ಸುಬ್ಬಿಗೆ ಸೀತಮ್ಮನೇ ಹೆತ್ತತಾಯಿ ಎನ್ನೋ ಸತ್ಯ ಹೇಳಿದ ಸ್ವಾಮಿ ತಾತ!

Published : Apr 17, 2025, 08:23 PM ISTUpdated : Apr 17, 2025, 08:26 PM IST
ಸುಬ್ಬಿಗೆ ಸೀತಮ್ಮನೇ ಹೆತ್ತತಾಯಿ ಎನ್ನೋ ಸತ್ಯ ಹೇಳಿದ ಸ್ವಾಮಿ ತಾತ!

ಸಾರಾಂಶ

ಸ್ವಾಮಿ ತಾತ ಕೋಪದಿಂದ ಸುಬ್ಬಿಗೆ ತಾನೇ ಅವಳನ್ನು ಅಪಹರಿಸಿ, ಸೀತಾಳಿಂದ ದೂರ ಮಾಡಿದ್ದಾಗಿ ಹೇಳುತ್ತಾನೆ. ಸೀತಾಳಿಗೆ ಅವಳಿ ಮಕ್ಕಳಿದ್ದು, ಒಂದು ಮಗು ಸತ್ತಿತ್ತು. ಸ್ವಾಮಿ ಕದ್ದ ಮಗುವೇ ಸುಬ್ಬಿ. ಸುಬ್ಬಿ ತನ್ನ ತಾಯಿ ಸೀತಾಳ ಬಳಿ ಹೋಗಿದ್ದಕ್ಕೆ ಸ್ವಾಮಿ ಕೋಪಗೊಂಡಿದ್ದಾನೆ. ಸುಬ್ಬಿ ಸತ್ಯ ತಿಳಿದು ಸಂತೋಷಪಟ್ಟರೂ, ತಾತನ ಮೋಸದಿಂದ ಬೇಸರಗೊಂಡು ರಾಮ್ ಬಳಿ ಓಡುತ್ತಾಳೆ.

ಕಸದ ತೊಟ್ಟಿಯಲ್ಲಿ ಸಿಕ್ಕಿದ ನಿನ್ನನ್ನು ಎತ್ತಿಕೊಂಡು ಬಂದು ಸಾಕಿ, ಸಲುಹಿ ಬೆಳೆಸಿದ್ದೇನೆ ಎಂದು ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಂಡಿದ್ದ ಸ್ವಾಮಿ ತಾತ ಇದೀಗ ಸುಬ್ಬಿಯ ಮುಂದೆ ಕೋಪದಲ್ಲಿಯೇ ಎಲ್ಲ ಸತ್ಯವನ್ನು ಹೇಳಿದ್ದಾರನೆ. ನಾನು ಯಾರಿಂದ ನಿನ್ನನ್ನು ದೂರ ಮಾಡಿದ್ದೆನೋ, ನೀನು ಪುನಃ ಅವರ ಮನೆಗೆ ಹೋಗಿ ಸೇರಿಕೊಂಡಿದ್ದೀಯ. ನಿನ್ನನ್ನು ಯಾರಿಗಾದರೂ ದತ್ತು ಕೊಟ್ಟು ಹಣ ಮಾಡಿಕೊಳ್ಳಬೇಕು ಎಂದುಕೊಂಡರೆ, ಹೆತ್ತ ತಾಯಿ ಬಳಿಯೇ ಸೇರಿಕೊಂಡಿದ್ದೀಯ ಎಂದು ಕೋಪದಿಂದಲೇ ಸತ್ಯವನ್ನು ಹೇಳಿದ್ದಾನೆ.

