
ಕೊರಿಯೋಗ್ರಾಫರ್ ಮುರುಗಾನಂದ (Choreographer Murugananda) ಅಲಿಯಾಸ್ ಮುರುಗ ಹಾಗೂ ಹಾಸ್ಯ ಕಲಾವಿದ ರಾಘು (comedian Raghu) ಅಲಿಯಾಸ್ ರಾಗಿಣಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಮುರುಗ ಜೊತೆ ರಾಘು ರೋಮ್ಯಾನ್ಸ್ ಮಾಡಿದ್ದಾರೆ. ರಾಘು ಹಾಗೂ ಮುರುಗ, ಸ್ವಾತಿ ಮುತ್ತಿನ ಮಳೆ ಹನಿಯೆ ಫೇಮಸ್ ಸಾಂಗ್ ಗೆ ಹೆಜ್ಜೆ ಹಾಕಿದ್ದು, ರಾಘು ಆಕ್ಟಿಂಗ್ ಹಾಗೂ ಮುರುಗ ಕೋರಿಯೋಗ್ರಫಿಗೆ ಫುಲ್ ಮಾರ್ಕ್ಸ್ ಸಿಕ್ಕಿದೆ.
ರಾಘು, ಹೆಣ್ಣು ವೇಷದಲ್ಲಿ ಕಾಣಿಸಿಕೊಳ್ಳೋದು ವಿಶೇಷವಲ್ಲ. ಬಹುತೇಕ ತಮ್ಮ ಎಲ್ಲ ಸ್ಕಿಟ್ ಗಳಲ್ಲಿ ಹೆಣ್ಣಿನ ಪಾತ್ರದಲ್ಲೇ ಕಾಣಿಸಿಕೊಳ್ಳುವ ರಾಘು ಈಗ ತಮ್ಮ ಪ್ರತಿಭೆಯನ್ನು ಸ್ಕಿಟ್ ಗೆ ಮಾತ್ರ ಸೀಮಿತಗೊಳಿಸಿಲ್ಲ. ರಾಘು, ಸ್ಕಿಟ್ ಜೊತೆ ರೀಲ್ಸ್ ಮಾಡ್ತಿದ್ದಾರೆ. ಕೆಲ ದಿನಗಳ ಹಿಂದೆ ರಾಘು, ಪುಟ್ಟಮಲ್ಲಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಮೇಕಪ್, ಆಭರಣಗಳನ್ನು ತೋರಿಸ್ತಾ, ನಾಚಿ ನೀರಾಗಿ ಫೋಟೋಕ್ಕೆ ಫೋಸ್ ನೀಡಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಡಾನ್ಸ್ ಮಾಡಿದ್ದಾರೆ. ಬಿಳಿ ಸೀರೆಯಲ್ಲಿ ರಾಘು ಮಿಂಚಿದ್ದಾರೆ.
ರಾಘು ತಮ್ಮ ಇನ್ಸ್ಟಾ (Insta) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ಹೆಣ್ಣಿನ ಹೊಟ್ಟೆ ಮೇಲೆ ಕೈ ಆಡೋದನ್ನು ನೀವು ಕಾಣ್ಬಹುದು. ನಂತ್ರ ರಾಘು ಹಾಗೂ ಮುರುಗ ಮುಖ ತೋರಿಸ್ತಾರೆ. ವಿಡಿಯೋ ಆರಂಭದಲ್ಲಿ ನೋಡಿದ ಫ್ಯಾನ್ಸ್, ರಾಘು ಈ ಬಾರಿ ರೇಷ್ಮಾ ಆಂಟಿ ಜೊತೆ ಡಾನ್ಸ್ ಮಾಡಿದ್ದಾರೆ ಅಂದ್ಕೊಂಡಿದ್ದರಂತೆ. ಮತ್ತೆ ಕೆಲವರು ರಾಘುವನ್ನು ರೇಷ್ಮಾ ಆಂಟಿಗೆ ಹೋಲಿಕೆ ಮಾಡಿದ್ದಾರೆ. ರೇಷ್ಮಾ ಆಂಟಿಗಿಂತ ನಿಮ್ಮ ಡಾನ್ಸ್, ಆಕ್ಟಿಂಗ್ ಸೂಪರ್. ಒಂದು ಹೆಣ್ಣನ್ನು ನಾಚಿಸುವಂತೆ ನೀವು ಆಕ್ಟ್ ಮಾಡ್ತಿರಾ ಎಂಬ ಕಮೆಂಟ್ ಬಂದಿದೆ. ಇಂಥ ರೋಮ್ಯಾಂಟಿಕ್ ಹಾಡಿ (romantic song) ಗೆ ಡಾನ್ಸ್ ಮಾಡೋದ್ರಲ್ಲಿ ರೇಷ್ಮಾ ಆಂಟಿ (Reshma aunty) ಮುಂದಿದ್ದಾರೆ. ರಾಘು ಈವರೆಗೂ ಇಂಥ ರೀಲ್ಸ್ ಹಂಚಿಕೊಂಡಿರಲಿಲ್ಲ. ಮುರುಗ ಡಾನ್ಸ್, ಅಭಿಮಾನಿಗಳಿಗೆ ಇಷ್ಟವಾಗಿದ್ದು, ಪತ್ನಿ ಇಶಿತಾ ಜೊತೆ ಡಾನ್ಸ್ ಮಾಡಿ ಎನ್ನುವ ಕಮೆಂಟ್ ಹೆಚ್ಚಾಗಿ ಬಂದಿದೆ.
