'ನನ್ನಮ್ಮ ಸೂಪರ್ ಸ್ಟಾರ್' Samanvi ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ!

By Suvarna NewsFirst Published Jan 16, 2022, 5:42 PM IST
Highlights

ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಸಮನ್ವಿ ಅಸ್ತಿಯನ್ನು ತಂದೆ ರೂಪೇಶ್‌ ವಿಸರ್ಜನೆ ಮಾಡಿದ್ದಾರೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕಡಿಮೆ ಅವಧಿಯಲ್ಲಿಯೇ, ತನ್ನ ಆಕರ್ಷಕ ಮಾತುಗಳಿಂದ ಮತ್ತು ವಿಭಿನ್ನ ಶೈಲಿಯ ನಡಿಗೆಯಿಂದ ಎಲ್ಲರ ಗಮನ ಸೆಳೆದಿದ್ದ ಪುಟಾಣಿ ಸಮನ್ವಿ ನಮ್ಮೊಟ್ಟಿಗೆ ಇಲ್ಲ ಎಂದರೆ ಈಗಲೂ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಇಡೀ ಕರ್ನಾಟಕವೇ ಈ ಪುಟ್ಟ ಕಂದಮ್ಮನನ್ನು ಕಳೆದುಕೊಂಡಿರುವ ದುಃಖದಲ್ಲಿದೆ. 

ಜನವರಿ 24ರಂದು ತಾಯಿ ಅಮೃತಾ ನಾಯ್ಡು ಜೊತೆ ಕನಕಪುರ ರಸ್ತೆ ಮಾರ್ಗದ ಕೋಣನಕುಂಟೆ ರಸ್ತೆ ಬಳಿ ದ್ವಿಚಕರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಮನ್ವಿಗೆ ಹಿಂದಿನಿಂದ ಟಿಪ್ಪರ್ ಲಾರಿವೊಂದು ಡಿಕ್ಕಿ ಹೊಡೆದಿದೆ. ತಾಯಿ ಮತ್ತು ಮಗು ಇಬ್ಬರೂ ರಸ್ತೆ ಬದಿಗೆ ಬಿದ್ದಿದ್ದಾರೆ. ಅಮೃತಾ ನಾಯ್ಡು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಆದರೆ ಸಮನ್ವಿ ತೀವ್ರ ರಕ್ತ ಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆಯೇ ಕೊನೆಯುಸಿರೆಳೆದಿದ್ದಾಳೆ. ಅಮೃತಾ ನಾಯ್ಡು 4 ತಿಂಗಳ ಗರ್ಭಿಣಿ ಆಗಿರುವ ಕಾರಣ ಆಸ್ಪತ್ರೆಯಲ್ಲಿ ಫಸ್ಟ್‌ ಏಡ್‌ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ಆದರೆ ಸಮನ್ವಿ ಪೋಸ್ಟ್ ಮಾರ್ಟಮ್‌ ನಡೆದ ಬಳಿ ಪೋಷಕರಿಗೆ ಮೃತದೇಹವನ್ನು ನೀಡಲಾಗಿತ್ತು.

ಸಮನ್ವಿ ಮೃತದೇಹವನ್ನು ಅಪಾರ್ಟ್‌ಮೆಂಟ್‌ ಬಳಿ ಇಟ್ಟು, ಆಪ್ತರಿಗೆ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಆನಂತರ ಬನಶಂಕರಿ ಚಿತ್ತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ರಿಷಿ ಕುಮಾರ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಂಪೂರ್ಣ ಅಂತಿಮ ವಿಧಿ ವಿಧಾನಗಳು ನಡೆದಿದ್ದವು. 6 ವರ್ಷದ ಸಮನ್ವಿ ಅಸ್ತಿಯನ್ನು ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ಹರಿಯುವ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗಿದೆ. ತಂದೆ ನೀರಿನೊಳಗೆ ಇಳಿದು ಅಸ್ತಿ ವಿಸರ್ಜಿಸ್, ದುರ್ಮರಣ ಹೊಂದಿರುವ ಪುಟ್ಟ ಮಗಳ ಸದ್ಗತಿಯಾಗಿ ಪೂಜೆ ಸಲ್ಲಿಸಿದ್ದಾರೆ.

RIP Samanvi: ಪಂಚಭೂತಗಳಲ್ಲಿ ಲೀನಳಾದ ಪುಟಾಣಿ, ಭಾವುಕರಾದ ಕುಟುಂಬ!

