ನೆಗೆಟಿವ್ ಪಾತ್ರ ಬೇಡವೇ ಬೇಡ ಎನ್ನುತ್ತಿರುವ ಅಂಜಲಿ.....ಗ್ಲಾಮರ್ ಗೊಂಬೆ ಈಗ ಸಿಕ್ಕಾಪಟ್ಟೆ ಅಭಿಮಾನಿಗಳು...
ರಾಮಾಚಾರಿ ಮತ್ತು ಲಕ್ಷ್ಮಿ ನಿವಾಸ ಸೀರಿಯಲ್‌ಗಳಲ್ಲಿ ಅಭಿನಯಿಸುತ್ತಿರುವ ನಟಿ ಅಂಜಲಿ ಕಮ್‌ಬ್ಯಾಕ್ ಮಾಡಲು ಸಿಕ್ಕಾಪಟ್ಟೆ ಕಡಿಮೆ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ನೆಗೆಟಿವ್ ಪಾತ್ರಗಳನ್ನು ರಿಜೆಕ್ಟ್ ಮಾಡಲು ಕಾರಣವೇನು? ಗ್ಲಾಮರ್ ನಟಿಯನ್ನು ಈಗ ಯಾವ ಪಾತ್ರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ....
'ಕಮ್‌ಬ್ಯಾಕ್ ಮಾಡಲು ನಾನು ಒಳ್ಳೆಯ ಅವಕಾಶಕ್ಕೆ ಕಾಯುತ್ತಿದೆ. ನೆಗೆಟಿವ್ ಪಾತ್ರಕ್ಕೆ ಹಲವು ಕಥೆಗಳು ಬಂದವು ಆದರೆ ನನಗೆ ಒಪ್ಪಿಗೆ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳ ತಾಯಿ ಆಗಿ ನಾನು ಪಾತ್ರಗಳನ್ನು ಆಯ್ಕೆ ಮಾಡುವುದಕ್ಕೆ ಯೋಚನೆ ಮಾಡುತ್ತೀನಿ. ನನಗೆ ಪಾಸಿಟಿವ್ ಪಾತ್ರಗಳು ಬೇಕಿದೆ. ಚಿತ್ರರಂಗದ ಹಿರಿಯ ನಟಿಯಾಗಿ ಹಾಗೂ ತಾಯಿಯಾಗಿ ನಾನು ತೆರೆ ಮೇಲೆ ಮಾಡುವ ಪಾತ್ರಗಳು ನನ್ನ ವೈಯಕ್ತಿಕ ಜೀವನದ ಬಗ್ಗೆ ಹೇಳುತ್ತದೆ. ಮನೆಯ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ನನ್ನ ಆಸಕ್ತಿ ನಟನೆಯನ್ನು ಮುಂದುವರೆಸಿಕೊಂಡು ಹೋಗಬೇಕು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಅಂಜಲಿ ಮಾತನಾಡಿದ್ದಾರೆ.
undefined
ಹಗ್ಗ ಹಿಡಿದು ನೇತಾಡುತ್ತಿರುವ ನಿಧಿ ಸುಬ್ಬಯ್ಯ ಫೋಟೋ ವೈರಲ್; ಫಿಟ್ ಆಗಲು ಮಾಡುತ್ತಿರುವ
'ಆಗ ಇಂಡಸ್ಟ್ರಿಯಲ್ಲಿ ನನಗೆ ಬಂದ ಪಾತ್ರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ಇತ್ತು. ನನ್ನ ಫ್ಯಾಮಿಲಿಯನ್ನು ಸಪೋರ್ಟ್ ಮಾಡುವ ಪರಿಸ್ಥಿತಿ ಇತ್ತು. ಆಗ ನಟನೆಯಲ್ಲಿ ದುಡಿಯುತ್ತಿದ್ದ ಹಣದಿಂದ ಮನೆಯ ಬಾಡಿಗೆಯನ್ನು ಕಟ್ಟುತ್ತಿದ್ದೆ. ಈಗ ನನಗೆ ಬೇಕಿರುವ ಪಾತ್ರಗಳನ್ನು ಆಯ್ಕೆ ಮಾಡುವ ಅವಕಾಶ ಇದೆ. 90ರ ದಶಕದಲ್ಲಿ ನಾನು ಗ್ಲಾಮರ್ ಪಾತ್ರಗಳನ್ನು ಮಾಡುತ್ತಿದ್ದರೂ ಈಗ ನನ್ನ ಪಾತ್ರಗಳನ್ನು ಬದಲಾಯಿಸಿಕೊಂಡಿರುವೆ. ನಾನು ಸದ್ಯ ಮಾಡುತ್ತಿರುವ ಪಾತ್ರಗಳ ಮೂಲಕ ಜನರು ನನ್ನನ್ನು ಗುರುತಿಸುತ್ತಾರೆ' ಎಂದು ಅಂಜಲಿ ಹೇಳಿದ್ದಾರೆ.
ತೆರೆ ಮೇಲೆ ಸಾಮಾನ್ಯನಂತೆ ಕಾಣಿಸುತ್ತಿರುವುದಕ್ಕೆ ಜನರಿಗೆ ಹತ್ತಿರವಾಗುತ್ತಿರುವುದು: ವಿನಯ್
'ಈಗ ಕಿರುತೆರೆಯಲ್ಲಿ ಆಯ್ಕೆ ಮಾಡಿಕೊಂಡಿರುವ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ನನಗೆ ತುಂಬಾ ಫ್ಯಾನ್ಸ್ ಮತ್ತು ಹಿತೈಷಿಗಳು ಇದ್ದಾರೆ. ಇನ್ನು ಹೆಚ್ಚು ಕೆಲಸ ಮಾಡಬೇಕು ಅನಿಸುತ್ತದೆ' ಎಂದಿದ್ದಾರೆ ಅಂಜಲಿ.