
ಒಂದು ಕಡೆ ಹರ್ಷ ಸೋನೆ ಹನಿಯಂತೆ ಹೌದೋ ಅಲ್ಲವೋ ಅಂತ ಕಾಣುವ ಹರ್ಷ ಮತ್ತು ಭುವಿಯ ಪ್ರೀತಿ, ಇನ್ನೊಂದು ಕಡೆ ಅಮ್ಮಮ್ಮನ ಕೆಪ್ಯಾಸಿಟಿ, ಮತ್ತೊಂದು ಕಡೆ ಸಾನ್ಯಾ, ವರೂ ಕುತಂತ್ರ.. ಇಷ್ಟೆಲ್ಲ ಎಳೆಗಳ ನಡುವೆ 'ಕನ್ನಡತಿ' ಅನ್ನೋ ಅಚ್ಚಗನ್ನಡದ ಧಾರಾವಾಹಿ ಪ್ರಸಾರವಾಗ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ ಹೆಚ್ಚು ಜನಪ್ರಿಯತೆ ಪಡೆದಿರೋದಕ್ಕೆ ಇದರ ಡಿಫರೆಂಟ್ ಆಗಿರುವ ಕತೆ, ಕಲಾವಿದರ ಸಖತ್ ನಟನೆ ಮುಖ್ಯ ಕಾರಣ. ಈ ಸೀರಿಯಲ್ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ. ಇದಕ್ಕೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅವರು ಕನ್ನಡತಿ ಸೀರಿಯಲ್ ನ ಬಗ್ಗೆ ಅಭಿಮಾನ ಮಾತ್ರವಲ್ಲ, ಸ್ವಲ್ಪ ಹೆಚ್ಚೇ ಪೊಸ್ಸೆಸ್ಸಿವ್ ನೆಸ್ ಇಟ್ಕೊಂಡಿದ್ದರು. ಈಗ ಆ ಪೊಸೆಸ್ಸಿವ್ ನೆಸ್ ಸ್ವಲ್ಪ ಕಡಿಮೆ ಆದ ಹಾಗಿದೆ. ಸೀರಿಯಲ್ ಅಂದರೆ ಹೆಂಗಸರು ಮಾತ್ರ ನೋಡೋದು ಅನ್ನೋ ಅಭಿಪ್ರಾಯವನ್ನು ಬದಲಿಸಿದ ಧಾರಾವಾಹಿ ಇದು. ಗಂಡಸರು, ಕಾಲೇಜು ಹುಡುಗ್ರ ಜೊತೆಗೆ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ಎಲ್ಲರಿಗೂ ಬೇಕಾದ ಅಂಶಗಳನ್ನ ಒಳಗೊಂಡು ಕೊಂಚವೂ ಅಸಭ್ಯ ಅನಿಸದ ಹಾಗೆ ಈ ಸೀರಿಯಲ್ ಇದೆ. ಸದ್ಯಕ್ಕೀಗ ನಿರೀಕ್ಷಿತ ಕ್ಷಣ ಹತ್ತಿರ ಬರುವ ಸೂಚನೆ ಕಾಣ್ತಿದೆ. ಅಮ್ಮಮ್ಮ ತನ್ನ ಕಂಪನಿಯ ಅತೀ ಮುಖ್ಯ ಹುದ್ದೆಯನ್ನು ಭುವಿಗೆ ಕೊಡಲು ರೆಡಿಯಾಗಿದ್ದಾಳೆ. ಇದನ್ನು ಕದ್ದು ಕೇಳಿಸಿಕೊಂಡ ಸಾನಿಯಾ ಉರಿದು ಬೀಳ್ತಿದ್ದಾಳೆ.
