ಕೆಬಿಸಿ ಮೂಲಕ ನಿಜಕ್ಕೂ ಕರೋಡ್‌ಪತಿಯಾಗಿದ್ದು ಅಮಿತಾಬ್ ಬಚ್ಚನ್, 150 ಎಪಿಸೋಡ್‌ನಿಂದ ಗಳಿಸಿದ್ದೆಷ್ಟು?

ಕೌನ ಬನೇಗಾ ಕರೋಡ್‌ಪತಿ? ಈ ರಿಯಾಲಿಟಿ ಶೋ ಮೂಲಕ ಸ್ಪರ್ಧಿಗಳು ಯಾರೆಲ್ಲಾ ಕೋಟ್ಯಾಧೀಶರಾಗಿದ್ದಾರೋ ಇಲ್ವೋ ಗೊತ್ತಿಲ್ಲ. ಆದರೆ ಹೋಸ್ಟ್ ಅಮಿತಾಬ್ ಬಚ್ಚನ್ ನಿಜಕ್ಕೂ ಕರೋಡ್‌ಪತಿಯಾಗಿದ್ದಾರೆ. ಕಾರಣ ಇತ್ತೀಚೆಗೆ ಮುಕ್ತಾಯಗೊಂಡ ಕೆಬಿಸಿ16ನೇ ಒಂದೇ ಆವತ್ತಿ ಮೂಲಕ ಅಮಿತಾಬ್ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

Amitabh bachchan earns rs 375 crore from 16th edition kaun banega crorepati says report

ಮುಂಬೈ(ಮಾ.22) ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಸಿನಿಮಾ ಮೂಲಕ ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಆದರೆ ಇದಕ್ಕಿಂತ ಹೆಚ್ಚು ಕೌನ್  ಬನೇಗಾ ಕರೌಡ್‌ಪತಿ ಕ್ವಿಝ್ ಶೋ ಮೂಲಕ ಅದಕ್ಕಿಂತ ಹೆಚ್ಚು ಗಳಿಸುತ್ತಿದ್ದಾರೆ. ಕೆಬಿಸಿ 16ನೇ ಆವೃತ್ತಿ ಇತ್ತೀಚೆಗೆ ಅಂತ್ಯಗೊಂಡಿದೆ. ಇಲ್ಲಿ ನಿಜಕ್ಕೂ ಕೋಟಾಧ್ಯೀಶರಾಗಿದ್ದು ಯಾರು? ಹಾಟ್ ಸೀಟಿನ ಮೇಲೆ ಕುಳಿತು ಎಲ್ಲಾ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ ಕೋಟಿ ರೂಪಾಯಿ ಗೆದ್ದವರು ಕೋಟ್ಯಾಧೀಶರಾಗಿದ್ದಾರಾ? ಅಥವಾ ಈ ಕಾರ್ಯಕ್ರಮ ನಿರೂಪಣೆ ಮಾಡಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್? ವರದಿಗಳ ಪ್ರಕಾರ ಅಮಿತಾಬ್ ಬಚ್ಚನ್ ನಿಜಕ್ಕೂ ಕರೋಡ್‌ಪತಿಯಾಗಿದ್ದಾರೆ ಎಂದು ಹೇಳುತ್ತಿದೆ.

ಕಳೆದ 25 ವರ್ಷದಿಂದ ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ಶೋ ನಡೆಸಿಕೊಡುತ್ತಿದ್ದಾರೆ. 2000ನೇ ಇಸವಿಯಲ್ಲಿ ಕೆಬಿಸಿ ಕಾರ್ಯಕ್ರಮ ಆರಂಭಗೊಂಡಿತ್ತು. ಬಳಿಕ ಪ್ರತಿ ವರ್ಷ ಯಶಸ್ವಿಯಾಗಿ ನಡೆಯುತ್ತಿದೆ. ಇತ್ತ ಸಿನಿಮಾ ಸೋಲು, ಆರ್ಥಿಕ ಸಂಕಷ್ಟದಲ್ಲಿದ್ದ ಅಮಿತಾಬ್ ಬಚ್ಚನ್‌ಗೆ ಕೆಬಿಸಿ ಆರ್ಥಿಕವಾಗಿ ಉಸಿರಾಡುವಂತೆ ಮಾಡಿತ್ತು. ಇಷ್ಟೇ ಅಲ್ಲ ಕೆಬಿಸಿ ಅಮಿತಾಬ್ ಬಚ್ಚನ್ ಟಿವಿ ಪದಾರ್ಪಣೆಯಾಗಿತ್ತು. ಮೊದಲ ಆವೃತ್ತಿ ಕೆಬಿಸಿ ಹೋಸ್ಟ್ ಮಾಡಿದ ಅಮಿತಾಬ್ ಬಚ್ಚನ್ ಪ್ರತಿ ಎಪಿಸೋಡ್‌ಗೆ 12.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಪ್ರತಿ ದಿನ 2 ಎಪಿಸೋಡ್ ಶೂಟ್ ಮಾಡಲಾಗುತ್ತಿತ್ತು. ಹೀಗಾಗಿ 2000ನೇ ಇಸವಿಯಲ್ಲಿ ಅಮಿತಾಬ್ ಬಚ್ಚನ್ ಪ್ರತಿ ದಿನ 25 ಲಕ್ಷ ರೂಪಾಯಿ ಗಳಿಸುತ್ತಿದ್ದರು. ಇದು ಮೊದಲ ಆವೃತ್ತಿಯ ಮಾತು. ಇದೀಗ ಕೆಬಿಸಿ 16ನೇ ಆವೃತ್ತಿ ಪೂರ್ಣಗೊಳಿಸಿದೆ. ಕೊನೆಯ ಆವೃತ್ತಿಯಲ್ಲಿ ಅಮಿತಾಬ್ ಬಚ್ಚನ್ ಪಡೆದ ಸಂಭಾವನೆ ಎಷ್ಟು?

