ಕನ್ನಡತಿಯಲ್ಲಿ ದೇವತೆ, ರಾಮಾಚಾರಿಯಲ್ಲಿ ರಾಕ್ಷಸಿ.. ಅಬ್ಬಬ್ಬಾ, ಭಾವನಾ ಟ್ಯಾಲೆಂಟೇ!

By Suvarna News  |  First Published Apr 19, 2022, 1:17 PM IST

ಒಂದು ಕಡೆ ರಾಜಕೀಯ, ಇನ್ನೊಂದು ಕಡೆ ಆಕ್ಟಿಂಗ್, ಮತ್ತೊಂದು ಕಡೆ ಡ್ಯಾನ್ಸ್.. ಹೀಗೆ ಡಿಫರೆಂಟ್ ಆಕ್ಟಿವಿಟಿಗಳಲ್ಲಿ ಚರುಕಿನ ಹೆಜ್ಜೆ ಇಟ್ಟವರು ಭಾವನಾ ರಾಮಣ್ಣ. ಕಿರುತೆರೆಯಲ್ಲಿ ಇವ್ರ ದೇವಿ ಪಾತ್ರ ಕಂಡು ಕೈ ಮುಗಿದರೇ ಎಲ್ಲ. ಮಾನ್ಯತಾ ಪಾತ್ರ ನೋಡಿದ್ರೆ ಕೈ ಎತ್ ಹೊಡೀಬೇಕು ಅಂತ ಸಿಟ್ ಬರದಿದ್ರೆ ಕೇಳಿ.. ಇದು ಭಾವನಾ ರಾಮಣ್ಣ ಟ್ಯಾಲೆಂಟ್‌ಗೆ ಸಾಕ್ಷಿ.


