ಬಿಗ್​ಬಾಸ್​ ಸಂಗೀತಾಗೆ ಡಬಲ್​ ಧಮಾಕಾ: ಅತ್ತ ಫಿನಾಲೆಗೆ ಟಿಕೆಟ್​- ಇತ್ತ ಮತ್ತೊಂದು ಗುಡ್​ ನ್ಯೂಸ್​!

By Suvarna NewsFirst Published Jan 14, 2024, 3:49 PM IST
Highlights

ಬಿಗ್​ಬಾಸ್​ನ ಫಿನಾಲೆಗೆ ಟಿಕೆಟ್​ ಪಡೆಯುವ ಮೂಲಕ ಖುಷಿಯಲ್ಲಿರುವ ಸಂಗೀತಾಗೆ ಇನ್ನೊಂದು ಖುಷಿಯೂ ಸಿಕ್ಕಿದೆ. ಏನದು? 
 

ಬಿಗ್​ಬಾಸ್ ಮನೆಯಲ್ಲಿ ಸಂಗೀತಾ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಮುನ್ನುಗ್ತುತ್ತಿದ್ದಾರೆ.  ಇದಾಗಲೇ ಬಿಗ್​ಬಾಸ್​ ಫಿನಾಲೆಗೆ ಟಿಕೆಟ್​ ಪಡೆದುಕೊಳ್ಳುವ ಮೂಲಕ ಮೊದಲ ಸ್ಪರ್ಧಿ ಆಗಿದ್ದಾರೆ. ಬಿಗ್​ಬಾಸ್​ನಲ್ಲಿ ನಿನ್ನೆ ಅಚ್ಚರಿಯೊಂದು ನಡೆದಿದ್ದು,  ಡ್ರೋನ್​ ಪ್ರತಾಪ್​ಗಿಂತಲೂ ಕಡಿಮೆ ಪಾಯಿಂಟ್ಸ್​ ಇರುವ ಸಂಗೀತಾ ಶೃಂಗೇರಿ ಫಿನಾಲೆಗೆ ಆಯ್ಕೆಯಾದರು.  ಅಕ್ಕ-ತಮ್ಮನಂತಿದ್ದ ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ ಶೃಂಗೇರಿ  ಇನ್ನೇನು ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಸಂಬಂಧ ಕಳೆಚಿಕೊಂಡು ಬಿಟ್ಟಿದ್ದಾರೆ. ಅಕ್ಕ-ಅಕ್ಕ ಎನ್ನುತ್ತಲೇ ಡ್ರೋನ್ ಪ್ರತಾಪ್​, ಫಿನಾಲೆಯಲ್ಲಿ  ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡಿ ಆಟದಿಂದ ಸಂಗೀತಾ ಅವರನ್ನು ಹೊರಗಡೆ ಇಟ್ಟು, ಅವರನ್ನು ದೂರ ಮಾಡಿದ್ದರು. ಆದರೂ ಉಳಿದವರು ಮತ ಚಲಾಯಿಸುವ ಮೂಲಕ ಸಂಗೀತಾ ಅವರು ಫಿನಾಲೆಗೆ ಟಿಕೆಟ್​  ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

ಇದೊಂದು ಕಡೆ ಖುಷಿಯಾದರೆ, ಫಿನಾಲೆ ತಲುಪುತ್ತಿದ್ದಂತೆಯೇ ಅತ್ತ ಇನ್ನೊಂದು ಭರ್ಜರಿ ಗುಡ್​​ನ್ಯೂಸ್​ ಸಂಗೀತಾ ಅವರಿಗೆ ಸಿಕ್ಕಿದೆ. ಅದೇನೆಂದರೆ, ಇದ್ದಕ್ಕಿದ್ದಂತೆಯೇ ಸಂಗೀತಾ ಶೃಂಗೇರಿ ಅವರ ಇನ್​ಸ್ಟಾಗ್ರಾಮ್​ನಲ್ಲಿ ಫಾಲೋವರ್ಸ್​ ಸಂಖ್ಯೆ ದಿಢೀರನೆ ಏರಿಕೆ ಆಗಿದೆ. ಸಂಗೀತಾ ಅವರು ಇದೀಗ 504 ಸಾವಿರ ಅಂದರೆ 5 ಲಕ್ಷದ ನಾಲ್ಕು ಸಾವಿರ ಫಾಲೋವರ್ಸ್​ಗಳನ್ನು ಪಡೆದುಕೊಂಡಿದ್ದಾರೆ. 

