Hitler Kalyana: ಮಿ. ಪರ್ಫೆಕ್ಟ್ ಎಜೆ - ಮಹಾ ಎಡವಟ್ಟು ಲೀಲಾನ ಆ ದೇವ್ರೇ ಒಂದು ಮಾಡಬೇಕು!

By Suvarna News  |  First Published Apr 20, 2022, 12:06 PM IST

ಕಿರುತೆರೆಯಲ್ಲಿ ಆರಂಭದಿಂದಲೂ ಸಖತ್ ಸದ್ದು ಮಾಡುತ್ತಿರುವ ಸೀರಿಯಲ್ ಹಿಟ್ಲರ್ ಕಲ್ಯಾಣ. ಈ ಸೀರಿಯಲ್ ನಲ್ಲಿ ಎಜೆ ಮತ್ತು ಲೀಲಾನ ಆ ತಾಯಿ ತ್ರಿಪುರ ಸುಂದರಿ ಒಂದು ಮಾಡ್ತಾಳಾ?


'ಹಿಟ್ಲರ್ ಕಲ್ಯಾಣ' (Hitler Kalyana) ಸೀರಿಯಲ್ ಜೀ ಕನ್ನಡದಲ್ಲಿ (Zee Kannada) ಆರಂಭದಿಂದಲೇ ಹೆಸರು ಮಾಡಿತ್ತು. ಈ ಸೀರಿಯಲ್‌ನಲ್ಲಿ ಎ ಜೆ (Abhiram Jayshankar) ಯಾಗಿ ದಿಲೀಪ್ ರಾಜ್ ಹಾಗೂ ಲೀಲಾ (Leela) ಪಾತ್ರದಲ್ಲಿ ಮಲೈಕಾ ವಸುಪಾಲ್ (Mallaika T Vasupal)  ನಟಿಸಿದ್ದರು. ಬಹಳಷ್ಟು ಕಾಲ ನಂ.1  ಸೀರಿಯಲ್ ಆಗಿ ಈ ಧಾರಾವಾಹಿ ಮೆರೆದಿತ್ತು. ಆದರೆ ಸದ್ಯಕ್ಕೆ ಕೊಂಚ ಹಿಂದೆ ಬಿದ್ದಿದೆ. ಆದರೆ ಕತೆ ಅಷ್ಟೇ ಆಸಕ್ತಿಕರವಾಗಿ ಸಾಗುತ್ತಿದೆ. ಕೆಲವು ಸಮಯದ ಹಿಂದೆ ಈ ಸೀರಿಯಲ್‌ಗೆ ಅಂತರಾ ಅನ್ನೋ ಪಾತ್ರ ಎಂಟ್ರಿ ಕೊಟ್ಟಿದೆ. 'ಅಮೃತವರ್ಷಿಣಿ' ಎಂಬ ಹಿಟ್ ಸೀರಿಯಲ್‌ನ ನಾಯಕಿಯಾಗಿದ್ದ ರಜನಿ ಈ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಅಂತರಾ ಎಜೆಯ ಮೊದಲ ಹೆಂಡತಿ. ಅಂತರಾ ಈಗ ಫೋಟೋದಲ್ಲಿ ಹಾಗೂ ಎಜೆ ಅಂತರಂಗದಲ್ಲಿ ಮಾತ್ರ ಇರುವ ಪಾತ್ರ. ಈಕೆಯ ಕಾಲಾನಂತರ ಎಜೆ ಸಾಕಷ್ಟು ಕಾಲ ಒಂಟಿಯಾಗಿದ್ದವನು ಕೊನೆಗೆ ಅಮ್ಮನ ಬಲವಂತಕ್ಕೆ ಲೀಲಾಗೆ ತಾಳಿ ಕಟ್ಟುತ್ತಾನೆ. ಈ ಲೀಲಾ ತನ್ನ ಎಡವಟ್ಟುಗಳಿಂದಲೇ ಫೇಮಸ್. ಎಡವಟ್ಟು ಲೀಲಾ ಅಂತಲೇ ಹೆಸರಾದವಳು. ಈ ಸೀರಿಯಲ್‌ (Serial) ಉದ್ದಕ್ಕೂ ಈಕೆಯ ಯಡವಟ್ಟುಗಳೇ ಕಥೆಯ ಮುಖ್ಯಭಾಗವಾಗಿ ಬಂದಿದೆ. ಎಷ್ಟೇ ಯಡವಟ್ಟು ಮಾಡಿದ್ರೂ ಪ್ರಾಮಾಣಿಕತೆ, ಮುಗ್ಧತೆಯ ಕಾರಣಕ್ಕೆ ಈಕೆ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಲೇ ಹೋಗುತ್ತಿದ್ದಾಳೆ. ಒಂದು ಕಡೆ ಎಜೆಯ ಮಹಾನ್ ಶಿಸ್ತು, ಮಿ.ಪರ್ಫೆಕ್ಟ್ ಅಂತಲೇ ಹೆಸರಾದ ಪಾತ್ರ, ಇನ್ನೊಂದೆಡೆ ಅದಕ್ಕೆ ಸರೀ ವಿರುದ್ಧ ಒಂದಲ್ಲ ಒಂದು ಯಡವಟ್ಟು ಮಾಡುತ್ತಲೇ ಇರುವ ಲೀಲಾ, ಈ ಎರಡೂ ಪಾತ್ರಗಳ ಫ್ಲೋ ಚೆನ್ನಾಗಿ ವರ್ಕ್ ಆಗುತ್ತಿದೆ. ಜೊತೆಗೆ ಲೀಲಾಳ ನೆರಳನ್ನೂ ಕಂಡರಾಗದ ಮೂವರು ಸೊಸೆಯರು, ಸದಾ ಮನೆಯನ್ನು ತಮ್ಮ ಹದ್ದುಬಸ್ತಿನಲ್ಲಿ ಇಡುವ ಇವರ ಜೊತೆಗೆ ಏಗೋದು ಲೀಲಾಗಿರುವ ಸ್ಪೆಷಲ್ ಟಾಸ್ಕ್ (Special Task)

