ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಟ ಮಚ್ಚು ಹಿಡಿದು ರೀಲ್ಸ್ ಮಾಡಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದಾರೆ. ಬಸವೇಶ್ವರ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧನ ಮಾಡಿದ್ದಾರೆ.
ಬೆಂಗಳೂರು (ಮಾ.24): ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಟ ಅವರು ರೀಲ್ಸ್ ಮಾಡುವ ವೇಳೆ ರಸ್ತೆಯಲ್ಲಿ ಮಚ್ಚು ಹಿಡಿದು ಪೋಸ್ ಕೊಟ್ಟು ಹುಚ್ಚಾಟ ಮಾಡಿದ್ದರು. ಇದರ ಬೆನ್ನಲ್ಲಿಯೇ ಬಸವೇಶ್ವರ ಠಾಣೆಯಲ್ಲಿ ದೂರು ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ ವಿಚಾರಣೆಗೆ ಬರುವಂತೆ ನೋಟೀಸ್ ನೀಡಲಾಗಿತ್ತು. ಇದೀಗ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ, ನಂತರ ಬಂಧನ ಮಾಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ರಜತ್ ಹಾಗೂ ವಿನಯ್ ಮೇಲೆ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲಿಯೇ ರಜತ್ ಅವರ ಹೆಂಡತಿ ಅಕ್ಷಿತಾ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಈ ವೇಳೆ ರಜತ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದನ್ನು ಪೊಲೀಸರು ಮತ್ತೊಮ್ಮೆ ತಿಳಿಸಿದ್ದರು. ಪೊಲೀಸರಿಂದ ತಪ್ಪಿಸಿಕೊಂಡು ಸುತ್ತಾಡುತ್ತಿದ್ದ ಇಬ್ಬರಿಗೂ ವಿಚಾರಣೆಗೆ ಹಾಜರಾಗಿರಲಿಲ್ಲ. ಆದರೆ, ಸೋಮವಾರ ಸಂಜೆ ಬಸವೇಶ್ವರ ನಗರ ಪೊಲೀಸರಿಂದ ರಜತ್, ವಿನಯ್ ಗೌಡ ಅವರನ್ನು ಬಂಧಿಸಲಾಗಿದೆ.
ಪೊಲೀಸರ ವಿಚಾರಣೆ ವೇಲೆ ರಜತ್ ಅವರು ನಾವು ಸ್ಟೂಡಿಯೋದಲ್ಲಿಯೇ ಇದನ್ನು ಶೂಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದಾದ ನಂತರ ವಿನಯ್ ಗೌಡ ಅವರು ನಾನು ಅಲ್ಲು ಅರ್ಜುನ್ ಅವರ ಪುಷ್ಪರಾಜ್ ತರಹ ಹಾಗೂ ರಜತ್ ಡಿ ಬಾಸ್ ರೀತಿಯಲ್ಲಿ ಡ್ರೆಸ್ ಧರಿಸಿ ವಿಡಿಯೋ ಶೂಟ್ ಮಾಡಿದ್ದೇವೆ. ನಾವು ಬೇರೆ ಯಾವ ಉದ್ದೇಶಕ್ಕೂ ಇದನ್ನು ಬಳಕೆ ಮಾಡಿಲ್ಲ. ಶನಿವಾರ ಈ ಸಂಬಂಧಪಟ್ಟ ವಿಡಿಯೋ ಟಿವಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ವೇಷ ಹಾಕಿದ ಬಿಗ್ ಬಾಸ್ ರಜತ್‌ಗೆ ಫ್ಯಾನ್ಸ್ ಕ್ಲಾಸ್: ಆತ ಮಾಡಿದ ತಪ್ಪೇನು? ಗರಂ ಆಗಿದ್ದೇಕೆ ದಾಸನ ಫ್ಯಾನ್ಸ್?
ವಿಡಿಯೋ ಡಿಲೀಟ್ ಮಾಡದ ರಜತ್: ಬಿಗ್ ಬಾಸ್ ಮನೆಯಲ್ಲಿ ನಾನಿರೋದೇ ಹೀಗೆ, ಯಾರದೇ ಮಾತಿಗೂ ಬಗ್ಗೋದಿಲ್ಲ ಎಂಬ ವರ್ತನೆಯನ್ನು ತೋರಿಸಿದ್ದ ರಜತ್ ಕಿಶನ್ ಈ ಸಮಾಜಕ್ಕೆ ಭಯವನ್ನು ಹುಟ್ಟಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕವೂ ಎಚ್ಚೆತ್ತುಕೊಂಡಿಲ್ಲ. ಇದಾದ ನಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದರೂ ಈ ವಿಡಿಯೋವನ್ನು ಡಿಲೀಟ್ ಮಾಡಿಲ್ಲ. ಈ ವಿಡಿಯೋ ಸಮಾಜದಲ್ಲಿ ಯುವಜನರ ಹಾದಿ ತಪ್ಪಿಸುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಾಯಿತೇ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.