
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವೆ ಬಿಗ್ ಬಾಸ್ ಸೀಸನ್ 9ರಲ್ಲಿ ನಾಲ್ಕನೇ ವಾರಕ್ಕೆ ವಿಭಿನ್ನವಾಗಿ ಎಲಿಮಿನೇಷನ್ ನಡೆದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಲ್ಲದೆ ನಡೆದಿರುವ ಮೊದಲ ಎಲಿಮಿನೇಷನ್ ಇದಾಗಿದ್ದು ವಿಭಿನ್ನ ಪ್ಲ್ಯಾನಿಂಗ್ ಮೂಲಕ ಹಂತ ಹಂತವಾಗಿ ಸೇಫ್ ಮಾಡುತ್ತಾ, ಔಟ್ ಆಗಿರುವ ಸ್ಪರ್ಧಿಗೆ ಡಿಫರೆಂಟ್ ಎಕ್ಸಿಟ್ ಸಿಕ್ಕಿದೆ. ಬೈಕರ್‌ಗಳ ಜೊತೆ ಸವಾರಿ ಮಾಡುವ ಮೂಲಕ ಮಯೂರಿ ಕ್ಯಾತರಿ ಮನೆಯಿಂದ ಹೊರ ನಡೆದಿದ್ದಾರೆ.
ಹೌದು! ಈ ವಾರ ಸ್ಪರ್ಧಿಗಳಿಗಿಂತ ಹೆಚ್ಚಾಗಿ ವೀಕ್ಷಕರಿಗೆ ಎಲಿಮಿನೇಷನ್ ಹೇಗಿರಲಿದೆ ಎನ್ನುವ ಕ್ಯೂರಿಯಾಸಿಟಿ ಇತ್ತು. ವೀಕೆಂಡ್ ಮಾತುಕತೆಯಲ್ಲಿ ಸುದೀಪ್ ಸೇಫ್ ಮಾಡುತ್ತಿದ್ದ ರೀತಿ ಬೇರೆ ಇತ್ತು ಆದರೆ ಇಂದು ಸುದೀಪ್ ಇಲ್ಲದೆ ಆಗಿರುವ ರೀತಿ ಬೇರೆ. ಲಾಸ್ಟ್ ಹಂತದಲ್ಲಿ ನೇಹಾ ಗೌಡ ಮತ್ತು ಮಯೂರಿ ಕ್ಯಾತರಿ ನಿಲ್ಲುತ್ತಾರೆ. ಆಗ ಬೈಕರ್‌ಗಳು ಪ್ರವೇಶಿಸಿ ಇಬ್ಬರನ್ನೂ ಬೈಕ್ ಮೇಲೆ ಕೂರಿಸಿಕೊಂಡು ಗಾರ್ಡನ್ ಏರಿಯಾದಲ್ಲಿ ರೌಂಡ್ ಹಾಕಿಸಿ ಎಲಿಮಿನೇಷ್ ಆಗಿರುವ ಸ್ಪರ್ಧಿಯನ್ನು ಹೊರ ಕರೆದುಕೊಂಡು ಬರುತ್ತಾರೆ, ಸೇಫ್ ಆಗಿರುವವರನ್ನು ಅಲೇ ಡ್ರಾಪ್ ಮಾಡುತ್ತಾರೆ. ಮಯೂರಿ ಕ್ಯಾತರಿ ಎಲಿಮಿನೇಟ್ ಆಗಿ ಬೈಕರ್‌ಗಳ ಜೊತೆ ಹೊರ ನಡೆಯುತ್ತಾರೆ.
ಮಯೂರಿ ಮಾತು:
'ತುಂಬಾ ಖುಷಿಯಾಗುತ್ತಿದೆ. ಒಂದು ತಿಂಗಳ ನೆನಪುಗಳು ಈ ಮನೆಯಲ್ಲಿ ಹೆಚ್ಚಿದೆ. ಇಲ್ಲಿ ಇರ್ಬೇಕು ಅಂತ ಎಷ್ಟು ಆಸೆ ಆಗುತ್ತಿದೆ ಅದಕ್ಕಿಂತ ನೂರು ಪಟ್ಟು ಜಾಸ್ತಿ ನನ್ನ ಮಗನನ್ನು ನೋಡಬೇಕು ಅಂತ ಆಸೆ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡರೂ ಓಕೆ..ನಾನು ಇಲ್ಲೇ ಇದ್ದರೆ ನನ್ನನ್ನು ಮಿಸ್ ಮಾಡಿಕೊಳ್ಳಿ' ಎಂದು ಬಿಬಿ ಮನೆಯಿಂದ ಹೊರಡುವ ಮುನ್ನ ಮಯೂರಿ ಮಾತನಾಡುತ್ತಾರೆ.
