ಡಿವೋರ್ಸ್ ಬಳಿಕವೂ ನಿವೇದಿತಾ-ಚಂದನ್ ಒಟ್ಟಿಗೇ ಇದ್ದಾರಾ? ಇನ್ಸ್ಟಾಗ್ರಾಮ್ ನೋಡಿ ಶುರುವಾಗಿದೆ ಗುಸುಗುಸು. ಏನಿದರ ಹಕೀಕತ್ತು?
ಕ್ಯೂಟ್ ಕಪಲ್ ಎಂದೇ ಕರೆಯಲ್ಪಡುತ್ತಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಕೊಟ್ಟಿರುವ ಸುದ್ದಿ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಿದೆ. ಇದು ನಿಜವೋ, ಸುಳ್ಳೋ ಎಂದು ಅಭಿಮಾನಿಗಳು ತಡಕಾಡುವಷ್ಟರಲ್ಲಿಯೇ ಸುದ್ದಿ ತಿಳಿದ ದಿನವೇ ಡಿವೋರ್ಸ್ ಕೂಡ ತೆಗೆದುಕೊಂಡು ಆಗಿತ್ತು. ವಿಚ್ಛೇದನ ಕೋರಿ ಇಬ್ಬರೂ ಕೋರ್ಟ್ಗೆ ಹೋಗಿದ್ದಾರೆ ಎನ್ನುವ ಸುದ್ದಿಯಾಗುತ್ತಲೇ ಕೋರ್ಟ್ ಡಿವೋರ್ಸ್ ಕೂಡ ಕೊಟ್ಟು ಬಿಟ್ಟಿದೆ. ಈಗ ಇವರಿಬ್ಬರ ಡಿವೋರ್ಸ್ಗೆ ಹಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ನಿಜವಾದ ಕಾರಣ ಮಾತ್ರ ಸದ್ಯ ಎಲ್ಲಿಯೂ ರಿವೀಲ್ ಆಗಿಲ್ಲ. ಮೊನ್ನೆ ಮೊನ್ನೆಯವರೆಗೂ ಒಟ್ಟಿಗೇ ಇದ್ದವರು ದಿಢೀರ್ ಈ ನಿರ್ಧಾರಕ್ಕೆ ಬಂದ್ರಾ ಅಥ್ವಾ ಮೊದಲೇ ಪ್ಲ್ಯಾನ್ ಹಾಕಿಕೊಂಡು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕೊನೆಯವರೆಗೂ ನಡೆದುಕೊಂಡ್ರಾ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಅಷ್ಟಕ್ಕೂ ಈ ಜೋಡಿ ಗಲಾಟೆ ಏನೂ ಮಾಡಿಕೊಳ್ಳದೇ ಡಿವೋರ್ಸ್ ಪಡೆದುಕೊಂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿ, ಇಬ್ಬರೂ ಡಿವೋರ್ಸ್ ಬಳಿಕವೂ ಕೈ ಕೈ ಹಿಡಿದುಕೊಂಡು ಕೋರ್ಟ್ ಹಾಲ್ನಿಂದ ಹೊರಕ್ಕೆ ಹೋಗಿರುವುದು. ಹೀಗೆ ಹಲವಾರು ಸೆಲೆಬ್ರಿಟಿಗಳು ಫ್ರೆಂಡ್ಲಿ ಡಿವೋರ್ಸ್ ಪಡೆದುಕೊಂಡಂತೆ ಇವರೂ ಪಡೆದುಕೊಂಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿದ್ದಾರೆ.
ಆದರೆ ಇದರ ಮಧ್ಯೆಯೇ, ಸೋಷಿಯಲ್ ಮೀಡಿಯಾದಲ್ಲಿ ಈಗ ಮತ್ತೊಂದು ಚರ್ಚೆ ಶುರುವಾಗಿದೆ. ಅದೇನೆಂದರೆ, ಜೋಡಿ ಡಿವೋರ್ಸ್ಗೆ ವಿಚ್ಛೇದನ ಸಲ್ಲಿಸಿದ್ದು ಹೌದೋ ಅಲ್ಲವೋ ಎನ್ನುವುದಕ್ಕೆ ಹಲವರು ಇಬ್ಬರ ಇನ್ಸ್ಟಾಗ್ರಾಮ್ ಖಾತೆಯನ್ನು ಚೆಕ್ ಮಾಡಿದ್ದಾರೆ. ಇದರಲ್ಲಿ ಇಬ್ಬರೂ ತಾವು ವಿಚ್ಛೇದನ ಪಡೆದುಕೊಂಡಿರುವುದು ನಿಜ ಎಂಬ ಅರ್ಥದಲ್ಲಿ ಬರೆದುಕೊಂಡಿದ್ದಾರೆ. 'ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ,ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೆವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ನಿವೇದಿತಾ ಗೌಡ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಅವರು ಇಂಗ್ಲಿಷ್ನಲ್ಲಿಯೂ ಬರೆದುಕೊಂಡಿದ್ದಾರೆ.
ಕುತೂಹಲದ ವಿಷಯ ಏನೆಂದರೆ ಇದನ್ನೇ ಚಂದನ್ ಶೆಟ್ಟಿ ಕೂಡ ಬರೆದಿದ್ದಾರೆ. ಚಂದನ್ ಶೆಟ್ಟಿ ಎಂದು ಇರುವ ಜಾಗದಲ್ಲಿ, ನಿವೇದಿತಾ ಗೌಡ ಎಂದು ಇದೆ ಬಿಟ್ಟರೆ ಇಬ್ಬರೂ ಡಿಟ್ಟೋ ಡಿಟ್ಟೋ ಬರೆದಿದ್ದಾರೆ. ಹಾಗಿದ್ದರೆ ಕೈಕೈ ಹಿಡಿದು ಇಬ್ಬರೂ ಒಟ್ಟಿಗೇ ಮನೆಗೆ ಹೋದ್ರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇಬ್ಬರ ನಡುವೆ ಏನು ನಡೀತಿದೆ ಎಂದು ಇನ್ನು ಕೆಲವರು ಕೇಳುತ್ತಿದ್ದಾರೆ. ಡಿವೋರ್ಸ್ ಆದ ಮೇಲೆ ಒಟ್ಟಿಗೇ ಕುಳಿತು ಯಾರೋ ಒಬ್ಬರು ಬರೆದು ಇಬ್ಬರ ಹೆಸರಿನಲ್ಲಿಯೂ ಪೋಸ್ಟ್ ಮಾಡಿದ್ರಾ, ಡಿವೋರ್ಸ್ ಬಳಿಕವೂ ಒಟ್ಟಿಗೇ ಇರ್ತಾರಾ ಎಂಬೆಲ್ಲಾ ಪ್ರಶ್ನೆ ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಚಂದನವನದ ಜೋಡಿಯ ಬಗ್ಗೆ ಅಭಿಮಾನಿಗಳು ಸಕತ್ ತಲೆ ಕೆಡಿಸಿಕೊಂಡಿದ್ದಾರೆ.
ಎಕ್ಸೈಟ್ ಇಲ್ಲದ ಚಂದನ್, ಎಲ್ಲದಕ್ಕೂ ಅತ್ಯುತ್ಸಾಹ ತೋರೋ ನಿವೇದಿತಾ: ಜೋಡಿ ಪರಸ್ಪರ ದೂರಿದ್ದೇನು?