ಬೇರೆಯವ್ರ ಹಾಡಿಗೆ ರಿಯಾಲಿಟಿ ಶೋನಲ್ಲಿ ಕ್ರೆಡಿಟ್‌ ತಕೊಂಡ್ರಾ ಹಂಸಲೇಖ!

Published : Apr 17, 2025, 07:01 PM ISTUpdated : Apr 18, 2025, 02:18 PM IST
ಬೇರೆಯವ್ರ ಹಾಡಿಗೆ ರಿಯಾಲಿಟಿ ಶೋನಲ್ಲಿ ಕ್ರೆಡಿಟ್‌ ತಕೊಂಡ್ರಾ ಹಂಸಲೇಖ!

ಸಾರಾಂಶ

ಹಂಸಲೇಖ ವಿರುದ್ಧ ಶಂಕರ್ ಶಾನುಭಾಗ್‌ ಗಂಭೀರ ಆರೋಪ ಮಾಡಿದ್ದಾರೆ. ಚಿತ್ರರಂಗದಲ್ಲಿ ಕೆಟ್ಟ ಅನುಭವ, ಬಾಕಿ ಪಾವತಿ ನೀಡದೆ ಅವಮಾನಿಸಿದ್ದು, 'ಏಳೇಳು ಜನ್ಮದ ಲವ್' ಹಾಡಿಗೆ ಮನೋಹರ್‌ ಸಂಗೀತ ನಿರ್ದೇಶನ ಮಾಡಿದ್ದರೂ ಹಂಸಲೇಖ ಕ್ರೆಡಿಟ್‌ ತೆಗೆದುಕೊಂಡಿದ್ದು, 'ನಾದಬ್ರಹ್ಮ' ಬಿರುದು ಅರ್ಹತೆಯಿಲ್ಲದಿರುವುದು ಮುಂತಾದ ಅಂಶಗಳನ್ನು ಪ್ರಸ್ತಾಪಿಸಿ ಶಾನುಭಾಗ್‌ ಪ್ರಶ್ನಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಹಂಸಲೇಖ ನೀಡುವ ಸಂದೇಶದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ವಿವಾದ ಹೊರತೇನಲ್ಲ. ಅವರು ಎಷ್ಟು ಪ್ರಸಿದ್ಧರೋ ಅಷ್ಟೇ ವಿವಾದಗಳು ಅವರನ್ನು ಸುತ್ತಿಕೊಂಡಿದೆ. ಇದೀಗ  ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಶಂಕರ್‌ ಶಾನುಭಾಗ್ ತಮಗೆ ಚಿತ್ರರಂಗದಲ್ಲಿ ಆದ ಕೆಟ್ಟ ಅನುಭವಗಳು ಮತ್ತು ಹಂಸಲೇಖ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಂಸಲೇಖ ಅವರೊಂದಿಗೆ ಕೆಲಸ ಮಾಡಿ ಈವರೆಗೆ ಪೇಮೆಂಟ್‌ ಸಿಕ್ಕಿಲ್ಲ. ಆದರೆ ಹಣ ಕೇಳಲು ಹೋದಾಗ ಅವಮಾನಿಸಿದ್ದರ ಬಗ್ಗೆಯೂ ಮಾತನಾಡಿದ್ದಾರೆ. ಇದರ ಜೊತೆಗೆ ನಾದ ಬ್ರಹ್ಮ ಅನ್ನುವ ಬಿರುದಿನ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲ ಬೇರೆಯವರು ಮಾಡಿದ ಹಾಡಿಗೆ ತಾನು ಕ್ರೆಡಿಟ್‌ ತೆಗೆದುಕೊಂಡ ಬಗ್ಗೆಯೂ ಅದನ್ನು ಸರಿಗಮಪ ರಿಯಾಲಿಟಿ ಶೋನಲ್ಲಿ ಕ್ರೆಡಿಟ್‌ ತೆಗೆದುಕೊಂಡ ಬಗ್ಗೆಯೂ ಮಾತನಾಡಿದ್ದಾರೆ.

