
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅವನು ಮತ್ತೆ ಶ್ರಾವಣಿ' ಎಂಬ ವಿಭಿನ್ನ ಪ್ರೇಮಕತೆಯ ಧಾರಾವಾಹಿ ಈಗ ಹೊಸ ಮೈಲಿಗಲ್ಲು ಸ್ಥಾಪಿಸಲು ಹೊರಟಿದೆ. ಈಗಾಗಲೇ ವೀಕ್ಷಕರ ಮೆಚ್ಚುಗೆ ಗಳಿಸಿರುವ ಈ ಸೀರಿಯಲ್‌ನಲ್ಲಿ ಇದೀಗ ವಿವಾಹ ಅಧ್ಯಾಯ ಆರಂಭವಾಗಿದೆ. ಹಲವು ತಿರುವುಗಳ ಮೂಲಕ ಈಗ ವಿವಾಹದ ಘಟ್ಟಕ್ಕೆ ಬಂದು ನಿಂತಿರುವ ಅವನು ಮತ್ತು ಶ್ರಾವಣಿ, ಇದೀಗ ಮದುವೆ ಮನೆ ಸಂಚಿಕೆಗಳನ್ನು ಪ್ರಸಾರಮಾಡಲಿದೆ. ಅದ್ದೂರಿತನ, ಸಂಪ್ರದಾಯ, ವಿಜೃಂಭಣೆ ಎಲ್ಲವೂ ಈ ಸೀರಿಯಲ್‌ನಲ್ಲಿ ಮೇಳೈಸಲಿದ್ದು, ವೀಕ್ಷಕರನ್ನು ರಂಜಿಸಲು ಸನ್ನದ್ಧವಾಗಿದೆ.
.
ಬದುಕಿನಲ್ಲಿ ನಡೆದಿದ್ದ ಕಹಿ ಘಟನೆಗಳಿಂದಾಗಿ ಕಥಾನಾಯಕಿ ಶ್ರಾವಣಿ ವಿದೇಶದಲ್ಲಿರ್ತಾಳೆ, ಆದರೆ 4 ವರ್ಷಗಳ ಬಳಿಕ ಶ್ರಾವಣಿ ತನ್ನ ದೊಡ್ಡಪ್ಪನ ಮಗಳ ಮದುವೆಯ ಸಲುವಾಗಿ ವಿದೇಶದಿಂದ ಮರಳುತ್ತಾಳೆ. ಆಗ ಶ್ರಾವಣಿಗೆ ತಾನು ಪ್ರೀತಿಸಿ ಮದುವೆಯಾಗಿ ವಿಚ್ಚೇದನ ಪಡೆದ ಅಭಿಮನ್ಯು, ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗ ಎಂಬ ಸತ್ಯ ಅರಿವಿಗೆ ಬರುತ್ತದೆ. ಮುದ್ದಾಗಿ ಸಾಕಿದ್ದ 'ಚೀಕು' ಎಂಬ ನಾಯಿಯಿಂದಾಗಿ ವರ್ಷಗಳ ಬಳಿಕ ಇವರಿಬ್ಬರು ಮುಖಾಮುಖಿಯಾಗ್ತಾರೆ, ಜಗಳವನ್ನೂ ಆಡುತ್ತಾರೆ.
ಚಾಲೆಂಜಿಂಗ್ ಸ್ಟಾರ್ 'ಕಾಟೇರ' ಬಿಡುಗಡೆ ಘೋಷಣೆ; ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂತಸ!
ಅಭಿಮನ್ಯು ತನ್ನ ತಂಗಿಗೆ ಸರಿಯಾದ ಜೋಡಿ ಅಲ್ಲ ಎಂಬ ಕಾರಣದಿಂದ ಈ ಮದುವೆಯನ್ನು ಹೇಗಾದ್ರು ತಪ್ಪಿಸಬೇಕೆಂದು ಶ್ರಾವಣಿ ತುಂಬಾ ಪ್ರಯತ್ನಿಸುತ್ತಾಳೆ ಆದರೆ ವಿಫಲಳಾಗ್ತಾಳೆ. ಅಚಾನಕ್ ಆಗಿ ಹಳೆ ವಿಷಯಗಳು ಶ್ರಾವಣಿಯ ಅತ್ತಿಗೆ ಬಿಂದುಗೆ ತಿಳಿಯುತ್ತದೆ ಆಕೆಯು ಶ್ರಾವಣಿಯ ಜೊತೆ ಕೈಜೋಡಿಸುತ್ತಾಳೆ. ಪರಿಸ್ಥಿತಿ ಹೀಗಿದ್ದರೂ ನಿಶಿತಾ-ಅಭಿಮನ್ಯು ಮದುವೆಯ ಘಳಿಗೆ ಸಮೀಪಿಸಿದೆ.
ಆಸೆ ಶೂಟಿಂಗ್ ವೇಳೆ ಅವಘಡ, ಹಿರಿಯ ನಟ ಮಂಡ್ಯ ರಮೇಶ್‌ಗೆ ತೀವ್ರ ಗಾಯ
ಈ ಮದುವೆ ನಡೆಯುತ್ತಾ? ವಿಧಿ ಇಲ್ಲದೆ ತಂಗಿಗೆ ಮದುವೆ ಮಾಡಿಸಿ ಶ್ರಾವಣಿ ವಿದೇಶಕ್ಕೆ ಹೊರಟು ಹೋಗುತ್ತಾಳ? ಅಭಿ- ಶ್ರಾವಣಿ ಒಂದಾಗುವಂತೆ ಮಾಡುತ್ತಿರುವ ಚೀಕುವಿನ ಪ್ರಯತ್ನ ಫಲಿಸುತ್ತಾ? ಅಭಿ-ಶ್ರಾವಣಿಯ ಎರಡಕ್ಷರದ ಪ್ರೀತಿಗೆ ಸಿಗುತ್ತಾ ಎರಡನೇ ಅವಕಾಶ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ಈ ಸಂಚಿಕೆಗಳನ್ನು ನೋಡಬೇಕು. ಅಂದಹಾಗೆ, ಈ 'ಅವನು ಮತ್ತೆ ಶ್ರಾವಣಿ' ಸೀರಿಯಲ್ ವಿವಾಹ ಅಧ್ಯಾಯಗಳು ಸೋಮವಾರದಿಂದ-ಶನಿವಾರ ರಾತ್ರಿ 10 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Pooja Gandhi ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ ಪೂಜಾ ಗಾಂಧಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.