ಬಿಗ್ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಅವರು ತಮ್ಮ ಮೂಡಿನ ಬಗ್ಗೆ ಹೇಳಿರುವ ಮಾತು ಪುನಃ ವೈರಲ್ ಆಗುತ್ತಿದ್ದು, ಅವರ ಫ್ಯಾನ್ಸ್ ಶಾಕ್ಗೆ ಒಳಗಾಗಿದ್ದಾರೆ. ಏನಿದು?
ಬಿಗ್ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಇತ್ತೀಚಿಗೆ ಸೋಷಿಯಲ್ ಮೀಡಿಯಾ ಸೆನ್ಸ್ಸೇಷನ್ ಆದವರು. ಓಟಿಟಿಯ ಸೀಸನ್ 1ರಲ್ಲಿ ಕಾಣಿಸಿಕೊಂಡ ಬಳಿಕ ಖ್ಯಾತಿ ಗಳಿಸಿದ್ದ ಸೋನು, ಹಾಟ್ ಫೋಟೋಶೂಟ್ಗಳ ಮೂಲಕ, ಪಡ್ಡೆ ಹುಡುಗರ ನಿದ್ದೆ ಕದ್ದವರು. ದಿನಕ್ಕೊಂದ್ದರಂತೆ ಇಂಥ ಫೋಟೋ-ವಿಡಿಯೋ ಶೂಟ್ಗಳನ್ನು ಮಾಡುತ್ತಲೇ ಟ್ರೋಲ್ಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಹಂಗಾಮಾ ಸೃಷ್ಟಿಸಿದವರು. ಇತ್ತೀಚಿಗೆ ಅವರು, ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪಕ್ಕೆ ಗುರಿಯಾಗಿ ಅರೆಸ್ಟ್ ಕೂಡ ಆಗಿದ್ದರು. ಇದರಿಂದ ಇವರ (ಕು)ಖ್ಯಾತಿ ಮತ್ತಷ್ಟು ಏರಿತ್ತು. ತಾವು ಮಗುವಿಗೆ ರಕ್ಷಣೆ ಕೊಟ್ಟಿರುವುದಾಗಿ ಹೇಳುವ ಮೂಲಕ ನೆಗೆಟಿವ್ ಕಮೆಂಟ್ ಮಾಡುವವರ ಮುಂದೆ, ಅಷ್ಟೇ ಅಭಿಮಾನಿಗಳನ್ನೂ ಏರಿಸಿಕೊಂಡಿರುವವರು. ನಮ್ಮ ಮನೆಯ ಸುತ್ತ ಮುತ್ತ ಇರುವ ನಾಯಿಗಳಿಗೆ ಬಿಸ್ಕೇಟ್ ಹಾಕುವಾಗ ಏಳು ವರ್ಷದ ಈ ಬಾಲಕಿ ಕಣ್ಣಿಗೆ ಕಂಡು ತಿಂಡಿ ಕೇಳಿದಲು. ಆಮೇಲೆ ಶಾಪಿಂಗ್ ಮಾಡಿಸಿ ಎಂದಳು. ಬಳಿಕ ಅವಳ ಆಸೆಯಂತೆಯೇ ಮನೆಗೆ ಕರೆದುಕೊಂಡು ಹೋದೆ. ಇದರಲ್ಲಿ ಅಕ್ರಮ ಏನು ಇಲ್ಲ ಎನ್ನುವ ಮೂಲಕ ಕೆಲವರ ಬಾಯಲ್ಲಿ ದೇವತೆ ಕೂಡ ಎನ್ನಿಸಿಕೊಂಡು ಬಿಟ್ಟರು.
