ದೀಪಾ v/s ಸೌಂದರ್ಯ- ನೀನಾ... ನಾನಾ... ಯಾರೂ ಊಹಿಸದ ರೋಚಕ ಟ್ವಿಸ್ಟ್​! ಕುಣಿದಾಡುತ್ತಿರುವ ಫ್ಯಾನ್ಸ್​...

Published : Oct 17, 2024, 04:36 PM IST
ದೀಪಾ v/s ಸೌಂದರ್ಯ- ನೀನಾ... ನಾನಾ... ಯಾರೂ ಊಹಿಸದ ರೋಚಕ ಟ್ವಿಸ್ಟ್​! ಕುಣಿದಾಡುತ್ತಿರುವ ಫ್ಯಾನ್ಸ್​...

ಸಾರಾಂಶ

ಬ್ರಹ್ಮಗಂಟು ಸೀರಿಯಲ್​ಗೆ ಯಾರೂ ಊಹಿಸದ ರೋಚಕ ಟ್ವಿಸ್ಟ್​ ಸಿಕ್ಕಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೀರಿಯಲ್​ ಪ್ರೇಮಿಗಳು ಸಂತಸದಿಂದ ಕುಣಿದಾಡುತ್ತಿದ್ದಾರೆ.  

  ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್​.  ಮನೆಯ ಮರ್ಯಾದೆ ಉಳಿಸಲು  ಚಿರುನ ಮದುವೆಯಾಗಿ ಬಂದು ತನ್ನ  ರೂಪದಿಂದಲೇ ಎಲ್ಲರಿಂದಲೂ ದೂರ ತಳ್ಳಿಸಿಕೊಳ್ತಿರೋ ನಾಯಕಿ ದೀಪಾ. ಈಕೆಯನ್ನು ದೂರವಿಡಲು ಒಬ್ಬೊಬ್ಬರದ್ದು ಒಂದೊಂದು ನೆಪವಷ್ಟೇ. 

 ಸೌಂದರ್ಯವೇ ಮೇಲೆಂದು ಬಗೆದು ಇಂಥ ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಸೀರಿಯಲ್​ ವಿರುದ್ಧ ಹಲವು ಸೀರಿಯಲ್​ ಪ್ರೇಮಿಗಳು ಆಕ್ರೋಶ ಹೊರಹಾಕುತ್ತಿದ್ದರು. ಇದರಿಂದ ಏನು ಸಂದೇಶ ಕೊಡುತ್ತಿದ್ದೀರಿ ಎಂದೆಲ್ಲಾ ಪ್ರಶ್ನಿಸುತ್ತಿದ್ದರು. ಚಿರು ಅತ್ತಿಗೆ ಸೌಂದರ್ಯ ಇಲ್ಲಿ ವಿಲನ್​. ಆಕೆಗೆ ತನ್ನ ಸೌಂದರ್ಯ ಎಲ್ಲಿ ಹಾಳಾಗುತ್ತದೆಯೋ ಎನ್ನುವ ಚಿಂತೆ, ಅದಕ್ಕಾಗಿ ಮಕ್ಕಳು ಮಾಡಿಕೊಂಡಿಲ್ಲ. ಆದರೆ ಎಲ್ಲರೂ ಚಿರುವಿಗೆ ತಾಯಿಯ ಮಮತೆ ತೋರಬೇಕು ಎನ್ನುವ ಕಾರಣಕ್ಕೆ  ಮಕ್ಕಳು ಮಾಡಿಕೊಂಡಿಲ್ಲ ಎಂದೇ ಅಂದುಕೊಂಡಿದ್ದಾರೆ. ಅದೇ ಇನ್ನೊಂದೆಡೆ ಕ್ಷಣ ಕ್ಷಣಕ್ಕೂ ದೀಪಾ ಈ ಮನೆಯಲ್ಲಿ ಎಲ್ಲರ ಬಾಯಲ್ಲಿ ಚುಚ್ಚು ಮಾತುಗಳಿಂದ ನೋವು ಅನುಭವಿಸುತ್ತಿದ್ದರೂ, ತನ್ನ ಅಪ್ಪ-ಅಮ್ಮನಿಗೆ ಈ ವಿಷಯ ಹೇಳೇ ಇರಲಿಲ್ಲ. ಇದು ಕೂಡ ಸೀರಿಯಲ್​ ಪ್ರೇಮಿಗಳಿಗೆ ತುಂಬಾ ನಿರಾಸೆ ಉಂಟು ಮಾಡಿತ್ತು.

