ಕಿರುತೆರೆ ನಟಿ ಮೇಘಶ್ರೀ ದಾಂಪತ್ಯ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳು ಕಳೆದಿದೆ. ಕೇಕ್ ಕತ್ತರಿಸಿ ಆನಿವರ್ಸರಿ ಸಂಭ್ರಮಿಸಿದ್ದಾರೆ ನಟಿ.
ಕಿರುತೆರೆ ನಟಿ ಮೇಘಶ್ರೀ (Television actress Meghashree) ಮದುವೆಯಾಗಿ ಒಂದು ತಿಂಗಳು ಕಳೆದಿದೆ. ಈ ಖುಷಿಯನ್ನು ಮೇಘಶ್ರೀ ಗೌಡ ತಮ್ಮ ಪತಿ ಜೊತೆ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಾಚರಣೆ ವಿಡಿಯೋವನ್ನು ಮೇಘಶ್ರೀ ಗೌಡ ಹಂಚಿಕೊಂಡಿದ್ದಾರೆ. ಬಿಳಿ ಡ್ರೆಸ್ ಧರಿಸಿ ಹೂಗಳ ಮೇಲೆ ನಡೆದು ಬರುವ ಮೇಘಶ್ರೀಗೆ ಅವರ ಪತಿ ಪುರಂದರ ಸರ್ಪ್ರೈಸ್ ನೀಡಿದ್ದಾರೆ. ಕಣ್ಣು ಕಟ್ಟಿ, ಅವರ ಕೈ ಹಿಡಿದು ಬರುವ ಪುರು, ಕಣ್ಣಿಗೆ ಕಟ್ಟಿದ್ದ ಪಟ್ಟಿ ತೆಗೆಯುತ್ತಿದ್ದಂತೆ ಮೇಘಶ್ರೀ ಖುಷಿಯಾಗ್ತಾರೆ. ಕೇಕ್ ನೋಡಿ ಸಂಭ್ರಮಿಸುವ ಅವರು, ಪತಿ ಜೊತೆ ಕೇಕ್ ಕತ್ತರಿಸಿ ಒಂದು ತಿಂಗಳ ಆನಿವರ್ಸರಿ (one month anniversary)ಯನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಈ ಸುಂದರ ವಿಡಿಯೋ ಹಂಚಿಕೊಂಡಿರುವ ಮೇಘಶ್ರೀ ಒಂದು ತಿಂಗಳ ಆನಿವರ್ಸರಿ ಶುಭಾಶಯಗಳು ಪೂ. ಫ್ರೆಂಡು ಈಗ ಗಂಡನಾಗಿದ್ದಾನೆ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ವ್ಯಕ್ತಪಡಿಸಲು ಸಾಧ್ಯವಿಲ್ಲ. ನಿನ್ನ ಜೀವನ ಸಂಗಾತಿಯಾಗಿ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು, ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು. ನೀನು ಅತ್ಯುತ್ತಮ ಮತ್ತು ಏನೇ ಇರಲಿ ನಾನು ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ ಎಂದು ಶೀರ್ಷಿಕೆ ಹಾಕಿದ್ದಾರೆ. ಮೇಘಶ್ರೀ ಈ ಪೋಸ್ಟ್ ಗೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಸ್ ಬಂದಿದೆ. ಯಾವಾಗ್ಲೂ ಖುಷಿಯಾಗಿರಿ, ನಗ್ತಾ ಇರಿ ಎಂದು ಬಳಕೆದಾರರು ನವ ಜೋಡಿಯನ್ನು ಆಶೀರ್ವದಿಸಿದ್ದಾರೆ. ಜೊತೆಗೆ ಮದುವೆಯಾಗಿ ಒಂದು ವರ್ಷಕ್ಕೆ ಆನಿವರ್ಸರಿ ಆಗೋದು, ತಿಂಗಳಿಗೆ ಅಲ್ಲ. ಇದ್ರ ಬಗ್ಗೆ ಜ್ಞಾನ ಇರಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಪುಟ್ಟ ಮಗಳ ಮುಂದೆ ಮೊಬೈಲ್ ನೋಡಿದ ಬಿಗ್ ಬಾಸ್ ಧನರಾಜ್ ಆಚಾರ್; ಸೌಟು ಹಿಡಿದು ಬಂದ
ಹಿಂದಿನ ತಿಂಗಳು ಫೆಬ್ರವರಿ 23ರಂದು ನಟಿ ಮೇಘಶ್ರೀ ಮದುವೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದೆ. ಮೇಘಶ್ರೀ ಕುಂದಾಪುರ ಮೂಲಕ ಪುರಂದರ ಎಂಬುವವರ ಕೈ ಹಿಡಿದಿದ್ದಾರೆ. ಹೊಸ ವರ್ಷದ ಮೊದಲ ದಿನವೇ ಮೇಘಶ್ರೀ ನಿಶ್ಚಿತಾರ್ಥ ಮಾಡಿಕೊಂಡು ತಾವು ಮದುವೆ ಆಗ್ತಿರುವುದಾಗಿ ಹೇಳಿದ್ದರು. ಹುಡುಗನ ಫೋಟೋ ಕೂಡ ಹಂಚಿಕೊಂಡಿದ್ದರು. ಆದ್ರೆ ಅದ್ರಲ್ಲಿ ಮದುವೆಯಾಗುವ ಹುಡುಗನ ಮುಖ ತೋರಿಸಿರಲಿಲ್ಲ.
