
ಕಾಸ್ಟಿಂಗ್ ಕೌಚ್, ಸಿನಿಮಾರಂಗದಲ್ಲಿ ಹೆಚ್ಚಾಗಿ ನಟಿಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಅವಕಾಶ ಬೇಕು ಅಂದ್ರೆ, ಜನಪ್ರಿಯತೆ ಬೇಕು ಅಂದರೆ ನಿರ್ದೇಶಕ, ನಿರ್ಮಾಪಕರ ಜೊತೆ ಅಡ್ಜೆಸ್ಟ್ ಆಗಬೇಕು, ಹೇಳಿದ ಹಾಗೆ ಕೇಳಬೇಕು ಎನ್ನುವ ಆರೋಪ ಆಗಾಗ ಕೇಳಿಬರುತ್ತಲೆ ಇದೆ. ಕಾಸ್ಟಿಂಗ್ ಕೌಚ್ ವಿರುದ್ಧ ಸಿಡಿದೆದ್ದ ನಟಿಯರು ಮೀ ಟೂ ಅಭಿಯಾನ ಮಾಡಿದ್ದರು. ಆದರೂ ಈ ಸಮಸ್ಯೆಗೆ ಮುಕ್ತಿ ಸಿಕ್ಕಲಿಲ್. ಸ್ಟಾರ್ ಆಗಬೇಕೆಂದು ಕನಸೊತ್ತು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಅನೇಕ ಯುವ ನಟಿಯರು ಕಾಸ್ಟಿಂಗ್ ಕೌಚ್ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಕಾಸ್ಟಿಂಗ್ ಕೌಚ್ ಸಿನಿಮಾರಂಗ ಮಾತ್ರವಲ್ಲದೇ ಕಿರುತೆರೆಗೂ ಅಂಟಿಕೊಂಡಿದೆ. ಇದೀಗ ಮತ್ತೋರ್ವ ನಟಿ ಬಣ್ಣದ ಲೋಕದಲ್ಲಿ ಎದುರಿಸಿದ ಕೆಟ್ಟ ಅನುಭವವನ್ನು ತೆರೆದಿದ್ದಾರೆ. ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ ರತನ್ ರಜಪುತ್ ತನಗಾದ ಅಸಹ್ಯ ಅನುಭವದ ಬಗ್ಗೆ ಬಹಿರಂಗ ಪಡಿಸಿದರು.
ಬಣ್ಣದ ಲೋಕದಲ್ಲಿ ತುಂಬಾ ಕಷ್ಟಪಟ್ಟು, ಶ್ರಮವಹಿಸಿ ಕೆಲಸ ಮಾಡಿ ಇಂದು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ರತನ್ ರಜಪುತ್ ಹೆಸರು ಕಿರುತೆರೆ ಲೋಕದಲ್ಲಿ ತುಂಬಾ ಜಮಪ್ರಿಯ. ಆದರೆ ಈ ಸ್ಥಾನಕ್ಕೂ ಬರುವ ಮೊದಲು ರತನ್ ಚಿತ್ರರಂಗದಲ್ಲಿ ಅನುಭವಿಸಿದ ಕೆಟ್ಟ ಅನುಭವವನ್ನು ತೆರೆದಿಟ್ಟಿದ್ದಾರೆ. ಕೆಲವರು ಹೇಗೆ ನಡೆದುಕೊಳ್ಳುತ್ತಾರೆ, ದೊಡ್ಡ ದೊಡ್ಡ ನಿರ್ಮಾಪಕರು, ಹಿರಿಯರು ಅಂದುಕೊಂಡವರು ನಟಿಯರ ಜೊತೆ ಹೇಗೆ ವರ್ತನೆ ಮಾಡ್ತಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ನಟಿ ರತನ್ ನಟನೆ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ವಿ ಲಾಗ್ ಹೊಂದಿರುವ ನಟಿ ಆಗಾಗ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಸಣ್ಣ ಊರು ಅಥವಾ ಹಳ್ಳಿಯ ಅನೇಕ ಹುಡುಗಿಯರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಮುಂಬೈಗೆ ಬರುತ್ತಾರೆ. ಆದರೆ ಅವರು ಅಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಬೇಕಾಗುತ್ತದೆ. ಇಂಡಸ್ಟ್ರಿಯಲ್ಲಿ ಗಾಡ್ ಫಾದರ್ ಇದ್ದರೆ ಈ ಸಮಸ್ಯೆ ಇರಲ್ಲ. ಆದರೆ ಗಾಡ್ ಫಾದರ್ ಇಲ್ಲದೆ, ಬ್ಯಾಗ್ರೌಂಡ್ ಇಲ್ಲದೆ ಬರುವ ನಟಿಯರು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ರತನ್ ಹೇಳಿದ್ದಾರೆ. ಈಗ ಅನೇಕ ನಟಿಯರು ಈ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ದೊಡ್ಡ ಚಿತ್ರದ ಆಫರ್‌ಗೆ ಹಾಸಿಗೆ ಹಂಚಿಕೊಳ್ಳಲು ಕೇಳಿದ್ದ ನಿರ್ದೇಶಕ, ನಿರಾಕರಿಸಿದ ಸ್ಟಾರ್ ನಟಿ!