ಒಂದಿಷ್ಟು ಸಮಯ ರಾಜಕೀಯದಲ್ಲಿ ಬ್ಯುಸಿ (Busy) ಇದ್ದ ಭಾವನಾ (Bhavana Ramanna) ನಟನೆಯಿಂದ ವಿರಾಮ ಪಡೆದರು. ಮತ್ತೆ ಅವರು ತಮ್ಮ ಟ್ಯಾಲೆಂಟ್ ತೋರಿಸಿದ್ದು ಸೀರಿಯಲ್‌ಗಳಲ್ಲಿ. ಬಹು ಜನಪ್ರಿಯ 'ಕನ್ನಡತಿ' (Kannadathi) ಸೀರಿಯಲ್‌ನಲ್ಲಿ ಅವರಿಗೆ ದೇವಿಯ ಪಾತ್ರ. ದೈವ ಭಕ್ತಿಯೇ ಇಲ್ಲದ ಹೀರೋ ಹರ್ಷನಿಗೂ ದೇವರ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಿದ, ನಾಯಕಿ ಭುವಿಯ ಬದುಕಿನ ಗೊಂದಲ ಪರಿಹರಿಸಿದ ದೇವಿಯ ಪಾತ್ರ. ಈ ಪಾತ್ರದಲ್ಲಿ ಭಾವನಾ ಅಭಿನಯಕ್ಕೆ ಮಾರುಹೋಗದವರಿಲ್ಲ. ಸಾಕ್ಷಾತ್ ದೇವಿಯ ರೂಪ ಅಂದುಕೊಂಡು ಕೈ ಮುಗಿದ ಭಾವುಕರೂ ಇದ್ದಾರೆ. ಆ ಲೆವೆಲ್‌ಗೆ ದೇವಿ ಪಾತ್ರವನ್ನು ಭಾವನಾ ಕ್ಯಾರಿ ಮಾಡಿದ್ದರು. ಒಂದಿಷ್ಟು ಸಮಯ ಮುಖ್ಯಪಾತ್ರವಾಗಿ ಕಾಣಿಸಿಕೊಂಡು ಬಳಿಕ ಈ ಪಾತ್ರ ಮರೆಯಾಯ್ತು. ಆದರೆ ಮುಂದೆಯೂ ಭುವಿಗೆ ಸಪೋರ್ಟ್ ಆಗಿ ನಿಲ್ಲುವ ಲೆವೆಲ್‌ಗೆ ಈ ಪಾತ್ರದ ಪೋಷಣೆ ಇತ್ತು. ಆದರೆ ಸದ್ಯ ಭಾವನಾ ಇನ್ನೊಂದು ಸೀರಿಯಲ್‌ನಲ್ಲಿ ಬ್ಯುಸಿ ಇರುವ ಕಾರಣಕ್ಕೋ ಏನೋ, ದೇವಿ ಪಾತ್ರದಲ್ಲಿ ಭಾವನಾ ಕಣ್ತುಂಬಿಸಿಕೊಳ್ಳೋದು ಸಾಧ್ಯವಾಗುತ್ತಿಲ್ಲ. ಸದ್ಯಕ್ಕೀಗ ಜನ ಭಾವನ ಕಂಡರೆ ಕೈ ಎತ್ ಹೊಡೀಬೇಕು ಅಂದುಕೊಂಡವರು, ಕಷ್ಟಪಟ್ಟು ಅದನ್ನು ನಿಯತ್ರಿಸುತ್ತಿದ್ದಾರೆ. ಕಾರಣ 'ರಾಮಾಚಾರಿ' ಸೀರಿಯಲ್ (Ramachari Serial). ಇದರಲ್ಲಿ ಭಾವನಾ ಅವರದು ನೆಗೆಟಿವ್ ಶೇಡ್. ಮಾನ್ಯತಾ ಎಂಬ ಮಹಾನ್ ಸೊಕ್ಕಿನ, ಇಂಡಸ್ಟ್ರಿಯಲಿಸ್ಟ್ ಪತ್ನಿಯ ಪಾತ್ರ. ಗುರುದತ್ತ್ ಈ ಸೀರಿಯಲ್‌ನಲ್ಲಿ ಇವರ ಪತಿಯ ಪಾತ್ರ ಮಾಡಿದ್ದಾರೆ. ಭಾವನಾ ಮೊದಲನೇ ಹೆಂಡತಿ. ದರ್ಪದ, ಅಧಿಕಾರದ ಅಮಲಿನಲ್ಲಿರುವ, ದುಡ್ಡಿಂದ ಏನನ್ನು ಬೇಕಾದರೂ ಕೊಳ್ಳಬಹುದು ಅನ್ನೋ ಥರದ ಪಾತ್ರ. ಈಕೆಯ ಮಗಳೇ ಚಾರುಲತಾ (Charulatha). ಕತೆ ಚಾರು ಮತ್ತು ರಾಮಾಚಾರಿ ಮೇಲೆ ನಡೆಯುತ್ತೆ. ಇಂಥಾ ಸೊಕ್ಕಿನ ಹೆಣ್ಮಗಳ ಮಗಳಾದ ಚಾರು ದರ್ಪ, ಅಹಂಕಾರದಲ್ಲಿ ಅಮ್ಮನನ್ನೂ ಮೀರಿಸುವಂತಿರುತ್ತಾಳೆ. ಪದೇ ಪದೇ ರಾಮಾಚಾರಿ (Ramachari) ಅವಳ ದುರ್ವರ್ತನೆಗೆ ಹೊಡೆತ ಹಾಕುತ್ತಲೇ ಬರುತ್ತಾನೆ.

 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Colors Kannada Official (@colorskannadaofficial)

Lakshana Serial: ನಕ್ಷತ್ರಾ ಗೆ ಭೂಪತಿ ಮನೆಗೆ ಎಂಟ್ರಿ ಇಲ್ಲ, ಮತ್ತೆಲ್ಲಿ ಹೋಗ್ತಾಳವಳು?

