ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ 'ಕನ್ನಡತಿ'. ಕತೆ, ಸಂಭಾಷಣೆಯಲ್ಲಿ ಬೇರೆ ಸೀರಿಯಲ್‌ಗಳಿಗಿಂತ ಡಿಫರೆಂಟ್ ಆಗಿದ್ದ ಧಾರಾವಾಹಿ ಇದು. ಆದರೆ ಫ್ಯಾನ್ಸ್ ಇದಕ್ಕೀಗ ಸ್ಟಾಪ್ ದಿಸ್ ನಾನ್‌ಸೆನ್ಸ್ ಅಂತಿದ್ದಾರೆ. ಅಂಥದ್ದೇನಾಯ್ತು?
'ಕನ್ನಡತಿ' (Kannadathi) ಇದು ಕಲರ್ಸ್ ಕನ್ನಡ (Colors Kannada)ದ ಜನಪ್ರಿಯ ಸೀರಿಯಲ್. ಆರಂಭದಿಂದಲೂ ಉತ್ತಮ ಕತೆ, ಸ್ಕ್ರೀನ್ ಪ್ಲೇ, ಸಂಭಾಷಣೆಗಳ ಮೂಲಕ ಗಮನಸೆಳೆಯುತ್ತಿತ್ತು. ಎಲ್ಲ ವಯಸ್ಸಿನವರೂ ಜೊತೆಗೇ ಕೂತು ನೋಡುವಂತಿದ್ದ ಈ ಸೀರಿಯಲ್‌ಗೆ ಇತ್ತೀಚೆಗೆ ನೆಗೆಟಿವ್ ಕಮೆಂಟ್‌ಗಳೇ (Negative Comments) ಹೆಚ್ಚಾಗುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಈ ಸೀರಿಯಲ್‌ನ ಪ್ರೊಮೋ ಹಾಕಿದ್ರೆ ಸಾಕು, ಕಮೆಂಟ್ ಸೆಕ್ಷನ್‌ನಲ್ಲಿ (Comments) ಹೆಚ್ಚು ಹೆಚ್ಚು ನೆಗೆಟಿವ್ ಕಮೆಂಟ್ಸ್ ಗಳೇ ಕಾಣಿಸುತ್ತಿವೆ. ಜೊತೆಗೆ ಈ ಸೀರಿಯಲ್‌ನ ಟಿಆರ್‌ಪಿಯೂ ಕುಸಿದಿದೆ. ಒಂದು ಟೈಮಲ್ಲಿ ಕ್ಲಾಸ್ ಧಾರಾವಾಹಿಯಾಗಿದ್ದ, ಸಾಕಷ್ಟು ಇಂಟರೆಸ್ಟಿಂಗ್ ಕತೆಯ ಮೂಲಕ ಗಮನಸೆಳೆಯುತ್ತಿದ್ದ ಸೀರಿಯಲ್ ಇದ್ಯಾಕೆ ಈಗ ಪದೇ ಪದೇ ಮುಗ್ಗರಿಸುತ್ತಿದೆ ಅನ್ನೋ ಪ್ರಶ್ನೆ ಎದುರಾಗಿದೆ.
ಹಿಂದಿಯಲ್ಲಿ ಬರ್ತಿದೆ ಕನ್ನಡದ ಪ್ರಸಿದ್ಧ ಧಾರಾವಾಹಿ 'ಕನ್ನಡತಿ'
ಹರ್ಷ ಭುವಿಯ ಕತೆಯೇ ಮುಖ್ಯವಾಗಿರುವ ಸೀರಿಯಲ್ ಕನ್ನಡತಿ. ಇದರಲ್ಲಿ ಹರ್ಷ ಆತನ ಅಮ್ಮ ನಡೆದೋ ಮಾಲಾ ಕೆಫೆ ಸಿಇಓ. ಭುವನೇಶ್ವರಿ (Bhuvaneshvari) ಅರ್ಥಾತ್ ಸೌಪಾರ್ಣಿಕಾ ಮಾಲಾ ಕೆಫೆಯವರು ನಡೆಸೋ ಕಾಲೇಜ್‌ನಲ್ಲಿ ಟೀಚರ್. ಒಂದು ಹಂತದಲ್ಲಿ ಹರ್ಷ ಭುವಿಗೆ ಪರಿಚಯವಾಗಿ ಸ್ನೇಹ ಬೆಳೆದಿದೆ. ಕ್ರಮೇಣ ಅದು ಪ್ರೀತಿಗೆ ತಿರುಗಿದೆ. ಹತ್ತಾರು ಅಡೆತಡೆಗಳ ನಡುವೆ ಹರ್ಷ (Harsha) ಭುವಿಗೆ ಪ್ರೊಪೋಸ್ ಮಾಡಿದ್ದಾನೆ. ಇತ್ತ ವರೂಧಿನಿ ಎಂಬ ಹುಡುಗಿಗೆ ಹರ್ಷನನ್ನು ಕಂಡರೆ ಜೀವಕ್ಕಿಂತ ಹೆಚ್ಚು ಪ್ರೀತಿ. ಆ ಪ್ರೀತಿಗಾಗಿ ಅವಳು ಪ್ರಾಣ ಕೊಡಲೂ ಸಿದ್ಧ. ಆರಂಭದಲ್ಲಿ ಹರ್ಷನಿಗೆ ಅವಳ ಮೇಲೆ ಸ್ವಲ್ಪ ಕ್ರಶ್ ಇದ್ದರೂ ಆತನ ಪ್ರೀತಿ ಬೆಳೆದದ್ದು ಭುವಿಯ ಮೇಲೆ. ಸದ್ಯ ಹರ್ಷ ಭುವಿಯ ಎಂಗೇಜ್‌ಮೆಂಟ್ ಆಗಿದೆ. ಭುವಿಯ ಹಸಿರುಪೇಟೆ ಮನೆಯಲ್ಲೇ ನಿಶ್ಚಿತಾರ್ಥ ನಡೆದಿತ್ತು. ಈ ನಿಶ್ಚಿತಾರ್ಥ ಅದ್ದೂರಿಯಾಗಿರದೇ ಸರಳವಾಗಿ ಅರ್ಥಪೂರ್ಣವಾಗಿ ನಡೆದಿತ್ತು. ಇಲ್ಲೂ ನಿಶ್ಚಿತಾರ್ಥ ಮಂಟಪದಲ್ಲಿ ಒಂದು ಡ್ರಾಮಾ ನಡೆದಿತ್ತು. ಹರ್ಷನಿಗೆ ಭುವಿ ಹಾಕಬೇಕಿದ್ದ ಉಂಗುರವೇ ನಾಪತ್ತೆಯಾಗಿತ್ತು. ಕೊನೆಗೆ ಎಂಗೇಜ್‌ಮೆಂಟೇ ನಿಲ್ಲುತ್ತೆ ಅನ್ನೋ ಹೊತ್ತಲ್ಲಿ ಹರ್ಷ ರೇಷ್ಮೆ ದಾರವನ್ನೇ ಭುವಿಯ ಬೆರಳಿಗೆ ತೊಡಿಸಿ ಎಂಗೇಟ್‌ಮೆಂಟ್ (Engagement) ಮಾಡಿಕೊಂಡಿದ್ದ. ಆ ಉಂಗುರವನ್ನು ವರೂಧಿನಿ ತೆಗೆದಿಟ್ಟು ತನ್ನ ಕತ್ತಿನ ಚೈನ್‌ನಲ್ಲೇ ಧರಿಸಿಕೊಂಡಿದ್ದಳು.
Hitler Kalyana: ಮಿ. ಪರ್ಫೆಕ್ಟ್ ಎಜೆ - ಮಹಾ ಎಡವಟ್ಟು ಲೀಲಾನ ಆ ದೇವ್ರೇ ಒಂದು ಮಾಡಬೇಕು!
ಈ ಎಂಗೇಜ್‌ಮೆಂಟ್ ಮುಗಿದ ಮೇಲೆ ಹರ್ಷ, ಭುವಿ, ವರೂಧಿನಿ, ಅಮ್ಮಮ್ಮ, ಸುಚಿ ಬೆಟ್ಟ ಹತ್ತಲು ಹೋಗುತ್ತಾರೆ. ಈ ಸೀನ್‌ನಲ್ಲಿ ಈ ಧಾರಾವಾಹಿ ಮಟ್ಟಿಗೆ ಸರಿ ಹೋಗುತ್ತಿಲ್ಲ ಅನ್ನೋ ಲೆವೆಲ್‌ಗೆ ಕ್ರೈಮ್ ಎಲಿಮೆಂಟ್‌ಅನ್ನು ತಂದಿದ್ದಾರೆ ಅನ್ನೋದು ಅಭಿಮಾನಿಗಳ ಬೇಸರ. ಸುಪಾರಿ ಕಿಲ್ಲರ್ ಭುವಿಯನ್ನು ಬೆಟ್ಟದಿಂದ ಬೀಳಿಸಿ ಸಾಯಿಸಲು ಪ್ರಯತ್ನಿಸುವುದನ್ನೇ ಮೊನ್ನೆಯಿಂದಲೂ ಎಳೆದಾಡಲಾಗುತ್ತಿದೆ. ವರೂಧಿನಿಯ ಮಾತುಗಳೂ ಹದ ತಪ್ಪಿದಂತಿದೆ, ಮೈಹುಷಾರಿಲ್ಲದ ಅಮ್ಮಮ್ಮನ್ನ ಬೆಟ್ಟ ಹತ್ತಿಸೋದು ಸರಿ ಅನಿಸುತ್ತಿಲ್ಲ ಅಂತಾರೆ ಜನ. ಒಬ್ಬರು 'ಇವರು ಈ ಬೆಟ್ಟ ಹತ್ತೋಕೆ ಬಂದಿದ್ಯಾಕೆ ಅನ್ನೋದೇ ಕೊನೆಗೂ ಅರ್ಥ ಆಗಲಿಲ್ಲ. ಹರ್ಷ ಭುವಿ ಇಬ್ಬರೇ ಬಂದಿದ್ದರೆ ಅರ್ಥ ಇರುತ್ತಿತ್ತು. ಹುಷಾರಿಲ್ಲದ ರತ್ನಮ್ಮನನ್ನು ಬೆಟ್ಟ ಹತ್ತಿಸಿ ಕೆಳಗೆ ಆಂಬ್ಯುಲೆನ್ಸ್ ತಂದಿಟ್ಟುಕೊಳ್ಳೋದು, ಸೈಕೋ ವರು ಹಿಂದೆ ಭುವಿ ಓಡುವುದು, ಅವಳ ಫೋನ್ ಸಿಕ್ತಿಲ್ಲ ಅಂತ ಹರ್ಷ ಗಾಬರಿ ಬೀಳೋದು, ಇವೆಲ್ಲ ಆರ್ಟಿಫಿಷಿಯಲ್ ಆಗಿ ಬರುತ್ತಿದೆ' ಅಂತ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಬಂದಿದೆ.
