ಸೀತಾರಾಮ ಸೀರಿಯಲ್ಗೆ 100 ದಿನಗಳಾಗಿರುವ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇಲ್ಲಿದೆ ಅದರ ಸಾರಾಂಶ
ಭಗ್ನಪ್ರೇಮಿಯಾಗಿರುವ ರಾಮ್ ಮತ್ತೆಂದೂ ಪ್ರೀತಿಗೇ ಬೀಳಲ್ಲ ಎಂದು ಪಣ ತೊಟ್ಟ ಬೆನ್ನಲ್ಲೇ ಅವನ ಲೈಫ್ನಲ್ಲಿ ಸೀತಾಳ ಎಂಟ್ರಿ ಆಗಿಬಿಟ್ಟಿದೆ. ಸದ್ದಿಲ್ಲದೇ ಸೀತಾ ಆತನ ಮನಸ್ಸನ್ನು ಕದ್ದುಬಿಟ್ಟಿದ್ದಾಳೆ. ಗಂಡನನ್ನು ಕಳೆದುಕೊಂಡಿರುವ ಸೀತಾಗೆ ಮುದ್ದು ಮಗಳು ಸಿಹಿಯೇ ಪ್ರಪಂಚ. ಸಿಂಗಲ್ ಪೇರೆಂಟ್ ಆಗಿರೋ ಸೀತಾಗೆ ರಾಮ್ ಕೇವಲ ಒಳ್ಳೆಯ ಗೆಳೆಯನಷ್ಟೇ. ಅದನ್ನು ಹೊರತುಪಡಿಸಿದರೆ, ಆತನ ಬಗ್ಗೆ ಬೇರೆ ಯೋಚನೆ ಕೂಡ ಆಕೆಗೆ ಬಂದಿಲ್ಲ. ಅದೇ ಇನ್ನೊಂದೆಡೆ ಸಿಹಿಗೂ ರಾಮ್ ಎಂದ್ರೆ ಅಚ್ಚುಮೆಚ್ಚು. ಆತನನ್ನು ಫ್ರೆಂಡ್ ಎಂದೇ ಕರೆಯುತ್ತಾಳೆ. ಆದರೆ ಸಿಹಿಯ ಜೊತೆ ಆಕೆಯ ಅಮ್ಮ ಸೀತಾಳನ್ನೂ ಪ್ರೀತಿಸುತ್ತಿರೋ ರಾಮ್ ತನ್ನ ಪ್ರೀತಿಯನ್ನು ತೋರಿಸಿಕೊಳ್ಳಲು ಸಾಧ್ಯವಾಗದೇ ಚಡಪಡಿಸುತ್ತಿದ್ದಾನೆ. ರಾಮ್ ಸೀತಾಳಿಗೆ ಒಲಿದಿರುವ ಸುದ್ದಿ ಸೀರಿಯಲ್ ವಿಲನ್, ರಾಮನ ಚಿಕ್ಕಮ್ಮನಿಗೆ ತಿಳಿದಿದ್ದು, ಪ್ರೀತಿಯ ವಿಷಯಕ್ಕೆ ತಲೆ ಹಾಕದಂತೆ ಮಾಡಲು ಶತಾಯುಗತಾಯ ಪ್ರಯತ್ನ ಮಾಡುತ್ತಿದ್ದಾಳೆ. ಇತ್ತ ಸೀತಾ ಲಾಯರ್ ಒಬ್ಬನ ಮೋಸದಲ್ಲಿ ಬೀಳುವ ಸನ್ನಿವೇಶ ಸೃಷ್ಟಿಯಾಗಿದೆ.
ಕಳೆದ ಜುಲೈ 17ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್ಗೆ ಇದೀಗ 100 ದಿನಗಳು ತುಂಬಿವೆ. ಈ ಸಂಭ್ರಮದ ನಿಮಿತ್ತ ಸೀತಾರಾಮ ಸೀರಿಯಲ್ನ ಸೀತಾ-ರಾಮ ಪಾತ್ರಧಾರಿಗಳಾದ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ ಹಾಗೂ ಪುಟಾಣಿ ಸಿಹಿ ಪ್ರೇಕ್ಷಕರ ಜೊತೆ ನೇರಪ್ರಸಾರದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದೆ. ಬಸು ಎನ್ನುವವರು, ರಾಮ್ ಅವ್ರೇ ನಿಮಗೆ ಈಗ ಸೆಕೆಂಡ್ ಲವ್ಗೆ ಚಾನ್ಸ್ ಸಿಕ್ಕಿದೆ. ಒಂದು ವೇಳೆ ಇದೂ ಮಿಸ್ ಆಗಿಬಿಟ್ರೆ ಏನು ಮಾಡ್ತೀರಾ ಎಂದಾಗ, ರಾಮ್- ಜೀವನ ಅಂದ್ರೆ ಹಾಗೇನೆ ಅಲ್ವಾ? ಒಂದು ಹೋದ್ರೆ ಇನ್ನೊಂದು ಬರತ್ತೆ. ಲೈಫ್ನಲ್ಲಿ ಪಾಸಿಟಿವ್ ಆಗಿರಬೇಕು ಅಷ್ಟೇ. ಸೀತಾ ಹೋದ್ರೆ ಏನಂತೆ? ಮತ್ತೊಂದು ಚಾನ್ಸ್ ಸಿಗತ್ತೆ. ಸೀತಾ ಹೋದ್ರೆ ಏನಂತೆ ಗೀತಾ, ಮಮತಾ ಇದ್ದಾರಲ್ಲಾ ಎಂದು ತಮಾಷೆ ಮಾಡಿದ್ರು. ಒಟ್ಟಿನಲ್ಲಿ ಜೀವನದಲ್ಲಿ ಯಾವತ್ತೂ ನೆಗೆಟಿವ್ ಆಗಿರಬಾರದು. ಸದಾ ಪಾಸಿಟಿವ್ ಯೋಚನೆ ಮಾಡಬೇಕು ಎನ್ನೋದು ರಾಮ್ ಮಾತು.