ಕಳೆದ ವಾರ ಭಾವನಾ ನಟಿಸ್ತಿರೋ ಮಾನ್ಯತಾ ಎಪಿಸೋಡ್ (Episode) ಸಖತ್ ಹೈಲೈಟ್ ಆಗಿತ್ತು. ರಾಮಾಚಾರಿಯನ್ನು ಹೇಗಾದರೂ ಮಣಿಸಬೇಕು ಅನ್ನೋ ನಿಟ್ಟಿನಲ್ಲಿ ಅವನ ತಂದೆ ನಾರಾಯಣಾಚಾರ್ಯರ ಮೇಲೆ ದೇವಸ್ಥಾನದ (Temple) ಒಡವೆ ಕದ್ದ ಆರೋಪ ಬರುವಂತೆ ಮಾನ್ಯತಾ ಮಾಡುತ್ತಾಳೆ. ದೇವಿಯ ಒಡವೆಯನ್ನು ತಾನೇ ಬಚ್ಚಿಟ್ಟು ರಾಮಾಚಾರಿ ತಂದೆಯ ಮೇಲೆ ಕದ್ದ ಆರೋಪ ಬರುವಂತೆ ಮಾಡುತ್ತಾಳೆ. ಆದರೆ ರಾಮಾಚಾರಿಗೆ ಈ ತಪ್ಪನ್ನು ಮಾನ್ಯತಾನೇ ಮಾಡಿದ್ದಾಳೆ ಅಂತ ಗೊತ್ತಿದೆ. ಪೊಲೀಸರನ್ನು ಮಾನ್ಯತಾ ಮನೆಗೆ ಕರೆತಂದು ಆಕೆಯ ಪತಿಯ ಮುಂದೆಯೇ ವಿಚಾರಿಸಿದಾಗ ಸತ್ಯ ಹೊರಗೆ ಬರುತ್ತದೆ. ಪ್ರಾಮಾಣಿಕ ಬ್ಯುಸಿನೆಸ್ ಮ್ಯಾನ್ (Businessman) ಜೈ ಶಂಕರ್ ಗೆ ತನ್ನ ಪತ್ನಿಯ ದುರಹಂಕಾರದ ಬಗ್ಗೆ ನೋವಿದೆ. ಆಕೆ ದೇವರ ಪೂಜೆ ಮಾಡುವ ನಾರಾಯಣಾಚಾರ್ಯರ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ಸಿಟ್ಟಿದೆ. ಆದರೂ ತನ್ನನ್ನು ಸಮರ್ಥಿಸಿಕೊಳ್ಳುವ ಆಕೆಯ ನಡೆ ಕಂಡು ಒಂದೇಟು ಹೊಡೆದಿದ್ದಾರೆ ಜೈ ಶಂಕರ್. ಕೊನೆಗೆ ದೇವ್ ಅವರೇ ತನ್ನ ಪತ್ನಿಯನ್ನು ಬಂಧಿಸಿ ಅಂತ ಪೊಲೀಸರಿಗೆ ಹೇಳಿದರೂ ನಾರಾಯಣಾಚಾರ್ಯರರ ಕರುಣೆಯಿಂದ ಆಕೆ ಜೈಲುವಾಸದಿಂದ ತಪ್ಪಿಸಿಕೊಳ್ಳುತ್ತಾಳೆ.

ಅಪ್ಪು ನಿರ್ವಹಿಸುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಈ ಬಾರಿ ಕಿಚ್ಚ ಸುದೀಪ್ ಮಾಡ್ತಾರಾ?

ಈ ಸೀರಿಯಲ್‌ನಲ್ಲಿ ಭಾವನಾ ಪಾತ್ರಕ್ಕೆ ಇನ್ನೊಂದು ಶೇಡ್ ಸಹ ಇದೆ. ಆಕೆ ಜೈ ಶಂಕರ್‌ಗೆ ಮೊದಲನೇ ಪತ್ನಿ. ಆಕೆಯ ಮೇಲೆ ದೇವ್‌ಗೆ ಇಷ್ಟ ಇಲ್ಲ. ಅದೇ ಎರಡನೇ ಪತ್ನಿ ಗುಣವಂತೆ ಶರ್ಮಿಳಾ ಅಂದರೆ ಬಹಳ ಇಷ್ಟ. ಈ ಪಾತ್ರವನ್ನು ಜನಪ್ರಿಯ ನಟಿ ಸಿರಿ ನಿರ್ವಹಿಸುತ್ತಿದ್ದಾರೆ. ಶರ್ಮಿಳಾ ಹಾಗೂ ಭಾವನಾ ಪಾತ್ರದ ನಡುವೆ ಘರ್ಷಣೆ, ತಿಕ್ಕಾಟಗಳು ನಡೆಯುತ್ತವೆ. ಒಮ್ಮೆ ಶರ್ಮಿಳಾ ಮೇಲೆ ತನ್ನ ಪತಿಯ ಪ್ರೀತಿ ಕಂಡು ನೋಯುವ, ಸಿಟ್ಟಾಗುವ, ಅಸಹಾಯಕತೆಯಿಂದ ನರಳುವ ಹೆಣ್ಣಾಗಿ, ಇನ್ನೊಮ್ಮೆ ಸೊಕ್ಕಿನ, ಶ್ರೀಮಂತಿಕೆಯ ದರ್ಪದ ಪಾತ್ರದಲ್ಲಿ ಭಾವನಾ ನಟನೆಗೆ ಮಾರು ಹೋಗದವರಿಲ್ಲ.

