ಪ್ರಿಯಾದು ಹನಿಮೂನೂ ಆಗೋಯ್ತು, ಈಗಾದ್ರೂ ಗುಡ್​ನ್ಯೂಸ್​ ಕೊಡಮ್ಮಾ... ಫ್ಯಾನ್ಸ್​ಗೆ ವೈಷು ಮದ್ವೆದೇ ಚಿಂತೆ!

ಸೀತಾರಾಮ ಸೀರಿಯಲ್​ ಸೀತಾ ಉರ್ಫ್​ ವೈಷ್ಣವಿ ಗೌಡ ಹಾಗೂ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ರೀಲ್ಸ್​ ಮಾಡಿದ್ದು, ವೈಷ್ಣವಿ ಮದುವೆಯ ಬಗ್ಗೆ ಫ್ಯಾನ್ಸ್ ಕೇಳಿದ್ದಾರೆ.
 

Seetarama serial Seetha alias Vaishnavi Gowda and Priya alias Meghana Shankarappa reels viral suc

ಸೀತಾರಾಮ ಸೀರಿಯಲ್​ ಪ್ರಿಯಾ ಅರ್ಥಾತ್​ ಮೇಘನಾ ಶಂಕರಪ್ಪ ಮದುವೆಯಾಗಿ ಹನಿಮೂನ್​ ಮುಗಿಸಿ ಈಗ ಶೂಟಿಂಗ್​ಗೆ ಮತ್ತೆ ವಾಪಸಾಗಿದ್ದಾರೆ. ಇನ್ನು ನಾಯಕಿ ಸೀತಾ ಅರ್ಥಾತ್​ ವೈಷ್ಣವಿ ಗೌಡ ಇನ್ನೂ ಸಿಂಗಲ್​. ಇವರಿಬ್ಬರೂ ಇದಾಗಲೇ ಸಾಕಷ್ಟು ರೀಲ್ಸ್ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮದುವೆಯಾದ ಮೇಲೆ ಮೇಘನಾ ಅವರು ವೈಷ್ಣವಿ ಜೊತೆ ರೀಲ್ಸ್​ ಮಾಡಿದ್ದಾರೆ. ಮೊದಮೊದಲು ಧರೆಗಿಳಿದ... ಹಾಡಿಗೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಇದಕ್ಕೆ ಕಮೆಂಟ್​ಗಳ ಸುರಿಮಳೆಯೇ ಆಗಿದೆ. ಇಬ್ಬರೂ ಸೀರೆಯುಟ್ಟು ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ. ಇವರ ಈ ಸ್ಟೆಪ್​ಗೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದರ ಹೊರತಾಗಿಯೂ ವೈಷ್ಣವಿ ಅವರ ಅಭಿಮಾನಿಗಳಿಗೆ ಅವರ ಮದುವೆಯದ್ದೇ ಚಿಂತೆ.

