ಸೀತಾರಾಮ ಶೂಟಿಂಗ್​ ವೇಳೆ ಸೆಟ್​ನಲ್ಲಿಯೇ ರೊಚ್ಚಿಗೆದ್ದ ಪ್ರಿಯಾ: ನಟಿಯರ ಗಲಾಟೆ ವಿಡಿಯೋ ವೈರಲ್

ಸೀತಾರಾಮ ಶೂಟಿಂಗ್​ ವೇಳೆ ಸೆಟ್​ನಲ್ಲಿಯೇ ರೊಚ್ಚಿಗೆದ್ದಿದ್ದಾರೆ ಪ್ರಿಯಾ ಪಾತ್ರಧಾರಿ ನಟಿ ಮೇಘನಾ ಶಂಕರಪ್ಪ. ಇದೇ ವೇಳೆ ನಟಿಯರ ಗಲಾಟೆಯೂ ಆಗಿದೆ. ಏನಿದರ ಅಸಲಿಯತ್ತು?
 


ಸೀತಾರಾಮ ಶೂಟಿಂಗ್​ ಯುಗಾದಿ ಹಬ್ಬದ ದಿನವೂ ನಡೆದಿದೆ. ಆದರೆ ಶೂಟಿಂಗ್​ ವೇಳೆಯೇ, ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಅವರು ಗಲಾಟೆ ಮಾಡಿದ್ದಾರೆ. ಇದರಿಂದ ಇಡೀ ತಂಡದಲ್ಲಿದ್ದ ನಟಿಯರು ಗಲಾಟೆ ಆರಂಭಿಸಿದ್ದಾರೆ. ಜೋರು ಜೋರಾಗಿ ವಾದಗಳು ನಡೆದಿವೆ. ಇದರಲ್ಲಿ ಪ್ರಿಯಾ ಮಾತ್ರ ಸಕತ್​ ಜೋರಾಗಿ ಗಲಾಟೆ ಮಾಡಿದ್ದು, ಅದರ ವಿಡಿಯೋ ಕೂಡ ವೈರಲ್​ ಆಗಿದೆ. ಕುತೂಹಲದ ವಿಷಯ ಏನೆಂದರೆ, ಈ ವಿಡಿಯೋ ಅನ್ನು ಖುದ್ದು ಸೀತಾರಾಮ ಸೀರಿಯಲ್​ ನಟಿ ಸೀತಾ ಉರ್ಫ್​ ವೈಷ್ಣವಿ ಗೌಡ ಅವರು ಶೇರ್​ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ವೈಷ್ಣವಿ ಗೌಡ ಮತ್ತು ಮೇಘನಾ ಶಂಕರಪ್ಪ ನಡುವೆಯೇ ಮಾತಿನ ಚಕಮಕಿ ನಡೆದಿರುವುದನ್ನು ನೋಡಬಹುದು. ಇಲ್ಲಿ ಶೂಟಿಂಗ್​ ಮಾಡಿರುವುದನ್ನು ತಮ್ಮದೇ ಬ್ಲಾಗ್​ನಲ್ಲಿ ಹಾಕಿಕೊಳ್ಳುವುದಾಗಿ ಈ ಇಬ್ಬರು ನಟಿಯರು ವಾಕ್ಸಮರ ನಡೆಸಿದ್ದಾರೆ.

ಅಷ್ಟಕ್ಕೂ ಈ ಗಲಾಟೆ ಏನೂ ಸೀರಿಯಲ್​​ ಆಗಿ ನಡೆದದ್ದಲ್ಲ. ಬದಲಿಗೆ ಶೂಟಿಂಗ್​ ಸೆಟ್​ನಲ್ಲಿ ಎಲ್ಲರೂ ತಮಾಷೆಯಾಗಿ ಮಾಡಿರುವಂಥ ಗಲಾಟೆ ಇದು. ಯುಗಾದಿ ಹಬ್ಬದ ಸಂದರ್ಭದಲ್ಲಿಯೂ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ನಟಿಯರು ಸೆಟ್​ನಲ್ಲಿ ತಮಾಷೆ ಮಾಡಿಕೊಂಡಿದ್ದಾರೆ. ಸೀರಿಯಲ್​ಗಳು ಸಿನಿಮಾಗಳಂತೆ ಅಲ್ಲ. ಇಲ್ಲಿ ನಟ-ನಟಿಯರಿಗೆ ಶೂಟಿಂಗ್​ ಸೆಟ್ಟೇ ಮನೆಗಿಂತಲೂ ಹೆಚ್ಚಾಗಿರುತ್ತದೆ. ಸೀರಿಯಲ್​ಗಳಲ್ಲಿ ನಟಿಸುವ ನಟ-ನಟಿಯರೇ ಮನೆಯವರಾಗಿ ಬಿಡುತ್ತಾರೆ. ಅಲ್ಲಿಯೇ ಅವರ ಬಾಂಧವ್ಯ ಬೆಳೆಯುತ್ತದೆ. ಐದಾರು ವರ್ಷಗಳವರೆಗೆ ಒಂದು ಸೀರಿಯಲ್​ ನಡೆಯುವ ಕಾರಣ, ಅವರ ಬಾಂಧವ್ಯ ಅಷ್ಟು ಗಟ್ಟಿಯಾಗಿ ಬಿಡುತ್ತದೆ. ಅದೇ ರೀತಿ ಸೀತಾರಾಮ ತಂಡದವರು ಕೂಡ ಬಗೆಬಗೆಯ ಅಡುಗೆಯನ್ನು ಮಾಡಿಕೊಂಡು ಬಂದು ಶೂಟಿಂಗ್​ ಸೆಟ್​ನಲ್ಲಿ ಸವಿಯುವುದನ್ನು ನೋಡಬಹುದಾಗಿದೆ. ಇದೇ ವೇಳೆ ತಮಾಷೆಗೆಂದು ಗಲಾಟೆ ಮಾಡಿಕೊಂಡಿದ್ದಾರೆ. 

Latest Videos

ನನ್ನ ಸಕ್ಸಸ್​ಗೆ ಕಾರಣ ಪಲಾವ್​ ಎಲೆ: ಯಶಸ್ಸಿನ ಗುಟ್ಟು ತಿಳಿಸಿಕೊಟ್ಟ ಸೀತಾರಾಮ ನಟಿ ವೈಷ್ಣವಿ ಗೌಡ- ವಿಡಿಯೋ ವೈರಲ್​

ಇನ್ನು ನಟಿ ಮೇಘನಾ ಶಂಕರಪ್ಪ ಕುರಿತು ಹೇಳುವುದಾದರೆ, ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ,  ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಮಗುವಿಗಾಗಿ ಬಾಲ್ಕನಿಗೆ ಸೇಫ್ಟಿ ಮಾಡಿದ ವೈಷ್ಣವಿ ಗೌಡ! ಮನೆಯಲ್ಲಿ ಏನೇನಿವೆ? ಹೋಮ್‌ ಟೂರ್ ವಿಡಿಯೋ ವೈರಲ್

 

click me!