ಚಂದನ್ -ನಿವೇದಿತಾ ನಡುವೆ ಮೊದಲು ಮನಸ್ತಾಪ ಶುರುವಾಗಿದ್ದು ಹೇಗೆ?

By Mahmad Rafik  |  First Published Jun 10, 2024, 4:57 PM IST

ನಾವು ಮನೆಯವರ ಜೊತೆ ಈ ವಿಷಯ ಹಂಚಿಕೊಂಡಾಗ, ಇಬ್ಬರು ತಿಳುವಳಿಕೆಯುಳ್ಳವರು. ಯಾವ ನಿರ್ಧಾರ ತೆಗೆದುಕೊಂಡ್ರೆ ಜೀವನದಲ್ಲಿ ಏನು ಪರಿಣಾಮ ಬೀರುತ್ತೆ ಎಂಬುದರ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ ಎಂದು ಹೇಳಿದರು.


ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ ಒಂದಾಗಿ ಸಪ್ತಪದಿ ತುಳಿದಿದ್ದ ಗಾಯಕ ಚಂದನ್ ಶೆಟ್ಟಿ (Singer Rapper Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಪ್ರತ್ಯೇಕವಾಗಿದ್ದಾರೆ. ಡಿವೋರ್ಸ್ ಪಡೆದ ಬಳಿಕ ಜೊತೆಯಾಗಿ ಸುದ್ದಿಗೋಷ್ಠಿ ನಡೆಸಿದ ಚಂದನ್ ಮತ್ತು ನಿವೇದಿತಾ ಮೊದಲು ಹರಡುತ್ತಿರುವ ವದಂತಿಗಳಿಗೆ (Rumours) ತೆರೆ ಎಳೆಯಲು ಪ್ರಯತ್ನಿಸಿದರು. ಇದರ ಜೊತೆಯಲ್ಲಿ ತಮ್ಮ ಸುಳ್ಳು ಸುದ್ದಿ ಹರಡುತ್ತಿರೋ ಜನರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿ (Press meet) ಆರಂಭದಲ್ಲಿಯೇ ಎಲ್ಲಾ ವದಂತಿಗಳಿಗೆ ಒಂದೊಂದಾಗಿಯೇ ಸ್ಪಷ್ಟನೆ ನೀಡಿದರು. 

ನಾವಿಬ್ಬರು ಮದುವೆ ಆದಾಗ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವಾದ ಮಾಡಿದ್ದರು. ಆದರೆ ನಮ್ಮಿಬ್ಬರ ಜೀವನಶೈಲಿ ತುಂಬಾ ಡಿಫರೆಂಟ್. ಹಾಗಾಗಿ ಸಹಮತದಿಂದ ಕುಟುಂಬಸ್ಥರಿಗೆ ತಿಳಿಸಿ ಡಿವೋರ್ಸ್ ಪಡೆದುಕೊಂಡಿದ್ದೇವೆ. ಕಾನೂನಿನ ಪ್ರಕಾರವಾಗಿ ನಾವು ವಿಚ್ಛೇದನ ಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಹೇಗೆ ಇಬ್ಬರ ನಡುವೆ ಹೊಂದಾಣಿಕೆ ಆಗಲಿಲ್ಲ ಅನ್ನೋದನ್ನು ಉದಾಹರಣೆ ಸಹಿತವಾಗಿ ನಿವೇದಿತಾ ಗೌಡ ವಿವರಣೆ ನೀಡಿದರು. 

Tap to resize

Latest Videos

ಚಂದನ್‌ಗೆ ಕಾಫಿ, ನನಗೆ ಟೀ ಇಷ್ಟ!

ಚಂದನ್‌ಗೆ ಕಾಫಿ ಇಷ್ಟ. ನನಗೆ ಟೀ ಇಷ್ಟ. ಹಾಗಂತ ನಾನು ಚಂದನ್‌ಗೆ ಕಾಫಿ ಕುಡಿಯುವಂತೆ ಒತ್ತಾಯ ಮಾಡೋಕೆ ಆಗಲ್ಲ. ಅದೇ ರೀತಿ ಚಂದನ್‌ ನನಗೆ ಕಾಫಿ ಕುಡಿಯುವಂತೆ ಫೋರ್ಸ್ ಮಾಡೋದಕ್ಕೆ ಆಗಲ್ಲ. ಇಬ್ಬರ ವೈಯಕ್ತಿಕ ಇಷ್ಟಗಳನ್ನು ನಾವು ಗೌರವಿಸಬೇಕಾಗುತ್ತದೆ. ಇದು ಟೀ-ಕಾಫಿಯ ಸಮಸ್ಯೆ ಅಲ್ಲ. ನಾನು ನಿಮಗೆ ಹೇಗೆ ಭಿನ್ನಾಭಿಪ್ರಾಯಗಳು ಮೂಡುತ್ತವೆ ಎಂಬುದನ್ನು ವಿವರಿಸಿದೆ ಎಂದು ನಿವೇದಿತಾ ಗೌಡ ತಿಳಿಸಿದರು.

