BBK9 ಒಂಟಿಯಾಗಿರುವುದಕ್ಕೆ ತುಂಬಾನೇ ಭಯ, ದೆವ್ವ ಭೂತ ಅಲ್ಲ ಯೋಚನೆಗಳು: ದಿವ್ಯಾ ಉರುಡುಗ

Published : Oct 24, 2022, 09:33 AM IST
BBK9  ಒಂಟಿಯಾಗಿರುವುದಕ್ಕೆ ತುಂಬಾನೇ ಭಯ, ದೆವ್ವ ಭೂತ ಅಲ್ಲ ಯೋಚನೆಗಳು: ದಿವ್ಯಾ ಉರುಡುಗ

ಸಾರಾಂಶ

 ಒಂಟಿ ಒಂಟಿಯಾಗಿರಲು ಬೋರೋ ಬೋರು ಎಂದ ದಿವ್ಯಾ ಉರುಡುಗ. ಯಾಕೆ ಈ ಫಿಯರ್?  

ಬಿಗ್ ಬಾಸ್ ಸೀಸನ್ 8ರಲ್ಲಿ ಟಫ್ ಆಂಡ್ ಸ್ಟ್ರಾಂಗ್ ಸ್ಪರ್ಧಿಯಾಗಿ ಫಿನಾಲೆ ಹಂತ ತಲುಪಿ ಟಾಪ್ 3 ಫೈನಲಿಸ್ಟ್‌ನಲ್ಲಿ ಇದ್ದದ್ದು ದಿವ್ಯಾ ಉರುಡುಗ. ಬಿಬಿ ಮನೆಯಿಂದ ಹೊರ ಬಂದ ಮೇಲೂ ಸಿಕ್ಕಾಪಟ್ಟೆ ಜನಪ್ರಿಯತೆ ಹೊಂದಿದ್ದ ಕಾರಣ ಬಿಗ್ ಬಾಸ್ ಸೀಸನ್ 9 ಪ್ರವೇಶಿಸಲು ಮತ್ತೊಂದು ಅವಕಾಶ ಗಿಟ್ಟಿಸಿಕೊಂಡರು. ನಿಧಾನವಾಗಿ ಆಟ ಶುರು ಮಾಡುತ್ತಿರುವ ದಿವ್ಯಾ ಎಲ್ಲಿ ಅವಶ್ಯಕತೆ ಇದೆ ಎಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ನೇರವಾಗಿ ಮಾತನಾಡಿ ಚರ್ಚೆ ಮಾಡುತ್ತಾರೆ. ನಾಲ್ಕು ವಾರಗಳ ನಂತರ ದಿವ್ಯಾ ಶಕ್ತಿ ಮತ್ತು ತಾಳ್ಮೆ ವೀಕ್ಷಕರಿಗೆ ಇಷ್ಟವಾಗುತ್ತಿದೆ. 

ಹೀಗೆ ಗಾರ್ಡನ್ ಏರಿಯಾದಲ್ಲಿ ಅಮೂಲ್ಯ ಗೌಡ ಜೊತೆ ಮಾತನಾಡುವಾಗ ದಿವ್ಯಾ ತಮಗಿರುವ ಭಯದ ಬಗ್ಗೆ ಮಾತನಾಡಿದ್ದಾರೆ. ಯಾವುದಕ್ಕೂ ಕೇರ್ ಮಾಡದ ದಿವ್ಯಾ ಒಂಟಿತನ ಅಂದ್ರೆ ಭಯ ಪಡುತ್ತಾರಂತೆ.