ಏಳೇಳು ಜನ್ಮದ ಲವ್ ಸ್ವಸ್ತಿಕ್ ಪಿಕ್ಚರ್ ಹಾಡು ಮ್ಯೂಸಿಕ್ ಡೈರೆಕ್ಟರ್ ವಿ ಮನೋಹರ್. ಟ್ರ್ಯಾಕ್ ಹಾಡಿದ್ದು ನಾನು . ಅದನ್ನ ಯಾರೋ ಒಬ್ಬ ಸಿಂಗರ್ ಸರಿಗಮಪ ಬರುತ್ತಲ್ಲ.   ಆ ಎಪಿಸೋಡ್ ಅಲ್ಲಿ ಹಾಡಿದ, ಆಗ ಮಹಾಗುರುಗಳು ಅದೇ   ನಾದಬ್ರಹ್ಮ   ಕೂತಿದ್ದರು ಹಾಡೆಲ್ಲ ಮುಗಿದ ಮೇಲೆ ಕಾಮೆಂಟ್ ಮಾಡಬೇಕು . ನಾನು ಈ   ಹಾಡು ರೆಕಾರ್ಡ್ ಆಗುವಾಗ  ಶಂಕರ್‌ ಗೆ ( ಶಂಕರ್ ಶ್ಯಾನುಭೋಗ್) ಹೇಳ್ಬಿಟ್ಟೆ ನೀನು ಹೆಂಗೆ ಬೇಕಾದರೂ ಹಾಡಪ್ಪ  ಅಂತ ಫ್ರೀ ಬಿಟ್ಟು ಬಿಟ್ಟೆ ಅವನಿಗೆ ಅಂತ ಕಮೆಂಟ್‌ ಮಾಡಿದ್ದರು.

ನಾದಬ್ರಹ್ಮ ಅಂದ್ರೇನು? ಹಂಸಲೇಖರಿಂದ ಅನ್ಯಾಯ, ಗಾಯಕನ ಗಂಭೀರ ಆರೋಪ!

ಸಾರ್ವಜನಿಕವಾಗಿ ಅಷ್ಟು ದೊಡ್ಡ ಸುಳ್ಳು!ಹಸಿ ಸುಳ್ಳು! ಅವರು ಇರಲೇ ಇಲ್ಲ ಅಲ್ಲಿ,ಹಂಸಲೇಖ ವಾಸ್ ನಾಟ್ ದೇರ್ (ಅವರು ಅಲ್ಲಿ ಇರಲೇ ಇಲ್ಲ) ಮತ್ತೆ  ಇದು ಅವರು ಸಂಗೀತ ಸಂಯೋಜನೆ  ಮಾಡಿದ್ದಲ್ಲ.  ವಿ ಮನೋಹರ್   ಮಾಡಿದ್ದು. ಇದನ್ನ ವಿ ಮನೋಹರ್ ಹತ್ರನೇ ಕೇಳಿ ನೀವು ಹಂಸಲೇಖ ವಾಸ್ ನೋಟ್  ದೇರ್. ಎಪಿಸೋಡ್ ನೋಡಿ ನನಗೆ ನಗು ಬಂತು. ಏನಪ್ಪಾ ಇದು ಕಥೆ ಯಾರೋ ಮಾಡಿದ ಕೆಲಸದ ಕಾಮೆಂಟ್ ನನಗೆ ಬೇಕು ಅಂತ ಹೇಳಿದ್ರೆ ಹೇಗೆ? ನೀವು ಮಾಡಿದ್ದಾ? ದೊಡ್ಡ ಕೆಲಸಗಳನ್ನು ತುಂಬಾ ಮಾಡಿದ್ದೀರಿ,ನೂರಾರು ಹಾಡುಗಳನ್ನು ಕಂಪೋಸ್ ಮಾಡಿದ್ದೀರಿ,ನೂರಾರು ಪಿಕ್ಚರ್ ಗಳಿಗೆ ಸಂಗೀತ ಕೊಟ್ಟಿದ್ದೀರಿ, ಈ ಸುಳ್ಳು ಹೇಳಬೇಕಾದ ಅಗತ್ಯ ಏನಿಲ್ಲ.   ಮನೋಹರದು ಕ್ರೆಡಿಟ್ಸ್ ಅನ್ನು ನೀವ್ಯಾಕೆ ತಗೋತೀರಿ?ಮತ್ತೆ ಬ್ರಹ್ಮ ಹಾಗೆಲ್ಲ ಮಾಡಬಾರದಲ್ಲ!ಅದರಲ್ಲೂ ನಾದಬ್ರಹ್ಮ,ಮಾಡ್ತಾನೆ.

ಈ ಸುಳ್ಳು ಅಗತ್ಯ ಇದೆಯಾ ನಿಮಗೆ ಅಥವಾ ಇದನ್ನೆಲ್ಲ ಮಾಡಿದ ಮೇಲೆ ನಾದಬ್ರಹ್ಮರು ಆಗ್ತಾರಾ ಅಂತ,ಮೊದಲನೆಯದಾಗಿ ನಾದಬ್ರಹ್ಮ ಅನ್ನೋ ಶಬ್ದ ಇದೆಯಲ್ಲ ಅದಕ್ಕೆ ಅರ್ಥವೇ ಇಲ್ಲ. ನಿಜವಾದ ಅರ್ಥ ಏನು ನಾದಬ್ರಹ್ಮ ವಿಠ್ಠಲ ಒಬ್ಬನೇ,ಕರೆಕ್ಟ್ ಅಲ್ವಾ? ನಮ್ಮಲ್ಲಿ ಅನ್ನಬ್ರಹ್ಮ ಅಂತ ಮಂಜುನಾಥ , ನಾದಬ್ರಹ್ಮ ಅಂತ ವಿಠ್ಠಲನಿಗೆ ಹೇಳುತ್ತೇವೆ. ನಾದಬ್ರಹ್ಮ ಅಂದ್ರೆ ಏನು ನಾದವನ್ನು ಸೃಷ್ಟಿ ಮಾಡಿದವನು ಅಂತ. ಒಂದು ಅರ್ಥ ನಾದವನ್ನು ತಿಳಿದುಕೊಂಡವನು ಅಂತ.ಇನ್ನೊಂದು ಅರ್ಥ   ನಾನೇ ನಾದವಾಗಿದ್ದೇನೆ.  ನಮ್ಮಲ್ಲಿ ಕೆಲವರಿಗೆ ಏನು ಬಿರುದು ಕೊಡಬೇಕು ಅಂತಲೂ ಗೊತ್ತು. ಬಾಯಿಗೆ ಬಂದಿದ್ದು ನಾದಬ್ರಹ್ಮ ಅಂತ ಹೆಂಗೆ ಅದು ಅದನ್ನು ಸ್ವೀಕರಿಸುತ್ತಾರಲ್ಲ ಅವರು ಹೇಳಬೇಕು. ಅಟ್ಲೀಸ್ಟ್  ಇಲ್ಲಪ್ಪ ನೀವು ಕೊಟ್ಟಿದ್ದು ಬಿರುದು ಸರಿಯಲ್ಲ  ಅಂತ ಹೇಳಬೇಕಲ್ವಾ? ಆ ಸೌಜನ್ಯ ಇದ್ದರೆ ಕಾಲ ಹೀಗಿರುತ್ತಿರಲಿಲ್ಲ.

ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕರೆ!

ನೋಡಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತುಂಬಾ ಚೆನ್ನಾಗಿ ಹಾಡ್ತಾರೆ ಅವರು   ಶ್ರುತಿ ಬ್ರಹ್ಮ ಶ್ರುತಿಯನ್ನು ಕ್ರಿಯೇಟ್ ಮಾಡಿದವನು ಅಂತ ಶ್ರುತಿಯನ್ನು ತಿಳಿದುಕೊಂಡವನು ಅಂತ ಅರ್ಥ. ಅದು ಬ್ರಹ್ಮ ಅಂದ್ರೆ ಸೃಷ್ಟಿಕರ್ತ ಅಂತಾನೆ ಅರ್ಥ ಜಾಸ್ತಿ.ನಾವು ಬರುವ ಮುಂಚೆಯೂ ಇತ್ತು.  ಈ ಭೂಮಿ ಹುಟ್ಟುವಾಗ ಅದರ ಅನಂತರವೂ ಇತ್ತು. ಈವಾಗ ನಾದಬ್ರಹ್ಮ ಅನ್ನೋ ಶಬ್ದ ಹೇಗೆ? ಅಲ್ಲ ಈ ಬಿಗ್ ಬ್ಯಾಂಗ್ ಥಿಯರಿ ನಿಂತದೇ ನಾದದ ಮೇಲೆ ಹೋಗ್ಲಿ ಅದು ಬಿಟ್ಟುಬಿಡೋಣ ಇದು ಸರಿನಾ ಯಾರೋ ಕ್ರಿಯೇಟ್ ಮಾಡಿದ್ದು, ಯಾರೋ ಹಾಡಿದ್ದು, ನೀವು ಅಲ್ಲಿ ಇರಲೇ ಇಲ್ಲ. ನಾನು ಹೇಳಿಬಿಟ್ಟೆ ಅವನಿಗೆ ಹಾಡು ಅಂತ! ರಾಮಚಂದ್ರ ನೀವು ಇರಲಿಲ್ಲವಲ್ಲ ಸರ್ ಅಲ್ಲಿ, ನಾನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇದು ಏಳೇಳು ಜನ್ಮದ ಲವ್ ಹಾಡುವಾಗ ನೀವು ಇರಲಿಲ್ಲ. ನೀವೇನು ಹೇಳೋದು ನನಗೆ? ನಿಮ್ಮದು ಸಂಗೀತ ಅಲ್ಲ ಅದು ವಿ ಮನೋಹರ್ ಮಾಡಿದ ಸಂಗೀತ.