ದುರ್ಗಾಪೂಜೆಯಲ್ಲಿ ಅರೆ ಬೆತ್ತಲು, ಜಿಮ್​ನಲ್ಲಿ ಸೀರೆಯುಟ್ಟು ವರ್ಕ್​ಔಟ್​: ಮಿಸ್​ ಕೋಲ್ಕತಾ ವಿಡಿಯೋ ವೈರಲ್​!

ಬಹುಶಃ ಮುಂದೊಂದು ದಿನ ದೀಪಾಳ ಸೌಂದರ್ಯ ಬದಲಾಗುತ್ತೆ, ಆಗ ಎಲ್ಲರೂ ಆಕೆಯನ್ನು ಒಪ್ಪಿಕೊಳ್ಳುತ್ತಾರೆ, ಇದು ಶತಃಸಿದ್ಧ ಎಂದೇ ಅಂದುಕೊಂಡಿದ್ದರು. ಆದರೆ ಈಗ ಎಲ್ಲರ ನಿರೀಕ್ಷೆಗೂ ಮೀರಿದ ಟ್ವಿಸ್ಟ್​ ಸೀರಿಯಲ್​ಗೆ ಸಿಕ್ಕಿದೆ. ದೀಪಾಳನ್ನು ತವರಿನಲ್ಲಿಯೇ ಚಿರು ಬಿಟ್ಟುಬರುತ್ತಾನೆ ಎಂದು ಸೌಂದರ್ಯ ಅಂದುಕೊಂಡಿದ್ದಳು. ಅದರೆ ದೀಪಾ ಮತ್ತೆ ಮನೆಗೆ ವಾಪಸಾಗಿದ್ದನ್ನು ಕಂಡ ಆಕೆ ಅವಳ ಸಾಮಗ್ರಿ ಸಹಿತ ಮನೆಯಿಂದ ಹೊರಕ್ಕೆ ಹಾಕಿದ್ದಾಳೆ. ಅಲ್ಲಿಗೆ ಬಂದ ಅಪ್ಪ-ಅಮ್ಮನಿಗೆ ಅವಮಾನ ಮಾಡಿದ್ದಾಳೆ. ಸ್ವಾಭಿಮಾನಿ ಹೆಣ್ಣು ದೀಪಾ ಅಪ್ಪ-ಅಮ್ಮನಿಗೆ ಅವಮಾನ ಮಾಡಿದರೆ ಸಹಿಸಿಕೊಂಡಾಳೆಯೇ? ಸೇರನ್ನು ಇಟ್ಟು ಅದನ್ನು ಒದ್ದು ಸೌಂದರ್ಯಳ ಫೋಟೋ ಚೂರಾಗುವ ಹಾಗೆ ಮಾಡಿದ್ದಾಳೆ. ಇದನ್ನು ಕಂಡು ಎಲ್ಲರೂ ಶಾಕ್​ ಆಗಿದ್ದಾರೆ.

ನೀನು ಯಾರ ಜೊತೆ ಮಾತನಾಡುತ್ತಿದ್ದಿ ಎನ್ನುವುದು ಗೊತ್ತಾ ಎಂದು ಅಹಂಕಾರದಿಂದ ಸೌಂದರ್ಯ ಕೇಳಿದ್ದಾಳೆ. ಅದಕ್ಕೆ ದೀಪಾ ಸೌಂದರ್ಯವೇ ಸರ್ವಸ್ವ ಎನ್ನುವ ದುರಂಕಾರಿಯ ಮುಂದೆ ಮಾತನಾಡುತ್ತಿದ್ದೇನೆ. ಸೌಂದರ್ಯನಾ, ವ್ಯಕ್ತಿತ್ವನಾ? ಗುಣನಾ, ಗರ್ವನಾ? ನೀನಾ... ನಾನಾ... ನೋಡಿಯೇ ಬಿಡೋಣ ಎಂದಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೀರಿಯಲ್​ ಪ್ರೇಮಿಗಳಿಂದ  ಕಮೆಂಟ್ಸ್​ ಸುರಿಮಳೆಯಾಗ್ತಿದೆ. ಸೀರಿಯಲ್​​ ಅಂದ್ರೆ ಇದು ಅಂತಿದ್ದಾರೆ. ಅಬ್ಬಾ ಇಂಥ ರೋಚಕ ಟ್ವಿಸ್ಟ್​ ಊಹಿಸಿಯೇ ಇರಲಿಲ್ಲ ಎಂದು ಮತ್ತೆ ಹಲವರು ಹೇಳುತ್ತಿದ್ದಾರೆ. 

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಗೆದ್ದ ಮಧ್ಯಪ್ರದೇಶದ ಬೆಡಗಿ: ಯಾರೀ ನಿಕಿತಾ ಪೋರ್ವಾಲ್​?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