'ಮುದ್ದುಮಣಿಗಳು' ಧಾರಾವಾಹಿಯಿಂದ ಹೊರನಡೆದ ನಟಿ ಸಮೀಕ್ಷಾ: ಸೃಷ್ಟಿ ಪಾತ್ರಕ್ಕೆ ಯಾರ್ ಬರ್ತಾರೆ?

By Suvarna News  |  First Published Sep 11, 2022, 1:55 PM IST

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದುಮಣಿಗಳು' ಧಾರಾವಾಹಿಯ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಧಾರಾವಾಹಿ ಮುದ್ದುಮಣಿಗಳು ಕೂಡ ಒಂದು.


ಧಾರಾವಾಹಿಗಳಲ್ಲಿ ನಟ, ನಟಿಯರು ಬದಲಾಗುವುದು ಸಹಜ. ತನ್ನ ಅಗ್ರಿಮೆಂಟ್ ಮುಗಿದ ಬಳಿಕ ಅನೇಕರು ಕಲಾವಿದರು ಧಾರಾವಾಹಿಯಿಂದ ಹರಬರುತ್ತಾರೆ. ಇನ್ನು ಕೆಲವರು ಅದೇ ಧಾರಾವಾಹಿಯಲ್ಲೆ ಮುಂದುವರೆಯುತ್ತಾರೆ. ಇದೀಗ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದುಮಣಿಗಳು' ಧಾರಾವಾಹಿಯ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಧಾರಾವಾಹಿ ಮುದ್ದುಮಣಿಗಳು ಕೂಡ ಒಂದು. ಅಂದಹಾಗೆ ಈ ಧಾರಾವಾಹಿ ಮುದ್ದು ಲಕ್ಷ್ಮಿ ಧಾರಾವಾಹಿಯ ಮುಂದುವರೆದ ಭಾಗವಾಗಿದೆ. ಮುದ್ದು ಲಕ್ಷ್ಮಿ ಧಾರಾವಾಹಿಯ ಪುಟ್ಟ ಮಕ್ಕಳು ದೊಡ್ಡವರಾದ ಬಳಿಕ ಪ್ರಸಾರವಾಗುತ್ತಿರುವ ಧಾರಾವಾಹಿ ಮುದ್ದು ಮಣಿಗಳು. ಈ ಧಾರಾವಾಹಿಯಲ್ಲಿ ಅತೀ ದೊಡ್ಡ ಬದಲಾವಣೆಯಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. 

ಧಾರಾವಾಹಿಯ ನಾಯಕಿ ಸಮೀಕ್ಷಾ  ಮುದ್ದುಮಣಿಯಿಂದ ಹೊರಬರುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈ ಧಾರಾವಾಹಿಯಲ್ಲಿ ಸಮೀಕ್ಷಾ, ಸೃಷ್ಟಿ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದರು. ಸೃಷ್ಟಿಯಾಗಿ ಸಮೀಕ್ಷಾ ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. ಆದರೀಗ ಅಭಿಮಾನಿಗಳಿಗೆ ಬೇಸರದ ವಿಚಾರ ಹೊರಬಿದ್ದಿದ್ದು ಸಮೀಕ್ಷಾ ಈ ಧಾರಾವಾಹಿ ತೊರೆಯುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಈ ಬಗ್ಗೆ ಧಾರಾವಾಹಿ ಕಡೆಯಿಂದ ಅಥವಾ ನಟಿಯ ಕಡೆಯಿಂದ ಅಧಕೃತ ಮಾಹಿತಿ ಬಹಿರಂಗವಾಗಿಲ್ಲ.

Tap to resize

Latest Videos

ಇನ್ನು ಸಮೀಕ್ಷಾ ಬಗ್ಗೆ ಹೇಳುವುದಾದರೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮೀನಾಕ್ಷಿ ಮದುವೆ ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದ ಸಮೀಕ್ಷ ಬಳಿಕ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ಮಿಂಚಿದ್ದರು. ಆ ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಬಳಿಕ ಮೂರು ಗಂಟು ಧಾರಾವಾಹಿಯಲ್ಲಿ ನಟಿಸಿದರು.

ಧಾರಾವಾಹಿಯಲ್ಲಿ ಖ್ಯಾತಿಗಳಿಸುತ್ತಿದ್ದಂತೆ ಸಮೀಕ್ಷಾ ಸಿನಿಮಾ ಕಡೆ ಮುಖ ಮಾಡಿದರು. 2018ರಲ್ಲಿ ಬಂದ ಟೆರರಿಸ್ಟ್ ಸಿನಿಮಾದಲ್ಲಿ ನಟಿಸಿದರು. ಬಳಿಕ ಕನ್ನಡದ 99 ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾದಲ್ಲಿ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿಲ್ಲ. ವರ್ಷಗಳ ಬಳಿಕ ಸಮೀಕ್ಷಾ ಮತ್ತೆ ಮುದ್ದುಮಣಿಗಳು ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮುಂದೆ ಬಂದರು. ಆದರೆ ಈ ಧಾರಾವಾಹಿ ಪ್ರಾರಂಭವಾಗಿ ಕೆಲವೆ ತಿಂಗಳಲ್ಲಿಯೇ ಹೊರಹೋಗುತ್ತಿದ್ದಾರೆ. ಸೃಷ್ಟಿಯಾಗಿ ಪ್ರೇಕ್ಷಕರ ಹೃದಯ ಗೆದ್ದಿದ್ದ ಸಮೀಕ್ಷಾ ಮುಂದಿನ ನಡೆ ಏನು ಎನ್ನುವುದು ಬಹಿರಂಗವಾಗಿಲ್ಲ.   