'ಇನ್ನೂ ಎಷ್ಟು ದಿನ ಬೆಟ್ಟದ ಮೇಲೆ ಸೀನ್ ನಡೆಯುತ್ತೆ, ಅತೀ ಆಯ್ತು' ಅಂತ ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು 'ಸ್ಟಾಪ್ ದಿಸ್ ನಾನ್ ಸೆನ್ಸ್' (Stop this nonsense) ಅಂದಿದ್ದಾರೆ. ಮಗದೊಬ್ಬರು, 'ಭುವಿಯನ್ನು ಸುಪಾರಿ ಕಿಲ್ಲರ್ ತಳ್ಳಲಿ. ಡೈರೆಕ್ಟರನ್ನು ನಾವೇ ತಳ್ಳಿ ಬಿಡೋಣ. ಆಗ ಎಲ್ಲ ಸರಿಹೋಗುತ್ತೆ' ಅಂತ ಸಿಟ್ಟಿನಲ್ಲಿ ಬರೆದಿದ್ದಾರೆ. 'ಸ್ಟಾಪ್ ದಿಸ್ ನಾನ್‌ಸೆನ್ಸ್' ಅನ್ನೋ ಥರದ ಕಮೆಂಟ್‌ಗಳೂ ಬಂದಿವೆ. 'ಅನಾವಶ್ಯಕವಾಗಿ ಎಳೀತಿದ್ದೀರ, ಯಾಕೆ ಇಂಥ ಸೀರಿಯಲ್‌ನ ದಿಕ್ಕು ತಪ್ಪಿಸುತ್ತಿದ್ದೀರಾ?' ಎಂದು ಒಬ್ಬರು ಬೇಸರದಿಂದ ಪ್ರಶ್ನಿಸಿದ್ದಾರೆ.
ತನ್ನ ವಿಭಿನ್ನ ಕತೆಯಿಂದ, ಹೊಸತನದಿಂದ ಗಮನಸೆಳೆಯುತ್ತಿದ್ದ ಕನ್ನಡತಿ ಇತ್ತೀಚೆಗೆ ಮೊನಾಟನಿ (Monotony) ಅನಿಸುತ್ತಿದೆ, ಕತೆಯನ್ನು ಅನಾವಶ್ಯಕ ಎಳೆಯುತ್ತಿದ್ದಾರೆ, ಸುಪಾರಿ ಕಿಲ್ಲರ್‌ನಂಥ ಕಾಂಸೆಪ್ಟ್ ಬಹಳ ಹಳೆಯದು, ಅದು ಈ ಕತೆಗೆ ಸರಿ ಹೋಗುತ್ತಿಲ್ಲ ಎಂಬ ಮಾತು ಈ ಸೀರಿಯಲ್ ನೋಡುತ್ತಿರುವ ಅಭಿಮಾನಿಗಳದು. ಫ್ಯಾನ್ಸ್ ಕೂಗು ಸೀರಿಯಲ್ ಟೀಮ್ ಗೆ ತಲುಪುತ್ತಾ, ಕನ್ನಡತಿ ಮತ್ತೆ ಹಿಂದಿನ ಲವಲವಿಕೆಯಿಂದ ಬರುತ್ತಾಳಾ ಅಂತ ಫ್ಯಾನ್ಸ್ ಕಾಯ್ತಿದ್ದಾರೆ.
KGF 2 ಯಶ್ ಕಾಸ್ಟ್ಯೂಮ್ ಡಿಸೈನ್ ಮಾಡ್ತಿರೋದು ಈ ಹೆಣ್ಮಗಳು! ಯಾರೀಕೆ?