ಮನಸ್ತಾಪ ಶುರುವಾಗಿದ್ದು ಹೇಗೆ? 

ಈ ವೇಳೆ ಮಧ್ಯ ಪ್ರವೇಶಿಸಿದ ಚಂದನ್ ಶೆಟ್ಟಿ ನನಗೆ ಬೆಳಗ್ಗೆ ಬೇಗ ಎದ್ದೇಳುವ ಅಭ್ಯಾಸ. ಹಾಗೆಯೇ ರಾತ್ರಿ ಬೇಗ ಮಲಗುತ್ತೇನೆ. ಆದ್ರೆ ಇವರು ಶೂಟಿಂಗ್ ಮುಗಿಸ್ಕೊಂಡು ಬರೋದು ತಡವಾಗುತ್ತದೆ. ಆದ್ದರಿಂದ ಲೇಟ್ ಆಗಿ ಮಲಗೋದರಿಂದ, ಏಳೋದು ಸಹ ತಡವಾಗುತ್ತದೆ. ಇಲ್ಲಿಂದಲೇ ನಮ್ಮ ಮನಸ್ತಾಪ ಶುರುವಾಯ್ತು ಎಂದು ಚಂದನ್ ಶೆಟ್ಟಿ ತಿಳಿಸಿದರು. ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಎರಡೂ ಕುಟುಂಬಗಳಲ್ಲಿ ಚರ್ಚೆ ನಡೆಯುತ್ತಿತ್ತು ಎಂಬ ವಿಷಯವನ್ನು ಚಂದನ್ ಶೆಟ್ಟಿ ಹಂಚಿಕೊಂಡರು. 

ನಾವು ಮನೆಯವರ ಜೊತೆ ಈ ವಿಷಯ ಹಂಚಿಕೊಂಡಾಗ, ಇಬ್ಬರು ತಿಳುವಳಿಕೆಯುಳ್ಳವರು. ಯಾವ ನಿರ್ಧಾರ ತೆಗೆದುಕೊಂಡ್ರೆ ಜೀವನದಲ್ಲಿ ಏನು ಪರಿಣಾಮ ಬೀರುತ್ತೆ ಎಂಬುದರ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ ಎಂದು ಹೇಳಿದರು. ಕಳೆದ ಒಂದೂವರೆ ವರ್ಷದಿಂದ ಈ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಈಗ ಕೋರ್ಟ್ ನಮಗೆ ಡಿವೋರ್ಸ್ ನೀಡಿದ್ದು, ನಮ್ಮಿಬ್ಬರ ಮಧ್ಯೆ ಯಾವುದೇ ದ್ವೇಷ, ಜಗಳ ಯಾವುದೂ ಇಲ್ಲ ಎಂದು ಚಂದನ್ ಶೆಟ್ಟಿ ತಿಳಿಸಿದರು. 

ನಿವೇದಿತಾ ನನ್ನಿಂದ ಕೋಟಿ ಕೋಟಿ ಜೀವನಾಂಶ ಕೇಳಿದ್ದಾರೆ ಅನ್ನೋದೆಲ್ಲಾ ಸುಳ್ಳು: ಚಂದನ್‌ ಶೆಟ್ಟಿ

ನಾನು ಬೆಳೆದು ಬಂದ ರೀತಿಯೇ ಬೇರೆ. ಅದೇ ರೀತಿ ನಿವೇದಿತಾ ಬೆಳೆದ ಪರಿಸರ ಬೇರೆಯಾಗಿದೆ. ಹಾಗಾಗಿ ಇಬ್ಬರ ಮಧ್ಯೆ ಅಷ್ಟು ಹೊಂದಾಣಿಕೆ ಆಗಲಿಲ್ಲ. ಇಷ್ಟು ವರ್ಷ ನಾವು ಜೊತೆಯಾಗಿ ಹೋಗಬೇಕು ಎಂದು ಇಷ್ಟು ವರ್ಷ ಪ್ರಯತ್ನಿಸಿದೇವು. ಆದರೆ ಅದು ಸಾಧ್ಯ ಆಗಲಿಲ್ಲ ಎಂದು ಚಂದನ್ ಶೆಟ್ಟಿ ಹೇಳಿದರು.

click me!