ಮಂದಾಕಿನಿಯೇ... ನೀ.. ಹಾಡಿಗೆ ಪ್ರೇಮದ ಕಿಡಿ ಹೊತ್ತಿಸಿದ ಬಿಗ್​ಬಾಸ್​ ಕಿಶನ್- ನಮ್ರತಾ! ರೊಮಾನ್ಸ್​ಗೆ ಫ್ಯಾನ್ಸ್​ ಫಿದಾ

ಮಂದಾಕಿನಿಯೇ... ನೀ.. ಹಾಡಿಗೆ ಪ್ರೇಮದ ಕಿಡಿ ಹೊತ್ತಿಸಿದೆ ಬಿಗ್​ಬಾಸ್​ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ನಮ್ರತಾ ಗೌಡ. ವಿಡಿಯೋ ವೈರಲ್​ ಆಗಿದ್ದು ರೊಮಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.
 

Bigg Boss Namratha Gowda and Kishen Bilagali romantic step to Mandakiniye nee song suc

ಬಿಗ್​ಬಾಸ್ ಮೂಲಕವೇ ಸಕತ್​ ಫೇಮಸ್​ ಆಗಿರೋ ಕಿಶನ್‌ ಬಿಳಗಲಿ ಮತ್ತು ನಮ್ರತಾ ಗೌಡ ಅವರ ಕೆಮೆಸ್ಟ್ರಿಗೆ  ಇದಾಗಲೇ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಜೋಡಿ ವೇದಿಕೆಯ ಮೇಲೆ ಬಂದರೆ, ಅಲ್ಲೊಂದು ಸಕತ್ ರೊಮಾನ್ಸ್​ ಇರುತ್ತದೆ ಎನ್ನುವುದು ಅಭಿಮಾನಿಗಳಿಗೆ ಗೊತ್ತು. ಇದಾಗಲೇ ಈ ಜೋಡಿ ಸೋಷಿಯಲ್​  ಮೀಡಿಯಾದಲ್ಲಿ ಕಿಚ್ಚು ಹೊತ್ತಿಸುತ್ತಿದ್ದಾರೆ. ಇದಾಗಲೇ ಇಬ್ಬರೂ ಸೇರಿ ಕೆಲವು ಡ್ಯೂಯೆಟ್​  ಹಾಡಿದ್ದು, ಅದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇವರಿಬ್ಬರು ರವಿಚಂದ್ರನ್‌ ನಟನೆಯ ಶಾಂತಿಕ್ರಾಂತಿ ಸಿನಿಮಾದ "ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಹಾಡು, ಸಪ್ತಸಾಗರದಾಚೆ ಎಲ್ಲೋ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಹೃದಯ ಗೆದ್ದಿದ್ದರು.   ಶಿವರಾತ್ರಿಯ ನಿಮಿತ್ತ ಈ ಜೋಡಿ ಶಿವ-ಪಾರ್ವತಿಯರನ್ನೇ ಧರೆಗಿಳಿಸಿದರು. ಇವರ ಪರ್​ಫಾರ್ಮೆನ್ಸ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

ಇದೀಗ ಈ ಜೋಡಿ ಹುಡುಗಾಟ ಚಿತ್ರದ ಮಂದಾಕಿನಿಯೇ ನೀ ಸಿಡಿಲಿನ ಕಿಡಿಯೇ ಹಾಡಿಗೆ ರೊಮಾಂಟಿಕ್​ ಸ್ಟೆಪ್​ ಹಾಕಿದ್ದಾರೆ. ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದಹಾಗೆ,  ನಮ್ರತಾ ಗೌಡ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಯಾಗಿದ್ದರೆ, ಮತ್ತು ಬಿಗ್‌ಬಾಸ್‌ ಕನ್ನಡ ಸೀಸನ್‌ 7 ಸ್ಪರ್ಧಿಯಾಗಿದ್ದರು  ಕಿಶನ್‌ ಬಿಳಗಲಿ.  ಕಿಶನ್​ ಅವರು ಮೂಲತಃ ಡಾನ್ಸರ್​ ಚಿಕ್ಕಮಗಳೂರಿನ ಇವರು ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್​. ಡಾನ್ಸ್​ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್​ಲೆಟ್​ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈರಲ್​ ಆಗಿತ್ತು. 

