ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಗಿಲ್ಲಿ ನಟನಿಗೆ ಯಶಸ್ವಿನಿ ಮತ್ತು ಗಗನ ಇಬ್ಬರೂ ಕೈಕೊಟ್ಟಿದ್ದಾರೆ. ಪ್ರೀತಿಯಲ್ಲಿ ಸೋತ ಗಿಲ್ಲಿ 'ಸಿಂಗಲ್ ಆಗಿ ಇರ್ತೀನಿ' ಎಂದು ಘೋಷಿಸಿದ್ದಾರೆ.
ಬೆಂಗಳೂರು (ಅ.17): ಕಾಮಿಡಿ ಕಿಲಾಡಿಗಳು ವೇದಿಕೆಯಿಂದ ಕಿರುತೆಗೆರೆ ಕಾಲಿಟ್ಟ ಹಾಸ್ಯ ಕಲಾವಿದ ಮಂಡ್ಯ ಮೂಲದ ಗಿಲ್ಲಿ ನಟ ಇದೀಗ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಪ್ರಮುಖ ಕಂಟೆಸ್ಟೆಂಟ್ ಆಗಿದ್ದಾನೆ. ಇಲ್ಲಿ ಗಿಲ್ಲಿ ನಟ ಇಬ್ಬರು ಹುಡುಗಿಯರಿಗೆ ತನ್ನ ಪ್ರೀತಿ ಪ್ರಪೋಸ್ ಮಾಡಿ ಸಾಕಾಗಿ, ಸುಸ್ತಾಗಿ ಹೋಗಿದ್ದು, ಇದೀಗ ಇಬ್ಬರೂ ಹುಡುಗಿಯರು ಸಿಗದೇ ಸಿಂಗಲ್ ಆಗಿ ಇರುವುದಕ್ಕೆ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಿಲ್ಲಿ ನಟ ಓದು ಮುಗಿಸಿದವನೇ ನಾನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಡೈರೆಕ್ಟರ್ ಆಗಬೇಕು ಎಂದು ಬೆಂಗಳೂರಿಗೆ ಬಂದನು. ಆದರೆ, ಸ್ನೇಹಿತರ ಸಹಾಯದಿಂದ ಡೈರೆಕ್ಟರ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದರೂ ಹಣವೂ ಸಿಗಲಿಲ್ಲ, ಡೈರೆಕ್ಷನ್ನೂ ಮಾಡಕ್ಕಾಗಲಿಲ್ಲ. ಇದನ್ನು ಬಿಟ್ಟು ಸೆಟ್ ಡಿಪಾರ್ಟ್‌ಮೆಂಟ್‌ಗೆ ಸೇರಿಕೊಂಡು ದುಡಿಮೆ ಆರಂಭಿಸಿದ. ಆಗ ಸಿನಿಮಾ ಹಾಗೂ ಕಾಮಿಡಿ ಸ್ಕಿಟ್ ಬರೆಯುತ್ತಾ ತಾನೂ ಹಾಸ್ಯನಟನಾಗಿ ನಟನೆ ಆರಂಭಿಸಿದ. ಜೊತೆಗೆ, ಒಂದೆರೆಡು ಶಾರ್ಟ್ ಮೂವಿಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಸಿದ್ಧಿಯನ್ನೂ ಪಡೆದುಕೊಂಡನು. ಇದರ ಬೆನ್ನಲ್ಲಿಯೇ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕಾಣಿಸಿಕೊಂಡಿ ಸೀಸನ್ 4ರಲ್ಲಿ ರನ್ನರ್ ಅಪ್ ಸ್ಥಾನವನ್ನೂ ಗೆದ್ದನು.