ಉಪೇಂದ್ರ ಇದ್ರು ವಿ ಮನೋಹರ್ ಇದ್ರು ನಾನು ಕಷ್ಟಪಟ್ಟು ಹಾಡಿದೀನಿ ಅದರ ಕ್ರೆಡಿಟ್ಸ್ ನಿಮಗೆ ಯಾಕೆ ಬೇಕು? ನೀವು ಸಾವಿರಾರು ಹಾಡು ಮಾಡಿದ್ದೀರಾ ಅದನ್ನ ನಾನು ಮಾಡಿದ್ದೀನಿ ಅಂತ ಹೇಳಲ್ಲ.  ನನಗೆ ಬೇಕಿಲ್ಲ ಅದು  ಸರಿನೂ ಅಲ್ಲ. ಬೇರೆಯವರು ಮಾಡಿದ್ದು ನೀವ್ಯಾಕೆ ನಿಮ್ಮದು ಅಂತೀರಿ? ಭ್ರಮಾ ಲೋಕದಲ್ಲಿ ಎಲ್ಲರನ್ನು ತೇಲಿಸೋದು ಅಲ್ವಾ ನೀವು? ಹೋಗ್ಲಿ ರಿಯಾಲಿಟಿ ಶೋಸ್ ಇಂದ ಏನು ಮೆಸೇಜ್ ಕೊಡ್ತೀರಿ? ನೀವು ಸೊಸೈಟಿಗೆ ಫಿಲಂ ಸಾಂಗ್ಸ್ ಇಂದ ಏನು ಮೆಸೇಜ್ ಕೊಡ್ತೀರಿ ಸಾತ್ವಿಕವಾದ ಸಂಗೀತ ಹೊರಗೆ ಬರುತ್ತಾ? ಚಿಂತನೆಗಳು ಹೊರಗೆ ಬರುತ್ತಾ? ಸಂಗೀತದ ಉದ್ದೇಶ ಏನು? ನಿಜವಾದ ಉದ್ದೇಶ ಏನು?  ಎಂದು ಪ್ರಶ್ನಿಸಿದ್ದಾರೆ. 

ರಿಯಾಲಿಟಿ ಶೋ ಗಳ ಬಗ್ಗೆ ಮಾತನಾಡುತ್ತಾ ಈಗ ಹೊಸದಾಗಿ ಬಂದಿರುವ ಸಿಂಗರ್ಸ್ ಗಳು  ರಿಯಾಲಿಟಿ ಶೋಸ್ ಗಳಿಂದ ಬರ್ತಾರೆ.ಇನ್ನೊಂದು ದೊಡ್ಡ ದುರಂತ ನಮ್ಮ ಕನ್ನಡ ಚಿತ್ರರಂಗದ್ದು ಏನು ಅಂತ ಹೇಳಿದ್ರೆ ಕನ್ನಡದಲ್ಲಿ ಅಸಂಖ್ಯಾತ ಪ್ರತಿಭೆಗಳಿವೆ ನಮಗೆ ಹಾಡಲು  ಆಗದೆ ಇರುವಂತಹ ಹಾಡುಗಳು ಯಾವುದು ಇಲ್ಲ.ನಮ್ಮಲ್ಲಿ ಒಳ್ಳೊಳ್ಳೆ ಸಿಂಗರ್ಸ್ ಇದ್ದಾರೆ. ರಾಜೇಶ್ ಕೃಷ್ಣ ಇದ್ದಾನೆ,ಹೇಮಂತ್ ಇದ್ದಾರೆ,ಎಲ್ ಎನ್ ಶಾಸ್ತ್ರಿ ಇದ್ರು ತುಂಬಾ ಜನ ಒಳ್ಳೊಳ್ಳೆ ಸಿಂಗರ್ಸ್ ಇದ್ದಾರೆ ಈಗಂತೂ ರಾಶಿಗಟ್ಟಲೆ ಇದ್ದಾರೆ. ಆಮೇಲೆ ಚಲನಚಿತ್ರ ಗೀತೆಗಳು ನಿಮಗೆ ಚಾಲೆಂಜ್ ಕೊಡುವಂತದ್ದು ಯಾವ ಹಾಡು ಬರುತ್ತೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!