ನೀರು ಕುಡಿಯುವುದಕ್ಕೆ ಬೋರಾಗುತ್ತೆ; ಬೇಸಿಗೆಯಲ್ಲಿ ನಿವೇದಿತಾ ಗೌಡ ಏನ್ ಮಾಡ್ತಾರೆ ನೋಡಿ...

Published : Apr 22, 2023, 03:44 PM ISTUpdated : Apr 22, 2023, 04:10 PM IST
ನೀರು ಕುಡಿಯುವುದಕ್ಕೆ ಬೋರಾಗುತ್ತೆ; ಬೇಸಿಗೆಯಲ್ಲಿ ನಿವೇದಿತಾ ಗೌಡ ಏನ್ ಮಾಡ್ತಾರೆ ನೋಡಿ...

ಸಾರಾಂಶ

ಬೇಸಿಗೆಯಲ್ಲಿ ಯಾವ ರೀತಿ ಮೇಕಪ್ ಮಾಡಿಕೊಳ್ಳಬೇಕು? ಯಾವ ಬಣ್ಣದ ಉಡುಪು ಬೆಸ್ಟ್‌ ಎಂದು ಫಾಲೋವರ್ಸ್‌ಗೆ ಸಲಹೆ ಕೊಟ್ಟ ನಿವೇದಿತಾ ಗೌಡ...   

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಯುಟ್ಯೂಬ್‌ ಫಾಲೋವರ್ಸ್‌ಗೆ ಸಮ್ಮರ್ ಟಿಪ್ಸ್‌ ಹಂಚಿಕೊಂಡಿದ್ದಾರೆ. ಬೇಸಿಗೆಯಲ್ಲಿ ಯಾವ ರೀತಿ ಔಟ್‌ಫಿಟ್ ಧರಿಸಬೇಕು, ಸನ್‌ ಕ್ರೀಮ್ ಎಷ್ಟು ಮುಖ್ಯ ಎಂದು ತಿಳಿಸಿಕೊಟ್ಟಿದ್ದಾರೆ. 

'ಬೇಸಿಗೆಯಲ್ಲಿ ನಾನು ಹೇಗೆ ರೆಡಿಯಾಗುತ್ತೀನಿ ಎಂದು ನಿಮಗೆ ತೋರಿಸುತ್ತೀನಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನಾನು ಹೆಚ್ಚಿಗೆ ರೆಡಿಯಾಗುವುದಿಲ್ಲ ಕಡಿಮೆ ಮೇಕಪ್ ಮಾಡಿಕೊಳ್ಳುತ್ತೀನಿ ಏಕೆಂದರೆ ತುಂಬಾ ಬೆವರುತ್ತೀನಿ uncomfortabel feel ಇರುತ್ತೆ. ಬೇಸಿಗೆ ಸಮಯದಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ಮುಖ ಫ್ರೆಶ್ ಇರಬೇಕು ಅಂದ್ರೆ ಕಡಿಮೆ ಮೇಕಪ್ ಮಾಡಿಕೊಳ್ಳುತ್ತೀನಿ ಮಾಯಿಶ್ಚರೈಸರ್‌ ಹಚ್ಚಿಕೊಂಡ ನಂತರ ಸನ್‌ಕ್ರೀಮ್ ಹಾಕಿಕೊಳ್ಳುವೆ. ಸಮ್ಮರ್ ಅಂದ್ರೆ ಹಣೆ ಮೇಲೆ ಪಿಂಪಲ್ ಬರುತ್ತೆ ನನಗೆ. ಅದಿಕ್ಕೆ ಚೆನ್ನಾಗಿ ನೀರು ಕುಡಿಯುವ ಸಭ್ಯಾಸ ಮಾಡಿಕೊಂಡಿರುವೆ. ನೀರು ಕುಡಿಯುವುದಕ್ಕೆ ಬೇಸರ ಆಗುತ್ತೆ ಅಂತ ಸೌತೆಕಾಯಿ ಪುದೀನಾ ಹಾಕಿಡುವೆ..ಇದರಿಂದ ಫ್ರೆಶ್ ಫೀಲ್ ಆಗುತ್ತೆ. ಜ್ಯೂಸ್ ಮತ್ತು ಎಳನೀರು ಹೆಚ್ಚಿಗೆ ಕುಡಿಯುವೆ. ಬೇಸಿಗೆಯಲ್ಲಿ ಮನೆಯಿಂದ ಹೊರಡುವ ಮುನ್ನ ಸನ್‌ ಕ್ರೀಮ್, ಸನ್‌ ಸ್ಪ್ರೆ, ಬಾಡಿ ಲೋಷನ್, ಕಾಂಪ್ಯಾಕ್ಟ್‌ ಹಾಗೂ ಲಿಪ್‌ಸ್ಟಿಕ್‌ ಬಳಸುವೆ' ಎಂದು ನಿವಿ ಮಾತನಾಡಿದ್ದಾರೆ. 

ಬೇಸಿಯಲ್ಲಿ ತೆಳು ಬಟ್ಟೆ ಮತ್ತು ಚಡ್ಡಿ ಸ್ಕರ್ಟ್‌ನ ಆಯ್ಕೆ ಮಾಡಿಕೊಳ್ಳುತ್ತೀನಿ. ಚೀನ್ಸ್‌ ಧರಿಸುವುದರಿಂದ ತುಂಬಾ ಹಿಂಸೆ ಅಗುತ್ತೆ. ಶರ್ಟ್‌ಗೆ ಶಾರ್ಟ್ಸ್‌ ಹಾಕುತ್ತೀನಿ. ಲೈಟ್‌ ಅಥವಾ ಬ್ರೈಟ್‌ ಬಣ್ಣಗಳನ್ನು ಬಳಸುತ್ತೀನಿ ಡಾರ್ಕ್‌ ಬಣ್ಣ ಇಷ್ಟ ಆಗುವುದಿಲ್ಲ. ಕ್ರಾಪ್ ಟಾಪ್‌ಗಳು ಸಮ್ಮರ್‌ನಲ್ಲಿ ಗಾಳಿಯಾಡುವುದಕ್ಕೆ ಸಹಾಯ ಮಾಡುತ್ತೆ. ಹೆಚ್ಚಿನ ಬಿಳಿ ಬಣ್ಣ ಬಳಸಿ ನೆಮ್ಮದಿಯಾಗಿ ಇರಬಹುದು ಎಂದು ನಿವೇದಿತಾ ಹೇಳಿದ್ದಾರೆ. 

