ವೀಕ್ಷಕರ ಮನ ಗೆದ್ದ 'ಹೊಂಗನಸು' ನಾಯಕಿ ರಕ್ಷಾ ಗೌಡ! ಈ ಸೀರಿಯಲ್ ಸಖತ್ ಪಾಪ್ಯುಲರ್

Published : Sep 19, 2022, 02:51 PM IST
ವೀಕ್ಷಕರ ಮನ ಗೆದ್ದ 'ಹೊಂಗನಸು' ನಾಯಕಿ ರಕ್ಷಾ ಗೌಡ! ಈ ಸೀರಿಯಲ್ ಸಖತ್ ಪಾಪ್ಯುಲರ್

ಸಾರಾಂಶ

ಸ್ಟಾರ್ ಸುವರ್ಣದಲ್ಲಿ 'ಹೊಂಗನಸು' ಅನ್ನೋ ಸೀರಿಯಲ್ ಬರ್ತಿದೆ. ಇದು ತೆಲುಗು ಸೀರಿಯಲ್‌ನ ಕನ್ನಡ ರೂಪ. ಇದರಲ್ಲೊಂದು ವಿಶೇಷತೆ ಇದೆ. ಈ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಹೆಚ್ಚಾಗಿ ಕನ್ನಡದ ಹೆಣ್ಣು ಮಕ್ಕಳೇ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ದುಂಡು ಮುಖದ ಚೆಲುವೆ ರಕ್ಷಾ ಗೌಡ ನಟಿಸಿದ್ದಾರೆ. ಈ ಸೀರಿಯಲ್ ಈಗ ಜನರ ಮನಸ್ಸು ಗೆದ್ದು ಸಕ್ಸಸ್ ಫುಲ್ ಆಗಿ ಮುಂದುವರಿಯುತ್ತಿದೆ. ಹಾಗೆ ನೋಡಿದರೆ ತೆಲುಗಿನಲ್ಲಿ ಕನ್ನಡ ಹುಡುಗೀರ ದೊಡ್ಡ ದಂಡೇ ಇದೆ.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್ 'ಹೊಂಗನಸು' ಪ್ರೀತಿ ವಿರಹದ ನೆರಳು ಬೆಳಕಿನಾಟ. ಇದು ತೆಲುಗಿನ ಜನಪ್ರಿಯ ಧಾರಾವಾಹಿ 'ಗೊಪ್ಪದಂತಾ ಮನಸು' ಸೀರಿಯಲ್‌ನ ಕನ್ನಡ ರೂಪ. ಅಂದರೆ ತೆಲುಗಿನ ಸೀರಿಯಲ್‌ ಅನ್ನೇ ಕನ್ನಡಕ್ಕೆ ಡಬ್ ಮಾಡಿದ್ದಾರೆ. ಈ ಸೀರಿಯಲ್ ತೆಲುಗಿನಲ್ಲಿ ಎಷ್ಟು ಫೇಮಸ್ಸೋ ಕನ್ನಡದಲ್ಲೂ ಅಷ್ಟೇ ಜನಪ್ರಿಯ. ಇದಕ್ಕೆ ಮುಖ್ಯ ಕಾರಣ ಇದರ ಕಥೆ. ರೊಮ್ಯಾಂಟಿಕ್ ಕಾಮಿಡಿ ಸೀರಿಯಲ್‌ನಲ್ಲಿ ರಿಷಿ ಮತ್ತು ವಸು ನಡುವಿನ ಕಚಗುಳಿ ಇಡುವ ಪ್ರೀತಿ, ಇಬ್ಬರ ನಡುವಿನ ಮಿಸ್ ಅಂಡರ್‌ಸ್ಟ್ಯಾಂಡಿಗ್ಸ್, ನಡು ನಡುವಿನ ಕೋಪ, ಹುಸಿ ಮುನಿಸು, ಬೇಸರ, ಪ್ರೀತಿ ಎಲ್ಲವನ್ನೂ ಈ ಸೀರಿಯಲ್ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದೆ. ಹೀಗಾಗಿ ಈ ಸೀರಿಯಲ್‌ಗೆ ಫ್ಯಾನ್ ಫಾಲೋವಿಂಗ್ ಹೆಚ್ಚಿದೆ. ಇದೊಂದು ಕಾಲೇಜ್ ಲವ್ ಸ್ಟೋರಿಯೂ ಆಗಿರೋ ಕಾರಣ ಇದಕ್ಕೆ ಯಂಗ್ ವ್ಯೂವರ್ಸ್ ಸಂಖ್ಯೆ ಹೆಚ್ಚಿದೆ. ಕಾಲೇಜ್, ಉದ್ಯೋಗಿಗಳ ಮನಸ್ಸಿಗೆ ಹತ್ತಿರವಾದ ಸೀರಿಯಲ್ ಇದು. ಗೃಹಿಣಿಯರೂ ಈ ಸೀರಿಯಲ್‌ನ ಎನ್ ಜಾಯ್ ಮಾಡ್ತಿದ್ದಾರೆ.

