್ರ್ಯಾಕ್ ಗೆ ಬಂದಿದ್ಲು. ಒಂದಿಷ್ಟು ಅಡುಗೆ ಮಾಡಿ ಹಾಸ್ಟೆಲ್ ಹುಡುಗ್ರು ಹಾಗೂ ಆಫೀಸ್ ಗೆ ನೀಡೋಕೆ ಶುರು ಮಾಡಿದ್ಲು. ಹಣದಲ್ಲಿ ಗುಂಡಣ್ಣನ ಸ್ಕೂಲ್ ಫೀ ಕೂಡ ಕಟ್ಟಿದ್ದಾಳೆ. ಇದನ್ನು ನೋಡಿ ತಾಂಡವ್ ಗೆ ಸಹಿಸೋಕೆ ಆಗ್ತಿಲ್ಲ. ಎಮ್ಮೆ ಭಾಗ್ಯ ಗೆಲ್ಲಬಾರದು ಎನ್ನುವ ಕಾರಣಕ್ಕೆ ತಾಂಡವ್ ಹಾಗೂ ಶ್ರೇಷ್ಠಾ ಈಗ ಮತ್ತೆ ಕನ್ನಿಕಾ ಸಹಾಯ ಪಡೆದಿದ್ದಾರೆ. ಕನ್ನಿಕಾಳನ್ನು ತಾಂಡವ್ ಕೆಣಕಿದ್ದಾನೆ. ನಿನ್ನಿಂದ ಏನೂ ಸಾಧ್ಯ ಇಲ್ಲ ಎಂದಿದ್ದಾನೆ. ಇದ್ರಿಂದ ಕನ್ನಿಕಾ ಕೋಪ ನೆತ್ತಿಗೇರಿದೆ. ಹೇಗಾದ್ರೂ ಸರಿ ಭಾಗ್ಯಾ ಡಬ್ಬ ಸರ್ವಿಸ್ ನಿಲ್ಲಿಸ್ಬೇಕು ಅಂತ ಪಣ ತೊಟ್ಟಿರುವ ಕನ್ನಿಕಾ, ಭಾಗ್ಯಾಗೆ ದೊಡ್ಡ ಶಾಕ್ ನೀಡಿದ್ದಾಳೆ.
ಗುಳಿಕೆನ್ನೆ ಚೆಲುವೆ ರಚಿತಾ ಮದ್ವೆ ಫಿಕ್ಸ್ ಆಗೋಯ್ತು? ರವಿಮಾಮಾ ಮಾತಿಗೆ
ಅಡುಗೆ (Cooking) ಮಾಡಿ ಜೀವನ ನಡೆಸ್ತಿದ್ದ ಭಾಗ್ಯಾ ಹೊಟ್ಟೆಗೆ ತಣ್ಣೀರು ಬಟ್ಟೆ ಬೀಳುವ ಸಾಧ್ಯತೆ ಇದೆ. ಫುಡ್ ಡಿಪಾರ್ಟ್ ಮೆಂಟಿನಿಂದ ಬಂದ ಅಧಿಕಾರಿಗಳು, ಭಾಗ್ಯಾಳಿಗೆ ಲೈಸೆನ್ಸ್ ನೀಡುವಂತೆ ಕೇಳಿದ್ದಾರೆ. ಫುಡ್ ಬ್ಯುಸಿನೆಸ್ ಶುರು ಮಾಡೋಕೆ ಲೈಸೆನ್ಸ್ ಇರ್ಬೇಕು, ನೀವು ಲೈಸೆನ್ಸ್ ಪಡೆದಿಲ್ಲ, ಲೈಸೆನ್ಸ್ ಸಿಗೋವರೆಗೂ ಅನ್ನ ಕೂಡ ಬೇಯಿಸಿ ಮಾರಾಟ ಮಾಡುವಂತಿಲ್ಲ ಅಂತ ಎಚ್ಚರಿಕೆ ನೀಡಿ ಹೋಗಿದ್ದಾರೆ.
