'ಪುಣ್ಯವತಿ' ನಿಲ್ಲಿಸಿ ಪುಣ್ಯ ಕಟ್ಕೊಳ್ಳಿ; ಪದ್ಮಿನಿ- ಪೂರ್ವಿ ಗೋಳು ಕೇಳೋಕೆ ಆಗ್ತಿಲ್ಲ ಎಂದ ನೆಟ್ಟಿಗರು

By Vaishnavi Chandrashekar  |  First Published Apr 22, 2023, 4:22 PM IST

ಏನಾಗುತ್ತಿದೆ ಪದ್ಮಿನಿ ಜೀವನದಲ್ಲಿ? ಭಾವ ಅನ್ಕೊಂಡು ಮದ್ವೆ ಆಗೋದು ಎಷ್ಟು ಸರಿ ಎಂದು ನಿರ್ದೇಶಕರನ್ನು ಪ್ರಶ್ನೆ ಮಾಡಿದ ನೆಟ್ಟಿಗರು...


ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಪುಣ್ಯವತಿ ಧಾರಾವಾಹಿ ಪ್ರಸಾರವಾಗುತ್ತಿದೆ. ಡ್ಯಾನ್ಸ್‌ನಲ್ಲಿ ಆಸಕ್ತಿ ಹೊಂದಿರುವ ನಾಯಕಿ ತಂದೆ ಆಸೆಯಂತೆ ಮದುವೆಯಾಗಲು ಮುಂದಾಗುತ್ತಾಳೆ. ಗಂಡಿನ ಕಡೆಯವರು ಮನೆಗೆ ಬಂದು ಹುಡುಗಿ ನೋಡುವ ಸಮಯದಲ್ಲೂ ಪದ್ಮಿನಿ ಟಿವಿ ರಿಯಾಲಿಟಿ ಶೋ ಅಡಿಷನ್ ಕೊಡಲು ಹೋಗಿದ್ದಳು. ಮನೆಯಲ್ಲಿ ಹುಡುಗಿ ನೋಡುವುದು ಬೋರ್ ಎಂದು ನಾಯಕ ನಂದನ್‌ ನೇರವಾಗಿ ಕಾಲೇಜ್‌ಗೆ ಎಂಟ್ರಿ ಕೊಡುತ್ತಾರೆ. ದೊಡ್ಡ ಮನೆ ಕುಟುಂಬಕ್ಕೆ ಮಗಳನ್ನು ಮದುವೆ ಮಾಡಿಕೊಟ್ಟರೆ ಖುಷಿಯಾಗಿರುತ್ತಾರೆ ಅಂತ ಬಂದ ಕಷ್ಟನೆಲ್ಲಾ ಅಪ್ಪಯ್ಯ ಸಹಿಸಿಕೊಳ್ಳುತ್ತಾರೆ. 

ಇಲ್ಲಿ ಟ್ವಿಸ್ಟ್‌ ಏನೆಂದರೆ ಹುಡುಗ ಮನೆಯವರಿಗೆ ಹುಡುಗಿ ಡ್ಯಾನ್ಸ್‌ ಮಾಡುವುದು ಇಷ್ಟವಿಲ್ಲ. ಈ ಹಿಂದೆ ಆಡಿಷನ್‌ ಕೊಟ್ಟಾಗ ಸೆಲೆಕ್ಟ್‌ ಮಾಡಿದವರು ಪದೇ ಪದೇ ಕರೆ ಮಾಡಿ ಬನ್ನಿ ಅಂತಿದ್ದಾರೆ. ಪದ್ಮಿನಿ ಮದುವೆ ದಿನವೇ ಬಂದಿಲ್ಲ ಹಾಗೆ ಮಾಡುತ್ತೀವಿ ಹೀಗೆ ಮಾಡುತ್ತೀವಿ ಅಂತ ಹೆದರಿಸಿ ಪದ್ಮಿನಿನ ಕರೆಸಿಕೊಳ್ಳುತ್ತಾರೆ. ಹುಡುಗಮ ಮನೆಯವರಿಗೆ ಏನು ಹೇಳಬೇಕು? ಹಸೆ ಮಣೆ ಏರುವ ಸಮಯ ಬಂದಿದೆ ಆದರೆ ಪದ್ಮಿನಿ ಇನ್ನೂ ಬಂದಿಲ್ಲ. ಆಗ ಪದ್ಮಿನಿ ತಂದೆ ಅವರ ಸಹೋದರಿ ಯಾರಿಗೂ ಗೊತ್ತಾಗದಂತೆ ಮಾಸ್ಟರ್ ಪ್ಲ್ಯಾನ್ ಮಾಡಿ ನಂದಿನಿ ಜಾಗಕ್ಕೆ ಪೂರ್ವಿನ ಕೂರಿಸುತ್ತಾರೆ. 

Tap to resize

Latest Videos

ನೀರು ಕುಡಿಯುವುದಕ್ಕೆ ಬೋರಾಗುತ್ತೆ; ಬೇಸಿಗೆಯಲ್ಲಿ ನಿವೇದಿತಾ ಗೌಡ ಏನ್ ಮಾಡ್ತಾರೆ ನೋಡಿ...