ಹೌದು, ಸೀತಾ ಬಾಡಿಗೆ ತಾಯಿ ಆದಾಗ ಎರಡು ಮಕ್ಕಳಿದ್ದವು. ಆದರೆ, ಹೆರಿಗೆ ವೇಳೆ ಒಂದು ಮಗುವನ್ನು ಕಳ್ಳನಾಗಿದ್ದ ಸ್ವಾಮಿ ಕಿಡ್ನಾಪ್ ಮಾಡಿಕೊಂಡು ಬಂದಿದ್ದನು. ಈ ವೇಳೆ ಮಗು ಕಳೆದು ಹೋಗಿದ್ದಕ್ಕೆ ಸೀತಾಗೆ ಒಂದು ಮಗು ಸತ್ತು ಹೋಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಜೊತೆಗೆ, ಇರುವ ಒಂದು ಮಗು ಸಿಹಿ ಕೂಡ ಹುಟ್ಟುತ್ತಲೇ ಶುಗರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂಬ ಸತ್ಯವನ್ನೂ ಹೇಳಿದ್ದಾರೆ. ಆಗ ಮಗುವನ್ನು ಪಡೆಯಲು ಬಾರದ ಡಾಕ್ಟರ್ ಶ್ಯಾಮ್‌ನಿಂದ ದೂರ ಇದ್ದು, ಸಿಹಿಯನ್ನು ಸೀತಾ ಬೆಳೆಸುತ್ತಾಳೆ. ಆದರೆ, ಇನ್ನೊಂದು ಮಗು ಸತ್ತು ಹೋದ ನೋವನ್ನು ಸಿಹಿ ಮೇಲಿನ ಪ್ರೀತಿಯಿಂದ ಮರೆತಿರುತ್ತಾಳೆ. ಇದೀಗ ಸಿಹಿ ಸತ್ತುಹೋದ ನಂತರ ಸುಬ್ಬಿ ಸಿಕ್ಕಿದ್ದು, ಇವಳೇ ಸಿಹಿ ಎಂಬ ಭ್ರಮೆಯಲ್ಲಿ ಸೀತಾ ಜೀವನ ಮಾಡುತ್ತಿದ್ದಾಳೆ.

ವಿಧಿಯಾಟದಲ್ಲಿ ಮಕ್ಕಳ ಕಳ್ಳ ಸ್ವಾಮಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದ ಸುಬ್ಬಿ ಇದೀಗ ಪುನಃ ಸೀತಾಳ ಮಡಿಲು ಸೇರಿದ್ದಾಳೆ. ಇದರಿಂದ ತಾನು ಹಣಕ್ಕಾಗಿ ಕಿಡ್ನಾಪ್ ಮಾಡಿದ ಸುಬ್ಬಿಯಿಂದ ಯಾವುದೇ ಹಣ ಸಿಗಲಿಲ್ಲವೆಂದು ಕುಪಿತಗೊಂಡ ಸ್ವಾಮಿ ತಾತ ಸುಬ್ಬಿಗೆ ಎಲ್ಲ ಸತ್ಯವನ್ನೂ ಹೇಳಿಬಿಡುತ್ತಾನೆ.

ಇದನ್ನೂ ಓದಿ: ಸೀತಾರಾಮ ಸೀರಿಯಲ್​ಗೆ ಇದೇನಿದು ಟ್ವಿಸ್ಟ್​? ನಟಿಯ ಎಂಗೇಜ್​ಮೆಂಟ್​ ಎಫೆಕ್ಟಾ?

ನಾನು ಯಾರಿಂದ ನಿನ್ನ ದೂರ ಮಾಡಿದ್ದೆನೋ ನೀನು ಹೋಗಿ ಹೋಗಿ ಅವರ ಹತ್ತಿರಾನೇ ಸೆರಿಕೊಂಡಿದ್ದೀಯ. ಸೀತಾ ಇದ್ದಾಳಲ್ಲಾ, ಅವಳಿಗೆ ಹುಟ್ಟಿದ್ದ ಎರಡು ಮಕ್ಕಳನ್ನು ನಾನು ಒಂದು ಕದ್ದುಕೊಂಡು ಬಂದೆ. ಅದೇ ನೀನು.. ಆದರೆ, ಈಗ ಮತ್ತೆ ನೀನು ಸೀತಾ ಹತ್ತಿರ ಹೋಗಿದ್ದೀಯ. ನೀನು ಸೀತಾ ಮನೆಗೆ ಹೋಗಿದ್ದು, ಗೊತ್ತಾಗಿ ನನ್ನ ಬಂಡವಾಳ ಹೊರಗೆ ಬರುತ್ತದೆ ಎಂಬು ಭಯ ಬಿದ್ದು ಅವರಿಂದ ದೂರ ಮಾಡುವುದಕ್ಕೆ ತುಂಬಾ ಪ್ರಯತ್ನ ಮಾಡಿದೆ. ಜೊತೆಗೆ, ನಿನ್ನನ್ನು ಯಾರಿಗಾದರೂ ದತ್ತು ಕೊಡೋಣ ಎಂದುಕೊಂಡರೆ ನೀನು ಎಲ್ಲ ಹಾಳು ಮಾಡಿದೆ. ನಾನು ಸೀತಮ್ಮನ ಮಗಳಾ ಎಂದು ಸುಬ್ಬಿ ಕೇಳಿದ್ದಕ್ಕೆ ಹೌದು ಎಂದು ಸ್ವಾಮಿ ತಾತ ಹೇಳುತ್ತಾನೆ. ಅಂದರೆ ನಾನು ಸಿಹಿ ಅಕ್ಕ ತಂಗಿನಾ ಎಂದು ಸುಬ್ಬಿ ಕೇಳುತ್ತಾಳೆ. ಆಗ ಸ್ವಾಮಿ ತಾತ ನೀನು ಇನ್ನೂ ಇಲ್ಲಿಯೇ ನಿಂತುಕೊಂಡು ಯಾಕೆ ನನ್ನ ಹೊಟ್ಟೆ ಉರಿಸುತ್ತೀಯಾ? ಎಂದು ಕೆಂಡಕಾರುತ್ತಾನೆ.