ಕನ್ನಡತಿಯಲ್ಲಿ ದೇವತೆ, ರಾಮಾಚಾರಿಯಲ್ಲಿ ರಾಕ್ಷಸಿ.. ಅಬ್ಬಬ್ಬಾ, ಭಾವನಾ ಟ್ಯಾಲೆಂಟೇ!

Tap to resize

Latest Videos

ಎಜೆ ಗೆ ತನ್ನ ಮೊದಲ ಹೆಂಡತಿ ಅಂತರಾ (Anthara) ಮೇಲೆ ಪ್ರೀತಿ ಹಾಗೇ ಇದೆ. ಆ ಕಾರಣಕ್ಕೆ ಅವನಿಗೆ ಲೀಲಾ ಜೊತೆಗೆ ಯಾವ ಮಧುರ ಭಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಮನೆ ಮಗಳಂತಿದ್ದರೂ ಸದ್ಯ ಈ ಜಗತ್ತಿನಲ್ಲಿ ಇಲ್ಲದ ಅಂತರಾ ಹೆಸರಿನಲ್ಲಿ ಮಗ ಕೊರಗುವುದು, ಅವಳ ನೆನಪಲ್ಲೇ ಬದುಕು ಸಾಗಿಸೋದು ಅಮ್ಮನಿಗೆ ಇಷ್ಟ ಇಲ್ಲ. ಈಗಿನ ಸೊಸೆ ಲೀಲಾ ಜೊತೆಗೇ ಮಗ ರಾಮು ಅರ್ಥಾತ್ ಎಜೆ ಜೊತೆ ಬಾಂಧವ್ಯ ಬೆಳೆಯಬೇಕು, ಮಗನ ಬದುಕು ಚೆನ್ನಾಗಾಗಬೇಕು ಅನ್ನುವುದು ಅಮ್ಮನ ಹಂಬಲ. ಅದಕ್ಕಾಗಿ ಅಮ್ಮ ದೇವಿಯನ್ನು ಬೇಡಿದ್ದಾಳೆ. ಆ ದೇವಾಲಯದ ಅರ್ಚಕರ ಜೊತೆಗೆ ತನ್ನ ಸಂಕಟ ಹಂಚಿಕೊಂಡಿದ್ದಾಳೆ. ಮಗನಿಗೆ ಇನ್ನೊಂದು ಮದುವೆ ಆದರೆ ಹಳೆ ನೆನಪುಗಳಿಂದ ಹೊರ ಬಂದು ಹೊಸ ಬದುಕು ನಡೆಸ್ತಾನೆ ಅಂದುಕೊಂಡರೆ ಲೀಲಾ ಮತ್ತು ಮಗನ ನಡುವೆ ಯಾವ ಪ್ರೀತಿಯೂ ಹುಟ್ಟಿದಂತಿಲ್ಲ. ಮಗನಿಗೆ ಲೀಲಾ ಜೊತೆಗೆ ನಿಜವಾದ ಸಂಬಂಧ ಬೆಳೆಯಬೇಕು ಅಂದರೆ ಮಗನಿಗೆ ಅಂತರಾ ಜೊತೆಗೆ ಇರುವ ನಂಟು ಕಳಚಿಕೊಳ್ಳಬೇಕು. ಅದಕ್ಕೋಸ್ಕರ ದೇವಿಯ ಹರಕೆಯ ನೆವದಲ್ಲಿ ಅಂತರಾ ಆಭರಣಗಳನ್ನು ಅಮ್ಮ ಕೇಳಿದ್ದಾಳೆ. ಆದರೆ ಅಂತರಾ ಜೊತೆಗಿಲ್ಲದಿದ್ದರೂ ಅವಳ ವಸ್ತುಗಳಲ್ಲೇ ಅವಳನ್ನು ಕಾಣುತ್ತಿರುವ, ಆ ವಸ್ತುಗಳ ಬಗ್ಗೆ ವ್ಯಾಮೋಹ ಬೆಳೆಸಿಕೊಂಡಿರುವ ಎಜೆಗೆ ಇದು ಸಾಧ್ಯ ಆಗ್ತಾ ಇಲ್ಲ. ಕೊನೆಗೂ ಅಮ್ಮನ ಬಲವಂತಕ್ಕೆ ಆ ಆಭರಣ (Jewellery) ನೀಡಲು ಒಪ್ಪುತ್ತಾಳೆ.