ಹಿಂದಿನ ತಿಂಗಳು ಅವರು ಪುರಂದರನ ಕೈ ಹಿಡಿದಿದ್ದಾರೆ. ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದು, ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಮೇಘಶ್ರೀ ಮದುವೆ ಫೋಟೋಗಳು ಸಾಕಷ್ಟು ಓಡಾಡಿವೆ. ಗೆಳೆಯನ ಕೈ ಹಿಡಿದ ಮೇಘಶ್ರೀ ಖುಷಿಯಾಗಿದ್ದಾರೆ. ಅವರ ಮದುವೆ ಕಾರ್ಯಕ್ರಮದಲ್ಲಿ ಕಿರುತೆರೆಯ ಅನೇಕ ಕಲಾವಿದರು ಪಾಲ್ಗೊಂಡಿದ್ದರು. ಮೆಹಂದಿ, ಅರಿಶಿನ ಸೇರಿದಂತೆ ಎಲ್ಲ ಸಮಾರಂಭದ ಫೋಟೋ, ವಿಡಿಯೋ ಹಂಚಿಕೊಂಡಿದ್ದ ಮೇಘಶ್ರೀಗೆ ಶುಭಾಶಯಗಳ ಸುರಿಮಳೆಯಾಗಿತ್ತು.
ರಾ...ರಾ... ಎಂದ ಚೈತ್ರಾ... ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್- ಇನ್ನೊಂದೆರಡು ಕಣ್ಣು ಕೊಡಪ್ಪಾ ಅಂತಿರೋ ಫ್ಯಾನ್ಸ್.
ಮೇಘಶ್ರೀ ಮೂಲತಃ ಮಂಡ್ಯದವರು. ಅವರೀಗ ಕುಂದಾಪುರ ಸೊಸೆಯಾಗಿದ್ದಾರೆ. ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದವರು ಮೇಘಶ್ರೀ. ಡಂಗುರ ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಮೇಘಶ್ರೀ ನಂತ್ರ ಸೀರಿಯಲ್ ಗಳಲ್ಲಿ ಮಿಂಚಿದ್ದಾರೆ. ವಿಲನ್ ಪಾತ್ರಗಳಲ್ಲಿ ಮೇಘಶ್ರೀ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ನಿನ್ನ ಜೊತೆ ನನ್ನ ಕಥೆ, ನೀನಾದೆನಾ, ಪುಣ್ಯವತಿ, ಚರಣದಾಸಿ, ಮಯೂರಿ, ಮಧುಬಾಲಾ, ಜೀವನ ಚೈತ್ರಾ, ಸತ್ಯ ಸೇರಿದಂತೆ ಅನೇಕ ಸೀರಿಯಲ್ ನಲ್ಲಿ ನಟಿಸಿರುವ ಮೇಘಶ್ರೀ, ಮುಗುಳು ನಗೆ, ಬ್ಯೂಟಿಫುಲ್ ಮನಸ್ಸುಗಳು, ಕಡ್ಡಿಪುಡಿ , ಪಂಟ್ರು, ಮುಗಿಲ್ ಪೇಟೆ ಸೇರಿದಂತೆ ಕೆಲ ಸಿನಿಮಾಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಮೇಘಶ್ರೀ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿದ್ದಾರೆ. ಅವರು ಎಂಗೇಜ್ಮೆಂಟ್, ಬ್ಯಾಚ್ಯುಲರ್ ಪಾರ್ಟಿ, ರಿಟರ್ನ್ ಗಿಫ್ಟ್ ಆಯ್ಕೆ ಸೇರಿದಂತೆ ತಮ್ಮ ಮದುವೆಯ ಅನೇಕ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ತಮ್ಮದೇ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ ಮೇಘಶ್ರೀ.