ಇದನ್ನೂ ಓದಿ: ದುರಹಂಕಾರಿ ಚಾರುಲತಾಗೆ ಕ್ಲಾಸ್; ಕಪಾಳಕ್ಕೆ ಹೊಡೆದ ತಂದೆನೇ ಸರಿ!

ಹೀಗೆ ಅತ್ತ ದೇವಿಯೂ ಭಕ್ತಿ ಭಾವ ಬರುವಂತೆ ನಟಿಸುವ, ಇತ್ತ ರಾಕ್ಷಸಿಯಂಥಾ ಹೆಣ್ಣಾಗಿ ಸಿಟ್ಟು ತರಿಸುವ ಪಾತ್ರಗಳೆರಡರಲ್ಲೂ ಭಾವನಾ ಆಕ್ಟಿಂಗ್ (Acting) ಬಹಳ ಚೆನ್ನಾಗಿದೆ ಅಂತಾರೆ ಪ್ರೇಕ್ಷಕರು. ಅಲ್ಲಿಗೆ ಯಾವ ಪಾತ್ರ ಕೊಟ್ಟರೂ ತಾನು ಲೀಲಾಜಾಲವಾಗಿ ನಟಿಸಬಲ್ಲೆ ಅನ್ನೋದನ್ನು ಭಾವನಾ ಸಾಬೀತು ಮಾಡಿದ್ದಾರೆ.

ಭಾವನಾ ರಾಮಣ್ಣ ಅಂದರೆ ಹೆಚ್ಚಿನವರಿಗೆ 'ಚಂದ್ರಮುಖಿ ಪ್ರಾಣಸಖಿ' (Chandramukhi Pranasakhi)ಸಿನಿಮಾ ನೆನಪಾಗುತ್ತೆ. ರಮೇಶ್ ಅರವಿಂದ್ ಅವರನ್ನು ಕೀಟಲೆ ಮಾಡುತ್ತಾ, ಪ್ರಾಂಕ್ ಮಾಡುತ್ತಾ ಅವರ ಪ್ರೀತಿಯಲ್ಲಿ ಬೀಳುವ ಹುಡುಗಿಯ ಪಾತ್ರದಲ್ಲಿ ಭಾವನಾ ಅಭಿನಯ ಗಮನ ಸೆಳೆದಿತ್ತು. ಒಂದು ಜಮಾನಾದವ್ರು ಇವತ್ತಿಗೂ ಭಾವನಾ ಅವರನ್ನು ನೆನಪು ಮಾಡ್ಕೊಳ್ಳೋದು ಆ ಪಾತ್ರದ ಮೂಲಕವೇ. ಈ ಸಿನಿಮಾದ ಭಾವನಾ ನಟನೆಗೆ ಅವಾರ್ಡ್ ಸಹ ಬಂತು. ಸದ್ಯಕ್ಕೀಗ ಭಾವನಾ ಸೀರಿಯಲ್‌ನಲ್ಲಿ ತಮ್ಮ ನಟನೆ ಮೂಲಕ ಗಮನ ಸೆಳೆಯುತ್ತಿದ್ದಾರೆ.

click me!