
ಸಂಗೀತ ನಿರ್ದೇಶಕ ಹಂಸಲೇಖ ಅವರ ಕುಟುಂಬ ಇಡೀ ಕುಟುಂಬ ಸಂಗೀತ ಮತ್ತು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದೆ. ಆದರೆ ಅವರು ವಿವಾದಗಳಿಮದ ಹೊರತೇನಲ್ಲ ಅವರು ಎಷ್ಟು ಪ್ರಸಿದ್ಧರೋ ಅಷ್ಟೇ ವಿವಾದಗಳು ಅವರನ್ನು ಸುತ್ತಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇಲ್ಲದಿದ್ದರೆ ಜೀ ಕನ್ನಡದಲ್ಲಿ ಪ್ರಸಿದ್ಧ ರಿಯಾಲಿಟಿ ಶೋ ಸರಿಗಮದಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಈ ಬಾರಿ ಅವರು ಅದರಲ್ಲೂ ಕಾಣಿಸಿಕೊಂಡಿಲ್ಲ. ಶೋ ಆರಂಭಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ತೀರ್ಪುಗಾರರಾಗಿ ಹಂಸಲೇಖ ಬಂದರೆ ಶೋ ನೋಡುವುದಿಲ್ಲ ಎಂದು ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ತಮಗೆ ಚಿತ್ರರಂಗದಲ್ಲಿ ಆದ ಕೆಟ್ಟ ಅನುಭವಗಳು ಕಷ್ಟಗಳ ಬಗ್ಗೆ ಜೊತೆಗೆ ಹಂಸಲೇಖ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಂಸಲೇಖ ಅವರ ಸಂಗೀತ ನಿರ್ದೇಶನದ ಹಾಡಿಗೆ ಕೋರಸ್ ಹಾಡಿದ್ದೆ, ಆದರೆ ಇದಕ್ಕೆ ನನಗೆ ಪೇಮೆಂಟ್ ಸಿಕ್ಕಿಲ್ಲ. ಆಗ ಕಷ್ಟದ ಸಮಯ ಇಡೀ ಕುಟುಂಬದ ಜವಾಬ್ದಾರಿ ನನ್ನ ಹೆಗಲ ಮೇಲೆ ತಂಗಿಯರ ಮದುವೆ ಕೂಡ ಮಾಡಬೇಕಿತ್ತು. ಆದರೆ ಹಣ ಕೇಳಲು ಹೋದಾಗ ಅವಮಾನಿಸಿದ್ದಾರೆ ಎಂದಿದ್ದಾರೆ.
ಬೇರೆಯವ್ರ ಹಾಡಿಗೆ ಸರಿಗಮಪ ಶೋನಲ್ಲಿ ಕ್ರೆಡಿಟ್ ತಕೊಂಡ್ರಾ ಹಂಸಲೇಖ! ಏನಿದು ಹೊಸ ವಿವಾದ!
ನನಗೆ ಎಷ್ಟು ಮಾತು ಬೈದ್ರು, ನಮ್ಮ ಮಹಾನ್ ನಾದಬ್ರಹ್ಮ ಹಂಸಲೇಖ. ಅವರಿಗೆ ನಾನು ಹೆಚ್ಚು ಕಮ್ಮಿ 8 ರಿಂದ 10 ಹಾಡುಗಳನ್ನು ಹಾಡಿದೀನಿ ಪೇಮೆಂಟ್ ಬರ್ಲಿಲ್ಲ ಒಂದು ನಾಲ್ಕೈದು ಸರಿ ಹೋಗಿ ನಿಂತೆ ಸರ್ ಒಂದು ಚೂರು ಪೇಮೆಂಟ್ ಕೊಡಲಿಲ್ಲ. ನನಗೆ ತುಂಬಾ ತೊಂದರೆ ಅವಾಗ ನನಗೆ ಮೂರು ಜನ ತಂಗಿಯಂದಿರು ಮದುವೆ ಮಾಡಬೇಕು ಸರ್ ಪೇಮೆಂಟ್ ಅಂದ್ರೆ ಹೇ ಕೊಟ್ರೆ ಆಯ್ತು ಕಣೋ ಕೊಡೋಣ ಕೊಡೋಣ ಅನ್ನುವುದು ಅಷ್ಟೇ. ನಾಲ್ಕೈದು ಸರಿ ಆದ್ಮೇಲೆ ಐದನೇ ಸರಿ ಹೋದಾಗ ಅವರದ್ದು ಮೂಡ್ ಸರಿ ಇರಲಿಲ್ಲ ಅನ್ನಿಸುತ್ತೆ ಎಷ್ಟು ಕೋಟಿ ಕೊಡಬೇಕು ನಿನಗೆ? ಅಂದಿದ್ದರು. ಸರಿ ಸರ್ ಅಂತ ಕೈಮುಗಿದು ನಾನು ಅಂದಿನಿಂದ ಅವರ ಬಳಿಗೆ ಹೋಗಿಯೇ ಇಲ್ಲ.
