ಮಹಿಳೆಯರಿಗೆ ಸ್ಫೂರ್ತಿಯಾದ ನಟಿ ವೈಷ್ಣವಿ ಅಮ್ಮ: ಈಗಷ್ಟೇ ಕಾನೂನು, ಸೈಕಾಲಾಜಿ ಡಿಗ್ರಿ ಮುಗಿಸಿದ ಅವರ ಮಾತು ಕೇಳಿ...

ಸೀತಾರಾಮ ಸೀತಾ ಅರ್ಥಾತ್​ ನಟಿ ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್​ ಅವರು ಕಾನೂನು ಪದವಿಯ ಜೊತೆಗೆ ಸೈಕಾಲಾಜಿಯನ್ನೂ ಮುಗಿಸಿದ್ದಾರೆ. ಮಹಿಳೆಯರಿಗೆ ಸ್ಫೂರ್ತಿಯಾಗುವ ಮಾತು ಹೇಳಿದ್ದಾರೆ ಕೇಳಿ...
 

Seetarama Seeta urf Vaishnavi Gowdas mother completed LLB and psychology at this age suc

ಸೀತಾ ಎಂದರೆ ಸಾಕು, ಕನ್ನಡ ಸೀರಿಯಲ್​ ಪ್ರಿಯರ ಗಮನಕ್ಕೆ ಮೊದಲು ಕಾಣುವುದೇ ಸೀತಾರಾಮ ಸೀರಿಯಲ್​ ಸೀತಾ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್​ನ ಸೀತಾ ಮತ್ತು ರಾಮ್​ ಪಾತ್ರಧಾರಿಗಳು ಸೀರಿಯಲ್​ ಪ್ರಿಯರ ಮನದಲ್ಲಿ ಅಷ್ಟರಮಟ್ಟಿಗೆ ಹಾಸುಹೊಕ್ಕಾಗಿದ್ದಾರೆ.  ಸೀತಾ ಪಾತ್ರಧಾರಿಯ ರಿಯಲ್​ ಹೆಸರು ವೈಷ್ಣವಿ ಗೌಡ. ಸೋಷಿಯಲ್​  ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರೋ ವೈಷ್ಣವಿ ಅವರು ಆಗಾಗ್ಗೆ ಹಲವಾರು ರೀಲ್ಸ್​, ವಿಡಿಯೋ, ಫೋಟೋಗಳನ್ನು ಶೇರ್​  ಮಾಡಿಕೊಳ್ಳುತ್ತಿರುತ್ತಾರೆ.  ಆದರೆ, ಇದೀಗ ಅವರು ಶೇರ್​ ಮಾಡಿಕೊಂಡಿರುವ ವಿಡಿಯೋ ಮಾತ್ರ ಬಹಳ ವಿಶೇಷವಾದದ್ದು. ಇದರಲ್ಲಿ ನಟಿಯ ಅಪ್ಪ-ಅಮ್ಮನನ್ನು ನೋಡಬಹುದು. ಇದರ ವಿಶೇಷತೆ ಏನೆಂದರೆ, ಈ ವಯಸ್ಸಿನಲ್ಲಿ ವೈಷ್ಣವಿ ಅವರ ಅಮ್ಮ ಭಾನು ರವಿಕುಮಾರ್​ ಅವರು ಕಾನೂನು ಪದವಿ ಮತ್ತು ಸೈಕಾಲಾಜಿ ಪದವಿಯನ್ನು ಪಡೆದಿದ್ದು ವಕೀಲೆಯಾಗಿ ವೃತ್ತಿ ನಡೆಸುತ್ತಿದ್ದಾರೆ!