Kannadathi: ಸುಳ್ಳುಬುರುಕಿ ಸಾನ್ಯಾ ರೆಡ್ ಹ್ಯಾಂಡ್ ಆಗಿ ಸಿಕ್ಕಾಕೊಂಡ್ಲು, ಆದ್ರೆ ಅಮ್ಮಮ್ಮ ಕತೆ?

ಸಮೀಕ್ಷಾ ದಿಢೀರ್ ಅಂತ ಧಾರಾವಾಹಿ ತೊರೆಯುತ್ತಿರುವ ಕಾರಣ ಬಹಿರಂಗವಾಗಿಲ್ಲ. ಆದರೆ ಕಾರಣಾಂತಗಳಿಂದ ಮುದ್ದುಮಗಳಿಂದ ದೂರ ಸರಿಯುತ್ತಿದ್ದಾರೆ ಎನ್ನಲಾಗಿದೆ. ಸೃಷ್ಟಿ ಪಾತ್ರಕ್ಕೆ ಯಾರು ಎಂಟ್ರಿ ಕೊಡ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 

Jothe jotheyali: ಕಾರ್ ಆಕ್ಸಿಡೆಂಟ್‌ನಲ್ಲಿ ಆರ್ಯವರ್ಧನ್ ಖಲಾಸ್, ಉಗಿದು ಉಪ್ಪಿನಕಾಯಿ ಹಾಕ್ತಿರೋ ವೀಕ್ಷಕರು!

ಮುದ್ದುಮಣಿಗಳು ಧಾರಾವಾಹಿ ಬಗ್ಗೆ

ಈ ಧಾರಾವಾಹಿಯ ಬಗ್ಗೆ ಹೇಳುವುದಾದರೆ ಸೃಷ್ಟಿ ಮತ್ತು ದೃಷ್ಟಿ ಪುಟ್ಟ ಸಹೋದರಿಯರು ಆಕ್ಸಿಡೆಂಟ್ ಸಮಯದಲ್ಲಿ ತಂದೆ-ತಾಯಿನ್ನು ಕಳೆದುಕೊಳ್ತಾರೆ. ಅದೇ ಸಮಯದಲ್ಲಿ ಇಬ್ಬರು ಬೇರೆ ಬೇರೆಯಾದರು. ಇಬ್ಬರು ಪ್ರತ್ಯೇಕವಾಗಿ ಬೆಳೆಯುತ್ತಾರೆ. ಸೃಷ್ಟಿ ತನ್ನ ಮನೆಯಲ್ಲಿ ಬೆಳೆದರೆ ದೃಷ್ಟಿ ಹಳ್ಳಿಯ ಒಂದು ಬಡ ಕುಟುಂಬದಲ್ಲಿ ಬೆಳೆಯುತ್ತಾಳೆ. ದೃಷ್ಟಿಗೆ ತನ್ನ ಹಳೆಯ ನೆನಪನ್ನು ಕಳೆದುಕೊಳ್ತಾರೆ. ಆದರೆ ಸೃಷ್ಟಿ ಶ್ರೀಮಂತ ಕುಟುಂಬದಲ್ಲಿ ಬೆಳೆದು ವೈದ್ಯೆಯಾಗುತ್ತಾಳೆ. ಸೃಷ್ಟಿಗೆ ತನ್ನ ಸಹೋದರಿ ಬದುಕಿದ್ದಾಳೆ ಎನ್ನುವ ನಂಬಿಕೆ, ಆದರೆ ಆಕೆಯ ಅಮ್ಮಳಿಗೆ ಬದುಕ್ಕಿಲ್ಲ ಎಂದು ನಂಬಿದ್ದರು. ಕೊನೆಗೂ ಇಬ್ಬರು ಭೇಟಿಯಾಗುತ್ತಾರೆ. ಸೃಷ್ಟಿ ಮತ್ತು ದೃಷ್ಟಿ ಕುಟುಂಬ ತೀರ ಆಪ್ತರಾದರು. ಸೃಷ್ಟಿ ಸಹೋದರಿಯೇ ದೃಷ್ಟಿ ಎನ್ನುವ ಸತ್ಯ ಸಾಕು ತಂದೆಗೆ ಸತ್ಯ ಗೊತ್ತಾಗುತ್ತದೆ. ಅದರೆ ಅದನ್ನು ಮುಚ್ಚಿಟ್ಟು ಇಬ್ಬರ ಜೊತೆಯೂ ಉತ್ತಮ ಬಾಂಧವ್ಯದಿಂದ ಇರುತ್ತಾನೆ. ಸದ್ಯ ಇಬ್ಬರು ಒಂದೇ ಮನೆಗೆ ಸೊಸೆಯರಾಗಿ ಎಂಟ್ರಿ ಕೊಟ್ಟಿದ್ದಾರೆ. ಸೃಷ್ಟಿ ತಂಗಿಯೆ ದೃಷ್ಟಿ ಎನ್ನುವ ಸತ್ಯ ಹೊರಬಿದ್ದಿದೆ. ಜೊತೆಗೆ ದೃಷ್ಟಿ ವಿಲನ್ ಆಗಿ ಬದಲಾಗಿದ್ದಾಳೆ. ಮುಂದೆ ಯಾವೆಲ್ಲ ತಿರುವು ಪಡೆದು ಧಾರಾವಾಹಿ ಮುನ್ನುಗ್ಗಲಿದೆ ಎಂದು ಕುತೂಹಲದಿಂದ ಕಾಯುತ್ತಿರುವಗಾಲೆ ಸೃಷ್ಟಿ ಪಾತ್ರ ಹದಲಾಗಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.    

click me!