ಅಗ್ನಿ ಸಾಕ್ಷಿ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದ ಇಶಿತಾ (Ishita)ರನ್ನು ಮುರುಗಾನಂದ ಕೈ ಹಿಡಿದಿದ್ದಾರೆ. 2019ರಲ್ಲಿ ಪ್ರೀತಿಸಿ ಮದುವೆಯಾದ ಜೋಡಿ, ರಾಜಾ ರಾಣಿ ಶೋನಲ್ಲಿ ಮಿಂಚಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಸಕ್ರಿಯವಾಗಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮುರುಗ ಹಾಗೂ ಇಶಿತಾ ಜೊತೆಗಿರುವ ವಿಡಿಯೋ ಪೋಸ್ಟ್ ಆಗಿಲ್ಲ. ಇನ್ಸ್ಟಾದಲ್ಲೂ ಇಬ್ಬರು ಬೇರೆ ಬೇರೆ ವಿಡಿಯೋ ಪೋಸ್ಟ್ ಮಾಡ್ತಿರುತ್ತಾರೆ. ರಾಘು ಜೊತೆ ಮುರುಗ ರೋಮ್ಯಾನ್ಸ್ ನೋಡಿದ ಫ್ಯಾನ್ಸ್, ಇದನ್ನು ಪತ್ನಿ ಜೊತೆ ಮಾಡಿದ್ರೆ ಮತ್ತಷ್ಟು ಚೆನ್ನಾಗಿರುತ್ತೆ ಎಂದಿದ್ದಾರೆ.
ಇನ್ನು ರಾಘು ಸದ್ಯ ಮಜಾ ಟಾಕೀಸ್ (Maja Talkies) ನಲ್ಲಿ ಬ್ಯುಸಿಯಿದ್ದಾರೆ. ರಾಘು, ಹೆಣ್ಣು ವೇಷ ಹಾಕಿದ್ರೆ ಅವಳಲ್ಲ, ಅವನು ಎನ್ನಲು ಸಾಧ್ಯವೇ ಇಲ್ಲ. ಮಜಾ ಟಾಕೀಸ್ ಗೆ ಬಂದಿದ್ದ ಸುಧಾರಾಣಿ ಕೂಡ ರಾಘುರನ್ನು ಹುಡುಗಿ ಅಂತಾನೇ ನಂಬಿದ್ರು. ಈ ವಿಡಿಯೋದ ಆರಂಭದಲ್ಲಿ ರಾಘು ಕೈ, ಹಿಂಭಾಗ ಥೇಟ್ ರೇಷ್ಮಾ ಆಂಟಿಯನ್ನು ಹೋಲುತ್ತಿದ್ದ ಕಾರಣ ಅನೇಕರು ರಾಘುವನ್ನು ರೇಷ್ಮಾ ಅಂದ್ಕೊಂಡಿದ್ದರು. ರೇಷ್ಮಾ ಹಿಂದಿಕ್ಕಲು ರಾಘು ಬಂದಿದ್ದಾರೆ, ಇಬ್ಬರಲ್ಲಿ ರಾಘು ಬೆಸ್ಟ್ ಎಂದಿರುವ ಫ್ಯಾನ್ಸ್, ಫುಲ್ ವಿಡಿಯೋ ನೋಡೋಕೆ ಕಾತುರರಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.