ಮುತ್ತು ಕೊಡೋದು ಹೇಗೆ ಅಂತನೇ ಗೊತ್ತಿರ್ಲಿಲ್ಲ... ಪುಟ್ಟಗೌರಿ ಮದ್ವೆಯಲ್ಲಿ ಕಿಸ್​ ಮಾಡಿ ಅಂದಾಗ...

Published : May 21, 2024, 03:40 PM IST
ಮುತ್ತು ಕೊಡೋದು ಹೇಗೆ ಅಂತನೇ ಗೊತ್ತಿರ್ಲಿಲ್ಲ... ಪುಟ್ಟಗೌರಿ ಮದ್ವೆಯಲ್ಲಿ ಕಿಸ್​ ಮಾಡಿ ಅಂದಾಗ...

ಸಾರಾಂಶ

ಪುಟ್ಟಗೌರಿ ಮದುವೆ ಸೀರಿಯಲ್​ ಮೂಲಕ ಮನೆಮಾತಾಗಿರುವ ನಟಿ ರಂಜಿನಿ ರಾಘವನ್​ ಅವರು ಆನ್​ಸ್ಕ್ರೀನ್​ನಲ್ಲಿ ಮೊದಲ ಬಾರಿಗೆ ಕಿಸ್​ ಕೊಟ್ಟ ಅನುಭವ ಹೇಳಿದ್ದು ಹೀಗೆ...  

ಪುಟ್ಟಗೌರಿ ಮದುವೆ ಸೀರಿಯಲ್​ ಮೂಲಕ ಮನೆಮಾತಾದ ನಟಿ ರಂಜನಿ ರಾಘವನ್​. ಇದಾದ ಬಳಿಕ  ಕನ್ನಡತಿ ಸೀರಿಯಲ್​ನಲ್ಲಿಯೂ ಮಿಂಚಿದ ನಟಿ,  ಸದ್ಯ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಬಿಜಿಯಾಗಿದ್ದಾರೆ. 2014ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಪುಟ್ಟಗೌರಿ ಮದುವೆ' ಸೀರಿಯಲ್​ನ ಕೀರ್ತಿಯಿಂದಲೇ ಇಂದು ನಟಿ ಎತ್ತರಕ್ಕೆ ಬೆಳೆದು ನಿಂತಿದ್ದು, ಸಂದರ್ಶನವೊಂದರಲ್ಲಿ ಕೆಲವೊಂದು ಇಂಟರೆಸ್ಟಿಂಗ್​ ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. 

ಮೊದಲ ಆನ್​ಸ್ಕ್ರೀನ್​ ಕಿಸ್​ ಕುರಿತು ರಂಜಿನಿ ಅವರಿಗೆ ಪ್ರಶ್ನೆ ಕೇಳಲಾಯಿತು. ಅಂದರೆ ಸಿನಿಮಾ ಅಥವಾ ಸೀರಿಯಲ್​ನಲ್ಲಿ ಮೊದಲಿಗೆ ಮುತ್ತು ಕೊಟ್ಟಿದ್ದು ಯಾರಿಗೆ? ಅದರ ಫೀಲಿಂಗ್​ ಹೇಗಿತ್ತು ಎನ್ನುವ ಬಗ್ಗೆ ಕೇಳಲಾಯಿತು. ಪ್ರಶ್ನೆ ಕೇಳುತ್ತಿದ್ದಂತೆಯೇ ನಾಚಿ ನೀರಾದ ರಂಜಿನಿಯವರು, ಅಬ್ಬಾ ಎನ್ನುತ್ತಲೇ ಉತ್ತರಿಸಿದರು. ಮೊದಲಿಗೆ ಮುತ್ತು ಕೊಟ್ಟಿದ್ದು, ಪುಟ್ಟಗೌರಿ ಮದುವೆ ಸೀರಿಯಲ್​ನಲ್ಲಿ. ಆಗಿನ್ನೂ ಕಾಲೇಜು ಓದುತ್ತಿದ್ದೆ. ಮುತ್ತು ಹೇಗೆ ಕೊಡುವುದು ಎಂದೇ ತಿಳಿದಿರಲಿಲ್ಲ. ಆದರೆ ನಾಯಕ ರಕ್ಷಿತ್​ ಅವರಿಗೆ ಮುತ್ತು ಕೊಡಬೇಕಿತ್ತು. ಕೆನ್ನೆಗೆ ಮುತ್ತು ಕೊಟ್ಟೆ. ಅದು ತುಂಬಾನೇ ಕಷ್ಟದ ಸನ್ನಿವೇಶ ಆಗಿತ್ತು. ಇದೇ ನನ್ನ ಮೊದಲ ಆನ್​ಸ್ಕ್ರೀನ್​ ಕಿಸ್​ ಎನ್ನುತ್ತ ನಾಚಿಕೊಂಡರು.

ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಹೇಳಿದ್ದೇನು?

ಇನ್ನು ರಂಜನಿ ರಾಘವನ್ ಕುರಿತು ಹೇಲುವುದಾದರೆ, ಇವರು  1994ರ ಮಾರ್ಚ್  29ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಶೇ‍ಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಮಾಡಿದ್ದಾರೆ ಇವರು. ನಟಿಯ ಜೊತೆಗೆ ಇವರು ಲೇಖಕಿಯೂ  ಹೌದು.  2014ರಲ್ಲಿ  'ಪುಟ್ಟಗೌರಿ ಮದುವೆ' ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ರಂಜಿನಿ, ಬಳಿಕ  ಪೌರ್ಣಮಿ ಎಂಬ ಮಲಯಾಳಿ ಧಾರಾವಾಹಿಯಲ್ಲಿ  ಅಭಿನಯಿಸಿದರು. 2019ರಲ್ಲಿ 'ಇಷ್ಟದೇವತೆ' ಎಂಬ ಸೀರಿಯಲ್​ನಲ್ಲಿಯೂ ಅದ್ಭುತ ನಟನೆ ನೀಡಿದರು. ರಂಜನಿ 2017ರಲ್ಲಿ 'ರಾಜಹಂಸ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


ಇವರು ನಟಿಯ ಜೊತೆಗೆ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡರು.  ಇಷ್ಟದೇವತೆ  ಸೀರಿಯಲ್‌ಗೆ ತಾವೇ ಕಥೆ ಬರೆದು ಕ್ರಿಯೇಟಿವ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. 2020ರಲ್ಲಿ ಕನ್ನಡತಿ ಎಂಬ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದರು. ಈ ಧಾರಾವಾಹಿ ಹಿಟ್ ಆಗುವುದರ ಜೊತೆಗೆ ರಂಜನಿ ಜನಪ್ರಿಯತೆ ಕೂಡ ಹೆಚ್ಚಿದೆ. ಶೀರ್ಷಿಕೆಗೆ ತಕ್ಕಂತೆ ಕನ್ನಡತಿ ಧಾರಾವಾಹಿಯಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿತ್ತು.  ಕಥೆ ಡಬ್ಬಿ ಎಂಬ ಪುಸ್ತಕ ಬರೆದರು. 2022ರ ಡಿಸೆಂಬರ್ 7ರಂದು ಸ್ವೈಪ್ ಅಪ್ ಎಂಬ ಇನ್ನೊಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. 

ಸೆಕೆಂಡ್​ಹ್ಯಾಂಡ್​ ಬಟ್ಟೆ ಹಾಕೋ ಅಕ್ಷಯ್​ ಪುತ್ರ: ಆರವ್​ ಜೀವನದ ಇಂಟರೆಸ್ಟಿಂಗ್​ ವಿಷ್ಯ ಬಿಚ್ಚಿಟ್ಟ ನಟ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನಿಲ್ಲದೆ Bigg Boss ಮನೇಲಿ Spark ಇಲ್ಲ ಎಂದ Rakshita Shetty; ಅಲ್ಲೇ ಸತ್ಯದರ್ಶನ ಮಾಡಿಸಿದ ಕಿಚ್ಚ ಸುದೀಪ್
BBK 12: ರಕ್ಷಿತಾ ಆಟದ ನಿಗೂಢ ತಂತ್ರಗಾರಿಕೆ ಬಿಚ್ಚಿಟ್ಟ ಧ್ರುವಂತ್‌ಗೆ ಫಿದಾ ಆದ್ರು ಗಿಲ್ಲಿ ಫ್ಯಾನ್ಸ್