ರತನ್ ವಿಲಾಗ್ ಮೂಲಕ ಅನೇಕ ಇಂಟ್ರಸ್ಟಿಂಗ್ ಮತ್ತು ಸುಂದರ ಅನುಭವವನ್ನು ಹೆಂಚಿಕೊಳ್ಳುತ್ತಾರೆ. ಇದೀಗ ಮೊದಲ ಬಾರಿಗೆ ಕೆಟ್ಟ ಅನುಭವ ಬಿಚ್ಚಿಟ್ಟಿದ್ದಾರೆ. ಮುಂಬೈ ಬಂದ ಪ್ರಾರಂಭದಲ್ಲಿ 2008ರಲ್ಲಿ ನನಗೆ ಹೆಚ್ಚು ಏನು ತಿಳಿದಿರಲಿಲ್ಲ. ಕೆಲಸ ಇಲ್ಲದೆ ಪರದಾಡುತ್ತಿರುವಾಗ ದೊಡ್ಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ 60 ರಿಂದ 65 ವರ್ಷದ ನಿರ್ಮಾಪಕ ಕುಳಿತಿದ್ದ. ಆತ ನನಗೆ ನಿಮ್ಮನ್ನು ನೀವು ತುಂಬಾ ಬದಲಾಯಿಸಿಕೊಳ್ಳಬೇಕು ಎಂದು ಹೇಳಿದ. ನಿಮ್ಮ ಕೂದಲು, ಸ್ಕಿನ್ ಬದಲಾಗಬೇಕು. ನಿಮಗೆ ಡ್ರೆಸ್ ಸೆನ್ಸ್ ಇಲ್ಲ. ಯಾಕೆ ನಿನ್ನ ಮೇಲೆ ಅನೇಕ ಸಮಯ ಕಳೆಯುತ್ತೀಯಾ, ನನ್ನನ್ನು ಗಾಡ್ ಫಾದರ್ ಮಾಡಿಕೊ, ನನ್ನ ಜೊತೆ ಕ್ಲೋಸ್ ಆಗಿರು' ಎಂದು ಹೇಳಿದ ಎಂದರು.
ಮಂಚಕ್ಕೆ ಹೋದರೆ ಮಾತ್ರ ಹೀರೋಯಿನ್ ಚಾನ್ಸ್ , ಬಿ ಟೌನ್ ಕಾಸ್ಟಿಂಗ್ ಕೌಚ್ ತೆರೆದಿಟ್ಟ ಮಲ್ಲಿಕಾ ಶೆರಾವತ್
ಅದಕ್ಕೆ ನಾನು, ನೀವು ನನ್ನ ತಂದೆಯ ವಯಸ್ಸಿನವರು ಮತ್ತು ನಾನು ನಿಮ್ಮನ್ನು ತುಂಬಾ ಗೌರವಿಸುತ್ತೇನೆ. ನಿಮ್ಮ ಮಾರ್ಗದರ್ಶನದಂತೆ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದೆ. ಆದರೆ ಆ ವ್ಯಕ್ತಿ ಕೋಪದಿಂದ ಇಲ್ಲಿ ನಿಮಗೆ ಬಿಟ್ಟಿ ಮಾರ್ಗದರ್ಶನ ಮಾಡಲು ಯಾರೂ ಇಲ್ಲ. ನೀವು ನಟಿಯಾಗಬೇಕಾದರೆ ಸ್ವಲ್ಪ ಸ್ಮಾರ್ಟ್ ಇರಬೇಕು ಎಂದರು. ಆತ ನನ್ನ ಜೊತೆ ಜೊತೆ ಅರ್ಧ ಗಂಟೆ ಮಾತಾಡಿದ' ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.