ನಿಶ್ಚಿತಾರ್ಥ ಆದ್ಮೇಲೆ ಮಾತನಾಡೋಕೆ ಭಯ ಶುರುವಾಗಿದೆ; ಕಣ್ಣೀರಿಟ್ಟ ಯುಟ್ಯೂಬರ್ ಮಧು- ನಿಶಾ!

By Vaishnavi Chandrashekar  |  First Published May 21, 2024, 12:29 PM IST

ದಿನೇ ದಿನ ಹೆಚ್ಚಾಗುತ್ತಿರುವ ನೆಗೆಟಿವ್ ಕಾಮೆಂಟ್ಸ್‌ಗೆ ತಲೆ ಕೆಡಿಸಿಕೊಂಡು ರೀಲ್ಸ್‌ ಕ್ವೀನ್ ಮಧು ಗೌಡ. ಧೈರ್ಯ ತುಂಬಿದ ನಾದಿನಿ..... 


ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಓಪನ್ ಮಾಡಿದಾಗ ಮೊದಲು ಕಾಣಿಸುವುದು ಮಧು ಗೌಡ, ನಿಶಾ ರವೀಂದ್ರ ಮತ್ತು ನಿಖಿಲ್ ರವೀಂದ್ರ ವಿಡಿಯೋಗಳು. ಅದರಲ್ಲೂ ಸ್ನೇಹಿತರಾಗಿದ್ದ ನಿಖಿಲ್ ಮತ್ತು ಮಧು ಪ್ರೀತಿಸಲು ಶುರು ಮಾಡಿದ ಮೇಲೆ ಇವರ ನಡುವೆ ಬಾಂಡಿಂಗ್‌ ಗಟ್ಟಿಯಾಗಿತ್ತು. ನಿಖಿಲ್ ಸಹೋದರಿಯಾಗಿರುವ ನಿಶಾ ಕೂಡ ಇವರಿಗೆ ತುಂಬಾನೇ ಸಪೋರ್ಟ್‌ ಮಾಡುತ್ತಾರೆ. ಇತ್ತೀಚಿಗೆ ನಿಖಿಲ್ ಮತ್ತು ಮಧು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಗೆ ಕೆಲವೇ ತಿಂಗಳು ಉಳಿದಿದೆ. ಈ ನಡುವೆ ಬರುತ್ತಿರುವ ನೆಗೆಟಿವ್ ಕಾಮೆಂಟ್ಸ್‌ ನೋಡಿ ಮಧು ಬೇಸರ ಮಾಡಿಕೊಂಡಿದ್ದಾರೆ. 

ಹೌದು! ಮಧು ಗೌಡ ಯುಟ್ಯೂಬ್ ಚಾನೆಲ್‌ ಹೊಂದಿದ್ದಾರೆ ಹಾಗೂ ನಿಖಿಲ್ -ನಿಶಾ ಕೂಡ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಮಧು ಗೌಡ ಚಾಲೆನ್‌ನಲ್ಲಿ ಯಾವುದೇ ನೆಗೆಟಿವ್ ಕಾಮೆಂಟ್‌ ಬರುತ್ತಿಲ್ಲ ಆದರೆ ನಿಶಾ ಚಾನೆಲ್‌ನಲ್ಲಿ ಬರುತ್ತಿರುವ ಕಾರಣ ಬೇಸರ ಮಾಡಿಕೊಂಡಿದ್ದಾರೆ. 

Tap to resize

Latest Videos

ಅಮ್ಮನಿಗೆ ಚಿನ್ನದ ಓಲೆ ಗಿಫ್ಟ್‌ ಮಾಡಿದ ಮೇಘನಾ ರಾಜ್; ಓಪನ್ ಮಾಡುತ್ತಿದ್ದಂತೆ ಕಣ್ಣೀರಿಟ್ಟ ಪ್ರಮೀಳಾ ಜೋಷಾಯಿ

'ನಿಶಾ ನಿಖಿಲ್‌ ವ್ಲಾಗ್‌ನಲ್ಲಿ ಮಾತನಾಡುವುದಕ್ಕೆ ಭಯ ಶುರುವಾಗಿದೆ. ದಿನ ವ್ಲಾಗ್ ಮಾಡುವುದಕ್ಕೆ ಮನಸ್ಸು ಇಲ್ಲ ಅಷ್ಟು ಬೇಜಾರ್ ಆಗಿದೆ. ಪರ್ಸನಲ್‌ ವಿಚಾರದ ಬಗ್ಗೆ ಕಾಮೆಂಟ್ ಮಾಡುತ್ತೀರಾ ಇದರಿಂದ ಎಮೋಷನಲ್‌ ಆಗಿ ಎಷ್ಟು ಕಷ್ಟ ಆಗುತ್ತಿದೆ ಎಂದು ಯಾರಿಗೂ ಅರ್ಥವಾಗುವುದಿಲ್ಲ. ಆಫ್‌ ದಿ ಕ್ಯಾಮೆರಾ ನಾವು ಎಷ್ಟು ಚೆನ್ನಾಗಿದ್ದೀವಿ ಅನ್ನೋದು ನಮಗೆ ಗೊತ್ತಿದೆ ಅದನ್ನು ತೋರಿಸಿಕೊಳ್ಳಬೇಕು ಅನ್ನೋದು ಇಲ್ಲ. ಕೇವಲ 10 % ಮಾತ್ರ ನಮ್ಮ ಜೀವನದ ಬಗ್ಗೆ ನೀವು ವಿಡಿಯೋದಲ್ಲಿ ನೋಡುವುದು. ನನ್ನ ಯುಟ್ಯೂಬ್‌ನಲ್ಲಿ ಕಾಮೆಂಟ್ ಬರಲ್ಲ ಆದರೆ ನಿಶಾ ಯುಟ್ಯೂಬ್‌ನಲ್ಲಿ ಬರೀ ನೆಗೆಟಿವ್ ಕಾಮೆಂಟ್ಸ್‌ ಶುರುವಾಗಿದೆ. ನನಗೆ ನಾಟಕ ಮಾಡಲು ಬರುವುದಿಲ್ಲ ನಾನು ಹೇಗಿದ್ದೀನಿ ಹಾಗೆ ಇರಬೇಕು' ಎಂದು ಮಧು ಕಣ್ಣೀರಿಟ್ಟಿದ್ದಾರೆ.  

ಗರ್ಭಪಾತ ಆಗಿದ್ದೇ ಗೊತ್ತಾಗಿಲ್ಲ ಮುದ್ದೆ ರೀತಿಯಲ್ಲಿ ಮಗು ಬಂದು ಬಿಡ್ತು: ನಯನಾ ಕಣ್ಣೀರು

ನಿಶ್ಚಿತಾರ್ಥ ಆದ್ಮೇಲೆ ಇಷ್ಟೋಂದು ನೆಗೆಟಿವಿಟಿ ಬರ್ತಿದೆ ಯಾಕೆ ಅಂತ ಅರ್ಥವಾಗುತ್ತಿಲ್ಲ. ಆರಂಭದಲ್ಲಿ ನಾವು ಹೀಗೆ ಇದ್ವಿ ಆಗ ಏನೂ ಕಾಮೆಂಟ್ಸ್‌ ಬರುತ್ತಿರಲಿಲ್ಲ ಯಾವಾಗ ಮದುವೆ ಆಗುತ್ತಿದ್ದೀವಿ ನಿಶ್ಚಿತಾರ್ಥ ಆಯ್ತು ಅಲ್ಲಿಂದ ಶುರುವಾಯ್ತು. ನಮ್ಮಿಬ್ಬರ ನಡುವೆ ಏನೂ ಮನಸ್ಥಾಪ ಇಲ್ಲ ಏನೂ ಬದಲಾವಣೆ ಇಲ್ಲ ನಾವು ಆರಾಮ್ ಆಗಿದ್ದೀವಿ. ಪರ್ಸನಲ್‌ ಆಗಿ ನಾವು ಚೆನ್ನಾಗಿದ್ದೀವಿ ಭಯ ಶುರುವಾಗಿ ಕೈ ನಡುಕ ಶುರುವಾಗಿದೆ ಮಾತನಾಡಲು ಧೈರ್ಯ ಇಲ್ಲ. ಇದೊಂದು ರಿಲೇಶನ್‌ಶಿಪ್‌ ಮತ್ತು ಲೈಫ್‌ಲಾಂಗ್ ಇರುವ ಬಾಂಡಿಂಗ್ ಹೀಗಾಗಿ ಕಾಮೆಂಟ್ ಮಾಡಬೇಡಿ. ನಮ್ಮಿಬ್ಬರ ನಡುವೆ ಏನೂ ಇಲ್ಲ ಅಂದ್ರು ನೀವು ಮಾಡುವ ಕಾಮೆಂಟ್‌ ಅಥವಾ ಹೇಳುವ ವಿಚಾರದಿಂದ ನಮ್ಮಿಬ್ಬರ ಏನೋ ಶುರುವಾಗುತ್ತದೆ ಎಂದು ಮಧು ಹೇಳಿದ್ದಾರೆ. 

click me!