ಚಹ ಕುಡಿಯೋದು ಬಿಡು ಅಥ್ವಾ ಚೀನಿ ಹಾಡು ಹೇಳು ಅಂದ್ರೆ ಸೀತಾರಾಮ ಅಶೋಕ್ ಹೀಗೆ ಮಾಡೋದಾ? ಸೂಪರ್ ಎಂದ ಫ್ಯಾನ್ಸ್. ವಿಡಿಯೋ ವೈರಲ್
ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಚಹ ಅಥ್ವಾ ಕಾಫಿ ಇಲ್ಲಾ ಅಂದ್ರೆ ಅದೆಷ್ಟೋ ಮಂದಿಗೆ ದಿನಪೂರ್ತಿ ಉತ್ಸಾಹವೇ ಇರುವುದಿಲ್ಲ. ಇದೇ ಕಾರಣಕ್ಕೆ ಚಹ-ಕಾಫಿ ಬಿಡುವ ಬದಲು ಏನು ಹೇಳಿದರೂ ಮಾಡಲು ರೆಡಿ ಇರ್ತಾರೆ. ಇದೀಗ ಸೀತಾರಾಮ ಸೀರಿಯಲ್ ಅಶೋಕ್ ಕೂಡ ಹಾಗೇ ಆಗಿದೆ. ಇವರಿಗೆ ಚಹಾ ಕುಡಿಯೋದನ್ನು ಬಿಡಿ ಅಥ್ವಾ ಚೀನಿ ಹಾಡು ಹೇಳಿ ಎಂದು ಕೇಳಲಾಗಿದೆ. ಚಹ ಕುಡಿಯುವ ಸಲುವಾಗಿ ಏನು ಬೇಕಾದ್ರೂ ಮಾಡಲು ರೆಡಿ ಎಂದಿರುವ ಅಶೋಕ್ ಚೀನಿ ಹಾಡನ್ನು ಹೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಸೂಪರ್ ಸರ್ ಎಂದಿದ್ದಾರೆ. ಮತ್ತೆ ಕೆಲವರು ತಮಗೆ ಟೀ ಮತ್ತು ಕಾಫಿ ಬಗ್ಗೆ ಇರುವ ಅಭಿಮಾನದ ಕುರಿತು ಹೇಳಿಕೊಂಡಿದ್ದಾರೆ. ಇದಕ್ಕಾಗಿ ಏನು ಬೇಕಾದರೂ ಬಿಡಲು ಸಿದ್ಧ ಎಂದಿದ್ದಾರೆ. ಇನ್ನೋರ್ವ ಫ್ಯಾನ್ಸ್, ನಿಜಕ್ಕೂ ಎಷ್ಟು ಅದ್ಭುತ ಹಾಡು ಸರ್, ಕೇಳಿ ಕಣ್ಣಲ್ಲಿ ನೀರು ಬಂತು ಎಂದು ತಮಾಷೆ ಮಾಡಿದ್ದಾರೆ.
ಅಂದಹಾಗೆ, ಅಂದಹಾಗೆ ಸೀತಾರಾಮ ಸೀರಿಯಲ್ ಅಶೋಕ್ ಅವರ ನಿಜಯವಾದ ಹೆಸರು ಕೂಡ ಅಶೋಕ ಶರ್ಮಾ. ಇವರು ಇತ್ತೀಚೆಗಷ್ಟೇ ಸಖಿಯೇ.. ಸಖಿಯೇ... ಹಾಡಿಗೆ ರೀಲ್ಸ್ ಮಾಡಿದ್ದರು. . ಇದು ಸಕತ್ ವೈರಲ್ ಆಗಿದ್ದು, ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ನಿಮಗೆ ಇಷ್ಟೊಂದು ಚೆನ್ನಾಗಿ ಹಾಡಲು ಬರತ್ತೆ ಎಂದು ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಷ್ಟಕ್ಕೂ ಅಶೋಕ್ ಒಬ್ಬರು ಸಿಂಗರ್ ಎಂದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಇವರು ಹಲವಾರು ಆಕ್ರೆಸ್ಟ್ರಾ ಕಾರ್ಯಕ್ರಮಗಳಿಗೆ ಹಾಡಿದ್ದಾರೆ. ಕನ್ನಡ ಸಿನಿಮಾಗಳಿಗೂ ಹಿನ್ನೆಲೆ ಗಾಯಕರಾಗಿದ್ದಾರೆ. ಅಲ್ಲದೇ ಭಾರಿ ವೈರಲ್ ಆಗಿದ್ದ ಜಿಂಗ್ ಚಿಕ, ಜಿಂಗ್ ಚಿಕಾ ಹಾಡನ್ನು ಹಾಡಿದ್ದು ಕೂಡ ಇದೇ ಅಶೋಕ್.
