ವಾರಕ್ಕೊಂದು ಅಡುಗೆ ರೆಸಿಪಿ ಟ್ರೈ ಮಾಡುತ್ತಿರುವ ನಿವೇದಿತಾ ಗೌಡ. ಕನ್ನಡಿತಿಗೆ ಅಕ್ಕಿ ರೊಟ್ಟ ಬರಲ್ಲ ಅಂದ್ರೆ ಹೇಗೆ?
ಸ್ಯಾಂಡಲ್‌ವುಡ್ ಬಾರ್ಬಿ ಡಾಲ್ ನಿವೇದಿತಾ ಗೌಡ ಇತ್ತೀಚಿಗೆ ಮನೆಯಲ್ಲಿ ಡಿಫರೆಂಟ್ ಡಿಫರೆಂಟ್ ರೆಸಿಪಿಗಳನ್ನು ಟ್ರೈ ಮಾಡುತ್ತಿದ್ದಾರೆ. ಯೂಟ್ಯೂಬ್ ವಿಡಿಯೋ ನೋಡ್ಕೊಂಡು ಯೂಟ್ಯೂಬ್ ಚಾನೆಲ್‌ಗೆ ವಿಡಿಯೋ ಮಾಡುತ್ತಿರುವ ಈ ಸುಂದರಿ ಅವಸ್ಥೆ ನೋಡಿ ನೆಟ್ಟಿಗರು ನಕ್ಕಿದ್ದಾರೆ. ಏಕೆಂದರೆ ಅಡುಗೆ ಬಗ್ಗೆ ಗಂಧ ಗಾಳಿ ಗೊತ್ತಿಲ್ಲ, ಅಲ್ಲದೆ ಕೈಯಲ್ಲಿ ಡಿಸೈನ್ ಮಾಡಿಸಿಕೊಂಡಿರುವ ಉಗುರು ಬೇರೆ ಇದೆ ಸಹಾಯ ಮಾಡಲು ಮನೆಯಲ್ಲಿ ಪತಿ ಚಂದನ್ ಶೆಟ್ಟಿ ಕೂಡ ಇಲ್ಲ. ಅಕ್ಕಿ ರೊಟ್ಟಿ ಮಾಡುವುದು ಇರಲಿ ಅದನ್ನು ಮಿಕ್ಸ್ ಮಾಡಲು ಬರಲ್ಲ ಅಂತ ಕಾಲೆಳೆಯುತ್ತಿದ್ದಾರೆ.
ನಿವಿ ಸಹ ಪ್ರಯೋಗ:
'ನನ್ನ ಜೀವನದಲ್ಲಿ ಇದೇ ಮೊದಲು ಅಕ್ಕಿ ರೊಟ್ಟಿ ಮಾಡುತ್ತಿರುವುದು ಹೇಗೆ ಬರುತ್ತೆ ಅಂತ ಗೊತ್ತಿಲ್ಲ ಏಕೆಂದರೆ ನನ್ನ ಕೈಯಲ್ಲಿ ಫುಲ್ ಉದ್ದ ಉಗುರು ಇದೆ ಹೇಗೆ ಮಿಕ್ಸ್ ಮಾಡ್ತೀನಿ ಹೇಗೆ ತಟ್ಟುತ್ತೀನಿ ನಿಜ ಗೊತ್ತಿಲ್ಲ. ರೊಟ್ಟಿ ಮಾಡಲು ಏನೆಲ್ಲಾ ಬೇಕು ಸಾಮಾಗ್ರಿಗಳನ್ನು ತರೆಸಿರುವ. ಮೊದಲು ಈರುಳ್ಳಿ ಕಟ್ ಮಾಡಿಕೊಳ್ಳಬೇಕು. ನಾನು ಅಡುಗೆ ಮಾಡುವಾಗಲ್ಲೇ ಯಾವ ವಸ್ತುನೂ ಸಿಗುವುದಿಲ್ಲ. ಈರುಳ್ಳಿ ಕಟ್ ಮಾಡುತ್ತಿದ್ದರೆ ನನಗೆ ಮೆಡಿಕಲ್ ಸ್ಟುಡೆಂಟ್‌ಗಳು ಪ್ರಾಣಿ ಕಟ್ ಮಾಡುತ್ತಾರೆ ಹಾಗೆ ಮಾಡುತ್ತಿರುವೆ. ಈಗ ಮಾಡುತ್ತಿರುವ ರೊಟ್ಟಿ ರುಚಿ ನೋಡಲು ಮನೆಯಲ್ಲಿ ಯಾರೂ ಇಲ್ಲ. ಇವತ್ತು ನಾನು ಅಡುಗೆ ಮಾಡ್ತೀನಿ ಅಂತ ಗೊತ್ತಾಗಿನೇ ಚಂದನ್ ಬೇಗ ಬೆಳಗ್ಗೆ ಹೊರಗಡೆ ಹೋಗಿರುವುದು ಅದಿಕ್ಕೆ ಕಣ್ಣೀರಿಡುತ್ತಾ ಅಡುಗೆ ಮಾಡುವೆ. ನಾನು ಮಾಡಿರುವುದು ನಾನೇ ತಿನ್ನಬೇಕು' ಎಂದು ಹೇಳುತ್ತಾ ಅಡುಗೆ ವಿಡಿಯೋ ಆರಂಭಿಸಿದ್ದಾರೆ.
ಸೀದೋಗಿರೋ ಚಿಕನ್: Niveditha Gowda ಅಡುಗೆ ನೋಡಿ ತಲೆ ಸುತ್ತಿಬಿದ್ದ ಪತಿ ಚಂದನ್ ಶೆಟ್ಟಿ?
ಅಕ್ಕಿ ರೊಟ್ಟಿ ಮಾಡಲು ಯಾವುದು ಎಷ್ಟು ಹಾಕಬೇಕು ಅಂತ ನನಗೆ ಗೊತ್ತಿಲ್ಲ ನಾನೇ ಕಲ್ಪನೆ ಮಾಡಿಕೊಂಡು ಮಾಡುತ್ತಿರುವೆ. ಅಕ್ಕಿ ಹಿಟ್ಟು, ಕೊತ್ತಮರಿ ಸೊಪ್ಪು, ಕರೀಬೇಕು, ಈರುಳ್ಳಿ ಮತ್ತು ಜೀರ ಹಾಕಿದ್ರೆ ರೊಟ್ಟಿ ಸೂಪರ್ ಆಗಿ ಅಗುತ್ತೆ. ರೆಸಿಪಿ ನೋಡಿಕೊಳ್ಳುವ ಅಗತ್ಯವಿಲ್ಲ. ಸಬ್ಬಸಿಗೆ ಸೊಪ್ಪು ನನಗೆ ತುಂಬಾನೇ ಇಷ್ಟ. ಚಿಕ್ಕವಳಿದ್ದಾಗಿನಿಂದ ಈ ಸೊಪ್ಪು ತುಂಬಾನೇ ಇಷ್ಟ ವಾಸನೆ ಸಖತ್ ಆಗಿರುತ್ತದೆ. ಇದನ್ನ ನೋಡಿದ್ರೆ ನನಗೆ ಕುರಿ ಕೋಳಿ ನೆನಪಾಗುತ್ತದೆ. ಇದರಲ್ಲಿ ಪಲ್ಯ ಮಾಡುತ್ತಾರೆ ರುಚಿ ಇರುತ್ತೆ. ನಾನು ತಂದಿರುವ ಕರೀಬೇಕು ಎಲೆ ನೋಡಲು ಬೇರೆ ರೀತಿ ಅದಿಕ್ಕೆ ಕನ್ಫ್ಯೂಷನ್ ಆಯ್ತು. ಒಂದು ರೊಟ್ಟಿಗೆ ಒಂದು ಮೆಣಸಿಕಾಯಿ ಅಂದ್ರೆ ಎರಡು ಮೂರು ಬಳಸುವೆ. ಒಂದು ಸ್ಪೂನ್ ಜೀರಿಗೆ' ಎಂದು ಮಾತನಾಡುತ್ತಾ ಅಡುಗೆ ಮಾಡಿದ್ದಾರೆ.
