ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಕೊನೆಗೂ ಕಂಠಿ ಮದುವೆ ಆಗೋಕೆ ಒಪ್ಪಿಗೆ ಕೊಟ್ಟಿದ್ದಾನೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಕಂಠಿ ಕೊನೆಗೂ ಮದುವೆಗೆ ಒಪ್ಪಿದ್ದಾನೆ. ಪ್ರೀತಿಸಿ ಮದುವೆಯಾಗಿದ್ದ ಸ್ನೇಹಾ ಸತ್ತುಹೋದಳು. ಇಷ್ಟುದಿನಗಳಿಂದ ಸ್ನೇಹಾಳ ನೆನಪಿನಲ್ಲಿಯೇ ಕಂಠಿ ದಿನ ಕಳೆಯುತ್ತಿದ್ದನು. ಕಂಠಿಗೆ ಮತ್ತೆ ಮದುವೆ ಮಾಡಬೇಕು ಅಂತ ಬಂಗಾರಮ್ಮ, ಪುಟ್ಟಕ್ಕ ಎಲ್ಲರೂ ಪಣ ತೊಟ್ಟಿದ್ದರು.
ಲವ್ ಮ್ಯಾರೇಜ್ ಮಾಡಿಕೊಂಡಿದ್ದ ಕಂಠಿ!
ಪುಟ್ಟಕ್ಕನ ಎರಡನೇ ಮಗಳು ಸ್ನೇಹಾಳನ್ನು ಕಂಠಿ ಪ್ರೀತಿಸಿ ಮದುವೆಯಾಗಿದ್ದನು. ಅದಾದ ನಂತರದಲ್ಲಿ ಸಿಂಗಾರಮ್ಮ ಎನ್ನುವವಳು ಸ್ನೇಹಾಳನ್ನು ಆಕ್ಸಿಡೆಂಟ್ ಮಾಡಿ ಕೊಂದಿದ್ದಾಳೆ. ಈಗ ಕಂಠಿ ಮದುವೆ ಆಗೋಕೆ ಒಪ್ಪಿದ್ದಾನೆ. ಸ್ನೇಹಾ ಹೃದಯ ಇನ್ನೂ ಜೀವಂತವಾಗಿದೆ, ಸ್ನೇಹಾ ಹೃದಯವನ್ನು ಗಂಗಾಧರ್ ಮಗಳು ಸ್ನೇಹಾಗೆ ಹಾಕಲಾಗಿದೆ. ಅಂದು ಗಂಗಾಧರ್ ಮಗಳನ್ನು ಉಳಿಸಿಕೊಳ್ಳಲು ಹೋಗಿದ್ದ ಕಂಠಿ ತನ್ನ ಪತ್ನಿಯನ್ನು ಕಳೆದುಕೊಂಡಿದ್ದನು.
ಮತ್ತೆ ಬದಲಾದಳು ಸ್ನೇಹಾ; ಬಂದಳು ರಾಮಾಚಾರಿ ರುಕ್ಕು! ಕಂಠಿ ಗತಿ ನೆನೆಸಿಕೊಂಡು ಕಣ್ಣೀರಿಡ್ತೋ ಫ್ಯಾನ್ಸ್
ಪುಟ್ಟಕ್ಕಳಿಗೆ ಗುಡ್‌ನ್ಯೂಸ್ ಕೊಟ್ಟ ಕಂಠಿ!
