ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಚೇದನದ ಬಗ್ಗೆ ಚಂದನ್‌ ಆಪ್ತ ನಿರ್ಮಾಪಕ ನವರಸನ್ ಹೇಳಿಕೆ, ಇದು ನಿಜಾನಾ?

By Suvarna News  |  First Published Jun 8, 2024, 12:26 PM IST

 ಚಂದನ್ ಶೆಟ್ಟಿ ಮತ್ತು  ನಿವೇದಿತಾ ಗೌಡ ವಿಚ್ಚೇದನದ ಬಗ್ಗೆ ಚಂದನ್ ಆಪ್ತ, ನಿರ್ದೇಶಕ, ನಿರ್ಮಾಪಕ ನವರಸನ್ ಹೇಳಿಕೆ ನೀಡಿದ್ದಾರೆ.


ಬಿಗ್ ಬಾಸ್ ಖ್ಯಾತಿಯ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ರೀಲ್ಸ್ ಸ್ಟಾರ್ ನಿವೇದಿತಾ ಗೌಡ ಅವರ 4 ವರ್ಷಗಳ ದಾಂಪತ್ಯ ಅಂತ್ಯವಾಗಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ಒಂದೇ ದಿನದಲ್ಲಿ ವಿಚ್ಚೇದನ ಪಡೆದುಕೊಂಡು ಬೇರೆ ಬೇರೆಯಾಗಿ ಸುದ್ದಿಯಾಗಿದ್ದಾರೆ.

ಇದೀಗ ಚಂದನ್ ಆಪ್ತ, ನಿರ್ದೇಶಕ, ನಿರ್ಮಾಪಕ ನವರಸನ್ ಹೇಳಿಕೆ ನೀಡಿ ನಮ್ಗೂ ಇದು ಶಾಕಿಂಗ್,  ಟಿವಿ ನೋಡಿದಾಗ್ಲೇ ಗೊತ್ತಾಯ್ತು. ನೆನ್ನೆ ಮಧ್ಯಾಹ್ನ ತನಕ ಚಂದನ್ ಜೊತೆನೇ ಮಾತಾಡಿದ್ದೆ. ನಮ್ ಸಿನಿಮಾದಲ್ಲಿ ಚಂದನ್ ನಟಿಸಿದ್ದಾರೆ. ಯಾಕೆ ಈ ಥರ ನಿರ್ಧಾರ ತೆಗೆದುಕೊಂಡಿದ್ದಾರೆ ಅಂತ ಗೊತ್ತಾಗ್ತಿಲ್ಲ. ನಿವೇದಿತಾ ತುಂಬಾ ಒಳ್ಳೆ ಹುಡುಗಿ. ನಿವೇದಿತಾ ಹಾಗೂ ಚಂದನ್ ಕೆರಿಯರ್ಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನಿಸುತ್ತೆ.

Tap to resize

Latest Videos

ಚಂದನ್‌ -ನಿವೇದಿತಾ ಒಂದೇ ದಿನದಲ್ಲಿ ಡಿವೋರ್ಸ್ ಆಗಿದ್ದು ಇದೊಂದೇ ಕಾರಣಕ್ಕಾ? ನೆಟ್ಟಿಗರ ಹಲವು ಅನುಮಾನ!

ಇಬ್ಬರೂ ಅನ್ನೋನ್ಯವಾಗಿ ಇದ್ದಾರೆ. ಯಾವ ಗಲಾಟೆಯೂ ಇಲ್ಲ. ಪರಸ್ಪರ ಒಪ್ಪಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಿವೇದಿತಾ ಕನಸುಗಳಿಗೆ ಚಂದನ್ ಸಾಥ್ ಕೊಟ್ಟಿದ್ದಾರೆ. ಚಂದನ್ ಕನಸುಗಳಿಗೆ ನಿವೇದಿತಾ ಸಪೋರ್ಟ್ ಮಾಡ್ತಿದ್ರು. ನಿವೇದಿತಾ ನಾಯಕಿಯಾಗಿ ಸಿನಿಮಾ ಮಾಡ್ತಿದ್ದಾರೆ. ಇದು ವಿಚ್ಚೇದನಕ್ಕೆ ಕಾರಣ ಆಯ್ತಾ ಅನ್ನಿಸುತ್ತೆ. ಚಂದನ್‌ ಗೆ ಕಾಲ್ ಮಾಡ್ತಿದ್ದೀನಿ ಆದರೆ ನಂಬರ್ ಸ್ವಿಚ್ ಆಫ್ ಬರ್ತಿದೆ. ಮೊದಲು ಫೋನ್ ಎತ್ತಿದ್ರೆ ಈ ಬಗ್ಗೆ ಕ್ಲಾರಿಟಿ ಕೊಡೋಕೆ ಹೇಳ್ತೀನಿ ಎಂದಿದ್ದಾರೆ. ಚಂದನ್‌ ಮತ್ತು  ನಿರ್ಮಾಪಕ ನವರಸನ್  ಕಾಂಬಿನೇಷನ್‌ನಲ್ಲಿ ಸೂತ್ರಧಾರಿ ಎಂಬ ಸಿನೆಮಾ ತಯಾರಾಗುತ್ತಿದೆ.

ಚಂದನ್ -ನಿವೇದಿತಾ ವಿಚ್ಛೇದನ: ಮಗು ಮಾಡಿಕೊಳ್ಳೋ ವಿಚಾರಕ್ಕೆ ಇಬ್ಬರ ಮಧ್ಯೆ ಮೂಡಿತಾ ಬಿರುಕು?

ಇನ್ನು ತಾವಿಬ್ಬರೂ ಒಮ್ಮತದಿಂದ ವಿಚ್ಚೇದನ ಪಡೆದುಕೊಂಡಿದ್ದೇವೆ ಎಂದು ನಿನ್ನೆ ರಾತ್ರಿ ಘೋಷಿಸಿದ ಬಳಿಕ. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ದೂರವಾಗಿರುವ ಬಗ್ಗೆ ತರಹೇವಾರಿ ಕಮೆಂಟ್ಸ್ ಗಳು ಬರುತ್ತಿದೆ. ನಿವೇದಿತಾ ಅವರು ಯಾರ ಜೊತೆಗೆಲ್ಲ ತುಂಬಾ ಆತ್ಮೀಯರಾಗಿದ್ದರು. ಅವರ ಜೊತೆಗೆಲ್ಲ ಫೋಟೋ ವಿಡಿಯೋಗಳನ್ನು ಹಾಕಿ ಟ್ರೋಲ್‌ ಮಾಡಲಾಗುತ್ತಿದೆ.  ಇದರಲ್ಲಿ ಮುಖ್ಯವಾಗಿ ಸೃಜನ್‌ ಲೋಕೇಶ್ ಅವರ ಜೊತೆಗಿರುವ ಫೋಟೋ ಹಾಕಿ ಇವರಿಬ್ಬರೂ ದೂರವಾಗಲು ಸೃಜನ್ ಕಾರಣವಾಗಿರಬೇಕು ಎಂದೆಲ್ಲ ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

click me!