
ಕನ್ನಡ ಕಿರುತೆರೆಯ ಜನಪ್ರಿಯ ವ್ಯಕ್ತಿ ಕಿರಿಕ್ ಕೀರ್ತಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟ ಬದಲಾವಣೆಗಳು ಆಗಿದೆ. ಸಿಂಗಲ್ ಪೇರೆಂಟಿಂಗ್‌ನ ಎಂಜಾಯ್ ಮಾಡುತ್ತಿರುವ ಕೀರ್ತಿ ಎಷ್ಟು ಕಷ್ಟ ಎದುರಿಸಿದ್ದಾರೆ? ತಮ್ಮ ಮಗನಿಗೆ ಡಿವೋರ್ಸ್ ಬಗ್ಗೆ ಅರ್ಥ ಮಾಡಿಸಲು ಹೇಗೆ ಮುಂದಾದರು ಎಂದು ಹಂಚಿಕೊಂಡಿದ್ದಾರೆ.
'ಇದ್ದಕ್ಕಿದ್ದಂತೆ ಏನೂ ಆಗಿಲ್ಲ ನಾವಿಬ್ಬರೂ ಖುಷಿಯಾಗಿ ದೂರವಾಗಿದ್ದು. ಕಿತ್ತಾಡಿಕೊಂಡು ಜಗಳ ಮಾಡಿಕೊಂಡು ಹೋಗಿಲ್ಲ ಒಳ್ಳೆ ರೀತಿಯಲ್ಲಿ ಹೋಗಿದ್ದು. ಸತ್ಯ ಸತ್ಯತೆಗಳನ್ನು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ನಿರ್ಧಾರ ತೆಗೆದುಕೊಂಡಿರುವುದು. ಸೋಷಿಯಲ್ ಮೀಡಿಯಾದಲ್ಲಿ ಕುಳಿತುಕೊಂಡು ಪೋಸ್ಟ್ ಹಾಕುತ್ತಾರೆ ಅವರಿಗೆ ಏನು ನಡೆದಿದೆ ಅನ್ನೋದು ಗೊತ್ತಿಲ್ಲ ನಿಜ ಹೇಳಬೇಕು ಅಂದ್ರೆ ಒಂದುವರೆ ವರ್ಷದ ಕೆಳಗೆ ನಾನು ಸೂಸೈಡ್ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೆ. ಕೀರ್ತಿ ಸತ್ತೋಗಿದ್ದಾನೆ ಕೀರ್ತಿ ಸೂಸೈಡ್ ಮಾಡಿಕೊಂಡ ಹಾಗೆ ಹೀಗೆ ಅಂತ ಸುದ್ದಿ ಮಾಡಿ ಬಿಟ್ಟರು...ತುಂಬಾ ಸೀರಿಯಸ್ ಆಗಿ ಡಿಪ್ರೆಶನ್‌ಗೆ ಜಾರಿದೆ ಅದರಿಂದ ಹೊರ ಬರುವುದು ಸಖತ್ ಕಷ್ಟ ಆಗಿತ್ತು' ಎಂದು ರಾಜೇಶ್ ಯೂಟ್ಯೂಬ್ ಸಂದರ್ಶನದಲ್ಲಿ ಕಿರಿಕ್ ಕೀರ್ತಿ ಮಾತನಾಡಿದ್ದಾರೆ.
ಮಗನನ್ನು ನೆನೆದು ಭಾವುಕರಾದ ಕಿರಿಕ್ ಕೀರ್ತಿ; 60 ಸೆಕೆಂಡ್ ಯಾಕೆ ಸ್ಪೆಷಲ್?
'ಆತ್ಮಕ್ಕೆ ತುಂಬಾ ನೋವಾಗಬಾರದು ಆದರೆ ನನಗೆ ನೋವಾಗಿತ್ತು ಅಲ್ಲಿಯೇ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಆ ಕ್ಷಣಕ್ಕೆ ಅಂತ ಬರುವುದು. ಯಾರ ಫೋನ್ ಸ್ವೀಕರಿಸುತ್ತಿರಲಿಲ್ಲ ಯಾರೊಟ್ಟಿಗೂ ಮಾತನಾಡುತ್ತಿರಲಿಲ್ಲ ಆ ಕ್ಷಣದಲ್ಲಿ ಕೆಟ್ಟ ಯೋಚನೆ ಬಂದಿದೆ ಅದರಿಂದ ಹೊರ ಬರೋಣ ಎಂದು ಮೂರ್ನಾಲ್ಕು ತಿಂಗಳು ತೆಗೆದುಕೊಂಡೆ. ನಾನು ಇನ್ನೂ ಸತ್ತಿಲ್ವಾ ಎಂದು ಕಾಮೆಂಟ್ ಮಾಡುವವರೂ ಇದ್ದಾರೆ ಅಂದ್ರೆ ನನ್ನ ಸಾವು ಸಂಭ್ರಮಿಸುವವರೂ ಇದ್ದಾರೆ. ನನ್ನನ್ನು ಪ್ರೀತಿಸುವ ಜನರು ತುಂಬಾ ಇದ್ದಾರೆ ಅದನ್ನು ಖುಷಿಯಿಂದ ಎಂಜಾಯ್ ಮಾಡಬೇಕು ಎಂದುಕೊಂಡಿರುವೆ. ನಾವು ಯಾಕೆ ಡಿವೋರ್ಸ್ ನಿರ್ಧಾರ ತೆಗೆದುಕೊಳ್ಳುತ್ತಿದ್ದೀವಿ ಅನ್ನೋದು ನಮಗೆ ಗೊತ್ತಿತ್ತು ಹೀಗಾಗಿ ಯಾರೇ ಬಂದು ಡಿವೋರ್ಸ್ ಸರಿ ಮಾಡಲು ಹೋದರೂ ನಾವು ಒಂದಾಗುತ್ತಿರಲಿಲ್ಲ' ಎಂದು ಕೀರ್ತಿ ಹೇಳಿದ್ದಾರೆ.
ಸುದೀಪ್ ಸರ್ ಯಾಕೆ ಆ ವ್ಯಕ್ತಿನ ಪ್ರಶ್ನೆ ಮಾಡ್ತಿಲ್ಲ?; Scripted ಬಗ್ಗೆ ಸತ್ಯ ಬಿಚ್ಚಿಟ್ಟ ಕಿರಿಕ್ ಕೀರ್ತಿ
'ಮಗನಿಗೆ ಸ್ವಲ್ಪ ದಿನ ಸಮಸ್ಯೆ ಆಗಿದೆ ಆತನಿಗೆ 8 ವರ್ಷ ಕೊಂಚ ಮೆಚ್ಯೂರಿಟಿ ಇದೆ Appa you both are seperate right? ಎಂದು ಕೇಳಿದ ನಾನು ಹೌದು ಎಂದು ಹೇಳಿದೆ. ನನಗೆ ಗೊತ್ತಾಗಿತ್ತು ಪರ್ವಾಗಿಲ್ಲ ಇಬ್ಬರೂ ಖುಷಿಯಾಗಿ ಇರಿ ಎಂದ. ಅವನ ಮಾತು ಕೇಳಿ ನನಗೆ ನೆಮ್ಮದಿಯ್ತು. ಅವನಿಗೆ ಅರ್ಥ ಮಾಡಿಸುವ ಭಯ ಶುರುವಾಗಿತ್ತು ಆದರೆ ಅವನಿಗೆ ಅರ್ಥವಾಗಿದೆ' ಎಂದಿದ್ದಾರೆ ಕೀರ್ತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.