ರಾಮ್​ಗೆ ಸಿಹಿ ಕೊಟ್ಲು ಅಮೆರಿಕದಲ್ಲಿ ಅರಮನೆ ಕಟ್ಟೋ ಟಾಸ್ಕ್​! ಏನಪ್ಪಾ ಇದು?

Published : Nov 30, 2023, 03:35 PM IST
ರಾಮ್​ಗೆ ಸಿಹಿ ಕೊಟ್ಲು ಅಮೆರಿಕದಲ್ಲಿ ಅರಮನೆ ಕಟ್ಟೋ ಟಾಸ್ಕ್​! ಏನಪ್ಪಾ ಇದು?

ಸಾರಾಂಶ

ಸೀತಾರಾಮ ಸೀರಿಯಲ್​ಗೆ 100 ದಿನಗಳಾಗಿರುವ ಹಿನ್ನೆಲೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಕೇಳಿದ ಪ್ರಶ್ನೆಗಳಿಗೆ ಸಿಹಿ ಉತ್ತರಿಸಿದ್ದಾಳೆ. ರಾಮ್​ಗೆ ಸಿಹಿಯ ಮುಂದಿನ ಟಾಸ್ಕ್​ ಏನು?   

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾ ರಾಮ ಸೀರಿಯಲ್​ನಲ್ಲಿ ಎಲ್ಲರ ಗಮನ ಸೆಳೆದಿರುವ ಪಾತ್ರ ಪುಟಾಣಿ ಸಿಹಿಯದ್ದು. ಈ ಪುಟಾಣಿ ಸಿಹಿಯ ನಿಜವಾದ ಹೆಸರು ರಿತು ಸಿಂಗ್‌. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಇನ್ನೂ 5 ವರ್ಷ ತುಂಬದ ಈ ಪುಟ್ಟ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಷೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀತಾ ರಾಮ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. 

ಕಳೆದ ಜುಲೈ 17ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ಗೆ ಇದೀಗ 100 ದಿನಗಳು ತುಂಬಿವೆ. ಈ ಸಂಭ್ರಮದ ನಿಮಿತ್ತ ಸೀತಾರಾಮ ಸೀರಿಯಲ್​ನ ಸೀತಾ-ರಾಮ ಪಾತ್ರಧಾರಿಗಳಾದ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಹಾಗೂ ಪುಟಾಣಿ ಸಿಹಿ  ಪ್ರೇಕ್ಷಕರ ಜೊತೆ ನೇರಪ್ರಸಾರದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಸಿಹಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದೆ.  ನಿನ್ನ ಫ್ರೆಂಡ್​ ರಾಮ್​ಗೆ ಇದಾಗಲೇ ಹಲವಾರು ಟಾಸ್ಕ್​ ಕೊಟ್ಟಿದ್ಯಾ. ಬೆಳಗಾವಿಗೆ ಹೋಗ್ತಿದ್ದವರನ್ನೂ ವಾಪಸ್​ ಕರೆಸಿಕೊಂಡಿದ್ಯಾ? ಮುಂದಿನ ಟಾಸ್ಕ್​ ಯಾವುದು ಎಂದು ಕೇಳಿದಾಗ, ಸಿಹಿ ಅಮೆರಿಕದಲ್ಲಿ ನನಗೆ ಫ್ರೆಂಡ್​ಗೆ ದೊಡ್ಡ ಪ್ಯಾಲೇಸ್​ ಕಟ್ಟಿಸಿಕೊಡಲು ಹೇಳ್ತೇನೆ. ಅದು ದೊಡ್ಡದಾಗಿರಬೇಕು ಎಂದು ಹೇಳಿದಳು.

ಮೇಡಂ ನಿಮಗ್ಯಾಕೆ ರಾಮ್​ ಲವ್​ ಅರ್ಥ ಆಗ್ತಿಲ್ಲ? ರಾಮ್​ ಅವ್ರೇ, ಸೀತಾನೂ ಕೈ ಕೊಟ್ರೆ ಏನ್​ ಮಾಡ್ತೀರಾ?
 