ಇನ್ನು ಇದೇ ಸಂದರ್ಶನದಲ್ಲಿ ನಾದ ಬ್ರಹ್ಮ ಅನ್ನುವ ಬಿರುದಿನ ಬಗ್ಗೆ ಮಾತನಾಡಿದ್ದಾರೆ. ಮೊದಲನೆಯದಾಗಿ ನಾದಬ್ರಹ್ಮ ಅನ್ನೋ ಶಬ್ದ ಇದೆಯಲ್ಲ ಅದಕ್ಕೆ ಅರ್ಥವೇ ಇಲ್ಲ. ನಿಜವಾದ ಅರ್ಥ ಏನು? ನಾದಬ್ರಹ್ಮ ಅಂದರೆ ವಿಠ್ಠಲ ಒಬ್ಬನೇ. ಇದೇ ರೀತಿ ಚಲನಚಿತ್ರಕ್ಕೆ ಗೀತೆಗೆ ಸಂಬಂಧಪಟ್ಟು ಅಥವಾ ಚಲನಚಿತ್ರ ಜಗತ್ತಿಗೆ ಸಂಬಂಧಪಟ್ಟು ಮತ್ತೆ ಎಷ್ಟೆಷ್ಟು ಆಘಾತಗಳಾಗಿವೆ ಎಷ್ಟು ಅಂತ ಹೇಳಲಿ?
ಹಾಗೇ ಮತ್ತೊಬ್ಬ ಸಂಗೀತ ನಿರ್ದೇಶಕ ಮನೋರಂಜನ್ ಪ್ರಭಾಕರ್ ಅವರು ಕೂಡ ಅವಮಾನಿಸಿದ್ದಾರೆ. ನನಗೆ ಅವಕಾಶಕ್ಕಾಗಿ ಅವರ ಕಾಲು ಹಿಡಿದಾಗ ಜಾಡಿಸಿ ಒದ್ದರು ಹಾಗೇ ಮತ್ತೊಬ್ಬ ಸಂಗೀತ ನಿರ್ದೇಶಕ ಮೈಸೂರು ಮೋಹನ್ ಅವರ ಕೂಡ ಮೋಸ ಮಾಡಿದ್ದಾರೆ. 'ನಂಜುಂಡ' ಸಿನಿಮಾಗಾಗಿ ಇವರೊಂದಿಗೆ ಒಂದು ತಿಂಗಳು ಕೆಲಸ ಮಾಡಿ ಆರು ಸಾಂಗ್‌ಗಳಿಗೆ ಟ್ರ್ಯಾಕ್ ಮತ್ತು ಕೋರಸ್ ಹಾಡಿದ್ದರೂ ಇದೂವರೆಗೂ ಒಂದು ರೂಪಾಯಿ ಪೇಮೆಂಟ್ ಕೂಡ ಬಂದಿಲ್ಲ ಎಂದಿದ್ದಾರೆ. ಅಲೆದು ಅಲೆದು ಮನೆ ಮುಂದೆ ಕಾದು ಕೊನೆಗೆ ಬಿಟ್ಟು ಬಿಟ್ಟೆ ಎಂದಿದ್ದಾರೆ.
ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕರೆ!
ರಿಯಾಲಿಟಿ ಶೋ ಗಳ ಬಗ್ಗೆ ಮಾತನಾಡುತ್ತಾ ಈಗ ಹೊಸದಾಗಿ ಬಂದಿರುವ ಸಿಂಗರ್ಸ್ ಗಳು ರಿಯಾಲಿಟಿ ಶೋಸ್ ಗಳಿಂದ ಬರ್ತಾರೆ.ಇನ್ನೊಂದು ದೊಡ್ಡ ದುರಂತ ನಮ್ಮ ಕನ್ನಡ ಚಿತ್ರರಂಗದ್ದು ಏನು ಅಂತ ಹೇಳಿದ್ರೆ ಕನ್ನಡದಲ್ಲಿ ಅಸಂಖ್ಯಾತ ಪ್ರತಿಭೆಗಳಿವೆ ನಮಗೆ ಹಾಡಲು ಆಗದೆ ಇರುವಂತಹ ಹಾಡುಗಳು ಯಾವುದು ಇಲ್ಲ.ನಮ್ಮಲ್ಲಿ ಒಳ್ಳೊಳ್ಳೆ ಸಿಂಗರ್ಸ್ ಇದ್ದಾರೆ. ರಾಜೇಶ್ ಕೃಷ್ಣ ಇದ್ದಾನೆ,ಹೇಮಂತ್ ಇದ್ದಾರೆ,ಎಲ್ ಎನ್ ಶಾಸ್ತ್ರಿ ಇದ್ರು ತುಂಬಾ ಜನ ಒಳ್ಳೊಳ್ಳೆ ಸಿಂಗರ್ಸ್ ಇದ್ದಾರೆ ಈಗಂತೂ ರಾಶಿಗಟ್ಟಲೆ ಇದ್ದಾರೆ. ಆಮೇಲೆ ಚಲನಚಿತ್ರ ಗೀತೆಗಳು ನಿಮಗೆ ಚಾಲೆಂಜ್ ಕೊಡುವಂತದ್ದು ಯಾವ ಹಾಡು ಬರುತ್ತೆ?
ಏಳು ಏಳು ಜನ್ಮದ ಲವ್ ಯಾರಾದರೂ ಇದನ್ನು ಹಾಡಲು ಪ್ರಯತ್ನ ಪಟ್ಟರೆ ಅವನು ನಿಜವಾಗಿ ಸಿಂಗರ್ ಅಂತ ಒಪ್ಕೋಬೇಕು. ಬಾಕಿ ಏನಿರುತ್ತೆ ಹಾಡಲಿಕ್ಕೆ, ಈಗಂತೂ ಆಟೋ ಟ್ಯೂನ್ ಬಂದಿದೆ. ಸಂಗೀತ ಕಲಿಬೇಕು ಅಂತ ಇಲ್ಲ ಹೀರೋಗಳು ಕೂಡ ಹಾಡ್ತಾರೆ ಮ್ಯೂಸಿಕ್ ಡೈರೆಕ್ಟರ್ ಹಾಡ್ತಾರೆ ಸಿಂಗರ್ಸ್ ಗಳು ಹಾಡ್ತಾರೆ ಲೈಟ್ ಬಾಯ್ ಹಾಡ್ಬಿಟ್ಟು ರೆಕಾರ್ಡ್ ಮಾಡಿಬಿಡಬಹುದು. ಸಂಗೀತದ ಯಾವ ಅಗತ್ಯವೂ ಇಲ್ಲ. ರಾಗ ಬೇಡ ಸ್ವರ ಬೇಡ ಏನೂ ಬೇಡ!ಈ ರಿಯಾಲಿಟಿ ಶೋಸ್ ದುರಂತ ನೋಡಿ ನಗು ಬರುತ್ತೆ! ಎಂದು ಖ್ಯಾತ ಹಿರಿಯ ಪತ್ರಕರ್ತ ಬಿ ಗಣಪತಿ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಮುಕ್ತವಾಗಿ ಹಲವು ವಿಚಾರಗಳನ್ನು ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.