ಹೊಸ ಮನೆಗೋಗಿ ಒಂದುವರೆ ವರ್ಷ ಆದ್ರೂ 1 ಸಿಲೆಂಡರ್ ಖಾಲಿ ಆಗಿಲ್ಲ: ನಿವೇದಿತಾ ಗೌಡ

By Vaishnavi Chandrashekar  |  First Published Oct 24, 2022, 11:38 AM IST

ನಿವಿ ಅಡುಗೆ ಮನೆ ಸೀಕ್ರೆಟ್ ವೈರಲ್. ಯೂಟ್ಯೂಬ್‌ಗಾಗಿ ಸಿಲೆಂಡ್ ಬಳಸುವ ಓನ್ ಆಂಡ್ ಓನ್ಲಿ ಬಾರ್ಬಿ ಡಾಲ್....


ದೀಪಾವಳಿ ಹಬ್ಬದ ಪ್ರಯುಕ್ತ ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ನನ್ನಮ್ಮ ಸೂಪರ್ ಸ್ಟಾರ್‌ನಲ್ಲಿ ಮಹಾ ಮಿಲನ ನಡೆಯಿತ್ತು. ಪುಟ್ಟ ಮಕ್ಕಳ ಜೊತೆ ಗಿಚ್ಚಿ ಗಿಲಿಗಿಲಿ ಶೋ ಸ್ಪರ್ಧಿಗಳು ಸೂಪರ್ ಡೂಪರ್ ಸ್ಕಿಟ್ ಮಾಡಿದ್ದರು. ಈ ವೇಳೆ ಅತ್ತೆ ಪಾತ್ರದಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ ಅಡುಗೆ ಮನೆ ಸೀಕ್ರೆಟ್‌ನ ತೀರ್ಪುಗಾರ ಸೃಜನ್ ಲೋಕೇಶ್‌ ರಿವೀಲ್ ಮಾಡಿದ್ದಾರೆ. ಸೆಟ್‌ನಲ್ಲಿದ್ದವರು ಮಾತ್ರವಲ್ಲ ಅಪಟ್ಟ ನಿವೇದಿತಾ ಗೌಡ ಫ್ಯಾನ್‌ಗಳಿಗೂ ಶಾಕ್ ಆಗಿದ್ದಾರೆ. 

'ಹಲವು ದಿನಗಳ ನಂತರ ಮತ್ತೆ ಸ್ಕಿಟ್ ಮಾಡಿರುವುದಕ್ಕೆ ಖುಷಿಯಾಗುತ್ತಿದೆ ಏಕೆಂದರೆ ನನ್ನಮ್ಮ ಸೂಪರ್ ಸ್ಟಾರ್ ಸ್ಟೇಜ್‌ ನೋಡಲು ಸೂಪರ್ ಆಗಿದೆ ಹೂವುಗಳ ರೀತಿ ಕಾಣಿಸುತ್ತಿದೆ. ಯಾವಾಗ ಮತ್ತೆ ಬರ್ತೀನಿ ಯಾವಾಗ ರೀ-ಹರ್ಸನಲ್ ಮಾಡ್ತೀನಿ ಅನಿಸುತ್ತಿತ್ತು. ಬಂದ್ಮೇಲೆ ಮತ್ತೆ ವಾಪಸ್‌ ಹೋಗಬೇಕು ಅನಿಸುತ್ತಿಲ್ಲ' ಎಂದು ನಿವೇದಿತಾ ಗೌಡ ಮಾತನಾಡುತ್ತಾರೆ. ಈ ವೇಳೆ ಸೃಜನ್ ಇಂಟ್ರೆಸ್ಟಿಂಗ್ ಸ್ಟೋರಿ ರಿವೀಲ್ ಮಾಡಿದ್ದಾರೆ.

Tap to resize

Latest Videos

ಸೃಜನ್: ನಿವಿ ಬಗ್ಗೆ ಒಂದು ವಿಚಾರ ಹೇಳಬೇಕು ಇದನ್ನು ಹೇಳಲು ನಾನು ಸರಿಯಾದ ಸಮಯಕ್ಕೆ ಕಾಯುತ್ತಿರುವೆ. ಮೊನ್ನೆ ಒಂದು ವಿಚಾರ ಹಂಚಿಕೊಂಡರು. ಪ್ರತಿಯೊಬ್ಬರ ಮನೆಯಲ್ಲಿ ಎಷ್ಟು ದಿನ ಗ್ಯಾಸ್ ಸಿಲೆಂಡರ್ ಬರುತ್ತೆ? ನಮ್ಮ ಮನೆಯಲ್ಲಿ ಹೆಚ್ಚಿಗೆ ಜನರು ಇರುವ ಕಾರಣ 15 ದಿನ ಬರುತ್ತೆ. ಆದರೆ ನಿವೇದಿತಾ ಗೌಡ ಹೊಸ ಮನೆಗೆ ಹೋಗಿ ಒಂದುವರೆ ವರ್ಷ ಆಯ್ತು ಮೊನ್ನೆ ಮೊದಲ ಸಿಲೆಂಡರ್ ಖಾಲಿ ಮಾಡಿದ್ದಾರಂತೆ.

ಸೆಟ್‌ನಲ್ಲಿದ್ದ ಪ್ರತಿಯೊಬ್ಬರೂ ಶಾಕ್‌ನಲ್ಲಿ ರಿಯಾಕ್ಟ್‌ ಮಾಡಿದ್ದಾರೆ. ನೀನು ಅಡುಗೆನೇ ಮಾಡಲ್ವಾ ನಿವಿ ಎಂದು ತಾರಮ್ಮ ಹೇಳಿದ್ದಾರೆ, ನಿರಂಜನ್ ದೇಶಪಾಂಡೆ ತಬ್ಬಿಕೊಂಡು ವಿಶ್ ಮಾಡಿದ್ದಾರೆ. 