'ಅಕ್ಕಿ ರೊಟ್ಟಿಗೆ ಹಿಟ್ಟು ರೆಡಿ ಮಾಡಿಕೊಳ್ಳುವುಷ್ಟರಲ್ಲಿ ಏನಾಗುತ್ತೆ ಗೊತ್ತಿಲ್ಲ. ಹಾಸ್ಟೆಲ್‌ನಲ್ಲಿ ಅಕ್ಕಿ ಹಿಟ್ಟುನ ಮುಖಕ್ಕೆ ಬಳಸುತ್ತಿದ್ದೆ ಅಡುಗೆಗೆ ಬಳಸುತ್ತಿರುವುದು ಇದೇ ಮೊದಲು. ಹಿಟ್ ಮಾಡಲು ನೀರು ಬಳಸಬೇಕು. ಉಗುರು ಇರುವುದರಿಂದ ಸ್ಪೂನ್ ಬಳಸುವೆ...ಇಲ್ಲ ಈಗ ಬ್ಲೆಂಡರ್ ಬಳಸುವೆ..ಇದರಲ್ಲೂ ಸರಿಯಾಗಿ ಅಗುತ್ತಿಲ್ಲ ಈಗ ನನ್ನ ಬೆರಳುಗಳನ್ನು ಬಳಸುವೆ. ನನ್ನ ಉರುಗು ಮೇಲೆ ಸಣ್ಣ ಪುಟ್ಟ ಡಿಸೈನ್‌ಗಳಿದೆ ಮಿಕ್ಸ್ ಮಾಡುವಾಗ ಬಿದ್ದರೆ ತಿನ್ನುವವರಿಗೆ ಸಿಗುತ್ತೆ ಅವರೇ ಈ ಎಪಿಸೋಡ್ ವಿನ್ನರ್.
ಫ್ಯಾಮಿಲಿ ಪ್ಲಾನಿಂಗ್, ಸಂಬಳ ಮತ್ತು ಚಂದನ್ ಎಲ್ಲಿ? ಟ್ರೋಲಿಗರಿಗೆ ಉತ್ತರ ಕೊಟ್ಟ Niveditha Gowda
'ಹಿಟ್ಟು ಸರಿಯಾಗಿ ಆಗಿಲ್ಲ ಮತ್ತೆ ಮಾಡಬೇಕು. ಚೆನ್ನಾಗಿ ಅಡುಗೆ ಮಾಡುವವರನ್ನು ಇಟ್ಕೊಳ್ಳಬೇಕು. ಆಗಲ್ಲ ಅಂತ ಹೇಳುವುದಿಲ್ಲ ಕಾಮೆಂಟ್‌ನಲ್ಲಿ ಎಲ್ಲರೂ ಮತ್ತೆ ಬೈಯುತ್ತಾರೆ. ರೊಟ್ಟಿ ತಟ್ಟಿ ತಟ್ಟಿ ಅದರಲ್ಲಿರುವ ಮೆಣಸಿಕಾಯಿ ಹೊರ ಬರುತ್ತಿದೆ. ಮೂರು ಸಲ ಪ್ರಯತ್ನ ಮಾಡಿ ಒಂದು ಸರಿಯಾಗಿ ಬಂದಿದೆ.ಒಂದು ರೊಟ್ಟಿಯಲ್ಲಿ ಮೂರು ಪೀಸ್ ಆಗುತ್ತಿದೆ. ಫ್ಯೂಚರ್‌ನಲ್ಲಿ ನನ್ನ ಮಕ್ಕಳು ಅಮ್ಮ ರೊಟ್ಟಿ ಮಾಡಿಕೊಡು ಅಂದ್ರೆ ನೀನೆ ಮಾಡಿಕೊಂಡು ತಿನ್ನು ಎನ್ನುವೆ. ಒಂದು ರೊಟ್ಟಿಗೆ ಚೆಟ್ನಿ ಮಾಡುವುದು ವೇಸ್ಟ್. ಇದನ್ನು ನಾನೇ ತಿನ್ನುವೆ' ಎಂದಿದ್ದಾರೆ ನಿವಿ.