ಪವನ್ ಎನ್ನುವವರು ಸೀತಾ ಅವ್ರೇ. ನೀವು ಸದಾ ಸ್ವತಂತ್ರ ಆಗಿರೋಕೆ ಇಷ್ಟ ಪಡುವವರು. ಯಾರ ಸಹಾಯವನ್ನೂ ಕೇಳಲ್ಲ. ಆದ್ರೆ ರಾಮ್ ಅವರು ಲವ್ ಮಾಡ್ತಿದ್ದಾರೆ ಅನ್ನೋದೂ ಅರ್ಥ ಆಗ್ತಿಲ್ವಲ್ಲಾ ನಿಮಗೆ? ಅವರ ಲವ್ ಅರ್ಥ ಮಾಡಿಕೊಳ್ಳೋದು ಯಾವಾಗ ಎನ್ನೋ ಪ್ರಶ್ನೆಗೆ, ಸೀತಾ, ಅದು ಅರ್ಥ ಆಗಲ್ಲ. ಯಾಕೆಂದ್ರೆ ನಾನು ಅವರನ್ನು ಒಳ್ಳೆಯ ಫ್ರೆಂಡ್ ರೀತಿ ನೋಡ್ತಾ ಇದ್ದೇನೆ. ನನಗೆ ಸದ್ಯ ಸಿಹಿಯೇ ಪ್ರಪಂಚ. ಅವಳನ್ನು ಬಿಟ್ಟು ಬೇರೇನೂ ಕಾಣಿಸುವುದಿಲ್ಲ. ರಾಮ್ ಅವ್ರನ್ನ ಕಂಡ್ರೆ ಲವರ್ ಅನಿಸಲ್ಲ, ನನಗೆ ಎಲ್ಲಾ ಕಾಲದಲ್ಲೂ ಹೆಲ್ಪ್ ಮಾಡೋ ಸ್ನೇಹಿತ ಅಷ್ಟೇ ಅನ್ನಿಸ್ತಾರೆ. ಅದಕ್ಕೇ ಸೀತಾಗೆ ರಾಮ್ ಲವ್ ಅರ್ಥ ಆಗ್ತಿಲ್ಲ ಎಂಬ ಉತ್ತರ ಬಂತು.
ಸೀತಾ ಯಾಕೆ ಅಷ್ಟು ಲಾಯರ್ ಅನ್ನ ನಂಬ್ತಾಳೆ? ಅಷ್ಟೆಲ್ಲಾ ಹೆಲ್ಪ್ ಮಾಡುತ್ತಿರೋ ರಾಮ್ ಇರುವಾಗ ಲಾಯರ್ ಒಳ್ಳಯವನಲ್ಲ ಅಂತ ಸೀತಾಗೆ ಅನ್ನಿಸ್ತಿಲ್ಲಾ ಯಾಕೆ ಎಂದು ಯಶಸ್ವಿನಿ ಅನ್ನೋರು ಕೇಳಿದ ಪ್ರಶ್ನೆಗೆ, ಸೀತಾ ಲಾಯರ್ ಅನ್ನು ಸಂಪೂರ್ಣವಾಗಿ ನಂಬಲಿಲ್ಲ. ಆದ್ರೂ ಲಾಯರ್ ಅಲ್ವಾ? ಏನೋ ಸಹಾಯ ಸಿಗುತ್ತದೆ ಎಂಬ ನಂಬಿಕೆ ಅಷ್ಟೆ ಎನ್ನುವ ಉತ್ತರ ಸೀತಾಳಿಂದ. ಆಫೀಸ್ನಲ್ಲಿ ರಾಮ್ ಮತ್ತು ಅಶೋಕ್ ಅದಲು ಬದಲು ಮಾಡಿ ಹೇಗೋ ಸಮದೂಗಿಸ್ತಾ ಇದ್ದೀರಾ? ನಿಜ ಸೀತಾಗೆ ಗೊತ್ತಾದ್ರೆ ರಾಮ್ ಅನ್ನು ಕಾಪಾಡೋರು ಯಾರು ಎಂದು ಪ್ರದೀಪ್ ಎನ್ನುವವರು ಕೇಳಿದಾಗ ಸೀತಾ ಅಶೋಕ್ ಕಾಪಾಡುತ್ತಾರೆ ಎಂದ್ರೆ ರಾಮ್, ಹೊಸ ರೀತಿ ಐಡಿಯಾ ನೀವೇ ಇದ್ರೆ ಕೊಟ್ಬಿಡಿ. ಅದನ್ನು ಇಂಪ್ಲಿಮೆಂಟ್ ಮಾಡ್ತೀವಿ ಎಂದರು.
ಕಾಲಿಗೆ ಹಗ್ಗ ಕಟ್ಟಿಕೊಂಡು ಆಡುವ ಭರದಲ್ಲಿ ಕಾಲ್ತುಳಿತ, ಒಬ್ಬರ ಮೇಲೊಬ್ಬರು ಬಿದ್ದು ಒದ್ದಾಡಿದ ಸ್ಪರ್ಧಿಗಳು!