Latest Videos

ಸಂತು-ಪಂತು ದೂರವಾಗುವ ಸಮಯ! ಬಿಕ್ಕಿ ಬಿಕ್ಕಿ ಅತ್ತ ತುಕಾಲಿ-ವರ್ತೂರು ಸಂತೋಷ

ಅಂದಹಾಗೆ ಸಂಗೀತಾ ಶೃಂಗೇರಿ ಇದೀಗ ಬಿಗ್​ಬಾಸ್​ನಿಂದ ಫೇಮಸ್​ ಆಗುತ್ತಿದ್ದರೂ ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ  ನಟಿ. ಚಾರ್ಲಿ ಚಿತ್ರ ಸಕತ್​ ಬ್ರೇಕ್​ ಕೊಟ್ಟಿತು. ಎರಡು ಸಾವಿರಕ್ಕೂ ಅಧಿಕ ಜನರು '777 ಚಾರ್ಲಿ' ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ ಎಲ್ಲರನ್ನು ಮೀರಿ ಸಂಗೀತಾ ಗೆದ್ದಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ಸಂಗೀತಾ ಅವರಿಗೆ ಈಗ 28 ವರ್ಷ ವಯಸ್ಸು. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ 'ಹರ ಹರ ಮಹಾದೇವ ಸೀರಿಯಲ್​ನಿಂದ  ಕಿರುತೆರೆಗೆ ಎಂಟ್ರಿಕೊಟ್ಟ ಸಂಗೀತಾ ಅವರು, ಪಾರ್ವತಿ ಪಾತ್ರದಿಂದ ಚಿರಪರಿಚಿತರಾದರು.  ಸಂಗೀತಾ ಎ+ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. 

ಕಾಲೇಜು ದಿನಗಳಲ್ಲಿ ಎನ್‌ಸಿಸಿ ಕ್ರೆಡೆಟ್ ಆಗಿದ್ದ ಸಂಗೀತಾ ಕರ್ನಾಟಕ ಖೋಖೋ ತಂಡ ಪ್ರತಿನಿಧಿಸಿ ಚಿನ್ನದ ಪದಕವನ್ನೂ ಗೆದ್ದವರು.  ಈಕೆ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ. ಡೇಟಾ ಮತ್ತು ವೆಬ್ ಅನಾಲಿಟಿಕ್ಸ್ ವಿಷಯದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಸಹ ಪೂರ್ಣ ಮಾಡಿರಲಿಲ್ಲ. 2014ರಲ್ಲಿ ಸಂಗೀತಾ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯ ಟಾಪ್ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. ಅಂದಹಾಗೆ, ಸಂಗೀತಾ ಅವರಿಗೆ ತಂದೆಯಂತೆ ಡಿಫೆನ್ಸ್ ಆಫೀಸರ್ ಆಗುವ ಕನಸಿತ್ತಂತೆ. ಆದರೆ ಅವರು ಮುಖ ಮಾಡಿದ್ದು ನಟನೆಯತ್ತ.

ಅನ್ನಪೂರ್ಣಿ ಫುಡ್​ ಜಿಹಾದ್​ ಆರೋಪ: ರಜನೀಕಾಂತ್​ ಇದ್ರೆ ಹೀಗೇ ಆಗ್ತಿತ್ತಾ? ಚಿತ್ರದ ಪರ ಬ್ಯಾಟಿಂಗ್​!

click me!