ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ಸಿಕಂದರ್ ಬಿಡುಗಡೆಗೆ ಮುಂಚಿತವಾಗಿ ರಾಮ ಜನ್ಮಭೂಮಿ ವಾಚ್ ಧರಿಸಿ ಫೋಟೋ ಹಂಚಿಕೊಂಡಿದ್ದಾರೆ. ಈ ವಿಶೇಷ ವಾಚ್ ರಾಮ ಮಂದಿರದ ಕೆತ್ತನೆಗಳನ್ನು ಹೊಂದಿದೆ ಮತ್ತು ಇದರ ಬೆಲೆ 34 ಲಕ್ಷ ರೂಪಾಯಿ.
ಮುಂಬೈ (ಮಾ.27): ಬಹು ನಿರೀಕ್ಷಿತ ಚಿತ್ರ ಸಿಕಂದರ್ ಮಾರ್ಚ್ 30 ರಂದು ಬಿಡುಗಡೆಯಾಗುವ ಮುನ್ನ ಸಲ್ಮಾನ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಇತ್ತೀಚಿನ ಫೋಟೋ ಹಂಚಿಕೊಂಡಿದ್ದಾರೆ. ಆದರೆ, ಸಲ್ಮಾನ್ ಖಾನ್ ಹೊಸ ಫೋಟೋಗಿಂತ ಹೆಚ್ಚಾಗಿ ಎಲ್ಲರ ಗಮನಸೆಳೆದಿದ್ದು ಅವರು ಧರಿಸಿದ್ದ ಸ್ಪೆಷಲ್ ಎಡಷಿನ್ ರಾಮಜನ್ಮಭೂಮಿ ವಾಚ್. ಸಲ್ಮಾನ್ ನೀಲಿ ಬಣ್ಣದ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿರುವ ದುಬಾರಿ ಬೆಲೆಯ ತಮ್ಮ ವಿಶೇಷ ಆವೃತ್ತಿಯ ರಾಮ ಜನ್ಮಭೂಮಿ ವಾಚ್ ಪ್ರದರ್ಶನ ಮಾಡುತ್ತಿರುವ ಹಲವು ಫೋಟೋ ಸಿರೀಸ್ ಹಂಚಿಕೊಂಡಿದ್ದಾರೆ. ಅದರೊಂದಿಗೆ ಮಾರ್ಚ್ 30 ರಂದು ಚಿತ್ರ ಮಂದಿರಗಳಲ್ಲಿ ಭೇಟಿಯಾಗೋಣ ಎಂದು ಅವರು ಬರೆದುಕೊಂಡಿದ್ದಾರೆ.
ಸಲ್ಮಾನ್ ಖಾನ್, ಜಾಕೋಬ್ & ಕಂಪನಿಯ ಸ್ಥಾಪಕ ಮತ್ತು ಅಧ್ಯಕ್ಷ ಜಾಕೋಬ್ ಅರಾಬೊ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಐಷಾರಾಮಿ ಗಡಿಯಾರ ಬ್ರಾಂಡ್‌ನೊಂದಿಗೆ ಸಹಯೋಗ ಹೊಂದಿದ್ದಾರೆ. 2024 ರಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರದ ಸಮಾರಂಭವನ್ನು ಆಚರಿಸಲು ಈ ವಿಶೇಷ ಎಡಿಷನ್‌ನ ಗಡಿಯಾರವನ್ನು ಹೊರತರಲಾಗಿತ್ತು. ಈ ವಿಶೇಷ ಕೈಗಡಿಯಾರವು ಎಥೋಸ್ ಮತ್ತು ಜಾಕೋಬ್ & ಕಂಪನಿಯ ಸಹಯೋಗದಿಂದ ಸಿದ್ಧವಾಗಿದೆ.
ಕಂಪನಿಯ ಪ್ರಕಾರ, ಈ ವಾಚ್ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ರಾಮ ಮಂದಿರದ ವಿವರವಾದ ಕೆತ್ತನೆಗಳನ್ನು ಮತ್ತು ರಾಮ ಮತ್ತು ಹನುಮಂತನ ಚಿತ್ರಣಗಳನ್ನು ಒಳಗೊಂಡಿದೆ. ಪಟ್ಟಿಯನ್ನು ಕೇಸರಿ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ, ಅದರ ಆಳವಾದ ಆಧ್ಯಾತ್ಮಿಕ ಸಂಕೇತಕ್ಕಾಗಿ ಈ ಬಣ್ಣವನ್ನು ಆಯ್ಕೆ ಮಾಡಲಾಗಿದೆ. ಈ ಸ್ಪೆಷಲ್ ಎಡಿಷನ್ ವಾಷ್‌ನ ಬೆಲೆ 34 ಲಕ್ಷ ರೂಪಾಯಿ ಎನ್ನಲಾಗಿದೆ.
ಸಲ್ಮಾನ್ ಖಾನ್ ಯಾರನ್ನ ಲೈಫ್‌ನ ಸಿಕಂದರ್ ಅಂದ್ರು? ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಬಗ್ಗೆ ಏನ್ ಹೇಳಿದ್ರು?
ಕೇಸರಿಯು ಆಧ್ಯಾತ್ಮಿಕತೆ, ಶುದ್ಧತೆ ಮತ್ತು ಪ್ರಾರ್ಥನೆಯ ಸಾರವನ್ನು ಪ್ರತಿನಿಧಿಸುತ್ತದೆ, ಹಿಂದುತ್ವದ ಮೂಲ ಮೌಲ್ಯಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಕಂಪನಿಯು ವಿವರಿಸಿದೆ. ಗಡಿಯಾರದ ಪ್ರತಿಯೊಂದು ಅಂಶವನ್ನು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪ್ರತಿಬಿಂಬಿಸಲು ರಚಿಸಲಾಗಿದೆ. ಸಲ್ಮಾನ್ ತಮ್ಮ ಮುಂಬರುವ ಚಿತ್ರ ಸಿಕಂದರ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ವರ್ಷದ ಈದ್ ಸಂದರ್ಭದಲ್ಲಿ ಮಾರ್ಚ್ 30, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬಿಗ್ ಬಜೆಟ್ ಭಯ, 15 ವರ್ಷದ ಹಿಂದೆ 64 ಕೋಟಿ ವೆಚ್ಚದ ಸಲ್ಮಾನ್ ಸಿನಿಮಾ ಗಳಿಸಿದ್ದೆಷ್ಟು?