ಓದುವ ಕಾಲದಲ್ಲಿ ಅದೇನೋ ತೊಡಕುಗಳು ಹಲವರ ಬಾಳಲ್ಲಿ ಬರುವುದು ಉಂಟು. ಓದುವ ವಯಸ್ಸಿನಲ್ಲಿ ಓದಲು ಆಗದೇ ಇರುವ ಸ್ಥಿತಿ ಬರುವುದು ಉಂಟು. ಅದರಲ್ಲಿಯೂ ಹೆಣ್ಣುಮಕ್ಕಳು ಎಂದರೆ, ಮದುವೆ ಮಾಡುವುದು, ಮದುವೆಯಾದ ಮೇಲೆ ಮಕ್ಕಳು... ಕುಟುಂಬದ ಜವಾಬ್ದಾರಿ ಇವುಗಳ ನಡುವೆ ಅವರ ಶಿಕ್ಷಣದ ಆಸೆ ಎಲ್ಲಿಯೋ ಕಮರಿ ಹೋಗುವುದು ಉಂಟು. ಆದರೆ ಓದಲು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ವಯಸ್ಸಿನ ಹಂಗೇನಿಲ್ಲ, ಕುಟುಂಬದವರ ಪ್ರೋತ್ಸಾಹವಷ್ಟೇ ಬೇಕಾಗಿರುವುದು. ಪತಿ, ಮಕ್ಕಳು ಹಾಗೂ ಕುಟುಂಬದವರು ಬೆಂಬಲ ಕೊಟ್ಟರೆ, ಆ ಕನಸನ್ನು ಯಾವ ವಯಸ್ಸಿನಲ್ಲಿ ಬೇಕಾದರೂ ನನಸು ಮಾಡಿಕೊಳ್ಳಬಹುದು ಎನ್ನುವುದಕ್ಕೆ ಮಾದರಿಯಾಗಿದ್ದಾರೆ ಭಾನು ರವಿಕುಮಾರ್​. ಇದೀಗ ಅವರ ಕಾನೂನು ಪದವಿ ಮತ್ತು ಸೈಕಾಲಾಜಿಯನ್ನು ಮುಗಿಸಿದ್ದು, ವಕೀಲೆಯಾಗಿ ವೃತ್ತಿ ಆರಂಭಿಸಿದ್ದಾರೆ. 

Latest Videos

ಪ್ರಿಯಾದು ಹನಿಮೂನೂ ಆಗೋಯ್ತು, ಈಗಾದ್ರೂ ಗುಡ್​ನ್ಯೂಸ್​ ಕೊಡಮ್ಮಾ... ಫ್ಯಾನ್ಸ್​ಗೆ ವೈಷು ಮದ್ವೆದೇ ಚಿಂತೆ!

ಈ ಬಗ್ಗೆ ನಟಿ ವೈಷ್ಣವಿ ಗೌಡ ಅವರು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮಾಹಿತಿ ನೀಡಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿರುವ ಭಾನು ಅವರು, ಓದುವ ಸಮಯದಲ್ಲಿ ಓದಲು ಆಗಲಿಲ್ಲ. ಈಗ ಮನೆಯವರ ಪ್ರೋತ್ಸಾಹದಿಂದ ಎರಡು ಪದವಿಗಳನ್ನು ಮುಗಿಸಿದ್ದೇನೆ ಎಂದಿದ್ದಾರೆ. ಗೃಹಿಣಿ ಎಂದರೆ ಕೇವಲ ಗೃಹಿಣಿಯೇ ಆಗಿರಬೇಕೆಂದೇನೂ ಇಲ್ಲ. ಆಕೆಯೂ ಸಾಧನೆ ಮಾಡಬಹುದು ಎಂದು ಹೇಳಿದ್ದಾರೆ. ಎಲ್​ಎಲ್​ಬಿಯನ್ನು ರೆಗ್ಯುಲರ್​ ಕಾಲೇಜಿಗೆ ಹೋಗಿ ಮುಗಿಸಿದೆ. ಆ ಸಮಯದಲ್ಲಿ ಸ್ವಲ್ಪ ಮುಜುಗರ ಆಯ್ತು. ನಾನೇ ದೊಡ್ಡವಳು, ಉಳಿದವರೆಲ್ಲಾ ಮಕ್ಕಳು ಇದ್ದರು. ನನ್ನನ್ನು ಲೆಕ್ಚರರ್​ ಎಂದುಕೊಂಡು ಬಿಡುತ್ತಿದ್ದರು. ಮೊದಮೊದಲಿಗೆ ಸ್ವಲ್ಪ ಮುಜುಗರ ಎನ್ನಿಸಿದರೂ, ಕೊನೆಗೆ ಎಲ್ಲವೂ ಸರಿಯಾಯ್ತು ಎಂದಿದ್ದಾರೆ. ಇದೇ ವೇಳೆ ವೈಷ್ಣವಿ ಅವರ ಅಪ್ಪ ಕೂಡ ಪತ್ನಿಗೆ ಶುಭ ಕೋರಿದ್ದು, ಸಮಾಜಕ್ಕೆ ಕಿರುಸೇವೆಯನ್ನಾದರೂ ಮಾಡುವಂತವಳಾಗು ಎಂದು ಹಾರೈಸಿದ್ದಾರೆ.

