
ಬಿಗ್ ಬಾಸ್ ಕನ್ನಡ ಸೀಸನ್ 10 ಈಗ ಕುತೂಹಲದ ಕೇಂದ್ರಬಿಂದು ಆಗಿದೆ. ಇನ್ನೇನು ಬಿಗ್ ಬಾಸ್ ಗ್ರಾಂಡ್ ಫಿನಾಲೆಗೆ ಕೌಟ್‌ಡೌನ್ ಶುರುವಾಗಿದೆ. ಇಂಥ ಹೊತ್ತಲ್ಲಿ ಬಿಗ್ ಬಾಸ್ ಆದೇಶದ ಮೇರೆಗೆ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಒಂದನ್ನು ನೀಡಿದ್ದಾರೆ. ಅದರ ಪ್ರಕಾರ- ಪ್ರತಿಯೊಬ್ಬ ಸ್ಪರ್ಧಿಯೂ ಒಬ್ಬರನ್ನು ತಮ್ಮ ಫ್ರೆಂಡ್‌ಶಿಪ್‌ನಿಂದ ತೆಗೆಯಬಹುದು, ಒಬ್ಬರನ್ನು ಸೇರಿಸಿಕೊಳ್ಳಬಹುದು'. ಈ ಟಾಸ್ಕ್‌ನಲ್ಲಿ ಎಲ್ಲರಿಗಿಂತ ಹೆಚ್ಚು ಕುತೂಹಲ ಕೆರಳಿಸಿದ್ದ ಜೋಡಿ ಎಂದರೆ ಅದು ಸಂಗೀತಾ-ಕಾರ್ತಿಕ್.
ಸಂಗೀತಾ ಮತ್ತು ಕಾರ್ತಿಕ್ ಅದೆಷ್ಟು ಕ್ಲೋಸ್ ಆಗಿದ್ದರೆಂದರೆ, ಅವರಿಬ್ಬರೂ ಮದುವೆ ಆಗುತ್ತಾರೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಕಳೆದ ಮೊದಲಿನ ದಿನಗಳಲ್ಲೇ ಅವರಿಬ್ಬರು ಬೇರೆಯವರಿಗಿಂತ ಹೆಚ್ಚು ಕ್ಲೋಸ್ ಆಗಿದ್ದರು. ಅವರಿಬ್ಬರೂ ನಿಜವಾಗಿಯೂ ಲವ್ ಮಾಡುತ್ತಿದ್ದಾರೆ, ಚಂದನ್-ನಿವೇದಿತಾ ಜೋಡಿಯಂತೆ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದ ಮೇಲೆ ಖಂಡಿತ ಮದುವೆ ಆಗುತ್ತಾರೆ ಎಂದೇ ಬಿಗ್ ಬಾಸ್ ಫ್ಯಾನ್ಸ್ ವೀಕ್ಷಕರಲ್ಲಿ ಬಹಳಷ್ಟು ಜನರು ಮಾತನಾಡಿಕೊಳ್ಳುತ್ತಿದ್ದರು.
ಟ್ರೈಲರ್ ಲಾಂಚ್ ವೇಳೆ ಮಾತನಾಡುತ್ತೇನೆ, ಹೇಳಲಿಕ್ಕೆ ತುಂಬಾ ಇದೆ; 'ಗಜರಾಮ' ನಟ ರಾಜವರ್ಧನ್
ಆದರೆ, ತೀರಾ ಇತ್ತೀಚೆಗೆ ಅವರಿಬ್ಬರ ಮಧ್ಯೆ ಬಿರುಕು ಮೂಡಿತ್ತು. ಅದೆಷ್ಟು ಸ್ಟ್ರಾಂಗ್ ಆಗಿ ಸಂಗೀತಾ-ಕಾರ್ತಿಕ್ ಮಧ್ಯೆ ಮನಸ್ತಾಪ ಬಂದಿತತು ಎಂದರೆ, ಮತ್ತೆ ಅವರಿಬ್ಬರೂ ಒಂದಾಗುವುದು ಡೌಟ್ ಎಂಬುದು ಹಲವರ ಲೆಕ್ಕಾಚಾರವಾಗಿತ್ತು. ಇಂದಿನ ಸಂಚಿಕೆಯ ಪ್ರೊಮೋದಲ್ಲಿ ಅದಕ್ಕೊಂದು ಫುಲ್ ಸ್ಟಾರ್ ಸಿಕ್ಕಿದೆ. ಇಂದಿನ ಪ್ರಮೋದಲ್ಲಿ ಸಂಗೀತಾ-ಕಾರ್ತಿಕ್ ಜೋಡಿಯ ಸ್ನೇಹ ಅಂತ್ಯವಾಗಿದೆ ಎಂಬುದು ಜಗಜ್ಜಾಹೀರಾಗಿದೆ. ಇನ್ಮುಂದೆ ಯಾರೂ ಕೂಡ ಸಂಗೀತಾ-ಕಾರ್ತಿಕ್ ಲವರ್ಸ್ ಅಥವಾ ಫ್ರೆಂಡ್ಸ್ ಅಂತ ಹೇಳಬೇಕಾದ ಯಾವ ಅಗತ್ಯವೂ ಇಲ್ಲ ಎನ್ನಬಹುದು.
ಬಿಸಿ-ಬಿಸಿ ಐಸ್‌ಕ್ರೀಮ್ ತಿಂದ್ರಾ ಸಿರಿ ರವಿಕುಮಾರ್; ಕೊಟ್ಟಿದ್ಯಾಕೆ ಅರವಿಂದ್ ಅಯ್ಯರ್!
ಅದಕ್ಕೆ ಸಾಕ್ಷಿ ಎಂಬಂತೆ, ಸಂಗೀತಾ ಇಂದಿನ ಸಂಚಿಕೆಯ ಟಾಸ್ಕ್‌ನಲ್ಲಿ 'ಕಾರ್ತಿಕ್ ಜತೆ ನನ್ನ ಫ್ರೆಂಡ್‌ಶಿಪ್ ಮುಗಿದ ಅಧ್ಯಾಯ. ಅದು ಎಲ್ಲರಿಗೂ ಗೊತ್ತು. ಇಲ್ಲಿಂದ ಹೊರಗೆ ಹೋದ್ಮೇಲೆ ಕೂಡ ಮತ್ತೆ ಅದನ್ನು ಪ್ಯಾಚ್‌ಅಪ್ ಮಾಡುವ ಯಾವ ಯೋಚನೆ ಕೂಡ ಇಲ್ಲ' ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಕಾರ್ತಿಕ್ ಕೂಡ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅವರಿಬ್ಬರು ಮಟ್ಟಿಗೆ ಅದು ಮುಗಿದ ಅಧ್ಯಾಯ ಎಂಬುದು ಸ್ವತಃ ಅವರಿಗೇ ಕನ್ಫರ್ಮ್ ಆಗಿತ್ತು ಎಂಬುದು ಇದೀಗ ತಿಳಿದು ಬರುವ ಸತ್ಯ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.