ಅಲ್ಲಿಗೆ ಮ್ಯಾಟರ್ ಸ್ಟಾಪ್ ಅಗಲ್ಲ.... ಏನೂ ಗೊತ್ತಿಲ್ಲದೆ ನಂದನ್ ತಾಳಿ ಕಟ್ಟುತ್ತಾನೆ. ಆನಂತರ ಪದ್ಮಿನಿ ಎಂಟ್ರಿ ಕೊಡುತ್ತಾಳೆ. ತಂಗಿ ತಾಳಿ ಕಟ್ಟಿಸಿಕೊಂಡ ಮೇಲೆ ಏನ್ ಮಾಡೋಕೆ ಆಗುತ್ತೆ? ಹಣೆ ಬರಹ ಅಂತ ಸುಮ್ಮನಿರದೆ... ನಕಲಿ ತಾಳಿ ಕಟ್ಟಿಕೊಂಡು ನಂದನ್‌ ಮನೆಗೆ ಪದ್ಮಿನಿ ಮತ್ತು ಪೂರ್ವಿ ಇಬ್ಬರು ಹೆಂಡತಿಯರಾಗಿ ಎಂಟ್ರಿ ಕೊಡುತ್ತಾರೆ. ತನ್ನಿಂದ ತಂಗಿ ಜೀವನ ಹಾಳಾಗುತ್ತಿದೆ ಅಂತ ಈಗ ಪದ್ಮಿನಿ ಅವರಿಬ್ಬರಿನ್ನು ಒಂದು ಮಾಡಲು ಮುಂದಾಗಿದ್ದಾಳೆ. ನಂದನ್ ಮತ್ತು ಪೂರ್ವಿ ನಡುವೆ ಪ್ರೀತಿ ಹುಟ್ಟಿದ ಮೇಲೆ ಮದುವೆ ಮನೆಯಲ್ಲಿ ನಡೆದ ಘಟನೆಯನ್ನು ಹೇಳಬೇಕು ಅನ್ನೋ ಪ್ಲ್ಯಾನ್ ಮಾಡಿ ಈಗ ಎಲ್ಲೇ ಹೋದರು ಅವರಿಬ್ಬರನ್ನು ಜೋಡಿ ಮಾಡಿ ಕಳುಹಿಸುತ್ತಾರೆ. 

ಈ ಸತ್ಯ ಗೊತ್ತಿರುವುದು ಪದ್ಮಿನಿ, ಪೂರ್ವಿ ಮತ್ತು ಅವರ ಅತ್ತೆಗೆ ಮಾತ್ರ. ಅಮ್ಮಾಜೀ ಅಥವಾ ಅಪ್ಪಯ್ಯಗೆ ತಿಳಿದರೆ ಸಮಸ್ಯೆ ಆಗುತ್ತೆ ಅಂತ ಎಲ್ಲರೂ ಮೌನವಾಗಿ ಬಿಟ್ಟಿದ್ದಾರೆ. ಆಗಾಗ ಅತ್ತೆ ಬಂದು ಮನೆಯಲ್ಲಿ ಏನಾಗುತ್ತಿದೆ. ಹೇಗೆ ಸಮಸ್ಯೆಯನ್ನು ಸರಿ ಮಾಡಿಕೊಳ್ಳಬೇಕು ಅನ್ನೋ ಐಡಿಯಾ ಕೊಡುತ್ತಾರೆ. 

ಪತ್ನಿ ಸಂಗೀತಾ ಭಟ್ ಬಿಕಿನಿ ಫೋಟೋ ಕ್ಲಿಕ್ ಮಾಡಿದ 'ಭಾಗ್ಯ ಲಕ್ಷ್ಮಿ' ಧಾರಾವಾಹಿ ನಟ ತಾಂಡವ್!

ಇಬ್ರು ನಾಯಕಿಯರು ನಂದನ್ ಜೀವ ತಿಂತೀರಿ ಎಂದು ವಿದ್ಯಾ ಕಾಮೆಂಟ್ ಮಾಡಿದ್ದಾರೆ. ಸೀರಿಯಲ್ ಮೊದಲು ಚೆನ್ನಾಗಿತ್ತು ಈಗ ನೋಡೋಕೆ ಆಗಲ್ಲ ಬೇಜಾರು ಅಂತ ಶ್ವೇತಾ ಕಾಮೆಂಟ್ ಮಾಡಿದ್ದಾರೆ. ಏನಾಗುತ್ತಿದೆ ಇಲ್ಲಿ ಕುಣಿಯುವ ಹಕ್ಕಿಗೆ ಮಾಂಗಲ್ಯ ಬಂಧನ ಅಂತ ಟೈಟಲ್ ಕೊಟ್ಟು ಕುಣಿದಿರೋ ಹಕ್ಕಿಗೆ ತಾಳಿ ಕಟ್ಟಿಸಿಬಿಟ್ರಿ..ಮೊದಲು ಚೆನ್ನಾಗಿ ಬರ್ತಿತ್ತು ಸೀರಿಯಲ್ ಇವಾಗ ಹಳ್ಳ ಹಿಡಿದುಬಿಟ್ಟಿದೆ. ಪದ್ಮಿನಿ ನಂದನ್ ಕತೆ ನಾನೊಂದು ತೀರಾ ನೀನೊಂದು ತೀರ ಅನ್ನೋ ಹಾಗಿದೆ ಎಂದು ಸಿಂಪಲ್ ಸೋಲ್‌ 204 ಎಂಬುವವರು ಕಾಮೆಂಟ್ ಮಾಡಿದ್ದಾರೆ.

click me!