ತುಂಡುಡುಗೆ ತೊಟ್ಟು ಐಸ್ ತಿಂದು ಹೊಗೆ ಬಿಟ್ಟ Niveditha Gowda; ಹಸು ನೋಡಿ ರನ್!

By Vaishnavi Chandrashekar  |  First Published Sep 20, 2022, 3:37 PM IST

ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ. ವೆರೈಟಿ ಟ್ರೈ ಮಾಡಿ ಎಂದ ನೆಟ್ಟಿಗರು...


ಗಿಚ್ಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋ ರನ್ನರ್‌ ಅಪ್‌ ಟ್ರೋಫಿ ಪಡೆದ ನಂತರ ನಿವೇದಿತಾ ಗೌಡ ಒಂದು ದಿನಗಳು ಕಾಲ ಆನ್‌ಸ್ಕ್ರೀನ್‌ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹೀಗಾಗಿ ವಿಭಿನ್ನ ವಿಡಿಯೋಗಳನ್ನು ಮಾಡುವ ಮೂಲಕ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಏನು ಬೆಂಗಳೂರಿನಲ್ಲಿ ಇದ್ದು ವಿವಿ ಪುರಂ ಫುಡ್‌ ಸ್ಕ್ರೀಟ್‌ಗೆ ಹೋಗಿಲ್ವಾ? ಎಂದು ಪದೇ ಪದೇ ನಿವಿಗೆ ಪ್ರಶ್ನೆ ಮಾಡುತ್ತಿದ್ದವರಿಗೆ ಈ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ.

ಯೂಟ್ಯೂಬ್‌ ಟೀಂ ಜೊತೆ ವಿವಿ ಪುರಂ ಫುಡ್‌ ಸ್ಟ್ರೀಟ್‌ಗೆ ಭೇಟಿ ಕೊಟ್ಟ ನಿವಿ ಅಭಿಮಾನಿಗಳ ಜೊತೆ ನಿಂತು ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೆ ಹೀಲ್ಸ್‌ ಧರಿಸಿ ಒಂದು ರಸ್ತೆ ನಡೆಯುವುದಕ್ಕೆ ಕಷ್ಟ ಪಡುತ್ತಿರುವುದನ್ನು ನೋಡಿ ನೆಟ್ಟಿಗರು ಹಾಸ್ಯ ಮಾಡಿದ್ದಾರೆ. ನಿವಿ ಏನೆಲ್ಲಾ ತಿಂದಿದ್ದಾರೆ? ಹೇಗಿತ್ತು....

Tap to resize

Latest Videos

'ಫಸ್ಟ್‌ ಟೈಂ ನಾನು ಫುಡ್‌ ಸ್ಕ್ರೀಟ್‌ಗೆ ಬರುತ್ತಿರುವುದು ನೋಡಲು ಎಲ್ಲವೂ ಡಿಫರೆಂಟ್ ಆಗಿದೆ. ನಾನಂತೂ ವಿವಿ ಪುರಂನಲ್ಲಿ ತಿಂದಿಲ್ಲ ಅಂತ ಹೇಳಿದಾಗ ಅವರು ಶಾಕ್ ಆಗಿ ಯಾವತ್ತೂ ಹೋಗಿಲ್ವಾ ಅಂತ ಹಾಸ್ಯ ಮಾಡಿದ್ದರು. ಈ ವಿಡಿಯೋ ಮೂಲಕ ನಾನು ಇಲ್ಲಿ ಏನೆಲ್ಲಾ ಮಾಡಿದ್ದೀನಿ ಅಂತ ತೋರಿಸುವೆ. ನನಗೆ ಮೊದಲು ಕಾಣಿಸುತ್ತಿರುವುದು ಗೊಲಿ ಸೋಡ ಅದೇನು ಅದು ನೋಡಿದ ತಕ್ಷಣ ನನಗೆ ಕುಡಿಬೇಕು ಅನಿಸುವುದಿಲ್ಲ  ಮತ್ತೊಂದು ದಿನ ಟ್ರೈ ಮಾಡೋಣ' ಎಂದು ನಿವಿ ವಿಡಿಯೋ ಆರಂಭಿಸಿದ್ದಾರೆ.

ಸೀದೋಗಿರೋ ಚಿಕನ್‌: Niveditha Gowda ಅಡುಗೆ ನೋಡಿ ತಲೆ ಸುತ್ತಿಬಿದ್ದ ಪತಿ ಚಂದನ್ ಶೆಟ್ಟಿ?