ಸಿಹಿಗೆ ಸೀತಾ ಮತ್ತು ರಾಮ್​ ಇಬ್ಬರಲ್ಲಿ ಯಾರು ಇಷ್ಟ ಎಂದು ಕೇಳಲಾಗಿದೆ. ಕಾರ್ತಿಕ್​ ಎನ್ನುವವರು ಈ ಪ್ರಶ್ನೆ ಕೇಳಿದರು. ಇದಕ್ಕೆ ಜಾಣ ಉತ್ತರ ಕೊಟ್ಟ ಸಿಹಿ ನನಗೆ ನಾನೇ ಇಷ್ಟ ಎಂದು ಎಲ್ಲರನ್ನೂ ನಕ್ಕು ನಗಿಸಿದ್ದಾಳೆ. ಆನಂತರ ಸ್ವಲ್ಪವೇ ಸ್ವಲ್ಪನಾದ್ರೂ ಹೆಚ್ಚು ಯಾರ ಮೇಲೆ ಪ್ರೀತಿ ಎಂದು ಕೇಳಿದಾಗ, ಅತ್ತ-ಇತ್ತ ನೋಡಿದ ಸಿಹಿ ನಿಜ ಹೇಳ್ಲಾ ಎಂದು ರಾಮ್​ ಮೇಲೆನೇ ಸ್ವಲ್ಪ ಹೆಚ್ಚು ಪ್ರೀತಿ ಎಂದಿದ್ದಾಳೆ!  

  
ಇದೇ ವೇಳೆ ಸೀತಾ ಪಾತ್ರಧಾರಿಗೂ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ನಿಮ್ಮ ಅಣ್ಣ ಮತ್ತು ಅತ್ತಿಗೆ ಬಂದು ಕಿತ್ತುಕೊಂಡು ಹೋದ್ರೂ ಸುಮ್ಮನೇ ಇದ್ದೀರಲ್ಲ ಯಾಕೆ ಎಂದಾಗ, ಅವರು   ಅಣ್ಣ-ಅತ್ತಿಗೆ ಅಂತ ಸಹಿಸಿಕೊಂಡು ಇದ್ದೇನೆ.  ಸಂಬಂಧಕ್ಕೆ ಬೆಲೆ ಕೊಡ್ತಾ ಇದ್ದಾಳೆ ಸೀತಾ ಅಷ್ಟೇ ಎಂದರು. ಇದೇ ವೇಳೆ ರಾಮ್​ಗೆ ಶ್ವೇತಾ ಎನ್ನುವವರು ನಿಮಗೆ ಸೀತಾ ಇಷ್ಟಾನೋ, ಸಿಹಿ ಇಷ್ಟಾನೋ ಎಂದು ಕೇಳಲಾಯಿತು. ಅದಕ್ಕೆ ನಾಚಿಕೊಂಡ ರಾಮ್​ ನಿಮ್ಮದೊಳ್ಳೆ ಆಯ್ತು. ಪೂಜಾರಿ ಇಷ್ಟಾನೋ, ಪೂಜಾರಿ ಕೊಡೋ ಪ್ರಸಾದ ಇಷ್ಟಾನೋ ಎಂದ ಹಾಗಾಯ್ತಲ್ಲ ಎಂದು ತಮಾಷೆ ಮಾಡಿದ್ರು. ಅಶೋಕ್​ ನಿಮ್ಮಿಬ್ಬರ ಲವ್​ಗೆ ಸಪೋರ್ಟ್​ ಮಾಡುತ್ತಾ ಇದ್ದಾರೆ. ನೀವು ಅಶೋಕ್​ ಲವ್​ಗೆ ಯಾವಾಗ ಸಪೋರ್ಟ್​ ಮಾಡೋದು ಎಂಬ ಪ್ರಶ್ನೆಗೆ, ಇಬ್ಬರೂ ಅವರಿಗೆ ಯಾರ ಸಪೋರ್ಟೂ ಬೇಡ. ಅವರಿಗೆ ಅವರೇ ಸಪೋರ್ಟ್​ ಎಂದರು!  
 
ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಅಜ್ಜಿ-ಮೊಮ್ಮಕ್ಕಳ ಮಿಲನದ ಅಪೂರ್ವ ಮಿಲನ; ವೀಕ್ಷಕರು ನಿರೀಕ್ಷಿಸುತ್ತಿದ್ದ ಘಳಿಗೆ ಬಂತು, ಆದ್ರೆ...
ಬಿಗ್ ಬಾಸ್ 19 ವಿನ್ನರ್ ಹೆಸರು ಆನ್‌ಲೈನ್‌ನಲ್ಲಿ ಲೀಕ್? ಹರಿದಾಡುತ್ತಿದೆ ಸ್ಕ್ರೀನ್‌ಶಾಟ್