ಅಷ್ಟಕ್ಕೂ, ಈ ಹಿಂದೆ ವೈಷ್ಣವಿ ಅವರ ಬಾಳಲ್ಲಿ ದುರಂತವೂ ನಡೆದಿದೆ. 2022ರ ನವೆಂಬರ್‌ನಲ್ಲಿ ವೈಷ್ಣವಿ ಗೌಡ, ವಿದ್ಯಾಶಂಕರ್ ಎನ್ನುವವರು ಕುಟುಂಬದ ಮುಂದೆ ಹಾರ ಹಾಕಿಕೊಂಡಿದ್ದ ಫೋಟೋವೊಂದು ವೈರಲ್ ಆಗಿತ್ತು. ಎಲ್ಲರೂ ಇದು ನಿಶ್ಚಿತಾರ್ಥ ಎಂದೇ ಭಾವಿಸಿದರು. ಆಮೇಲೆ ವೈಷ್ಣವಿ ಕುಟುಂಬವೇ ಇದು ನಿಶ್ಚಿತಾರ್ಥ ಅಲ್ಲ ಎಂದು ಹೂ ಮುಡಿಸುವ ಶಾಸ್ತ್ರ ಎಂದು ಸ್ಪಷ್ಟನೆ ನೀಡಿತು. ಆ ನಂತರ ವಿದ್ಯಾಶಂಕರ್ ಕುರಿತಾದ ಆಡಿಯೋವೊಂದು ವೈರಲ್ ಆಗಿತ್ತು. ಆ ನಂತರ ವೈಷ್ಣವಿ ಅವರು ವಿದ್ಯಾಶಂಕರ್ ಜೊತೆ ಸಂಬಂಧ ಮುಂದುವರೆಸೋದಿಲ್ಲ ಎಂದು ಹೇಳಿದ್ದರು. 'ಅದು ನನ್ನ ತಾಯಿಯಿಂದ ಬಂದ ಸಂಬಂಧವಾಗಿತ್ತು. ಕೆಲ ದಿನಗಳ ನಂತರ ಸಂದರ್ಭ ಬದಲಾಯ್ತು, ನಾವು ಸಂಬಂಧ ಮುಂದುವರೆಸಲಿಲ್ಲ. ಆ ಘಟನೆ ನಮ್ಮ ಹಿಂದೆ ನಡೆದಿದ್ದಾಗಿತ್ತು. ಏನಾಗತ್ತೋ ಅದು ಒಳ್ಳೆಯದಕ್ಕೆ ಆಗುವುದು. ನನಗೆ ಇಂದಿಗೂ ಕೂಡ ರಿಲೇಶನ್‌ಶಿಪ್‌ನಲ್ಲಿ ನಂಬಿಕೆಯಿದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಎಂದು ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ' ಎಂಬ ಮಾತನ್ನು ಈ ಘಟನೆ ನಡೆದು ಎಷ್ಟೋ ದಿನಗಳ ಬಳಿಕ ಸಂದರ್ಶನವೊಂದರಲ್ಲಿ ವೈಷ್ಣವಿ ಹೇಳಿದ್ದರು.  

Latest Videos

ಹನಿಮೂನ್​ನಲ್ಲೇ ಗಂಡನ ಮೇಲೆ ನಟಿ ಮೇಘನಾ ಗರಂ! ಕ್ಯಾಮೆರಾ ಎದುರೇ ಇದೇನಿದು ಈ ಪರಿ ಆರೋಪ?

ಆದರೆ ಇದುವರೆಗೆ ವೈಷ್ಣವಿ ಮದುವೆಯಾಗಿಲ್ಲ. ಸೀತಾರಾಮ ಸೀರಿಯಲ್​ ರಾಮ್​ ಕೂಡ ಲವ್​ ಫೇಲ್ಯೂರ್​ ಆಗಿರುವುದಾಗಿ ಹೇಳಿದ್ದರಿಂದ ಇವರಿಬ್ಬರ ಜೋಡಿ ರಿಯಲ್​ ಆಗಿ ಆದ್ರೂ ಚೆನ್ನಾಗಿರತ್ತೆ ಎನ್ನುವುದು ಅಭಿಮಾನಿಗಳ ಅಭಿಮತ. ಈ ಹಿಂದೆ ಕೂಡ ಇವರಿಬ್ಬರ ಪ್ರಶ್ನೋತ್ತರದ ಸಮಯದಲ್ಲಿ ಇವರ ನಡುವೆ ಸಮ್​ಥಿಂಗ್​ ಇದೆ ಎಂದೇ ಫ್ಯಾನ್ಸ್​ ಅಂದುಕೊಂಡು ಬಿಟ್ಟಿದ್ದರು. ಪ್ರಸಿದ್ಧ ವ್ಯಕ್ತಿಯೊಂದಿಗೆ ಊಟ ಮಾಡುವುದಾದರೆ ಯಾರ ಜೊತೆ ಎಂದು ವೈಷ್ಣವಿ ಅವರನ್ನು ಕೇಳಿದಾಗ ಕೂಡಲೇ ಗಗನ್​ ನನ್ನ ಜೊತೆ ಎಂದಿದ್ದರು.   ಲಾಟರಿ ಬಂದರೆ ಏನು ಮಾಡುತ್ತೀರಿ ಕೇಳಿದಾಗ, ಅಮ್ಮನ ಕೈಗೆ ಕೊಡುತ್ತೇನೆ ಎಂದರು ವೈಷ್ಣವಿ. ಆಗ ಗಗನ್​ ಎಲ್ಲಾ ಸುಳ್ಳು ಎಂದರು. ಆಗ ವೈಷ್ಣವಿ ಮಕ್ಕಳನ್ನು ಸಾಕುವ ಕಷ್ಟ ನಿಮಗೇನು ಗೊತ್ತು ಮದ್ವೆಯಾಗಿ ಮಕ್ಳು ಮಾಡಿಕೊಳ್ಳಿ ಎಂದಾಗ ಕೂಡಲೇ ಗಗನ್​ ನನ್ನ ಮನೆಯಲ್ಲಿ ಯಾರೂ ಹೆಣ್ಣೇ ನೋಡ್ತಾ ಇಲ್ವಲ್ಲಪ್ಪಾ ಅಯ್ಯೋ ಎಂದರು. ಅದಕ್ಕೆ ನೆಟ್ಟಿಗರು ಪಕ್ಕದಲ್ಲೇ ಇದ್ದಾಳಲ್ಲ ಅಂತಿದ್ದರು. ಇದರ ಬಳಿ ಈ ಜೋಡಿ ಹಲವು ರೀಲ್ಸ್​ ಮಾಡಿದ್ದರಿಂದ ನಿಮ್ಮ ಜೋಡಿ ಸೂಪರ್​ ಎಂದೇ ಹೇಳಿದ್ದರು. 