undefined
ಕಾಮಿಡಿ ಕಿಲಾಡಿಗಳು ಖ್ಯಾತಿಯಿಂದ ಜೀ ಕನ್ನಡದಲ್ಲಿ ಆರಂಭಿಸಿದ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಭಾಗವಹಿಸಿದ್ದನು. ಅಲ್ಲಿ ಸೀರಿಯಲ್ ನಟಿ ಯಶಸ್ವಿನಿ ಅವರ ಜೋಡಿಯಾಗಿದ್ದು, ಅಲ್ಲಿ ಒಂದು ಸುತ್ತು ಗಿಲ್ಲಿ ಹಾಗೂ ಯಶಸ್ವಿನಿ ನಡುವೆ ಪ್ರೀತಿ ಆರಂಭವಾಗಿದೆ ಎನ್ನುವ ವಾತಾವರಣ ನಿರ್ಮಾಣ ಆಗಿತ್ತು. ಇತ್ತ ಗಿಲ್ಲಿ ನಟ ಯಶಸ್ವಿನಿಗೆ ನಟನೆಗೆ ಮಾತ್ರವಲ್ಲದೇ ರಿಯಲ್ ಆಗಿಯೂ ಪ್ರೇಮ ನಿವೇಸನೆ ಮಾಡಿಕೊಂಡಿದ್ದನು. ಆದರೆ, ಇದನ್ನು ಸಾರಾ ಸಗಟಾಗಿ ಯಶಸ್ವಿನಿ ತಿರಸ್ಕರಿಸಿದ್ದು, ತನ್ನ ಕಿರುತೆರೆ ಕೆರಿಯರ್ ಬಗ್ಗೆ ಗಮನಹರಿಸಿದ್ದರು.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು : ಸ್ನೇಹಾ ಪಾತ್ರಕ್ಕೆ ಗುಡ್ ಬೈ ಹೇಳ್ತಿದ್ದಾರ ಸಂಜನಾ... ವೀಕ್ಷಕರಲ್ಲಿ ಗೊಂದಲ ಸೃಷ್ಟಿಸಿದ ನಟಿಯ ಪೋಸ್ಟ್
ಇದರ ನಂತರ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನ ಸ್ಪರ್ಧಿಯಾಗಿ ಗಿಲ್ಲಿ ನಟ ಒಂದು ತಂಡದ ನಾಯಕನಾಗಿ ಭಾಗವಹಿಸುತ್ತಾರೆ. ಮತ್ತೊಂದೆಡೆ ಯಶಸ್ವಿನಿ ನಾನ್ ಡ್ಯಾನ್ಸರ್‌ಗಳ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಆಗಮಿಸುತ್ತಾಳೆ. ಇದೇ ವೇದಿಕೆಗೆ ಮಹಾನಟಿ ಖ್ಯಾತಿಯ ಚಿತ್ರದುರ್ಗದ ಗಗನ ಭಾರಿ ಕೂಡ ಎಂಟ್ರಿ ಕೊಡುತ್ತಾಳೆ. ಡಿಕೆಡಿ ಹಾಗೂ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಕೊಲಾಬರೇಶನ್ ಆಗಿ ಮಹಾಸಂಚಿಕೆ ನಡೆಸಿಕೊಟ್ಟಾಗ ಇಲ್ಲಿ ಗಿಲ್ಲಿ ನಟನಿಗೆ ಕೈಕೊಟ್ಟ ಯಶಸ್ವಿನಿ ಹಾಗೂ ಹೊಸದಾಗಿ ಗಗನ ಭಾರಿ ಸಿಗುತ್ತಾರೆ. ಆಗ ಯಶಸ್ವಿನಿ ಮುಂದೆಯೇ ಗಗನ ಭಾರಿಯನ್ನು ಇಷ್ಟಪಡುವ ಹಾಗೆ ಮಾತನಾಡಿ ಎಲ್ಲರ ಮನಸ್ಸು ಗೆಲ್ಲುತ್ತಾನೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ನಾನ್ ಡ್ಯಾನ್ಸರ್ ಆಗಿದ್ದ ಕಂಟೆಸ್ಟೆಂಟ್ ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ವಿಶ್ವ ಬಿಟ್ಟುಹೋದ ಜಾಗಕ್ಕೆ ಗಿಲ್ಲಿ ನಟನಿಗೆ ಅವಕಾಶ ನೀಡಲಾಗುತ್ತದೆ. ಕಾಮಿಡಿ ಕಿಲಾಡಿಗಳು ಹಾಗೂ ಡಿಕೆಡಿ ಎರಡೂ ಕಾರ್ಯಕ್ರಮಗಳಲ್ಲಿ ಗಿಲ್ಲಿನಟ ಕಾಣಿಸಿಕೊಳ್ಳುತ್ತಿದ್ದಾನೆ. ಈ ವೇಳೆ ನಟ ಗಿಲ್ಲಿ ನಟ ಯಶಸ್ವಿನಿ ತನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೂ ಪರವಾಗಿಲ್ಲ, ಗಗನ ತನ್ನ ಕೈ ಹಿಡಿಯುತ್ತಾಳೆ ಎಂದು ವೇದಿಕೆ ಮೇಲೆಯೇ ಹಲವು ಬಾರಿ ಪ್ರೇಮ ನಿವೇದನೆ ಮಾಡಿಕೊಂದಿದ್ದನು. ಆದರೆ, ಅಲ್ಲಿ ಗಗನ ಕೂಡ ಇವನನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಇದೆಲ್ಲವೂ ಹಾಸ್ಯಕ್ಕಾಗಿ ಎಂದು ಸುಮ್ಮನಿದ್ದಳು. ಇತ್ತೀಚೆಗೆ ವೇದಿಕೆಯಲ್ಲಿ ಗಿಲ್ಲಿ ನಟನ ಪ್ರೇಮ ನಿವೇದನೆಯನ್ನು ಗಗನ ನಿರಾಕರಣೆ ಮಾಡಿದ್ದಳು. ಇದರ ಬೆನ್ನಲ್ಲಿಯೇ ಗಿಲ್ಲಿ ನಟ ಹಳೆ ಹುಡಿಗಿ ಪಾದವೇ ಗತಿ ಎಂದು ಪುನಃ ಯಶಸ್ವಿನಿಗೆ ಪ್ರೇಮ ನಿವೇದನೆ ಮಾಡಿ ಒಲಿಸಿಕೊಳ್ಳಲು ಪ್ರಯತ್ನವನ್ನೂ ಮಾಡುತ್ತಾನೆ. ಒಂದೇ ವೇದಿಕೆಯಲ್ಲಿ ಇಬ್ಬಿಬ್ಬರು ಕೈಕೊಟ್ಟ ಹುಡುಗಿಯರು ಇರುವ ಕಾರಣ ಗಿಲ್ಲಿ ನಟನಿಗೆ ಜೀವನವೇ ಜಿಗುಪ್ಸೆ ಆದಂತಾಗಿದೆ.
ಇದನ್ನೂ ಓದಿ: ಬಾಲಿವುಡ್ ಕಾಸ್ಟಿಂಗ್ ಕೌಚ್ ಕರಾಳತೆ ಬಿಚ್ಚಿಟ್ಟ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ: ಬಟ್ಟೆಯೊಳಗೆ ಕೈ ಹಾಕಿದ್ರು!
ಸಿಂಗಲ್ ಆಗಿ ಇರೋದಾಗಿ ಹೇಳಿದ ಗಿಲ್ಲಿ ನಟ:
ಇತ್ತಕಡೆ ಯಶಸ್ವಿನಿಯೂ ಸಿಗಲಿಲ್ಲ, ಅತ್ತಕಡೆ ಗಗನನೂ ಸಿಗಲಿಲ್ಲ ಎಂದು ಚಿಂತೆಯಲ್ಲಿದ್ದ ಗಿಲ್ಲಿ ನಟ ಡಿಕೆಡಿ ವೇದಿಕೆಗೆ ಬಂದಾಗ 'ಪ್ರೀತಿ ಪವಿತ್ರ, ಆದರೆ ಪ್ರೀತ್ಸೋರೆ ಸಿಗೊಲ್ಲ ಎಂಥಾ ವಿಚಿತ್ರ.. ಎಂದು ಡೈಲಾಗ್ ಹೊಡೆದಿದ್ದಾನೆ. ಮುಂದುವರೆದು ಬೇಜಾರಾದ್ರೆ ಎಣ್ಣೆ, ಲವ್ವಲ್ಲಿ ಬಿದ್ರೆ ಮಣ್ಣೇ..., ಬದುಕಿದ್ದರೆ ಬಿರಿಯಾನಿ, ಸತ್ತೋದ್ರೆ ಸಾಂಬ್ರಾಣಿ ಎಂತೆಲ್ಲಾ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ, ಚಿಕ್ಕ ವಯಸ್ಸಲ್ಲಿ ಇದ್ದಾಗ ಪೀಪಿ ಚಿಂತೆ, ಯೌವನಕ್ಕೆ ಬಂದಾಗ ಡಿಪಿ ಚಿಂತೆ, ಇನ್ನು ವಯಸ್ಸಾದ ಮೇಲೆ ಬಂದಾಗ ಬಿಪಿ ಚಿಂತೆ, ಅದರ ನಡುವೆ ಯಾಕೆ ಬೇರೆಯವರ ಚಿಂತೆ... ಸಿಂಗಲ್ಲಾಗೇ ಇರ್ತೀನಿ ಬಿಡಿ ನಾನು'... ಎಂದು ಡೈಲಾಗ್ ಹೇಳುತ್ತಾನೆ. ಈತನ ಡೈಲಾಗ್ ಕೇಳಿ ವೇದಿಕೆ ಮೇಲಿದ್ದವರೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ.