ಸಂಕಷ್ಟದಲ್ಲಿ ಸಿಲುಕಿಕೊಂಡ ಕಾಫಿ ನಾಡು ಚಂದು. ಹಾಟ್ ವಿಡಿಯೋ ಲಿಂಕ್ ಕೊಟ್ಟ ಪುಂಡರ ವಿರುದ್ಧ ಗರಂ...
ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪ್ರತಿಭೆ ಬೆಳಕಿಗೆ ಬರುತ್ತದೆ ಅವರಲ್ಲಿ ಕಾಫಿ ನಾಡು ಚಂದು (Coffee Nadu Chandu) ಕೂಡ ಒಬ್ಬ. ಪಕ್ಕಾ ಪುನೀತ್ ಅಣ್ಣ ಮತ್ತು ಶಿವಣ್ಣ ಅಭಿಮಾನಿ ಎಂದು ಹೇಳಿಕೊಂಡು ಟ್ರೆಂಡ್‌ನಲ್ಲಿರುವ ಹಾಡುಗಳನ್ನು ಹಾಡುವ ಮೂಲಕ ನೆಟ್ಟಿಗರಿಗೆ ನಾನ್ ಸ್ಟಾಪ್ ಮನೋರಂಜನೆ ನೀಡುತ್ತಿರುವ ಕಾಫಿ ನಾಡು ಚಂದು ಈಗ ಹ್ಯಾಕರ್‌ಗಳಿಗೆ ಬಿಗ್ ಟಾರ್ಗೇಟ್.
ಹೌದು! ಕಾಫಿ ನಾಡು ಚಂದು ಇನ್‌ಸ್ಟಾಗ್ರಾಂ (Instagram Hack) ಖಾತೆ ಹ್ಯಾಕ್ ಮಾಡಲಾಗಿದೆ. ಮೊದಲ ಸ್ಟೋರಿಯಲ್ಲಿ ಫ್ರೀ ಸಿನಿಮಾಗಳನ್ನು ನೋಡಲು ಲಿಂಕ್ ಶೇರ್ ಮಾಡಲಾಗಿತ್ತು. ಆನಂತರ ಎರಡು ಸ್ಟೋರಿಗಳಲ್ಲಿ 150ಕ್ಕೂ ಹಾಟ್ ಹಾಟ್ ವಿಡಿಯೋ ನೋಡಲು ಲಿಂಕ್ ಇಲ್ಲಿದೆ ಎಂದು ಎರಡು ಲಿಂಕ್ ಶೇರ್ ಮಾಡಲಾಗಿತ್ತು. ಇಷ್ಟೆ ಅಲ್ಲ ಚಂದು ಕರ್ನಾಟಕದ ಶಾಲು ಧರಿಸಿರುವ ವಿಡಿಯೋ ಹಾಕಿ 'ಚಂದು ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿದೆ. ಹ್ಯಾಕ್ ಮಾಡಲು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಕಿಡಿಗೇಡಿಗಳು ಬರೆದುಕೊಂಡಿದ್ದರು.
ಚಂದು ಮೇಲೆ ಯಾಕೆ ಕೋಪ?
ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಚಂದು ಕಂಡರೆ ಅನೇಕರಿಗೆ ಹೊಟ್ಟೆ ಉರಿಯಾಗುತ್ತದೆ. ಆರಂಭದಲ್ಲಿ ಎಲ್ಲರಿಗೂ ಫ್ರೀ ಆಗಿ ಬರ್ತಡೇ ವಿಶ್ (Chandu birthday wish) ಮಾಡುತ್ತಿದ್ದ ಚಂದು ಈಗ ಒಂದು ವಿಶ್‌ಗೆ 500 ರೂಪಾಯಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳು ವಿಶ್ ಮಾಡುತ್ತಾರೆ ಮತ್ತು ಸೆಲ್ಫಿಗೆ ಫೋಸ್ ಕೊಡುತ್ತಾರೆ ಆದರೆ ಗಂಡು ಮಕ್ಕಳ ಬಗ್ಗೆ ಕೇರ್ ಕೂಡ ಮಾಡುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸುತ್ತಿದ್ದರು. ಆಟೋ ಚಲಾಯಿಸುವಾಗಲೇ ನಡು ರಸ್ತೆಯಲ್ಲಿ ನಿಲ್ಲಿಸಿ ಹಾಡಿಗೆ ಡ್ಯಾನ್ಸ್ ಮಾಡುತ್ತಾನೆ. ಕಾರ್ಯಕ್ರಮವಿದೆ ಎಂದು ಸಂಘಗಳು ಆಹ್ವಾನ ಕೊಟ್ಟರೆ ಕೇರ್ ಕೂಡ ಮಾಡುವುದಿಲ್ಲ. ಹೀಗೆ ಸಣ್ಣ ಪುಟ್ಟ ಆರೋಪಗಳನ್ನು ಇಟ್ಕೊಂಡು ಖಾತೆ ಹ್ಯಾಕ್ ಮಾಡಲಾಗಿದೆ ಎನ್ನಬಹುದು.
ಶಿವಣ್ಣ ಭೇಟಿ ಮಾಡಿದ ಚಂದು:
ಪ್ರತಿ ವಿಡಿಯೋ ಆರಂಭದಲ್ಲಿ ನಾನು ಪುನೀತ್ ಅಣ್ಣ (Puneeth Rajkumar) ಶಿವಣ್ಣ (Shiva Rajkumar) ಅಭಿಮಾನಿ ಎಂದು ಹೇಳುವ ಚಂದು ಈ ಹಿಂದು ಅಳುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು. ಪುನೀತ್ ಅಣ್ಣ ಅವರನ್ನು ಭೇಟಿ ಮಾಡಲು ಆಗಲಿಲ್ಲ ಶಿವಣ್ಣ ಅವರನ್ನು ಭೇಟಿ ಮಾಡಿ ತಬ್ಬಿಕೊಂಡು ಕಾಫಿ ಕುಡಿದು ಊಟ ಮಾಡಬೇಕು ಎಂದು ಹೇಳಿದ್ದರು. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance) ರಿಯಾಲಿಟಿ ಶೋನಲ್ಲಿ ತಂಡವೊಂದು ಚಂದುನ ಸಂಪರ್ಕ ಮಾಡಿ ವೇದಿಕೆ ಮೇಲೆ ಕರೆದು ಶಿವಣ್ಣ ಮತ್ತು ಆಂಕರ್ ಅನುಶ್ರೀನ (Anushree) ಭೇಟಿ ಮಾಡುವಂತೆ ಮಾಡಿದ್ದಾರೆ. ಶಿವಣ್ಣನ ತಬ್ಬಿಕೊಂಡು ಚಂದು ಮುದ್ದಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಅನುಶ್ರೀ ಮೇಲೆ ಅಪಾರ ಪ್ರೀತಿ ಎಂದು ಹೇಳಿ ಅನುಶ್ರೀಗೆ ವಿಶ್ ಮಾಡಿದ್ದರು ಹೀಗಾಗಿ ಚಂದುಗೆಂದು ದುಬಾರಿ ವಾಚ್ (Watch) ಗಿಫ್ಟ ಮಾಡಿದ್ದಾರೆ.
ಕಾಫಿನಾಡು ಚಂದುಗೆ ತವರಿನಲ್ಲೆ ಧಮಕಿ: ಏನಂತೆ?
ರಾಜಕೀಯಕ್ಕೆ ಚಂದು?
ಚಂದು ಸೋಷಿಯಲ್ ಮೀಡಿಯಾ ಮೂಲಕ ಪರೋಕ್ಷವಾಗಿ ಚಿತ್ರರಂಗಕ್ಕೆ ಕಾಲಿಟ್ಟಾಗಿದೆ. ಈಗ ರಾಜಕೀಯಕ್ಕೂ ಬರಬೇಕು ಎಂದು ಡಿಮ್ಯಾಂಡ್ ವೈರಲ್ ಆಗುತ್ತಿದೆ. ನನಗೆ ರಾಜಕೀಯ ಮಾಡಲು ಬರುವುದಿಲ್ಲ ನಾನು ರಾಜಕೀಯ ಮಾಡುವುದಿಲ್ಲ ನನಗೆ ಈಗ ಜನರು ಕೊಡುತ್ತಿರುವ ಪ್ರೀತಿ ಸಾಕು ಎಂದು ಚಂದು ಸ್ಪಷ್ಟನ ನೀಡಿದ್ದರು.