
'ಯುವ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯುವ ರಾಜ್‌ಕುಮಾರ್ ವೈಯಕ್ತಿಕ ಜೀವನದ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಹಲವು ವರ್ಷಗಳ ಕಾಲ ಯುವ ರಾಜ್‌ಕುಮಾರ್ ಮತ್ತು ಶ್ರೀ ದೇವಿ ಬೈರಪ್ಪ ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಈ ಮದುವೆಗೆ ಒಪ್ಪಿಗೆ ಇಲ್ಲದಿದ್ದರೂ ಒಪ್ಪಿಸಿ ಮದುವೆ ಮಾಡಿಕೊಂಡರಂತೆ. ಆದರೆ ಇದ್ದಕ್ಕಿದ್ದಂತೆ ಯುವ ಮತ್ತು ಶ್ರೀದೇವಿ ನಡುವೆ ಏನಾಯ್ತು?
ದೊಡ್ಡ ಮನೆಯ ವಾರಸುದಾರ ಯುವ ರಾಜ್‌ಕುಮಾರ್ ಮತ್ತು ವಿನಯ್ ರಾಜ್‌ಕುಮಾರ್ ಅನ್ನೋ ಹೆಸರು ಕೇಳಿ ಬರುತ್ತಿತ್ತು. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದೆ ಮೇಲೆ ಯುವ ರಾಜ್‌ಕುಮಾರ್ ನಡೆ ನುಡಿಯಲ್ಲಿ ಅಭಿಮಾನಿಗಳು ಅಪ್ಪು ಅವರನ್ನು ಕಾಣುತ್ತಿದ್ದರು. ಮುಂದಿನ ಯುವ ಜನತೆಗೆ ಯುವನೇ ಮಾದರಿ ಎನ್ನುತ್ತಿದ್ದರು. ಯುವ ಚಿತ್ರದ ಬಿಡುಗಡೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಅಪ್ಪು ಅಭಿಮಾನಿಗಳು ಸಪೋರ್ಟ್ ನೀಡಿದರು. ಎಲ್ಲವೂ ಸರಿ ಹೋಗುತ್ತಿದ್ದ ಸಮಯದಲ್ಲಿ ಯುವ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆ ಆಗಿದೆ. ಸುಮಾರು 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿರುವ ಈ ಜೋಡಿ ಈಗ ದೂರವಾಗಿದ್ದಾರೆ. ಶ್ರೀದೇವಿ ಮೇಲೆ ಯುವ ಆರೋಪ ಮಾಡುತ್ತಿದ್ದಾರೆ, ಯುವ ಮೇಲೆ ಶ್ರೀದೇವಿ ಆರೋಪ ಮಾಡುತ್ತಿದ್ದಾರೆ. ಇದರ ನಡುವೆ ಹೆಸರಾಂತ ನಟಿಯ ಹೆಸರು ಕೂಡ ಕೇಳಿ ಬರುತ್ತಿದೆ.
ವಿಚ್ಚೇದನ ನೊಟೀಸ್ ಬಗ್ಗೆ ಶ್ರೀದೇವಿ ಬೈರಪ್ಪ ಸ್ಪಷ್ಟನೆ, ನಟ ಶಿವಣ್ಣ ಫಸ್ಟ್ ರಿಯಾಕ್ಷನ್
ದೊಡ್ಡ ಮನೆಯ ಮಾನಮರ್ಯಾದೆ ಹೋಗುತ್ತಿದೆ. ಡಾಕ್ಟರ್ ಪಾರ್ವತಮ್ಮ ರಾಜ್‌ಕುಮಾರ್ ಇದ್ದಾಗ ಚಿತ್ರರಂಗದಲ್ಲಿ ಈ ರೀತಿ ಆಗಲು ಬಿಡುತ್ತಿರಲಿಲ್ಲ ಇನ್ನು ಮನೆಯಲ್ಲಿಯೇ ಹೀಗೆ ಆಗಿದೆ ಅಂದ್ರೆ ಸುಮ್ಮನೆ ಇರುತ್ತಾರಾ? ಹೆಣ್ಣು ಮಕ್ಕಳಿಗೆ ಎಂದೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಇನ್ನು ಮುಂದೆ ಅಪ್ಪು ಸ್ಥಾನದಲ್ಲಿ ಯಾರನ್ನೂ ನೋಡುವುದಿಲ್ಲ ನಮ್ಮ ಭಾವನೆಗಳಿಗೆ ನೋವು ಉಂಟು ಮಾಡಬೇಡಿ. ಅಪ್ಪು ಅಪ್ಪುನೇ ಎಂದು ನೆಟ್ಟಿಗರು ಪೋಸ್ಟ್ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋಗಳು ಇಲ್ಲಿದೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.