ದಿವ್ಯಾ: ಒಬ್ಬಳೆ ಇರುವುದಕ್ಕೆ ನನಗೆ ತುಂಬಾನೇ ಕಷ್ಟ ಆಗುತ್ತದೆ. ಸುತ್ತಲು ಜನ ಇರಬೇಕು..ಒಂದು ಸಲ ಇದರ ಬಗ್ಗೆ ಯೋಚನೆ ಮಾಡಿದ್ದರೆ ಯಪ್ಪಾ ಹೇಗೆ ಅನಿಸುತ್ತದೆ.
ಅಮೂಲ್ಯ: ಭಯ ನಾ?
ದಿವ್ಯಾ: ಭಯ ಅಂದ್ರೆ ಯಾರೋ ಬಂದು ಏನೋ ಮಾಡ್ತಾರೆ ಅನ್ನೋ ಭಯ ಅಲ್ಲ
ಅಮೂಲ್ಯ: ನೀನಂತು ಕಂಪ್ಲೀಟ್ ತೀರ್ಥಹಳ್ಳಿ ಪೀಸ್
ದಿವ್ಯಾ: ನಿಜ ಒಬ್ಬಳೆ ನನಗೆ ಆಗುವುದಿಲ್ಲ. ಈ ಪ್ರಪಂಚದಲ್ಲಿ ನಾನು ಹೆದರಿಕೊಳ್ಳುವುದು ಒಂಟಿತನಕ್ಕೆ ಇರಬಹುದು.
ಅಮೂಲ್ಯ: ಒಬ್ಬಳೆ ಇರುವುದಿಲ್ಲ?
ದಿವ್ಯಾ: ಒಬ್ಬಳೆ ಅಂದ್ರೆ ಏನೋ ಭೂತ ಅನ್ನೋ ರೀತಿ ಅಲ್ಲ. ಸ್ವಲ್ಪ ಹೊತ್ತು ಒಬ್ಬಳೆ ಇರಬಹುದು ಆಮೇಲೆ ಯಾರಿದ್ದಾರಂತ ಹುಡುಕಿಕೊಂಡು ಹೋಗಿ ಮಾತನಾಡಿಸುತ್ತೀನಿ. ಮಾತನಾಡಿಕೊಂಡು ಇರಬೇಕು ಸುಮ್ಮನೆ ಒಬ್ಬಳೆ ಕುಳಿತುಕೊಂಡು ಏನೋ ಯೊಚನೆ ಮಾಡಬೇಕು ಅಂದ್ರೂ ಆಗಲ್ಲ
ಅಮೂಲ್ಯ: ಒಂದು ದಿನವೂ ಇರುವುದಿಲ್ವಾ?
ದಿವ್ಯಾ: ಬಾರಿ ಕಡಿಮೆ

BBK9 ಬಿಗ್ ಬಾಸ್‌ ಮನೆಯಿಂದ ಮಯೂರಿ ಹೊರಗೆ; ಬೈಕರ್‌ಗಳಿಂದ ವಿಭಿನ್ನ ಬೀಳ್ಕೊಡುಗೆ!

ಯಾರಿಂದಲೂ ಸಾಧ್ಯವಾಗದ ಟಾಸ್ಕ್‌ ಮಾಡಿದ ದಿವ್ಯಾ:

ಈ ವಾರ ಮೈಂಡ್‌ಗೇಮ್‌ಗೆಂದು ಡಿಫರೆಂಟ್ ಟಾಸ್ಕ್‌ ನೀಡಿದ್ದರು. 24 ಬಾಲ್‌ಗಳನ್ನು ಕೊಟ್ಟು ಪಿರಮಿಡ್ ಮಾಡಲು ಹೇಳಿದ್ದರು. ಕೆಂಪು ಬಾಲ್‌ನ ಅರುಣ್ ಸಾಗರ್ ಮತ್ತು ನವಾಜ್ ಆಯ್ಕೆ ಮಾಡಿಕೊಂಡರು, ನೀಲಿ ಬಾಲ್‌ನ ಆರ್ಯವರ್ಧನ್ ಮತ್ತು ದರ್ಶ್‌ ಆಯ್ಕೆ ಮಾಡಿದ್ದರು. ಅರುಣ್ ಸಾಗರ್ ತಂಡ ಗೆಲುತ್ತದೆ ಎಂದು ಮಯೂರಿ ಮತ್ತು ಸಾನ್ಯಾ ಐಯರ್ ಬೆಟ್ಟಿಂಗ್ ಕಟ್ಟಿದ್ದರು. ಸುಮಾರು ಮೂರು ಗಂಟೆಗಳ ಕಾಲ ಈ ಎರಡು ತಂಡ ಸಾಹಸ ಮಾಡಿದ್ದರೂ ಪಿರಮಿಡ್ ಮಾಡಲು ವಿಫಲರಾದ್ದರು. ಸಾಧ್ಯವೇ ಇಲ್ಲ ಆಗುವುದೇ ಇಲ್ಲ ಎಂದು ಟಾಸ್ಕ್‌ ರೂಮಿನಿಂದ ಹೊರ ನಡೆದರು. ಈ ಗೇಮ್‌ ಹೇಗೆ ಆಟವಾಡಬಹುದು ಎಂದು ಇನ್ನಿತ್ತರ ಸ್ಪರ್ಧಿಗಳು ಮನೆಯಲ್ಲಿ ಚರ್ಚೆ ಮಾಡುತ್ತಿದ್ದ ಕಾರಣ ಬಿಗ್ ಬಾಸ್ ಎರಡನೇ ಅವಕಾಶ ಕೊಡಲು ಪ್ಲ್ಯಾನ್ ಮಾಡುತ್ತಾರೆ. 