ಪಾನಿ ಪೂರಿ ನೋಡಿ ಬಾಯಲ್ಲಿ ನೀರು ಸುರಿಸಿದ್ದಾರೆ. 'ನನಗೆ ಪಾನಿಪೂರಿ ಅಂದ್ರೆ ತುಂಬಾನೇ ಇಷ್ಟ' ಎಂದು ಹೇಳಿ ಆದಷ್ಟು ಖಾರ ಖಾರ ಬೇಕು ಎಂದು ಹೇಳಿ ಕೇಳಿ ಮಾಡಿಸಿಕೊಂಡು ತಿಂದಿದ್ದಾರೆ. ಫುಡ್ ಸ್ಕ್ರೀಟ್ ರೋಡ್‌ಗಳು ಸೂಪರ್ ಆಗಿರುತ್ತೆ ಅಂತ ಹೀಲ್ಸ್‌ ಧರಿಸಿ ನಡೆಯಲು ಕಷ್ಟ ಪಟ್ಟಿದ್ದಾರೆ. 'ನನಗೆ potato twister ಅಂದ್ರೆ ತುಂಬಾ ಇಷ್ಟ ಇಲ್ಲಿಗೆ ಬಂದಾಗಿನಿಂದ ನನ್ನ ಕಣ್ಣು ಆಲೂಗಡ್ಡೆ ಮೇಲೆ ಹೋಗುತ್ತಿದೆ. 25ರಿಂದ 30 ರೀತಿ ಚಾಟ್ಸ್‌ ಇದೆ ಆದರೆ ನಾನು ತಿನ್ನುವುದು 4 ಅಷ್ಟೆ.  potato twisterನಲ್ಲಿ ಎಣ್ಣಿ ಜಾಸ್ತಿ ಇರತ್ತೆ ಆದರೂ ಪರ್ವಾಗಿಲ್ಲ ರುಚಿ ಇರುತ್ತೆ' ಎಂದು ನಿವಿ ಹೇಳಿದ್ದಾರೆ. 

ಡಿಫರೆಂಟ್ ಆಗಿ ಪ್ರಯತ್ನ ಮಾಡಬೇಕು ಎಂದು ಜಿಲೇಬಿ ಚಾಟ್ಸ್‌ ತೆಗೆದುಕೊಂಡು ಶಾಕ್ ಆಗಿದ್ದಾರೆ. 'ನನಗೆ ಸ್ವೀಟ್ ಆಂಡ್ ಖಾರ ಇಷ್ಟ ಆಗುವುದಿಲ್ಲ ನೋಡಲು ಡಿಫರೆಂಟ್ ಆಗಿದೆ ಆದರೆ ಉಳಿದಿರುವ ಜಿಲೇಬಿಯನ್ನು ಚಾಟ್ಸ್‌ ಜೊತೆ ಮಿಸ್ಕ್‌ ಮಾಡಿಕೊಟ್ಟಿದ್ದಾರೆ. ತುಂಬಾ ಸ್ವೀಟ್ ಇದೆ. ಯಾರಿಗೆ ಸ್ವೀಟ್ ಇಷ್ಟ ಅವರು ಇದನ್ನು ತಿನ್ನಬಹುದು' ಎನ್ನುತ್ತಾ ಸ್ಮೋಕ್ ಐಸ್‌ ತಿಂದಿದ್ದಾರೆ. ಐಸ್ ತಿನ್ನುವಾಗ ಬಾಯಿಂದ ಹೊಗೆ ಬರ ಬರುತ್ತದೆ. ಕ್ಯಾಮೆರಾ ನೋಡಿ ಸ್ಕೋಕ್ ಮಾಡುತ್ತಿರುವ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.

ಫ್ಯಾಮಿಲಿ ಪ್ಲಾನಿಂಗ್, ಸಂಬಳ ಮತ್ತು ಚಂದನ್ ಎಲ್ಲಿ? ಟ್ರೋಲಿಗರಿಗೆ ಉತ್ತರ ಕೊಟ್ಟ Niveditha Gowda

ಸ್ವಲ್ಪ ಸ್ವಲ್ಪ ರುಚಿ ನೋಡಿ ಬಂದ ನಿವಿ ವಿವಿ ಪುರಂನ ದುಬಾಯಿ ಐಸ್‌ ಕ್ರೀಂ ರುಚಿ ನೋಡಿದ್ದಾರೆ. 500 ರೂಪಾಯಿ ಬೆಲೆಯ ಗುಲ್ಕನ್ ಐಸ್‌ ಕ್ರೀಂ ಹೇಗಿರುತ್ತೆ ಎಂದು ತಿಂದು ಹೇಳಿದ್ದಾರೆ. '500 ರೂಪಾಯಿ ಐಸ್‌ ಕ್ರೀಂ ಈಗ 200 ರೂಪಾಯಿ ಆಗಿದೆ. ಇದರಲ್ಲಿ ಎಲ್ಲ ರೀತಿಯ ಡ್ರೈ ಫ್ರೂಟ್ಸ್‌ ಇರುತ್ತೆ.ತಿನ್ನಲು ಮಜಾವಾಗಿದೆ. ವಿವಿ ಪುರಂ ಫುಡ್‌ ಸ್ಕ್ರೀಟ್‌ಗೆ ಬಂದು ತುಂಬಾ ಖುಷಿಯಾಗಿದೆ. ಇಷ್ಟೊಂದು ಅಂಗಡಿ ಇದೆ ಅಂತ ಗೊತ್ತಿರಲಿಲ್ಲ ಮೊದಲ ಸಲ ಇಲ್ಲಿಗೆ ಬಂದಿರುವ ಕಾರಣ ಏನೋ ನಾರ್ಮಲ್ ಆಗಿರುತ್ತೆ ಅಂದುಕೊಂಡೆ ಆದರೆ ಸಿಕ್ಕಾಪಟ್ಟೆ ಚೆನ್ನಾಗಿದೆ ಸಿಕ್ಕಾಪಟ್ಟೆ ವೆರೈಟಿ ಇದೆ. ಮತ್ತೆ ಮತ್ತೆ ಈ ಜಾಗಕ್ಕೆ ಬರುವೆ ಆಗ ಚಂದನ್‌ನ ಕರೆದುಕೊಂಡು ಬರುವೆ' ಎಂದಿದ್ದಾರೆ ನಿವಿ. 

 

click me!