 ಈ ಹಿಂದೆ ಅಮ್ಮ ಕಾನೂನು ಪದವಿ ಮುಗಿಸಿದ್ದಾಗ, ವೈಷ್ಣವಿ ಅವರು, ಕಪ್ಪು ಕೋಟ್‌ ಧರಿಸಿದ್ದ ತಾಯಿಯ ಜೊತೆ  ಫೋಟೋ  ಶೇರ್​ ಮಾಡಿಕೊಂಡಿದ್ದರು.  ಮನೆಯಲ್ಲಿ ಈಗ ಅಡ್ವೊಕೇಟ್‌ ಇದ್ದಾರೆ. ವಯಸ್ಸು ಅನ್ನೋದು ಒಂದು ಸಂಖ್ಯೆ ಅಷ್ಟೇ ಅಂತ ನೀವು ನನಗೆ ಯಾವಾಗಲೂ ಹೇಳುತ್ತಿದ್ದೀರಿ. ಈ ವಯಸ್ಸಿನಲ್ಲಿ ನೀವು ಮಾಡಿದ ಈ ಸಾಧನೆ ನೋಡಿ ನನಗೆ ಹೆಮ್ಮೆ ಆಗುತ್ತಿದೆ. ನಮ್ಮೆಲ್ಲರಿಗೆ ಸ್ಪೂರ್ತಿಯಾಗಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದರು.  ಜೊತೆಗೆ, ಅಮ್ಮನ ಬಗ್ಗೆ  ಕುತೂಹಲದ ವಿಷಯವೊಂದನ್ನು ಹೇಳಿಕೊಂಡಿದ್ದರು. ಅದೇನೆಂದರೆ, ವೈಷ್ಣವಿ ಅವರ ತಾಯಿ  ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ವಿಚಾರ ದೊಡ್ಡ ಸುದ್ದಿ ಆಗಿತ್ತು. ನನ್ನ ತಾಯಿ ಯೋಗ ಮಾಡಿ ತೂಕ ಇಳಿಸಿಕೊಂಡಿದ್ದಾರೆ ಎಂದು ಹೇಳಿದ್ದರು ವೈಷ್ಣವಿ. ನಮ್ಮ ತಾಯಿ ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತಾರೆ. ನಮಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ವೈಷ್ಣವಿ ಅವರು ಭಾನು ಅವರಿಗೆ ಹೇಳುತ್ತಿರುತ್ತಾರೆ. ಇದೀಗ ತಾವು ಕೂಡ ಯೋಗ, ಧ್ಯಾನ, ಮ್ಯಾನುಫೆಸ್ಟೇಷನ್​ ಇತ್ಯಾದಿಗಳ ಕುರಿತು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ನಟಿ ಹೇಳುತ್ತಿರುತ್ತಾರೆ. 

ಪ್ರೇಮಿಗಳ ದಿನಕ್ಕಾಗಿ ವೈಷ್ಣವಿಗೆ ವಜ್ರಾಭರಣ ಗಿಫ್ಟ್! ಮದ್ವೆಗೆ ಸಜ್ಜಾಗ್ತಿದ್ಯಾ ಸೀತಾ-ರಾಮ ಜೋಡಿ? ಇಲ್ಲಿದೆ ಡಿಟೇಲ್ಸ್​

vuukle one pixel image
click me!