ಸೀತಾರಾಮದ   ಪ್ರಿಯಾ  ಅರ್ಥಾತ್​ ಮೇಘನಾ ಶಂಕರಪ್ಪ ಅವರು ಇದೇ 9ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸಾಫ್ಟ್​ವೇರ್​ ಎಂಜಿನಿಯರ್​ ಜಯಂತ್​ ಅವರ ಕೈಹಿಡಿದಿದ್ದಾರೆ ಮೇಘನಾ. ಇದಾಗಲೇ ನಟಿ, ಪ್ರೀ ವೆಡ್ಡಿಂಗ್​ ಶೂಟ್​ ಮಾಡಿಸಿದ್ದು ಅಂದು ನಡೆದ ಘಟನೆಗಳನ್ನು ವಿವರಿಸಿದ್ದರು. ಬಳಿಕ ನಟಿ ಫೈನಲ್​ ವಿಡಿಯೋ ಶೇರ್​ ಮಾಡಿದ್ದರು. ಈ ವಿವಾಹ ಪೂರ್ವ ವಿಡಿಯೋ ಶೂಟ್​ ಯಾವ ಸಿನಿಮಾಗಿಂತಲೂ ಕಮ್ಮಿಯಿರಲಿಲ್ಲ. ಈಗಿನ ಕಾಲದಲ್ಲಿ ಅರೇಂಜ್ಡ್​ ಮ್ಯಾರೇಜ್​ ಎನ್ನುವುದು ಅಪರೂಪ. ಅದರಲ್ಲಿಯೂ ಸೆಲೆಬ್ರಿಟಿ ಎಂದರೆ ಲವ್​ ಮ್ಯಾರೇಜೇ ಇರುತ್ತದೆ. ಆದರೆ ಮೇಘನಾ ಅವರದ್ದು ಅರೇಂಜ್ಡ್​ ಮ್ಯಾರೇಜ್​.  ಕೆಲ ದಿನಗಳ ಹಿಂದೆ ವಿಡಿಯೋ ಶೇರ್​ ಮಾಡಿದ್ದ ನಟಿ,  ನೆಲಮಂಗಲದ ಬಳಿಯ ನಿರ್ಜನ ಪ್ರದೇಶದಲ್ಲಿ ಪ್ರೀ ವೆಡ್ಡಿಂಗ್​ ವಿಡಿಯೋ ಶೂಟ್​ ಮಾಡಿಸಿರುವುದಾಗಿ ಹೇಳಿದ್ದರು. ಹನಿಮೂನ್​ ಮುಗಿಸಿ ಶೂಟಿಂಗ್​ಗೆ ವಾಪಸ್​ ಆಗಿದ್ದಾರೆ. 

ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

vuukle one pixel image
click me!