ಈ ಘಟನೆಯ ಬಳಿಕ ಸೋನು, ಸ್ವಲ್ಪ ಸೈಲೆಂಟಾಗಿದ್ದಾರೆ. ಆದರೆ, ಇವರ ಅಭಿಮಾನಿಗಳು ಮಾತ್ರ ಇವರ ಹಿಂದಿನ ವಿಡಿಯೋಗಳನ್ನೆಲ್ಲಾ ಕೆದಕಿ ಅದನ್ನು ಪುನಃ ವೈರಲ್ ಮಾಡುತ್ತಿದ್ದಾರೆ. ತಮ್ಮ ನೆಚ್ಚಿನ ತಾರೆ ಸೈಲೆಂಟ್ ಆಗಿರುವುದನ್ನು ಅವರಿಂದ ನೋಡಲು ಆಗುತ್ತಿಲ್ಲ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದು 2022ರಲ್ಲಿ ಸೋನು ಗೌಡ ಅವರು, ಬಿಗ್ಬಾಸ್ ಓಟಿಟಿಯಲ್ಲಿ ಭಾಗವಹಿಸಿದ್ದ ಸಂದರ್ಭದ್ದು. ಬಿಗ್ಬಾಸ್ನ ವೀಕೆಂಡ್ ಷೋನಲ್ಲಿ ಕಿಚ್ಚ ಸುದೀಪ್ ಅವರು, ಸ್ನಾನದ ವಿಷಯವನ್ನು ಪ್ರಸ್ತಾಪಿಸಿದ್ದರು. ಬಿಗ್ಬಾಸ್ ಮನೆಯಲ್ಲಿ ತುಂಬಾ ಕೊಳಕು ಇರುವವರು ಯಾರು ಎಂದು ಪ್ರಶ್ನಿಸಿದ್ದಾಗ, ಬಿಗ್ಬಾಸ್ ಸ್ಪರ್ಧಿಗಳಾಗಿದ್ದದ ಸ್ಫೂರ್ತಿ ಗೌಡ ಮತ್ತು ಸಾನ್ಯಾ ಐಯ್ಯರ್ ಬಟ್ಟೆಗಳನ್ನು ಗಲೀಜು ಇಟ್ಟುಕೊಳ್ಳುತ್ತಾರೆ ಎಂದು ಉಳಿದ ಸ್ಪರ್ಧಿಗಳು ಹೇಳಿದ್ದರು.
ರಾ...ರಾ... ಎಂದ ಚೈತ್ರಾ... ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್- ಇನ್ನೊಂದೆರಡು ಕಣ್ಣು ಕೊಡಪ್ಪಾ ಅಂತಿರೋ ಫ್ಯಾನ್ಸ್.
ಆದರೆ, ಅದಕ್ಕಿಂತಲೂ ಹೈಲೈಟ್ ಆಗಿದ್ದು ಸೋನು ಗೌಡ ಅವರ ಸ್ನಾನದ ವಿಚಾರ. ಪ್ರತಿ ದಿನ ಸ್ನಾನ ಮಾಡದೆ ಇರುವ ಸ್ಪರ್ಧಿ ಯಾರು ಎಂದು ಸುದೀಪ್ ಕೇಳಿದಾಗ, ಸ್ಪರ್ಧಿಗಳು ಸೋನು ಗೌಡ ಹೆಸರು ಹೇಳಿಬಿಟ್ಟರು. ಆಗ ಸುದೀಪ್ ಅವರು ಅಚ್ಚರಿಯಿಂದ ಇದು ನಿಜನಾ? ಮನೆಯಲ್ಲೂ ಹೀಗೆ ಮಾಡ್ತೀರಾ ಎಂದು ಕೇಳಿದರು. ಅದಕ್ಕೆ ಸೋನು ಗೌಡ ಯಾವುದೇ ಅಳುಕು ಇಲ್ಲದೇ, ಹೌದು. ಮೂಡ್ ಬಂದಾಗ ಮಾತ್ರ... ಎಂದರು. ಇದನ್ನು ಕೇಳಿ ತುಂಟತನದ ನಗು ಬೀರಿದ್ದ ಸುದೀಪ್, ಅವರು ಸರಿಯಾಗಿ ಹೇಳಿ. ಮೂಡ್ ಬಂದಾಗ ಏನು ಮಾಡ್ತೀರಿ ಎಂದು ಪ್ರಶ್ನಿಸಿದಾಗ, ಮನೆಯಲ್ಲಿದ್ದಾಗ ಮೂಡ್ ಬಂದಾಗ 3 ದಿನಕ್ಕೆ ಒಮ್ಮೆ ಮಾಡ್ತೀನಿ ಎಂದಾಗ ಎಲ್ಲರೂ ಹುಬ್ಬೇರಿಸಿದ್ದರು. ಅದೇ ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಬಿಗ್ಬಾಸ್ನ ಮನೆಯಲ್ಲಿನ ಈ ಕಂತುಗಳನ್ನು ನೋಡದ ಸೋನು ಫ್ಯಾನ್ಸ್ ಇದೀಗ ಈ ವಿಷಯವನ್ನು ಕೇಳಿ ಶಾಕ್ಗೆ ಒಳಗಾಗಿದ್ದಾರೆ.