ಆಗ ದೀಪಿಕಾ ದಾಸ್ -ಅಮೂಲ್ಯ ಗೌಡ ಒಂದು ತಂಡ, ದಿವ್ಯಾ ಉರುಡುಗ - ಐಶ್ವರ್ಯ ಒಂದು ತಂಡವಾಗಿ ಟಾಸ್ಕ್‌ ರೂಮ್ ಪ್ರವೇಶಿಸುತ್ತಾರೆ. ದೀಪಿಕಾ ದಾಸ್ ತಂಡ ಗೆಲ್ಲುತ್ತದೆ ಎಂದು ರೂಪೇಶ್ ರಾಜಣ್ಣ ಮತ್ತು ರಾಕೇಶ್ ಬೆಟ್ಟಿಂಗ್ ಕಟ್ಟುತ್ತಾರೆ. ಟಾಸ್ಕ್‌ ಆರಂಭವಾಗಿ 2 ನಿಮಿಷ ಆಗುವಷ್ಟರಲ್ಲಿ ದಿವ್ಯಾ ಉರುಗುಡ ಪಿರಮಿಡ್ ನಿರ್ಮಾಣ ಮಾಡುತ್ತಾರೆ. ಕೊನೆಯಲ್ಲಿ ನಾಲ್ಕು ಬಾಲ್ ಉಳಿದುಕೊಳ್ಳುತ್ತದೆ ಆದನ್ನು ಹೇಗೆ ಸರಿ ಮಾಡಬೇಕು ಎಂದು ಯೋಚನೆ ಮಾಡಿ ಗೇಮ್ ಮುಗಿಸುತ್ತಾರೆ. ದಿವ್ಯಾ ಮತ್ತು ಐಶ್ವರ್ಯ ಗೆದ್ದು 1 ಅಂಕ ಪಡೆಯುತ್ತಾರೆ, ಬೆಟ್ಟಿಂಗ್ ಕಟ್ಟಿ ರಾಕೇಶ್ ಮತ್ತು ರೂಪೇಶ್ ಸೋಲುತ್ತಾರೆ. 

ಕಡಿಮೆ ಅವಧಿಯಲ್ಲಿ ಟಾಸ್ಕ್‌ ಮುಗಿಸಲು ದಿವ್ಯಾ ಯಾವ ಪ್ಲ್ಯಾನ್ ಬಳಸಿದ್ದರು ಎಂದು ಬಿಬಿ ಸದಸ್ಯರು ಪ್ರಶ್ನೆ ಮಾಡುತ್ತಾರೆ. 'ಪಿರಮಿಡ್‌ ಹೇಗೆ ಮಾಡಬೇಕು ಎಂದು ನಾವೆಲ್ಲರೂ ಪ್ರಯತ್ನ ಮಾಡುವಾಗ ಯೋಚನೆ ಮಾಡುತ್ತಿದ್ದೆ. ಟಾಸ್ಕ್‌ ಮಾಡುವಾಗ ಯೋಚನೆ ಬಂದು ಪಿರಮಿಡ್‌ ಮಾಡಲು 24 ಬಾಲ್‌ಗಳಿದೆ. ಹಾಗಿದ್ರೆ 4 ಅಥವಾ ಮೂರು ರೀತಿಯಲ್ಲಿ ನಿಲ್ಲಿಸಬೇಕು 2 ಇಲ್ಲ..ಒಂದು ಸಲ ಯೋಚನೆ ಮಾಡಿ ಟ್ರೈ ಮಾಡಿದೆ ಸರಿ ಆಯ್ತು' ಎಂದು ದಿವ್ಯಾ ಉತ್ತರಿಸುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!