ಸಖಿಯೇ, ನನ್ನ ಕಣ್ಣನ್ನು ನೀನಾಗೇ ಓದಿಬಿಡು.. ಎಂದ ಸೀತಾರಾಮ ಅಶೋಕ: ನಾನ್ ರೆಡಿ ಅಂತಿದ್ದಾರೆ ಲಲನೆಯರು...
ಇನ್ನು ಅಶೋಕ್ ಅವರ ಕುರಿತು ಹೇಳುವುದಾದರೆ, ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್, ಬಳಿಕ ಹಣಕ್ಕಾಗಿ ಆಕ್ರೆಸ್ಟ್ರಾ ಗಾಯಕರಾದರು, ಬಳಿಕ ಕೀಬೋರ್ಡ್ ಕಲಿತು, ಮಕ್ಕಳಿಗೆ ಹೇಳಿಯೂ ಕೊಡುತ್ತಿದ್ದರು, ಅದಾದ ಬಳಿಕ ನಿರೂಪಕರಾಗಿಯೂ ಅಶೋಕ್ ಗುರುತಿಸಿಕೊಂಡಿದ್ದಾರೆ. ಸುವರ್ಣ, ರಾಜ್ ಮ್ಯೂಸಿಕ್ ನಲ್ಲಿ ಕಾರ್ಯಕ್ರಮಗಳ ನಿರೂಪಣೆ ಮಾಡಿದ ಅನುಭವ ಕೂಡ ಇವರಿಗಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಖಾಸಾ ದೋಸ್ತ್ ಆಗಿರುವ ಅಶೋಕ್ ಶರ್ಮಾ, ಇವರಿಬ್ಬರ ಸ್ನೇಹ 20 ವರ್ಷಗಳಷ್ಟು ಹಳೆಯದ್ದೆಂದು ಹೇಳುತ್ತಾರೆ. ಯಶ್ ಅಭಿನಯದ ಮಿ, ಆಂಡ್ ಮಿಸಸ್ ರಾಮಾಚಾರಿಯಿಂದ ಹಿಡಿದು ಕೆಜಿಎಫ್ ವರೆಗೂ ಹಲವು ಸಿನಿಮಾಗಳಲ್ಲಿ ಸಹ ಅಶೋಕ್ ನಟಿಸಿದ್ದಾರೆ.
ಅಶೋಕ್ ಅವರು ರೀಲ್ ಲೈಫ್‌ನಲ್ಲಿ ಪ್ರಿಯಾ ಜೊತೆ ಮದ್ವೆಯಾಗಿದ್ದರೂ, ರಿಯಲ್ ಲೈಫ್ ಮದುವೆ ಇನ್ನೂ ಸಸ್ಪೆನ್ಸ್ ಆಗಿದೆ. ಪೂಜಾ ಎನ್ನುವವರ ಜೊತೆ ಮದುವೆಯಾಗಿದೆ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಗೊತ್ತಿಲ್ಲ, ಈ ಬಗ್ಗೆ ನಟ ಕೂಡ ಎಲ್ಲಿಯೂ ಬಹಿರಂಗಪಡಿಸಲಿಲ್ಲ. ನಟಿಸ್ತಿರೋರು ಅಶೋಕ್ ಶರ್ಮಾ (Ashok Sharma) ಅವರು ಇದಾಗಲೇ ಹಲವಾರು ಸೀರಿಯಲ್, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವಲಕ್ಕಿ ಪವಲಕ್ಕಿ, ವಾತ್ಸಲ್ಯ, SSLC ನನ್ ಮಕ್ಕಳು, ಮರಳಿ ಮನಸಾಗಿದೆ ಸೇರಿ ಹಲವು ಸೀರಿಯಲ್ ಗಳಲ್ಲಿ ನಟಿಸಿರುವ ಅಶೋಕ್ ಗೆ ಭರ್ಜರಿ ಜನಪ್ರಿಯತೆ ತಂದುಕೊಟ್ಟಿದ್ದು ಸೀತಾ ರಾಮ ಸೀರಿಯಲ್ ಅಶೋಕ್ ಪಾತ್ರ.
ಸಿಹಿಯ ಹಿನ್ನೆಲೆ ಕೇಳಲು ರಾಮ್ ನಿರಾಕರಿಸ್ತಿರೋದಕ್ಕೆ ಇದೇ ಕಾರಣನಾ? ಏನಂತಿದ್ದಾರೆ ನೆಟ್ಟಿಗರು?