ಪುಟ್ಟ ಕಂದಮ್ಮ ಇನ್ನೂ ಜೀವನ ನೋಡಬೇಕಿತ್ತು. ಯಾವುದೇ ಸೂತಕಗಳನ್ನು ಕಂಡಿಲ್ಲದ ಕಾರಣ ಶ್ರೀರಂಗಪಟ್ಟಣದಲ್ಲಿ ನಾರಾಯಣ ಬಲಿ ಮಾಡುವುದಾಗಿ ರಿಷಿ ಕುಮಾರ್ ಸ್ವಾಮೀಜಿ ಹೇಳಿದ್ದರು. 'ಅದಿನ್ನೂ ಎಳೆ ಮಗು. ಯಾವ ಸೂತಕಗಳನ್ನು ಕಂಡಿಲ್ಲ. ಆ ಕಾರಣವಾಗಿ ನಾರಾಯಣ ಬಲಿ (Narayana Bali) ಎಲ್ಲವನ್ನೂ ಮಾಡಬೇಕು. ಅದನ್ನು ಶ್ರೀರಂಪಟ್ಟಣದಲ್ಲಿ (Sri Rangapattana) ಮಾಡುತ್ತೇವೆ. ನಾನು ಶೋಭಾ ನಾಯ್ಡು (Shoba Naidu), ಶೀಲಾ ನಾಯ್ಡು(Sheela Naidu) ಅವರ ಸಾಕು ಮಗನಿದ್ದಂತೆ. ಕೊರೋನಾ (Covid19) ಸಂದರ್ಭದಲ್ಲಿ ನಾವು ಶೋಭಾ ನಾಯ್ಡು ಅವರನ್ನು ಕಳೆದುಕೊಂಡು ಬಿಟ್ಟೆವು. ಗುರುರಾಜ ನಾಯ್ಡು (Gururaj Naidu) ಮನೆತನವೇ ಕಲಾವಿದರ ಮನೆತನ. ಅವರ ಕುಟುಂಬದಲ್ಲಿ ಈ ಪುಟ್ಟ ಮಗು ಈಗ ತಾನೇ ಅರಳುತ್ತಿತ್ತು. ಸಮನ್ವಿ ದೊಡ್ಡ ಕಲಾವಿದೆಯಾಗುತ್ತಿದ್ದವಳು. ಇಷ್ಟು ಬೇಗ ನಾವು ಕಳೆದುಕೊಂಡು ಬಿಟ್ಟೆವು. ಆರನೇ ವಯಸ್ಸಿಗೆ ತನ್ನತ್ತ ಎಲ್ಲರನ್ನೂ ಸೆಳೆದುಕೊಂಡಿದ್ದಳು,' ಎಂದು ರಿಷಿ ಕುಮಾರ ಸ್ವಾಮೀಜಿ ಹೇಳಿದ್ದರು. 

ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಸಮನ್ವಿ ಫೋಟೋ ಮತ್ತು ವೀಡಿಯೋ ವೈರಲ್ ಆಗುತ್ತಿವೆ. 'ದೇವರ ಪ್ರತಿ ರೂಪವಾಗಿ ಕಾಣುತ್ತಿರುವ ನಮಗೆಲ್ಲರಿಗೂ ನನ್ನದೊಂದು ಪ್ರಾರ್ಥನೆ, ನಾನು ಈಗ ನಾಲ್ಕು ತಿಂಗಳ ಗರ್ಭಿಣಿ ಮತ್ತು ನನ್ನ ಮುದ್ದು ಕಂದ ಅಮ್ಮ ಸಮನ್ವಿಯ ಬರುವಕೆಗಾಗಿ ಈ ತಾಯಿ ಜೀವ ಹಂಬಲಿಸುತ್ತಿದೆ. ದಯವಿಟ್ಟು ನಗೊಂದು ಸಹಾಯ ಮಾಡಿ, ಆ ಭಗವಂತನಲ್ಲಿ ಪ್ರಾರ್ಥಿಸಿ. ನಿಮ್ಮ ಎಲ್ಲರ ಪ್ರಾರ್ಥಣೆಯಿಂದ ನನ್ನ ಮುದ್ದು ಕಂದಮ್ಮನನ್ನು ದೇವರು ಮರಳಿ ಕಳುಹಿಸಿ ಬಿಡಲಿ. ಅವಳನ್ನು ನಾನು ಗರ್ಭದಲ್ಲಿ ಜೋಪಾನ ಮಾಡಿ ಕಾಪಾಡುಕೊಳ್ಳುತ್ತೇನೆ. ದಯ ಮಾಡಿ ಈ ತಾಯಿ ಕರೆಗೆ ಕೈ ಜೋಡಿಸಿ, ಸಮನ್ವಿ ಬರುವಿಕೆಗೆ ಸಹಾಯ ಮಾಡಿ ಪ್ರಾರ್ಥಿಸಿ. ಅವಲೇ ಮತ್ತೆ ಮಗಳಾಗಿ ಹುಟ್ಟಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಈದು ಸಾಧ್ಯವಾಗುತ್ತದೆ ಪ್ಲೀಸ್‌,' ಎಂದು ಅಮೃತಾ ನಾಯ್ಡು ಅವರು ಹಂಚಿಕೊಂಡಿರುವ ಮಾತೆಂದು ಪ್ರತಿ ಸ್ಪರ್ಧಿ ಮಹಿತಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

click me!