Lakshana Serial: ನಕ್ಷತ್ರಾ ಗೆ ಭೂಪತಿ ಮನೆಗೆ ಎಂಟ್ರಿ ಇಲ್ಲ, ಮತ್ತೆಲ್ಲಿ ಹೋಗ್ತಾಳವಳು?
 

ಸೀರಿಯಲ್‌ನಲ್ಲಿ ಇಷ್ಟು ದಿನಗಳ ಕಾಲ ಲೀಲಾಳ ಎಡವಟ್ಟು, ಎಜೆಯ ಶಿಸ್ತಿನ ನಡುವೆ ಇತ್ತೀಚೆಗೆ ಲೀಲಾ ಒಳ್ಳೆತನಕ್ಕೆ ಎಜೆ ಮಾರು ಹೋಗುತ್ತಿರುವುದೂ ರಿವೀಲ್ ಆಗ್ತಿದೆ. ಆದರೆ ಇದ್ಯಾವುದೂ ಅವನಲ್ಲಿ ಅವಳ ಬಗ್ಗೆ ಪ್ರೀತಿ ಭಾವ ಹುಟ್ಟಿಸಿಲ್ಲ. ಸದ್ಯಕ್ಕೀಗ ಅಂತರಾಳ ವಸ್ತುಗಳೆಲ್ಲ ಮನೆಯಿಂದಾಚೆ ಹೋದ ಮೇಲೆ ನಿಧಾನಕ್ಕೆ ಎಜೆಗೆ ಲೀಲಾ ಬಗ್ಗೆ ಪ್ರೀತಿ ಬೆಳೆಯಬಹುದಾ ಅನ್ನುವ ಪ್ರಶ್ನೆ ಮುಂದಿದೆ.

ಇನ್ನೊಂದೆಡೆ ಲೀಲಾ, ಎಜೆಗಾಗಿ ಏನು ಮಾಡಲೂ ಸಿದ್ಧಳಿರುವ ಹುಡುಗಿ. ತನ್ನ ತಾಳಿಯನ್ನೇ ಕೊಟ್ಟು ಅಂತರಾ ಭಾವಚಿತ್ರವನ್ನು ಮನೆಗೆ ತಂದಿದ್ದಾಳೆ. ತಾಳಿ ಮಾರಿದ್ದಕ್ಕೆ ಎ ಜೆ ಸೇರಿದಂತೆ ಎಲ್ಲರ ಕೋಪಕ್ಕೆ ತುತ್ತಾದರೂ ಕೊನೆಗೂ ಅವಳ ಒಳ್ಳೆತನ ತಿಳಿದು ಎಜೆ ಅವಳಿಗೆ ಮತ್ತೆ ತಾಳಿ ಕಟ್ಟಿದ್ದಾನೆ. ಮುಂದೆ ದೇವಿ ತ್ರಿಪುರ ಸುಂದರಿ ಆಶೀರ್ವಾದದಿಂದ ಆದರೂ ಲೀಲಾ-ಎಜೆ ಒಂದಾಗುತ್ತಾರ ಅನ್ನುವುದು ಸದ್ಯದ ಕುತೂಹಲ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

 

ಸೀರಿಯಲ್‌ನಲ್ಲಿ ಕತೆಯಷ್ಟೇ ಕಲಾವಿದರ ಅಭಿನಯವೂ ಗಮನ ಸೆಳೆಯುತ್ತಿದೆ. ಅಮ್ಮನಾಗಿ ವಿದ್ಯಾ ಮೂರ್ತಿ (Vidya moorthy), ಎಜೆ ಆಗಿ ದಿಲೀಪ್ ರಾಜ್, ಲೀಲಾ ಆಗಿ ಮಲೈಕಾ ವಸುಪಾಲ್, ಸೊಸೆಯಾಗಿ ನಂದಿನಿ ಮೂರ್ತಿ (Nandini moorthy) ಮೊದಲಾದವರದು ಗಮನಸೆಳೆಯುವ ಅಭಿನಯ (Acting). ದಿಲೀಪ್ ರಾಜ್ ಅವರೇ ಈ ಸೀರಿಯಲ್‌ಅನ್ನು ನಿರ್ಮಾಣ (Producer) ಮಾಡಿದ್ದಾರೆ. ತನ್ನ ಶೀರ್ಷಿಕೆಯಿಂದ ಗಮನಸೆಳೆದಿದ್ದ ಈ ಸೀರಿಯಲ್ ಈಗ ನಟನೆ, ಕತೆಯಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡತಿ ಹೀರೋ ಕಿರಣ್ ರಾಜ್ ಬಳಿ ಇರೋ Mobile ಯಾವುದು? ಇದ್ರಲ್ಲಿ ಒಂದೇ ಒಂದು Selfie ಇಲ್ಲ ಯಾಕೆ?
 

click me!