ಹರ್ಷ ಭುವಿಯನ್ನು ನೋಡೋ ಮೊದಲೇ ಅಮ್ಮಮ್ಮನಿಗೆ ಇವಳೇ ತನ್ನ ಮಗನನ್ನು ಕೈ ಹಿಡೀತಾಳೆ ಅಂತ ಬಲವಾಗಿ ಅನಿಸಿತ್ತು. ಹೀಗಾಗಿ ಹರ್ಷ ಭುವಿ ಮದುವೆ ಬಿಡಿ, ಅವರಿಬ್ಬರ ಪರಿಚಯ ಆಗೋ ಮೊದಲೇ ತನ್ನ ಎಲ್ಲ ಆಸ್ತಿಯನ್ನು ಅವಳ ಹೆಸರಿಗೆ ಬರೆಸಿದ್ದಳು. ಏನೇನೋ ತಿರುವುಗಳಾಗಿ ಭುವಿ, ಹರ್ಷನನ್ನು ಮದುವೆ ಆಗಿದ್ದಾಳೆ. ಆ ಮನೆ ಸೊಸೆಯಾಗಿದ್ದಾಳೆ. ಇಷ್ಟು ದಿನ ಭುವಿ ಮದುವೆ ಆಗಿ ಸ್ವಲ್ಪ ಆರಾಮವಾಗಿರಲಿ ಅಂತ ಬಿಟ್ಟಿದ್ದ ರತ್ನಮಾಲಾ ಇದೀಗ ಸದ್ಯಕ್ಕೆ ತನ್ನ ನಂತರದ ಕಂಪನಿಯ ಎಂಡಿ ಸ್ಥಾನವನ್ನೇ ಭುವಿಗೆ ಕೊಡಲು ರೆಡಿಯಾಗಿದ್ದಾಳೆ. ಅವಳನ್ನು ತಮ್ಮ ರೂಮಿಗೆ ಕರೆದಿದ್ದಾಳೆ. ತನ್ನ ಬಾಸ್ ಚೇರ್ ಮೇಲೆ ಕೂರಿಸಿ, ಭುವಿ ಇನ್ಮೇಲೆ ಕಂಪನಿ ಜವಾಬ್ದಾರಿ ತೆಗೆದುಕೋ ಎಂದು ಹೇಳುತ್ತಿದ್ದಾಳೆ. ಇದು ಭುವಿ ಮಾಲಾ ಕೆಫೆಯ ಒಡತಿಯಾಗುತ್ತಿರುವುದರ ಮೊದಲ ಹೆಜ್ಜೆ.
ಸದಾ ಪತ್ತೇದಾರಿ ಕೆಲಸ ಮಾಡುತ್ತಿರುವ ವಿಲನ್ ಸಾನ್ಯಾಗೆ ಭುವಿಯನ್ನು ಅಮ್ಮಮ್ಮ ರೂಮಿಗೆ ಕರೆದುಕೊಂಡು ಹೋಗುವುದನ್ನು ನೋಡಿಯೂ ಅನುಮಾನ ಬಂದಿದೆ. ಅವರನ್ನು ಈಕೆ ಅವರಿಗೆ ತಿಳಿಯದ ಹಾಗೆ ಹಿಂಬಾಲಿಸಿದ್ದಾಳೆ. ಅವರು ಬಾಗಿಲು ಹಾಕಿದ್ದನ್ನು ನೋಡಿ ಕದ್ದು ಒಳಗಿನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾಳೆ. ಅಮ್ಮಮ್ಮ ಭುವಿಗೆ ಎಂಡಿ ಆಗು ಅನ್ನುವುದನ್ನು ಕೇಳಿಸಿಕೊಂಡು ಶಾಕ್ ಆಗಿದ್ದಾಳೆ. ಇನ್ನು ತನ್ನನ್ನು ಎಂಡಿ ಪೋಸ್ಟ್ ನಿಂದ ತೆಗೆಯುತ್ತಾರೆ, ತಾನಿನ್ನು ಭುವಿಯ ಅಡಿಯಾಳು ಎಂಬುದು ಅವಳಿಗೆ ಶಾಕ್ ನೀಡುತ್ತಿದೆ.