ಇನ್ನು ಸೋನು ಗೌಡ ಅವರ ಕುರಿತು ಹೇಳುವುದಾದರೆ, ಸೋಷಿಯಲ್ ಮೀಡಿಯಾ ಸ್ಟಾರ್ ಆಗುವ ಮೂಲಕವೇ ಅವರು, ತಮ್ಮ ಹುಟ್ಟೂರಿನಲ್ಲಿ ಊರಿನಲ್ಲಿ ಸ್ವಂತ ಮನೆ ಕಟ್ಟಿಸಿ ಕೆಲ ತಿಂಗಳ ಹಿಂದೆ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸಿಸುತ್ತಿರುವ ಸೋನು ಶ್ರೀನಿವಾಸ್ ಗೌಡ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ತಂದೆ ಊರಿನಲ್ಲಿ ಉಳಿದುಕೊಂಡಿದ್ದ ಮನೆಯನ್ನು ಮರು ನಿರ್ಮಾಣ ಮಾಡಿ ಅದರಲ್ಲಿ ಸೊಬಗು ಉಳಿಸಿಕೊಂಡಿದ್ದಾರೆ. ಇದರ ವಿಶೇಷತೆ ಬಗ್ಗೆ ಹೇಳಿದ್ದ ಸೋನು, ಇದೊಂದು ಕಂಬದ ಮನೆ ಆಗಿದ್ದು ಸುಮಾರು 15 ಕಂಬಗಳನ್ನು ಹಾಗೆ ಉಳಿಸಿಕೊಂಡು ಮನೆ ವಿನ್ಯಾಸ ಮಾಡಲಾಗಿದೆ. ಮನೆ ಎಷ್ಟೇ ಮಾಡರ್ನ್ ಆಗಿದ್ದರೂ ಹಾಲ್‌ನಲ್ಲಿ ಕಂಬಗಳು ಬಿಗ್ ಹೈಲೈಟ್ ಎಂದಿದ್ದರು. ಇತ್ತೀಚೆಗೆ ಗೋವಾ ಕ್ಯಾಸಿನೋದಲ್ಲಿ ಒಂದೂವರೆ ಲಕ್ಷ ರೂಪಾಯಿ ಕಳೆದುಕೊಂಡಿರುವ ಬಗ್ಗೆಯೂ ತಿಳಿಸಿದ್ದರು.
ಬೀದಿಗೆ ಬಂದ ಡ್ರೋನ್ ಪ್ರತಾಪ್- ಎಲ್ಲವೂ ತಾಳಿ ಕಟ್ಟಿರೋ ಗಗನಾಗೋಸ್ಕರ! ಫ್ಯಾನ್ಸ್ ಶಾಕ್- ಅಷ್ಟಕ್ಕೂ ಆಗಿದ್ದೇನು?