BBK9; ಬಿಗ್ ಮನೆಯಲ್ಲಿ ಮಕ್ಕಳದ್ದೇ ದರ್ಬಾರು, ಮಗುವನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಮಯೂರಿ
ಒಂದೇ ಮಗು ಸಾಕಾಗಿದೆ:
10ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಮತ್ತು ಮೂರ್ನಾಲ್ಕು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಮಯೂರಿ ಲಾಕ್‌ಡೌನ್ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಲಾಕ್‌ಡೌನ್ ಸಮಯದಲೇ ಗಂಡು ಮಗುವಿನೆ ಜನ್ಮ ನೀಡಿದ್ದಾರೆ. ಮದರ್‌ವುಡ್‌ನ ಎಂಜಾಯ್ ಮಾಡುತ್ತಿರುವ ಮಯೂರಿ ಒಂದೂವರೆ ವರ್ಷದ ಮಗುವನ್ನು ಬಿಟ್ಟು ಬಿಗ್ ಬಾಸ್ ರಿಯಾಲಿಟಿ ಶೋಗೆ ಬರುವ ಸಾಹಸ ಮಾಡಿದ್ದಾರೆ. ಹೀಗೆ ಒಂದು ದಿನ ಮನೆ ಸದಸ್ಯರು ಎಷ್ಟು ಮಕ್ಕಳು ಬೇಕು ಎಂದು ಚರ್ಚೆ ಮಾಡುತ್ತಿದ್ದರು ಆಗ ಮಯೂರಿ 'ನನಗೆ ಒಂದಕ್ಕೇ ಸಾಕಾಗಿದೆ. ನನಗೆ ಒಂದೇ ಮಗು ಸಾಕು ಎಂದು ಧೃಢವಾಗಿದ್ದೇನೆ' ಎಂದು ಹೇಳುತ್ತಾರೆ. ಅಲ್ಲಿದ ಪ್ರತಿಯೊಬ್ಬರು ನಿಮ್ಮ ಮಗ ದೊಡ್ಡವನಾದ ಮೇಲೆ ಮತ್ತೊಂದು ಮಗು ಬೇಕು ಅನಿಸುತ್ತದೆ ಆತನಿಗೆ ಜೊತೆಯಾಗಿ ಒಬ್ಬರು ಇರಬೇಕು ಅನಿಸುತ್ತದೆ ಎಂದಿದ್ದಾರೆ. 'ಇಲ್ಲ ಇಲ್ಲ ಯಾರು ಏನೇ ಹೇಳಿದ್ದರು ನಾನು ಕನ್‌ಫರ್ಮ್ ಆಗಿದ್ದೀನಿ' ಎಂದಿದ್ದಾರೆ.
ಈ ಮಾತುಗಳನ್ನು ಕೇಳಿಸಿಕೊಂಡು ಪಕ್ಕದಲ್ಲಿ ಕುಳಿತಿದ್ದ ಅರುಣ್ ಸಾಗರ್ ಮಯೂರಿ ಕಾಲೆಳೆದಿದ್ದಾರೆ.'ಬಿಗ್ ಬಾಸ್‌ನಿಂದ ಹೊರ ಹೋದ ಮೇಲೆ ಮತ್ತೊಂದು ಮಗು ಮಾಡಿಕೊಳ್ಳುವ ಪ್ಲ್ಯಾನ್ ಮಾಡಿ. ನಮ್ಮ ಅಜ್ಜಿ ಅವರು ಏಳು ಎಂಟು ಹೆತ್ತಿದ್ದರು' ಎಂದು ತಮಾಷೆ ಮಾಡುತ್ತಾರೆ. ಅದಿಕ್ಕೆ ನೇಹಾ 'ಹೌದು ಹೌದು ನಮ್ಮ ಅಜ್ಜಿ ಕೂಡ ಏಳು ಹೆತ್ತಿದ್ದಾರೆ' ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.