ಈ ಸೀರಿಯಲ್ ನಲ್ಲಿ ವಸು ಪಾತ್ರದ ಮೂಲಕ ಮಿಂಚುತ್ತಿರುವ ಬೆಡಗಿ ರಕ್ಷಾ ಗೌಡ. ಈಕೆ ಅಪ್ಪಟ ಕನ್ನಡದ ಹುಡುಗಿ. ಕನ್ನಡದ ಒಂದಿಷ್ಟು ಸೀರಿಯಲ್‌ಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಸೀರಿಯಲ್‌ ಕ್ಷೇತ್ರಕ್ಕೆ ಬರ್ತೀನಿ ಅಂತೇನೂ ಅಂದುಕೊಳ್ಳದ ರಕ್ಷಾ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ಕನ್ನಡದ ಜನಪ್ರಿಯ ಸೀರಿಯಲ್ 'ರಾಧಾರಮಣ' ದಿಂದ ಆಫರ್ ಬಂತು. ಅಷ್ಟಕ್ಕೂ ಈ ಹುಡುಗಿಯೇನೂ ತನಗೆ ಅವಕಾಶ ಕೊಡಿ ಅಂತ ಹೋಗಿ ಸೀರಿಯಲ್ ಟೀಮ್‌ಗೆ ಆಡಿಶನ್ ಕೊಟ್ಟಿಲ್ಲ. ಬದಲಾಗಿ ಈಕೆಯ ಸ್ನೇಹಿತರ್ಯಾರೋ ರಕ್ಷಾ ಫೋಟೋವನ್ನು ಸೀರಿಯಲ್ ಟೀಮ್‌ನವರಿಗೆ ತೋರಿಸಿದ್ರು.

 

ಈಕೆಯ ಮುದ್ದು ಮುಖ ನೋಡಿ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕೇ ಬಿಡ್ತು. ಈ ಸೀರಿಯಲ್‌ನ ಅನ್ವಿತಾ ಪಾತ್ರ ರಕ್ಷಾಗೆ ಹೆಸರು ತಂದುಕೊಟ್ಟಿತು. ರಾಧಾರಮಣ ಸೀರಿಯಲ್ ನಿಂತ ಮೇಲೂ ಜನ ಈ ಅನ್ವಿತಾ ಪಾತ್ರದ ಬಗ್ಗೆ ಮಾತಾಡ್ತಿದ್ರು. ಇದಾಗಿ 'ಪುಟ್ಮಲ್ಲಿ' ಅನ್ನೋ ಸೀರಿಯಲ್‌ನಲ್ಲೂ ರಕ್ಷಾ ನಟಿಸ್ತಾರೆ.

Kaun Banega Crorepati 7.5 ಕೋಟಿ ರೂ. ಪ್ರಶ್ನೆ ಎದುರಿಸಿದ ಮೊದಲ ಮಹಿಳೆ ಈಕೆ!

