
ಕನ್ನಡ ಕಿರುತೆರೆಯ ಗೊಂಬೆ ಎಂದೇ ಹೆಸರು ಪಡೆದ ಸುಂದರಿ ನೇಹಾ ಗೌಡ. ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಜರ್ನಿ ಆರಂಭಿಸಿದ ನೇಹಾ ಈಗ ತೆಲುಗು ಮತ್ತು ತಮಿಳು ಸೀರಿಯಲ್‌ಗಳಲ್ಲಿ ಕೂಡ ಸಖತ್ ಫೇಮಸ್. ನವೆಂಬರ್ 29,2024ರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ ನೇಹಾ. ಮಗಳು ಎಂಟ್ರಿ ಕೊಟ್ಟ ಮೇಲೆ ಬಣ್ಣದ ಪ್ರಪಂಚದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಮದರ್‌ಹುಡ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಗಳಿಗೆ ನಾಮಕರಣ ಮಾಡಿದರು.ಆಗ ರಿವೀಲ್ ಮಾಡಿದ ಹೆಸರು ನೋಡಿ ಎಲ್ಲರೂ ಶಾಕ್ ಆಗಿಬಿಟ್ಟರು. ಇಷ್ಟೋಂದು ಮಾಡರ್ನ್ ಹೆಸರುಗಳು ಇರುವಾಗ ಯಾಕೆ ಈ ಹಳೆ ಹೆಸರು ಎಂದು. ಈ ಪ್ರಶ್ನೆಯನ್ನು ನೇಹಾ ಗೌಡ ತಂದೆ ರಾಮಕೃಷ್ಣರವರ ಮುಂದೆ ಇಟ್ಟಾಗ ಸಿಕ್ಕ ಉತ್ತರವಿದು.
'ಈ ಕಾಲದಲ್ಲಿ ಡಿಫರೆಂಟ್ ಹೆಸರು ಇಡಬೇಕು ಎಂದು ಬೇರೆ ತರ ಹೆಸರುಗಳನ್ನು ಇಡುತ್ತಿದ್ದಾರೆ. ಆ ಹೆಸರುಗಳಿಗೆ ಇಂಗ್ಲಿಷ್ ಟೋನ್ ಇದೆ ಹೀಗಾಗಿ ಅದು ಬೇಡ ನಮ್ಮ ಸಂಪ್ರದಾಯ, ಸಂಸ್ಕೃತಿಗೆ ತಕ್ಕಂತೆ ಇರಲಿ ಎಲ್ಲವೂ ಬಿಂಬಿತವಾದಂತ ಒಂದು ಸುಂದರ ಹೆಸರು ಅಂದ್ರೆ ಹಳೆ ಹೆಸರು ಆದ್ರೂ ಪರ್ವಾಗಿಲ್ಲ ಅಂತ ಶಾರದ ಆಯ್ಕೆ ಮಾಡಿದ್ದು. ಶಾರದ ಅನ್ನೋ ಹೆಸರನ್ನು ಎಲ್ಲರೂ ಇಷ್ಟ ಪಡುತ್ತಾರೆ ಅನಿಸುತ್ತದೆ. ನಮ್ಮ ಮನೆಯಲ್ಲಿ ಪ್ರತಿಯೊಬ್ಬರು ನಿರ್ಧಾರ ಮಾಡಿ ಈ ಹೆಸರು ಇಟ್ಟಿರುವುದು, ಚಂದನ್ ಕೂಡ ಶಾರದೆ ಅನ್ನೋ ಹೆಸರು ಇರಲಿ ಪ್ರಭಲವಾಗಿದೆ ಅಂತ ಇಷ್ಟ ಪಟ್ಟರು. ಶಾರದ ಅಥವಾ ಶಾರದೆ ಎಂದು ಕರೆಯಬಹುದು..ಹೆಸರು ತುಂಬಾ ಸರಳ ಹಾಗೂ ಸುಂದರವಾಗಿದೆ. ಮಗುವಿನ ಹೆಸರು ತುಂಬಾ ಚೆನ್ನಾಗಿದೆ ಎಂದು ಬಹಳಷ್ಟು ಜನ ಹೇಳಿದರು ಹೀಗಾಗಿ ನಮಗೂ ತುಂಬಾ ಖುಷಿಯಾಗಿದೆ. ನವೆಂಬರ್ 19, 2024ರಲ್ಲಿ ಮೊಮ್ಮಗಳು ಹುಟ್ಟಿದ್ದು ಆ ಸಮಯದಲ್ಲಿ ಹಬ್ಬಗಳು ತುಂಬಾ ಇತ್ತು, ಆಕೆಯಿಂದ ನಮ್ಮ ಮನೆಯಲ್ಲಿ ಒಂದಲ್ಲ ಒಂದು ಫಂಕ್ಷನ್ ನಡೆಯುತ್ತಲೇ ಇದೆ. ಒಳ್ಳೆ ಖುಷಿ ಮತ್ತು ಸಂತೋಷವನ್ನು ನಮ್ಮ ಮನೆಗೆ ತಂದು ಕೊಟ್ಟಿದ್ದಾಳೆ. ಮೊಮ್ಮಗಳ ಜೊತೆ ಆಟವಾಡಿಕೊಂಡು ತುಂಬಾ ಎಂಜಾಯ್ ಮಾಡುತ್ತೀನಿ.