ಕಂಠಿಗೆ ಗಂಗಾಧರ್ ಮಗಳನ್ನು ಕಂಡರೆ ಆಗುತ್ತಿರಲಿಲ್ಲ. ಅವಳು ಸಿಕ್ಕಾಗೆಲ್ಲ ಬೈಯ್ಯುತ್ತಿದ್ದನು. ಇನ್ನೊಂದು ಕಡೆ ಗಂಗಾಧರ್ ಮಗಳು ಕೂಡ ಸ್ನೇಹಾ ಎನ್ನೋದು ವಿಪರ್ಯಾಸ. ಈಗ ಕಂಠಿ ಮದುವೆ ಆಗೋಕೆ ಒಪ್ಪಿದ್ದಾನೆ. ಮದುವೆ ಆಗುವ ಖುಷಿಯಲ್ಲಿರುವ ಅವನು ಈ ವಿಷಯವನ್ನು ಪುಟ್ಟಕ್ಕಳಿಗೂ ಹೇಳಿದ್ದಾನೆ. ಈ ವಿಷಯ ಕೇಳಿ ಪುಟ್ಟಕ್ಕ ಫುಲ್ ಖುಷಿಯಾಗಿದ್ದಾಳೆ. ಇಡೀ ದಿನ ಮೆಸ್‌ಗೆ ಬರೋರಿಗೆ ಸ್ವೀಟ್ ಹಂಚುವೆ ಎಂದು ಅವಳು ಹೇಳಿದ್ದಾಳೆ.
ಹಚ್ಚೆ ಹಾಕಿಸೋ ಹೆಂಗಸು ಹೇಳಿದ್ದೇನು?
ಹಚ್ಚೆ ಹಾಕಿಸೋ ಹೆಂಗಸು, ಕಂಠಿ ಬಳಿ ಬಂದು, “ನಿನಗೆ ಮತ್ತೆ ಮದುವೆ ಆಗುತ್ತದೆ. ನಿನ್ನ ಪತ್ನಿ ಜೀವ ಇನ್ನೂ ಭೂಮಿ ಮೇಲಿದೆ. ನೀವಿಬ್ಬರೂ ಒಂದಾಗ್ತೀರಿ” ಅಂತ ಹೇಳಿದ್ದಳು. ಈ ಮಾತು ಕೇಳಿ ಅವಳಿಗೂ ಖುಷಿ ಆಗಿದೆ.
900 ಸಂಚಿಕೆ ಮುಗಿಸಿದ ಪುಟ್ಟಕ್ಕನ ಮಕ್ಕಳು! ಸಾವಿನ ಹೊಡೆತಕ್ಕೆ ತತ್ತರಿಸಿದ ಸೀರಿಯಲ್- ಮುಂದೇನು?
ಗೊಂದಲಕ್ಕೀಡಾದ ಸ್ನೇಹಾ!
ಗಂಗಾಧರ್ ಮಗಳು ಸ್ನೇಹಾಗೆ ನನ್ನ ಪತ್ನಿಯ ಹೃದಯ ಹಾಕಿದ್ದಾರೆ ಅಂತ ಕಂಠಿಗೆ ಗೊತ್ತಾಗಿ, ಅವನ ಬಿಹೇವಿಯರ್ ಚೇಂಜ್ ಆಗಿದೆ. ಕಂಠಿ ಯಾಕೆ ಹೀಗೆ ಮಾಡ್ತಿದ್ದಾನೆ ಅಂತ ಗಂಗಾಧರ್ ಮಗಳು ಗೊಂದಲಕ್ಕೀಡಾಗಿದ್ದಾಳೆ.
ಕಥೆ ಏನು?
ಪುಟ್ಟಕ್ಕಳ ಮೂವರು ಹೆಣ್ಣು ಮಕ್ಕಳ ಕಥೆ ಇಲ್ಲಿದೆ.
ಪಾತ್ರಗಳು
ಪುಟ್ಟಕ್ಕ-ನಟಿ ಉಮಾಶ್ರೀ
ಕಂಠಿ-ನಟ ಧನುಷ್ ಎನ್ ಎಸ್
ಸ್ನೇಹಾ ನಟಿ -ಸಂಜನಾ ಬುರ್ಲಿ
ರಾಧಾ-ನಟಿ ರಮ್ಯಾ ರಾಜು
ಸುಮಾ-ನಟಿ ಶಿಲ್ಪಾ
ಹೊಸ ಸ್ನೇಹಾ-ನಟಿ ಅಪೂರ್ವ ನಾಗರಾಜ್