ರಕ್ಷಾ ಈಗ ತೆಲುಗು ಸೀರಿಯಲ್‌ಗಳ ಟಾಪ್ ನಾಯಕಿ(Top Heroine)ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕೋವಿಡ್‌ಗೂ ಮೊದಲು 'ಕೃಷ್ಣ ವೇಣಿ' ಅನ್ನೋ ಸೀರಿಯಲ್‌ ಮೂಲಕ ಈ ಹುಡುಗಿ ತೆಲುಗು ಸೀರಿಯಲ್ ಇಂಡಸ್ಟ್ರಿ(Industry) ಯತ್ತ ಜರ್ನಿ ಶುರು ಮಾಡ್ತಾರೆ. ಸದ್ಯಕ್ಕೆ ರಕ್ಷಾ ಸಖತ್ ಪಾಪ್ಯುಲರ್ ಆಗಿರೋದು 'ಗುಪ್ಪೆದಂತ ಮನಸು' ಸೀರಿಯಲ್‌ನ ವಸು ಪಾತ್ರದ ಮೂಲಕ. ಇದೇ ಸೀರಿಯಲ್ 'ಹೊಂಗನಸು' ಅನ್ನೋ ಟೈಟಲ್‌ನಲ್ಲಿ ಸ್ಟಾರ್ ಸುವರ್ಣದಲ್ಲಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಬೆಂಗಳೂರು ಹುಡುಗಿ ರಕ್ಷಾಗೆ ಒಬ್ಬ ತಮ್ಮನೂ ಇದ್ದಾರೆ.ಇವರು ಒಂದಿಷ್ಟು ಸಿನಿಮಾಗಳಲ್ಲೂ ನಟಿಸಿದ್ದಾರೆ.

Gicchi Giligili Winner ಕಿರೀಟ ಗೆದ್ದ ವಂಶಿಕಾ, ಎರಡನೇ ಸ್ಥಾನಕ್ಕೆ ನಿವೇದಿತಾ ಗೌಡ!

'ನೀವು ಕನ್ನಡ ಸೀರಿಯಲ್‌ಗಳಲ್ಲೇ ನಟಿಸಬಹುದಲ್ವಾ?' ಅಂದರೆ, 'ಅಲ್ಲಿ ಸಂಭಾವನೆ ಹೆಚ್ಚು ಅನ್ನೋದು ಬಿಟ್ಟರೆ ಅಲ್ಲಿಗೂ ಇಲ್ಲಿಗೂ ಅಂಥಾ ವ್ಯತ್ಯಾಸ ಇಲ್ಲ. ಅಲ್ಲಿನ ತೆಲುಗು ಪ್ರೇಕ್ಷಕರು ಈಕೆಯ ಬಗ್ಗೆ ಎಷ್ಟು ಅಭಿಮಾನ ತೋರಿಸ್ತಿದ್ದಾರೆ ಅಂದರೆ ಇವರ ಕನ್ನಡ ಸೀರಿಯಲ್‌(Kannada serial) ಗಳನ್ನೂ ಅವರು ನೋಡ್ತಾರಂತೆ. ಕನ್ನಡ ಸೀರಿಯಲ್‌ನಲ್ಲೂ ಅವಕಾಶ(Chance) ಸಿಕ್ಕರೆ ನಟಿಸ್ತೀನಿ. ನನಗೆ ಒಳ್ಳೆಯ ಪಾತ್ರ ಬೇಕು, ಹಾಗಿದ್ರೆ ಖಂಡಿತಾ ಆ ಪಾತ್ರ ಒಪ್ಪಿಕೊಳ್ತೀನಿ ಅನ್ನೋ ಮಾತನ್ನು ರಕ್ಷಾ ಹೇಳ್ತಾರೆ. ಹೈದರಾಬಾದ್‌ನಲ್ಲಿ ಪ್ರತೀ ತಿಂಗಳೂ ಹದಿನೈದು ದಿನಗಳ ಶೂಟಿಂಗ್ ಇರುತ್ತಂತೆ. ಉಳಿದ ಸಮಯದಲ್ಲಿ ಬೇರೆ ಬೇರೆ ಪ್ರಾಜೆಕ್ಟ್ (Project)ಗಳಲ್ಲಿ ಇವರು ಬ್ಯುಸಿ (Busy)ಇರ್ತಾರೆ. ಸದ್ಯಕ್ಕಂತೂ ಮುದ್ದು ಹುಡುಗಿ ವಸು ಪಾತ್ರದ ಮೂಲಕ ರಕ್ಷಾ ಬಹಳ ಹುಡುಗರ ಕನಸಿನ ಹುಡುಗಿ ಆಗಿರೋದಂತೂ ಸುಳ್ಳಲ್ಲ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!