Latest Videos

ಶಾರುಖ್​ರನ್ನು ಹಿಂದಿಕ್ಕಿ 82ನೇ ವಯಸ್ಸಲ್ಲಿ ಟಾಪ್​-1 ಸ್ಥಾನಕ್ಕೇರಿದ ಅಮಿತಾಭ್​: ಕುತೂಹಲದ ಮಾಹಿತಿ ಇಲ್ಲಿದೆ...

15ನೇ ಕೆಬಿಸಿ ಆವೃತ್ತಿಯಲ್ಲಿ ನಿರೂಪಣೆಗೆ ಅಮಿತಾಬ್ ಬಚ್ಚನ್ ಸಂಭಾವನೆ ಹಲವು ಪಟ್ಟು ಏರಿಕೆಯಾಗಿದೆ. ಕಳೆದ ಆವೃತ್ತಿಯಲ್ಲಿ ಅಮಿತಾಬ್ ಬಚ್ಚನ್ ಒಂದು ಎಪಿಸೋಡ್ ಶೂಟ್ ಮಾಡಲು 1.25 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ. 15ನೇ ಆವೃತ್ತಿಯಲ್ಲೂ ಅಮಿತಾಬ್ ಬಚ್ಚನ್ ಪ್ರತಿ ದಿನ 2 ಎಪಿಸೋಡ್ ಶೂಟ್ ಮಾಡುತ್ತಿದ್ದರು. ಈ ಮೂಲಕ ಒಂದೇ ದಿನ ಅಮಿತಾಬ್ ಬಚ್ಚನ್ 2.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.  15ನೇ ಆವೃತ್ತಿಯಲ್ಲಿ ಅಮಿತಾಬ್ ಬಚ್ಚನ್ ಕೌನ್ ಬನೇಗಾ ಕರೋಡ್‌ಪತಿ ಶೂಟಿಂಗ್ 75 ದಿನ ನಡೆದಿದೆ. ಅಂದರೆ ಒಂದು ದಿನ 2 ಎಪಿಸೋಡ್ ಎಂದರೆ 150 ಎಪಿಸೋಡ್ ಅಮಿತಾಬ್ ಬಚ್ಚನ್ ಶೂಟ್ ಮಾಡಿದ್ದಾರೆ. 

ಇನ್ನು 16ನೇ ಆವೃತ್ತಿ ಅಂದರೆ ಇತ್ತೀಚೆಗೆ ಮುಕ್ತಾಯಗೊಂಡ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಸಂಭಾವನೆ ಮತ್ತೆ ಡಬಲ್ ಆಗಿದೆ. 16ನೇ ಆವೃತ್ತಿಗೆ ಅಮಿತಾಬ್ ಬಚ್ಚನ್ ಒಂದು ಎಪಿಸೋಡ್ ಶೂಟ್ ಮಾಡಲು 2.5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಒಂದು ದಿನ ಎರಡು ಎಪಿಸೋಡ್‌ನಂತೆ ಅಮಿತಾಬ್ ಬಚ್ಚನ್ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಬಾರಿಯೂ 75 ದಿನ ಶೂಟಿಂಗ್ ನಡೆದಿದೆ. ಪ್ರತಿ 2 ಎಪಿಸೋಡ್‌ನಂತೆ ಅಮಿತಾಬ್ ಬಚ್ಚನ್ ಶೂಟ್ ಮಾಡಿದ್ದಾರೆ.ಈ ಮೂಲಕ ಅಮಿತಾಬ್ ಬಚ್ಚನ್ ಇತ್ತೀಚೆಗೆ ಮುಕ್ತಾಯಗೊಂಡ ಕೆಬಿಸಿ ಮೂಲಕ ಬರೋಬ್ಬರಿ 375 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತಿದೆ.

ಇದೇ ಕಾರಣದಿಂದ ಈ ಬಾರಿ ಅಮಿತಾಬ್ ಬಚ್ಚನ್ ಗರಿಷ್ಠ ತೆರಿಗೆ ಪಾವತಿಸಿದ್ದಾರೆ. ತೆರಿಗೆ ಪಾವತಿಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಹಲವರನ್ನು ಅಮಿತಾಬ್ ಬಚ್ಚನ್ ಹಿಂದಿಕ್ಕಿದ್ದಾರೆ. ಕಾರಣ ಇಷ್ಟೇ ಈ ಬಾರಿಯ ಕೆಬಿಸಿಯಿಂದ 375 ಕೋಟಿ ರೂಪಾಯಿ ಸಂಭಾವನೆಯನ್ನೇ ಪಡೆದಿದ್ದಾರೆ.

ನಟನೆ ಬಿಡಲು ನಿರ್ಧರಿಸಿದ್ದ ಅಭಿಷೇಕ್ ಬಚ್ಚನ್, ಮಗನ ನಿರ್ಧಾರ ಖಂಡಿಸಿದ ಅಮಿತಾಭ್‌!
 

vuukle one pixel image
click me!