ನೀವ್ಯಾಕ್ ಮಾಡ್ಬಾರ್ದು ಕಾಂತಾರ 2?; ನಿವೇದಿತಾ ಗೌಡ ಸೀರೆ ಲುಕ್‌ಗೆ ನೆಟ್ಟಿಗರು ಕಾಮೆಂಟ್ ವೈರಲ್

ಕೂದಲನ್ನು ಫ್ರೀ ಅಗಿ ಬಿಡುವುದು ಅಂದ್ರೆ ತುಂಬಾನೇ ಇಷ್ಟ ಆದರೆ ಮುಂದೆ ಭಾಗ ಬೆವರಿ ಹಾಳಾಗುತ್ತದೆ ಅದಿಕ್ಕೆ ಹೇರ್‌ ಬ್ಯಾಂಡ್‌ ಹಾಕಿಕೊಳ್ಳಬಹುದು ಅದಿಲ್ಲ ಅಂದ್ರೆ ಲೂಸ್‌ ಅಗಿ ಪೋನಿ  ಹಾಕುವೆ. ಬೇಸಿಯಲ್ಲಿ ಹೆಚ್ಚಿಗೆ ಆಭರಣ ಧರಿಸುವುದಿಲ್ಲ ತುಂಬಾ ಸಿಂಪಲ್ ಚೆನ್ನಾಗಿರುವ ಓಲೆ ಅಥವಾ ಕಾಲಿಗೆ ಚೈನ್ ಹಾಕುತ್ತೀನಿ. ಶೂಗಳನ್ನು ಧರಿಸಿದರೆ ಆರಾಮ್ ಆಗಿ ವಾಕಿಂಗ್ ಮಾಡಬಹುದು ಎಂದಿದ್ದಾರೆ ನಿವಿ. 

ನಾನೊಂಥರಾ ಶ್ರೀಮಂತೆ ಒಂಥರಾ ಬಡವಿ, ಸಂಬಳ ಸರಿಯಾಗಿಲ್ಲ ಏರುಪೇರು ಜಾಸ್ತಿ: ನಿವೇದಿತಾ ಗೌಡ

ಪ್ರತಿಯೊಬ್ಬರು ಕೇಳುತ್ತಾರೆ ಯಾಕೆ ಶಾರ್ಟ್‌ ಧರಿಸುತ್ತೀರಾ ಎಂದು ಬೇಸಿಗೆಯಲ್ಲಿ ಅದೇ ಕಂಫರ್ಟ್‌ ಕೊಡುತ್ತದೆ ಅದರಲ್ಲೂ ಹೆಚ್ಚಿಗೆ ಶಾರ್ಟ್‌ ಬಳಸುವವರಿಗೆ ಸೂಪರ್ ಕಂಫರ್ಟ್‌ ಕೊಡುತ್ತೆ. ಒಂದು ದಿನ ಗಿಚ್ಚಿ ಗಿಲಿಗಿಲಿ ರಿಹರ್ಸಲ್‌ ಸಮಯದಲ್ಲಿ ಕಪ್ಪು ಬಣ್ಣದ ಸೆಲ್ವಾರ್ ಧರಿಸಿ ಹೋಗಿದ್ದೆ ಆ ತುಂಬಾ ಕಷ್ಟ ಪಟ್ಟಿದ್ದೀನಿ. ಯಾಕಾದರೂ ಸೆಲ್ವಾರ್ ಧರಿಸಿದೆ ಅನಿಸಿತ್ತು. ಗೊತ್ತಿಲ್ಲದೆ ಬೇಸಿಗೆ ಕಾಲ ಆರಂಭದಲ್ಲಿ ಕಪ್ಪು ಬಣ್ಣದ ಬಟ್ಟೆನೇ ಹೆಚ್ಚಿಗೆ ಧರಿಸಿದ್ದೆ. ಬಿಸಿಲಿಗೆ ನನ್ನ ಚರ್ಮ ಉರಿಯುತ್ತಿತ್ತು. ಬಿಳಿ ಬಣ್ಣದ ಬಟ್ಟೆ ಆಯ್ಕೆ ಮಾಡಿಕೊಂಡ ಕ್ಷಣ ನೆಮ್ಮದಿಯಾಗಿ ಪ್ರಯಾಣ ಮಾಡಲು ಆರಂಭಿಸಿದೆ ಎಂದು ನಿವಿ ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೇದಿಕೆ ಮೇಲೆ ಗಂಡನಿಗೆ ಹೀಗೆ ಮಾಡೋದಾ Rashmika Mandanna? ಪುರುಷರಿಂದ ಭಾರಿ ಅಸಮಾಧಾನ
Bigg Boss 13ರ ಮತ್ತೊಂದು ಬಿಗ್​ ಅಪ್​ಡೇಟ್​ ಕೊಟ್ಟ ನಟ ಸೂರಜ್​ ಸಿಂಗ್​- ಛಾನ್ಸ್​ ಮಿಸ್​ ಮಾಡ್ಲೇಬೇಡಿ