ನೀನು ಚಿಕ್ಕವಳಿದ್ದಾಗಲೇ ನಿನ್ನನ್ನು ಯಾರಿಗಾದರೂ ಕೊಟ್ಟು ದುಡ್ಡು ಮಾಡಿಕೊಳ್ಳೋಣ ಎಂದುಕೊಂಡೆ. ಆದರೆ, ನಿನ್ನ ಮುದ್ದು ಮುಖವನ್ನು ನೋಡಿ ಯಾರಿಗೂ ಕೊಡಲು ಮನಸ್ಸಾಗದೇ ನಾನೇ ಚೆನ್ನಾಗಿ ಸಾಕಿದೆ. ಆದರೆ, ಇವತ್ತು ನೀನು ಅದೇ ಸೀತಮ್ಮ, ಸೀತಮ್ಮ ಎಂದು ಕುಣಿಯುತ್ತೀದ್ದೀಯಾ. ಹೋಗು.. ಹೋಗು.. ನೀನು ಇನ್ನೊಂದು ನಿಮಿಷವೂ ನನ್ನ ಕಣ್ಣಮುಂದೆ ಇರಬೇಡ ಎಂದು ಸ್ವಾಮಿ ತಾತ ಹೇಳುತ್ತಾನೆ.

ಇದನ್ನೂ ಓದಿ: ಮಹಾಕುಂಭದ ಕಮಾಲ್​: ಸಿಹಿಗೆ ತೆರೆಯಿತು ಅದೃಷ್ಟದ ಬಾಗಿಲು- ಹನುಮಾನನಿಂದ ಸಿಕ್ಕೇ ಬಿಟ್ಟಿತು ವರದಾನ!

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಬ್ಬಿ, ಥ್ಯಾಂಕ್ಸ್ ತಾತ.. ನೀನು ನಿಜ ಹೇಳಿದ್ದಕ್ಕೆ. ನಾನು ಹೆತ್ತ ತಾಯಿಯನ್ನು ನೋಡಬೇಕು ಎಂದು ತುಂಬಾ ಆಸೆಪಟ್ಟಿದ್ದೆ. ಆದರೆ, ಅವರು ಯಾವತ್ತೂ ಹುಡುಕಿಕೊಂಡು ಬರಲ್ಲ ಅಂತಾ ಬೇಜಾರಾಗಿತ್ತು. ಈಗ ಸೀತಮ್ಮನೇ ನನ್ನ ಅಮ್ಮ ಅಂತ ತಿಳಿದು ತುಂಬಾ ಖುಷಿ ಆಗುತ್ತಿದೆ. ಆದರೆ, ನನ್ನ ಸೀತಮ್ಮನಿಂದ ನೀವೇ ನನ್ನ ದೂರ ಮಾಡಿದ್ದು ಕೇಳಿ ನನಗೆ ಬೇಜಾರಾಗುತ್ತಿದೆ. ನನಗೆ ಅಮ್ಮ ಬೇಕು ಅಂತಾ ಎಷ್ಟೊಂದು ಬಾರಿ ನಿನ್ನ ಕೇಳಿದರೂ ನೀವು ನನಗೆ ನಿಜ ಹೇಳಿಲಿಲ್ಲ. ಇದು ತಪ್ಪಲ್ವಾ ತಾತ. ಮತ್ತೆ ನೀವು ಯಾವತ್ತೂ ನನ್ನ ಮುಖ ನೋಡೋಕೆ ಬರಬೇಡಿ ಎಂದು ಸುಬ್ಬಿ ಬೈದು ಅಳುತ್ತಾ ರಾಮ್ ಅಪ್ಪನ ಕಡೆಗೆ ಓಡಿ ಹೋಗುತ್ತಾಳೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ
Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್