Latest Videos

ಮತ್ತೆ ಬದಲಾದಳು ಸ್ನೇಹಾ; ಬಂದಳು ರಾಮಾಚಾರಿ ರುಕ್ಕು! ಕಂಠಿ ಗತಿ ನೆನೆಸಿಕೊಂಡು ಕಣ್ಣೀರಿಡ್ತೋ ಫ್ಯಾನ್ಸ್​

 
 ಇನ್ನು ನಮ್ರತಾ ಗೌಡ ಅವರ ಕುರಿತು ಹೇಳುವುದೇ ಬೇಡ. ಬಿಗ್​ಬಾಸ್​ 10 ಮೂಲಕ ಸಕತ್​  ಫೇಮಸ್​ ಆಗಿರುವವರು ಇವರು.  ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಆಗಿರುವ ನಮ್ರತಾ  1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪದಾರ್ಪಣೆ ಮಾಡಿದ ನಮ್ರತಾ ಅದಾದ ಬಳಿಕ  ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು. ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಗಮನ ಸೆಳೆದರು. ಈಗ ಎಲ್ಲಕ್ಕಿಂತಲೂ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ಬಿಗ್​ಬಾಸ್​ 10. ಇಲ್ಲಿ ಇವರು ಮತ್ತು ಸ್ನೇಹಿತ್​ ಸ್ನೇಹ ಸಾಕಷ್ಟು ಸದ್ದು ಕೂಡ ಮಾಡಿತ್ತು.   

ಈ ಹಿಂದೆ ಸಂದರ್ಶನವೊಂದರಲ್ಲಿ ಈ ಜೋಡಿ ಮಾತನಾಡುತ್ತಾ ತಮ್ಮ ಫ್ರೆಂಡ್​ಷಿಪ್​ ಬಗ್ಗೆ ಹೇಳಿಕೊಂಡಿದ್ದರು.  ಮನೆ ಪಕ್ಕದಲ್ಲೇ ಇದ್ದರೂ ನಮ್ರತಾ ನನಗೆ ಕರೆ ಮಾಡುವುದಿಲ್ಲ, ತಿಂಡಿ ತಿನ್ನಲು ಸುತ್ತಾಡಲು ಬೇರೆ ಬೇರೆ ಸ್ನೇಹಿತರು ಇದ್ದಾರೆ ನಾನು ಲೆಕ್ಕನೇ ಇಲ್ಲ ಎಂದು ಕಿಷನ್ ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ಮೊಬೈಲ್​ ಫೋನ್​ನಲ್ಲಿ ನಮ್ರತಾ ಹೆಸರನ್ನು ಹೇಗೆ ಸೇವ್​ ಮಾಡಿಕೊಂಡಿದ್ದೇನೆ ಎನ್ನುವ ಬಗ್ಗೆ ಮಾತನಾಡಿದ್ದರು.  ಸಾಮಾನ್ಯವಾಗಿ ನಮ್ರತಾ ಮಾತಿಗೆ ಮುಂಚೆ  What the Fu** ಪದವನ್ನು ಬಳಸುತ್ತಾರೆ ಹೀಗಾಗಿ ನಾನು ಆಕೆ ನಂಬರ್‌ನ ನಮ್ರತಾ F** ಎಂದೇ ಸೇವ್ ಮಾಡಿಕೊಂಡಿದ್ದೀನಿ ಎಂದು ಕಿಷನ್ ಹೇಳಿದ್ದರು. ಆಗ ಹುಸಿಮುನಿಸು ತೋರಿದ್ದ ನಮ್ರತಾ,  ಅಯ್ಯೋ ನಮ್ಮ ಸ್ನೇಹದ ಬಗ್ಗೆ ಮಾತನಾಡಿ ಅಂದ್ರೆ ಮಾನ ಮರ್ಯಾದೆ ತೆಗೆಯುತ್ತಿದ್ದೀರಿ ಎಂದಿದ್ದರು.  

ಧಾರಾವಾಹಿಗಳಲ್ಲಿ ನಟಿಸೋ ಆಸೆ ಇದ್ರೆ ಎಂಟ್ರಿ ಆಗೋದು ಹೇಗೆ? 'ಸೀತಾರಾಮ' ಪ್ರಿಯಾ ಮಾತು ಕೇಳಿ...

 

vuukle one pixel image
click me!