ಲಿಪ್ ಕಿಸ್ ಮಾಡಿ ವಿಡಿಯೋ ಹಂಚಿಕೊಂಡ ಮಿಲಿಂದ್ ಸೋಮನ್: ಇದಕ್ಕಿಂತ ಇನ್ನೇನು ಬೇಕು ಎಂದ ನಟ
ಹೀಗೆ ರೂಮಿನ ಹೊರಗೆ ನಿಂತು ಅಮ್ಮಮ್ಮ-ಭುವಿ ರೂಮಲ್ಲಿ ಮಾತನಾಡುವುದನ್ನು ಸಾನಿಯಾ ಕದ್ದು ಕೇಳಿಸಿಕೊಳ್ಳುತ್ತಿರುವಾಗಲೇ ಅಲ್ಲಿಗೆ ಹರ್ಷನ ಎಂಟ್ರಿ ಆಗುತ್ತದೆ. ಸಾನ್ಯಾ ನೆರಳನ್ನು ಕಂಡರೂ ಉರಿದು ಬೀಳುವ ಹರ್ಷ ಅವಳು ಅಮ್ಮಮ್ಮನ ರೂಮಿನಲ್ಲಿ ಕದ್ದು ಕೇಳಿಸಿಕೊಳ್ಳುವುದನ್ನು ನೋಡಿದ್ದಾನೆ. ಅವನು ಸಾನ್ಯಾಳನ್ನು ನೋಡುತ್ತಿರುವಾಗಲೇ ಸಾನ್ಯಾ ಅವನನ್ನು ನೋಡಿದ್ದಾಳೆ. ಇದ್ದಕ್ಕಿದ್ದ ಹಾಗೆ ಎದುರಾದ ಹರ್ಷನನ್ನು ಕಂಡು ಬೆಚ್ಚಿ ಬಿದ್ದಿರುವ ಆಕೆಗೆ ಏನು ಉತ್ತರ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಗ್ರಹಚಾರ ಕೆಟ್ಟಂತೆ ಈಕೆ ಶಾಕ್ ಮೇಲೆ ಶಾಕ್ ಆಗಿದ್ದಾಳೆ. ಮುಂದೆ ಸಾನ್ಯಾ ಕತೆ ಏನಾಗಬಹುದು, ಈಗ ತಣ್ಣಗಿರುವ ವರೂಧಿನಿ ಎಲ್ಲಿ ಬೆಂಕಿ ಹಚ್ಚಬಹುದು, ಹರ್ಷ ಭುವಿ ಡಿವೋರ್ಸ್ ಪೇಪರ್ ಸಿದ್ಧ ಪಡಿಸಿರುವ ಈಕೆ ಅವರಿಂದ ಡಿವೋರ್ಸ್ ಪಡೆಯುವಷ್ಟು ಚಾಣಾಕ್ಷತೆ ಹೊಂದಿದ್ದಾಳೆ. ಇದರಿಂದ ಮತ್ತೇನು ತಿರುವು ಬರಬಹುದು ಅನ್ನೋದೆಲ್ಲ ಸದ್ಯ ಕುತೂಹಲ ಹುಟ್ಟಿಸಿರುವ ಅಂಶಗಳು.
ರಂಜನಿ ರಾಘವನ್, ಚಿತ್ಕಳಾ ಬಿರಾದಾರ್, ಕಿರಣ್ ರಾಜ್, ಆರೋಹಿ ನೈನಾ, ಸಾರಾ ಅಣ್ಣಯ್ಯ ಮೊದಲಾದವರು ಈ ಸೀರಿಯಲ್‌ನಲ್ಲಿ ನಟಿಸಿದ್ದಾರೆ.
ಸಿರಿ ಕನ್ನಡ ವಾಹಿನಿಯಲ್ಲಿ ಬರಲಿದೆ Matte Mayamruga
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.