ಭಾಗ್ಯಲಕ್ಷ್ಮಿ ಸೀರಿಯಲ್ ಶೂಟಿಂಗ್ ವೇಳೆ ಕಿಕ್ ಮಾಡಲು ಹೋದ ಶ್ರೇಷ್ಠಾ ಬಿದ್ದು ಏಟು ಮಾಡಿಕೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಭಾಗ್ಯಳನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ತಾಂಡವ್ ಶತ ಪ್ರಯತ್ನ ಮಾಡುತ್ತಿದ್ದಾನೆ. ಭಾಗ್ಯಳ ಇರೋ ಬರೋ ಕೆಲಸವನ್ನೆಲ್ಲಾ ಕಸಿದುಕೊಳ್ತಿದ್ದಾನೆ. ಆದರೆ ಇವೆಲ್ಲವನ್ನೂ ಮೀರಿ ಭಾಗ್ಯ ಅಡುಗೆ ಮಾಡಿ ಅದನ್ನು ನೀಡುವ ಕಾರ್ಯದಲ್ಲಿ ತೊಡಗಿದ್ದಾಳೆ. ಈ ಕಾರ್ಯಕ್ಕೂ ಕಲ್ಲು ಹಾಕಲು ಬಂದ ಕನ್ನಿಕಾ ಸೋತಿದ್ದಾಳೆ. ಅದೇ ಇನ್ನೊಂದೆಡೆ, ಮಗಳು ತನ್ವಿಯನ್ನು ತನ್ನೆಡೆ ಸೆಳೆದುಕೊಂಡು ಭಾಗ್ಯಳಿಗೆ ಒಂದು ಗತಿ ಕಾಣಿಸುವ ತವಕದಲ್ಲಿರುವ ಶ್ರೇಷ್ಠಾ, ತನ್ವಿಯನ್ನು ಗುಟ್ಟಾಗಿ ಸ್ನೇಹಿತರ ಜೊತೆ ಟ್ರಿಪ್ಗೆ ಕಳುಹಿಸಿ ಸಿಕ್ಕಿಬಿದ್ದಿದ್ದಾಳೆ. ಇದರ ಹೊರತಾಗಿಯೂ ಮೋಡಿ ಮಾಡಿ ತಾಂಡವ್ನನ್ನು ಮೋಡಿ ಮಾಡಿ ತನ್ನ ಬಳಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಲೇ ಇದ್ದಾಳೆ.
ಇದು ಸೀರಿಯಲ್ ಕಥೆಯಾದ್ರೆ ಇನ್ನು ಶೂಟಿಂಗ್ ಕಥೆ ಕೇಳಿ. ಶೂಟಿಂಗ್ ಸಮಯದಲ್ಲಿ ಏನೇನೋ ಅನಾಹುತ ಸಂಭವಿಸುವುದು ನಡೆದೇ ಇರುತ್ತದೆ. ಸಿನಿಮಾ ಆಗಲಿ, ಸಿರಿಯಲ್ ಆಗಲೀ, ಶೂಟಿಂಗ್ ಮಾಡುವ ಭರದಲ್ಲಿ ಅನಾಹುತ ಆಗುವುದು ಸಹಜ. ಇದೇ ರೀತಿ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ ತಮಾಷೆಗೆ ಕಿಕ್ ಮಾಡಲು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಹಿಂಬದಿಯನ್ನು ಹಿಡಿದು ಅಯ್ಯೋ ಎಂದು ಎದ್ದಿದ್ದಾರೆ. ಪುಣ್ಯಕ್ಕೆ ಯಾರೂ ನೋಡಿಲ್ಲ ಎಂದು ಹೇಳಿದ್ದಾರೆ. ಆದರೆ ತರ್ಲೆ ಸುಷ್ಮಾ ರಾವ್ ಅದರ ವಿಡಿಯೋ ಮಾಡಿದ್ದಾರೆ. ಅಷ್ಟಕ್ಕೂ ಕಾವ್ಯಾ ಅವರು ತಮಾಷೆಯಾಗಿ ಸುಷ್ಮಾರನ್ನು ಕಿಕ್ ಮಾಡಲು ಕಾಲು ಮೇಲಕ್ಕೆ ಎತ್ತಿದಾಗ ಈ ಅವಘಡ ಸಂಭವಿಸಿದೆ. ಇದರ ವಿಡಿಯೋ ಅನ್ನು ಸುಷ್ಮಾ ಅವರು ಹಾಸ್ಯದ ರೂಪದಲ್ಲಿ ಶೇರ್ ಮಾಡಿದ್ದಾರೆ. ಈ ಘಟನೆಯಲ್ಲಿ ಕಾವ್ಯಾ ಅವರಿಗೆ ಏನೂ ಆಗಲಿಲ್ಲ. ಆದರೂ ಅವರಿಗೆ ಏಟಾಗಿರುವುದು ತಿಳಿಯುತ್ತದೆ. ಅವರು ಕೂಡ ಜೋರಾಗಿ ನಕ್ಕಿದ್ದಾರೆ.
ಸೀರಿಯಲ್ ಬಿಟ್ಟು ಹಿಮಾಲಯದತ್ತ ಭಾಗ್ಯಲಕ್ಷ್ಮಿ! ಫ್ಯಾನ್ಸ್ ಶಾಕ್- ಕಾರಣ ತೆರೆದಿಟ್ಟ ನಟಿ ಸುಷ್ಮಾ
ಅಸಲಿಗೆ ಆಗಿದ್ದೇನು ಎಂದು ತಾಂಡವ್ ಪಾತ್ರಧಾರಿ ಸುದರ್ಶನ್ ಅವರು ತಮಾಷೆಯ ಮೂಲಕ ವಿವರಿಸಿದ್ದಾರೆ. ಶ್ರೇಷ್ಠಾ ಕಿಕ್ ಮಾಡುತ್ತೇನೆ ಎಂದು ಹೋಗಿ ಹೀಗೆ ಆಗಿದೆ ಎಂದಿದ್ದಾರೆ. ಅದಕ್ಕೆ ಸುಷ್ಮಾ, ಭಾಗ್ಯಳ ವಿರುದ್ಧ ಬಂದ್ರೆ ಹಾಗೇ ಆಗೋದು. ಪಾಪ ನೆಲಕ್ಕೆ ಏನು ಆಯ್ತೇನೋ ಎಂದಿದ್ದಾರೆ. ಅಂದಹಾಗೆ ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್ ರೋಲ್ ಮೂಲಕ ಮನೆ ಮಾತಾಗಿದ್ದಾರೆ. 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್ ಬಿಟ್ಟಿದ್ದರು. ಭಾಗ್ಯಲಕ್ಷ್ಮಿಯಲ್ಲಿ ಶ್ರೇಷ್ಠಾ ಮತ್ತು ತಾಂಡವ್ ಮದುವೆ ನಿಂತಿದೆ. ಭಾಗ್ಯಳನ್ನು ಬದಲಾಯಿಸುವುದಾಗಿ ಕುಸುಮಾ ಚಾಲೆಂಜ್ ಹಾಕಿದ್ದಾಳೆ. ಸೀರಿಯಲ್ ಯಾವ ರೀತಿ ಟರ್ನ್ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.