ನನಗೆ ಹಾಡುವುದಕ್ಕೆ ಬರಲ್ಲ ಆದರೆ ಮೊಮ್ಮಗಳಿಗೋಸ್ಕರ ಹಾಡುತ್ತೀನಿ ಅದನ್ನು ನಮ್ಮ ಮಕ್ಕಳು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾರೆ' ಎಂದು ಖಾಸಗಿ ಕನ್ನಡ ಟಿವಿ ಸಂದರ್ಶನದಲ್ಲಿ ರಾಮಕೃಷ್ಣರವರು ಮಾತನಾಡಿದ್ದಾರೆ.
ಬಟ್ಟೆ ಜಾರಿ ಬೀಳ್ತಿದ್ರೂ ಪೋಸ್ ಕೊಡ್ತೀರೋದ್ ನೋಡಿ; ನಟಿ ನಿಶ್ವಿಕಾ ಕಾಲೆಳೆದ ನೆಟ್ಟಿಗರು
ಯಾಕೆ ಶಾರದ ಅನ್ನೋ ಹೆಸರು ಇಟ್ಟಿದ್ದು ಎಂದು ಇನ್ನೂ ನೇಹಾ ಗೌಡ ಕಡೆಯಿಂದ ಉತ್ತರ ಸಿಕ್ಕಿಲ್ಲ. ಆದರೆ ಕನ್ನಡದ ಹೆಸರು, ಕನ್ನಡಿಗರಿಗೆ ಹತ್ತಿರವಾದ ಹೆಸರು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಸತ್ಯ ಹೇಳಬೇಕು ಅಂದ್ರೆ ಕನ್ನಡ ಚಿತ್ರರಂಗದಲ್ಲಿ ಸುಮಾರು 50-60 ವರ್ಷಗಳಿಂದ ನೇಹಾ ಅವರ ತಂದೆ ರಾಮಕೃಷ್ಣ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಹಿರಿಯ ಮಗಳು ಸೋನು ಗೌಡ ಕೂಡ ನಟಿ ಹಾಗೂ ಕಿರಿಮಗಳು ನೇಹಾ ಕೂಡ ನಟಿ. ಅಷ್ಟೇ ಅಲ್ಲ ರಾಜಾ ರಾಣಿ ರಿಯಾಲಿಟಿ ಶೋ ಮೂಲಕ ನೇಹಾ ಮತ್ತು ಅವರ ಪತಿ ಚಂದನ್ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಂಡರು. ಅದಾದ ಮೇಲೆ ಚಂದನ್‌ಗೆ ಕನ್ನಡದ ಜನಪ್ರಿಯ ಸೀರಿಯಲ್‌ನಲ್ಲಿ ನಾಯಕನಟನಾಗಿ ಕೆಲಸ ಸಿಕ್ಕಿತ್ತು. ಫ್ಯಾಮಿಲಿ ಫುಲ್ ಕಲೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಶಾರದ ಅಥವಾ ಶಾರದೆ ಸೂಕ್ತ ಅಂತಿದ್ದಾರೆ ಫ್ಯಾನ್ಸ್.
ಮುಖದ ತುಂಬಾ ಮೊಡವೆ ಇದ್ರೆ ಭಯವಿಲ್ಲದೆ ಎಂಜಲು ಹಚ್ಕೊಳ್ಳಿ; ಈ ಸ್ಟಾರ್ ನಟಿ ಮಾಡ್ತಿರೋದು ಇದೇ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.