ಸೃಜನ್: ಆ ಒಂದು ಸಿಲೆಂಡರ್ ಯಾಕೆ ಖಾಲಿ ಆಯ್ತು ಅಂದ್ರೆ ಮೊನ್ನೆ ಯೂಟ್ಯೂಬ್ ಚಾನೆಲ್‌ಗಾಗಿ ಜಿಲೇಬಿ ಮಾಡುವ ರೆಸಿಪಿ ಮಾಡುತ್ತಿದ್ದರು ಅದಿಕ್ಕೆ ಖಾಲಿ ಆಯ್ತು ಇಲ್ಲ ಅಂದ್ರೆ ಇನ್ನು ಹೆಚ್ಚಿಗೆ ಬರುತ್ತಿತ್ತು ಅಂದಿದ್ದಾರೆ.

Niveditha Gowda: ಮುದ್ದೆ ಮಾಡಿದ್ದು ಆಯ್ತು ಈಗ ರೊಟ್ಟಿ ತಟ್ಟಿದ ನಿವಿ!

ನಿವೇದಿತಾ: ಒಂದು ವರ್ಷ ಸಿಲೆಂಡರ್ ಉಳಿಸಿಕೊಂಡಿರುವ ಇನ್ನು ಹೆಚ್ಚಿಗೆ ದಿನ ಬರುತ್ತಿತ್ತು ಆದರೆ ಮಮ್ಮಿ ಬಂದು ನಮ್ಮ ಮನೆಯಲ್ಲಿ ಅಡುಗೆ ಮಾಡಿದ್ದರು ಅದಿಕ್ಕೆ ಖಾಲಿ ಆಯ್ತು.

ನಿರಂಜನ್: ನಿವಿನ ನೋಡಿ ಎಲ್ಲಾ ಹೆಂಡತಿಯರು ಕಲಿಯಬೇಕು ಒಂದು ಸಿಲೆಂಡರ್‌ನ ಒಂದೂವರೆ ವರ್ಷ ರನ್ ಮಾಡ್ತಾರೆ ಅಂದ್ರೆ ...ಈ ಶತಮಾನದ ಮಾದರಿ ಹೆಣ್ಣು. ಸಿಲೆಂಡರ್ ಹಚ್ಚುವುದಿಲ್ಲ ಅಡುಗೆ ಮಾಡುವುದಿಲ್ಲ 

ನಿವೇದಿತಾ: ಶೂಟಿಂಗ್ ಅಲ್ಲಿ ಇಲ್ಲಿ ಅಂತ ಬ್ಯುಸಿಯಾಗಿರುವೆ. ಬರೀ ಯೂಟ್ಯೂಬ್ ವಿಡಿಯೋಗಾಗಿ ಅಡುಗೆ ಮಾಡುವೆ. ಆಡುಗೆ ಮಾಡಬೇಕು ಅಂತ ಮನಸ್ಸು ಮಾಡಿದ್ದಾಗ ಕಾಲಿ ಆಯ್ತು ಅಂದ್ರೆ ಆ ದೇವರೇ ಬೇಡ ನೀನು ಅಡುಗೆ ಮಾಡಬೇಡ ಆರ್ಡರ್‌ ಮಾಡ್ಕೊಂಡು ತಿನ್ನು ಅಂತ ಹೇಳುತ್ತಿದೆ.

ಸೃಜನ್: ನಿವೇದಿತಾ ಮಾಡಿರುವ ಅಡುಗೆ ತಿಂದ್ರೆ ಜನರು ನನ್ನ ಬಳಿ ಬರುತ್ತಾರೆ ಅಂತ ದೇವರು ಗ್ಯಾಸ್ ಕಾಲಿ ಮಾಡಿಸಿರುವುದು.

Niveditha Gowda 7 ದಿನ ಸ್ಕಿನ್ ಚಾಲೆಂಜ್‌; ಮುಖದಲ್ಲಿ ಮೊಡವೆ ಬೇಗ ಹೋಗ್ಬೇಕಂದ್ರೆ ಹೀಗೆ ಮಾಡ್ಬೇಕಂತೆ

ನಿವೇದಿತಾ: ನಾನು ಒಂದು ಸಲ ಅಡುಗೆ ಮಾಡಿ ಕೊಡುತ್ತೀನಿ ನೀವು ನನ್ನ ಮನೆ ಮುಂದೆನೇ ಇರುತ್ತೀರಿ ನೋಡಿ...

ಸೃಜನ್: ಹೌದು ಮನೆ ಮುಂದೆ ಇರುತ್ತೀನಿ ಹುಚ್ಚನ ರೀತಿ ಸೌಂಡ್ ಮಾಡಿಕೊಂಡು.

ಹೀಗಾ ಹಬ್ಬದ ದಿನ ವೇದಿಕೆ ಮೇಲೆ ಹಾಸ್ಯ ಮಾಡುತ್ತಾ ವೀಕ್ಷಕರನ್ನು ಮನೋರಂಜಿಸಿ ನಿವಿ ಈ ವರ್ಷ ಅನುಬಂಧ ಅವಾರ್ಡ್‌ನಲ್ಲಿ ಬೆಸ್ಟ್‌ ಎಂಟರ್ಟೈನರ್‌ ಪಡೆದುಕೊಂಡಿದ್ದಾರೆ.

 

click me!