ಭಾಗ್ಯ, ಲೈಸೆನ್ಸ್ ಪಡೆದ್ರೆ ಮಾತ್ರ ಇನ್ಮುಂದೆ ಅಡುಗೆ ಮಾಡಿ ಮಾರಾಟ ಮಾಡ್ಬಹುದು. ಭಾಗ್ಯ, ಲೈಸೆನ್ಸ್ ಪಡೀತಾಳಾ ಅಥವಾ ಬೇರೆ ಕೆಲಸ ಶುರು ಮಾಡ್ತಾಳಾ ಕಾದು ನೋಡ್ಬೇಕು. ಕಲರ್ಸ್ ಕನ್ನಡ ಇದ್ರ ಪ್ರೋಮೋವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಪ್ರೋಮೋ ನೋಡಿದ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನ ಸೀರಿಯಲ್ ನೋಡ್ತಾರೆ ಎನ್ನುವ ಕಾರಣಕ್ಕೆ ಏನೇನೋ ಸ್ಕ್ರಿಪ್ಟ್ ಬರೆಯೋದಲ್ಲ, ಪ್ರತಿ ಬಾರಿ ಭಾಗ್ಯಾಗೆ ಯಾಕೆ ಕಷ್ಟ ಬರುತ್ತೆ, ತಾಂಡವ್ ಹಾಗೂ ಶ್ರೇಷ್ಠಾಗೆ ಯಾಕೆ ಕಷ್ಟಕೊಡೋದಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಲಕ್ಷ್ಮಿ ಭಾರಮ್ಮ ಸೀರಿಯಲ್ ಮುಗಿದಿದೆ. ದಯವಿಟ್ಟೂ ಈ ಸೀರಿಯಲ್ ಕೂಡ ಮುಗಿಸಿ ಅಂತ ವೀಕ್ಷಕರು ಒತ್ತಾಯ ಮಾಡಿದ್ದಾರೆ. ಭಾಗ್ಯಾ ನೀನು ಲಕ್ಷ್ಮಿ ಜೊತೆ ಯಾಕೆ ಹೋಗಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ.
ಅವ್ಳ ಮೇಲೆ ಇವ್ನು ಬಿದ್ದದ್ದು ನೋಡಿ ನೋಡಿ ಸಾಕಾಗೋಗಿದೆ... ರೊಮಾನ್ಸ್
ಭಾಗ್ಯ ತಂಗಿ ಲಕ್ಷ್ಮಿ ಎನ್ನುವಂತೆ ಇಷ್ಟು ದಿನ ಸೀರಿಯಲ್ ಲಿಂಕ್ ಮಾಡಲಾಗಿತ್ತು. ಆದ್ರೆ ಲಕ್ಷ್ಮಿ ಬಾರಮ್ಮ ಸೀರಿಯಲ್ ಮುಗಿಯೋ ಟೈಂನಲ್ಲಿ ಅಲ್ಲಿ ಭಾಗ್ಯ ಆಗ್ಲಿ ಕುಸುಮಾ ಆಗ್ಲಿ ಕಾಣಿಸಿಕೊಂಡಿಲ್ಲ. ಕಾವೇರಿ ಸತ್ತಿದ್ದು ಕುಸುಮಾಗೆ ಗೊತ್ತೇ ಇಲ್ಲ. ಭಾಗ್ಯಾಗೆ ತನ್ನ ತಂಗಿ ಲಕ್ಷ್ಮಿ ಪ್ರೆಗ್ನೆಂಟ್ ಎನ್ನುವ ವಿಷ್ಯವೇ ತಿಳಿದಿಲ್ಲ. ಇಷ್ಟು ದಿನ ಲಿಂಕ್ ಮಾಡಿದವರು ಕೊನೆಯಲ್ಲಿ ಯಾಕೆ ಹಾಗೆ ಮುಗಿಸಿದ್ದೀರಿ ಎಂದು ವೀಕ್ಷಕರು ನಿರ್ದೇಶಕರನ್ನು ಕೇಳ್ತಿದ್ದಾರೆ.