ಇಷ್ಟು ದಿನಗಳಿಂದ ಫಾಲೋವರ್ಸ್ ಮಾಡುತ್ತಿದ್ದ ಕಾಮೆಂಟ್‌ಗೆ ಈಗ ಉತ್ತರ ಸಿಕ್ಕಿದೆ. ಅತ್ತೆ ಸೊಸೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಕನ್ನಡ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದವರಲ್ಲಿ ಮಧು ಗೌಡ, ನಿಶಾ ರವೀಂದ್ರ ಮತ್ತು ನಿಖಿಲ್ ರವೀಂದ್ರ ಕೂಡ ಇದ್ದಾರೆ. ಹಲವು ವರ್ಷಗಳ ಕಾಲ ಮಧು ಗೌಡ ಮತ್ತು ನಿಖಿಲ್ ಪ್ರೀತಿ ಮದುವೆಯಾದರು. ದೀಪ ಶಾಸ್ತ್ರದಿಂದ ಹಿಡಿದು ಮನೆ ತುಂಬಿಸಿಕೊಳ್ಳುವ ಶಾಸ್ತ್ರದವರೆಗೂ ವಿಡಿಯೋಗಳನ್ನು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಯೂಟ್ಯೂಬ್ ಮತ್ತು ಇನ್‌ಸ್ಟ್ರಾಗ್ರಾಂನಿಂದ ಸಂಪಾದನೆ ಮಾಡಿಕೊಂಡು ಇಷ್ಟೋಂದು ಕೂಲ್ ಜೀವನ ನಡೆಸಬಹುದಾ ಅನ್ನೋದು ಜನರ ಪ್ರಶ್ನೆ ಆಗಿತ್ತು. ಆದರೆ ಮಧು ಮದ್ವೆ ಆದ್ಮೇಲೆ ಆದ ಬದಲಾವಣೆಗಳ ಬಗ್ಗೆನೂ ಜನರಿಗೆ ಪ್ರಶ್ನೆ ಶುರುವಾಗಿತ್ತು.
ಪ್ರತಿ ದಿನ ವಿಡಿಯೋ ಅಪ್ಲೋಡ್ ಮಾಡುವ ಇವರು ಯಾಕೆ ಅತ್ತೆ ಜೊತೆ ಕಾಣಿಸಿಕೊಳ್ಳುವುದಿಲ್ಲ? ತಮ್ಮ ವಿಡಿಯೋದಲ್ಲಿ ಯಾಕೆ ಅತ್ತೆನ ತೋರಿಸುವುದಿಲ್ಲ? ಯಾಕೆ ಅತ್ತೆಯಿಂದ ದೂರ ಇದ್ದಾರಾ ಅನ್ನೋ ಪ್ರಶ್ನೆಗಳು ಶುರುವಾಗಿತ್ತು. ಈ ಅನುಮಾನಗಳಿಗೆ ಹಲವು ಸಲ ಕ್ಲಾರಿಟಿ ನೀಡಿದ್ದಾರೆ ಆದರೂ ಜನರ ಕೊಂಕು ಪ್ರಶ್ನೆಗಳು ಹೆಚ್ಚಾಗುತ್ತಿದ್ದ ಕಾರಣ ಫೋಟೋ ಮೂಲಕ ಕ್ಲಾರಿಸಿ ಕೊಟ್ಟಿದ್ದಾರೆ.ಮದುವೆಯ ಮೊದಲ ವರ್ಷದಲ್ಲಿ ಬರುತ್ತಿರುವ ಎಲ್ಲಾ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ನಮ್ಮೆಲ್ಲರ ಹೊಸ ವರ್ಷ ಆಗಿರುವ ಯುಗಾದಿ ಹಬ್ಬವನ್ನು ಕೂಡ ಅದ್ಧೂರಿಯಾಗಿ ಆಚರಿಸಿದ್ದಾರೆ.ಈ ಸಮಯದಲ್ಲಿ ಮನೆಯಲ್ಲಿ ತಮ್ಮ ಅತ್ತೆ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅತ್ತೆ ಸೊಸೆ ಜೊತೆಗೆ ನೋಡಿದ ಮೇಲೆ ಮನೆ ಹೊಡೆದಿಲ್ಲ ಚೆನ್ನಾಗಿದೆ ಎಂದು ಅರ್ಥವಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಸದ್ಯಕ್ಕೆ ಮಗಳಿಗೆ ಮಿಲನಾ ಬೇಕು, ಮುಂದಕ್ಕೆ ನೋಡ್ಬೇಕು ಅಪ್ಪನ ಮಗಳಾ ಅಮ್ಮನ ಮಗಳಾ ಅಂತ: ಡಾರ್ಲಿಂಗ್ ಕೃಷ್ಣ
ಹಸಿರು ಬಣ್ಣದ ಸೆಲ್ವಾರ್‌ನಲ್ಲಿ ಅತ್ತೆ ಕಾಣಿಸಿಕೊಂಡರೆ ಗ್ರೇ ಆಂಡ್ ರೆಡ್ ಬಣ್ಣದ ಸೀರೆಯಲ್ಲಿ ಮಧು ಮಿಂಚಿದ್ದಾರೆ. 'ನಾನು ಯಾಕೆ ಅತ್ತೆ ಅಂತ ಕರೆಯುವುದಿಲ್ಲ ಆಂಟಿ ಅಂತ ಕರೆಯುವುದು ಎಂದು ಹಲವರು ಪ್ರಶ್ನೆ ಮಾಡುತ್ತಾರೆ. ನಿಜ ಹೇಳಬೇಕು ಅಂದ್ರೆ ನಾನು ಅತ್ತೆ ಅನ್ನೋದ್ದಕ್ಕಿಂತ ಹೆಚ್ಚಾಗಿ ಆಂಟಿ ಎಂದು ಕರೆದರೆನೇ ಅವರಿಗೆ ಇಷ್ಟ ಆಗುವುದು' ಎಂದು ಮಧು ಗೌಡ ಈ ಹಿಂದೆ ವಿಡಿಯೋದಲ್ಲಿ ಕ್ಲಾರಿಟಿ ನೀಡಿದ್ದಾರೆ. 'ನಮ್ಮ ಅಮ್ಮನಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ. ನಾವು ವಿಡಿಯೋ ಮಾಡಿದಾಗ ಅವರನ್ನು ಮತ್ತೊಬ್ಬರು ನೋಡುತ್ತಾರೆ ಆಮೇಲೆ ಅವರನ್ನು ಮಾತನಾಡಿಸುವುದು ಮಾಡುತ್ತಾರೆ. ಅವರಿಗೆ ನಾಚಿಕೆ ಸ್ವಭಾವ ಇರುವುದರಿಂದ ಇಷ್ಟ ಪಡುವುದಿಲ್ಲ. ಇಲ್ಲವಾದರೆ ನಾವು ಕ್ಯಾಮೆರಾದಲ್ಲಿ ಅಮ್ಮನನ್ನು ತೋರಿಸಲು ಯಾವುದೇ ನಾಚಿ ಅಥವಾ ಭಯವಿಲ್ಲ' ಎಂದು ಪುತ್ರಿ ನಿಶಾ ಕೂಡ ಕ್ಲಾರಿಟಿ ನೀಡಿದ್ದರು.
ಕೆಲವೊಂದು ಘಟನೆ ಎಷ್ಟು ಶಾಕ್ ಕೊಡ್ತು ಅಂದ್ರೆ....ಸಾವಿಗೂ ಅಷ್ಟೇ ಬೆಲೆ ಇದೆ: ಶ್ರೀಮುರಳಿ